ಕುಕೀ ನೀತಿ

ಬ್ರೌಸರ್ ಕುಕೀಯು ಡೇಟಾದ ಒಂದು ಸಣ್ಣ ತುಣುಕಾಗಿದ್ದು, ಅದನ್ನು ನಿಮ್ಮ ಕುರಿತ ಸಂಗತಿಗಳನ್ನು ನೆನಪಿಟ್ಟುಕೊಳ್ಳಲು ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಆ್ಯಪ್‌ಗಳಿಗೆ ನೆರವಾಗುವುದಕ್ಕಾಗಿ ನಿಮ್ಮ ಸಾಧನದಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ವೆಬ್ ಬೀಕನ್‌ಗಳು, ವೆಬ್ ಸ್ಟೋರೇಜ್‌ಗಳು ಮತ್ತು ನಿಮ್ಮ ಸಾಧನದೊಂದಿಗೆ ಸಂಬಂಧಿಸಿರುವ ಗುರುತಿಸುವಿಕೆಗಳು ಸೇರಿದಂತೆ, ಇತರ ತಂತ್ರಜ್ಞಾನಗಳನ್ನು ಅದೇ ರೀತಿಯ ಉದ್ದೇಶಗಳಿಗಾಗಿ ಬಳಸಬಹುದು. ಈ ನೀತಿಯಲ್ಲಿ, ಈ ಎಲ್ಲ ತಂತ್ರಜ್ಞಾನಗಳನ್ನು ಉಲ್ಲೇಖಿಸಲು ನಾವು "ಕುಕೀಗಳು" ಎನ್ನುತ್ತೇವೆ.

ನೀವು Snapchat ಮತ್ತು ಇತರ ಕೆಲವು Snap Inc. ಸೇವೆಗಳನ್ನು ಬಳಸಿದಾಗ ನಿಮ್ಮಿಂದ ಮತ್ತು ನಿಮ್ಮ ಕುರಿತು ನಾವು ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎನ್ನುವುದನ್ನು ನಮ್ಮ ಗೌಪ್ಯತಾ ನೀತಿ ವಿವರಿಸುತ್ತದೆ. ನಾವು ಕುಕೀಗಳನ್ನು ಮತ್ತು ನಿಮ್ಮ ಸಂಬಂಧಿತ ಆಯ್ಕೆಗಳನ್ನು ಹೇಗೆ ಬಳಸುತ್ತೇವೆ ಎನ್ನುವುದನ್ನು ಈ ನೀತಿ ವಿವರಿಸುತ್ತದೆ.

ನಾವು ಕುಕೀಗಳನ್ನು ಹೇಗೆ ಬಳಸುತ್ತೇವೆ

ಆನ್‌ಲೈನ್ ಸೇವೆಗಳ ಬಹುತೇಕ ಪೂರೈಕೆದಾರರಂತೆ, ನಿಮ್ಮ Snapchat ಡೇಟಾ ಮತ್ತು ಖಾತೆಯನ್ನು ರಕ್ಷಿಸುವ, ಯಾವ ವೈಶಿಷ್ಟ್ಯಗಳು ಅತ್ಯಂತ ಜನಪ್ರಿಯವಾಗಿವೆ ಎಂದು ನೋಡುವುದಕ್ಕೆ ನಮಗೆ ಸಹಾಯ ಪಡೆದುಕೊಳ್ಳುವ, ಒಂದು ಪುಟಕ್ಕೆ ಸಂದರ್ಶಕರನ್ನು ಎಣಿಕೆ ಮಾಡುವ, ನಾವು ಕಳುಹಿಸುವ ವೆಬ್‌ ವಿಷಯ ಮತ್ತು ಇಮೇಲ್‌ಗಳೊಂದಿಗೆ ನೀವು ಹೇಗೆ ತೊಡಗಿಕೊಳ್ಳುತ್ತೀರಿ ಎನ್ನುವುದನ್ನು ಅರ್ಥಮಾಡಿಕೊಳ್ಳುವ, ನಮ್ಮ ಸೇವೆಗಳನ್ನು ಸುರಕ್ಷಿತವಾಗಿ ಇರಿಸುವ, ಸಂಬಂಧಿತ ಜಾಹೀರಾತು ನೀಡುವಿಕೆಯನ್ನು ಒದಗಿಸುವ ಮತ್ತು ಸಾಮಾನ್ಯವಾಗಿ ನಿಮಗೆ ಇನ್ನಷ್ಟು ಉತ್ತಮ, ಹೆಚ್ಚು ವಿನೂತನವಾದ ಮತ್ತು ಸಂತೃಪ್ತಿಕರ ಅನುಭವವನ್ನು ಒದಗಿಸುವ ರೀತಿಯ, ಕೆಲವು ಕಾರಣಗಳಿಗಾಗಿ, ತೃತೀಯ-ಪಕ್ಷದ ಕುಕೀಗಳು ಸೇರಿದಂತೆ, ಕುಕೀಗಳನ್ನು Snap Inc. ಬಳಸುತ್ತದೆ. ನಾವು ಬಳಸುವ ಕುಕೀಗಳು ಸಾಮಾನ್ಯವಾಗಿ ಈ ಕೆಳಗಿನ ಒಂದು ವರ್ಗಕ್ಕೆ ಸೇರುತ್ತವೆ.

ನಮ್ಮ ಸೈಟ್‌ಗಳಲ್ಲಿ ನಾವು ಯಾವ ಕುಕೀಗಳನ್ನು, ಯಾವ ಉದ್ದೇಶಕ್ಕಾಗಿ (ಗಳಿಗಾಗಿ) ಮತ್ತು ಎಷ್ಟು ಸಮಯದವರೆಗೆ ಬಳಸುತ್ತೇವೆ ಎಂಬುದನ್ನು ನಮ್ಮ ಕುಕೀ ಮಾಹಿತಿ ಪುಟದಲ್ಲಿ ನೀವು ನೋಡಬಹುದು. ನಮ್ಮ ಕೆಲವು ಸೈಟ್‌ಗಳಲ್ಲಿ, ನಾವು ಹೊಂದಿಸುವ ಕುಕೀಗಳು ಮತ್ತು ಎಷ್ಟು ಅವಧಿಯವರೆಗೆ ಇರುತ್ತವೆ ಎನ್ನುವುದು ನಮ್ಮ ಸೈಟ್‌ಗಳೊಂದಿಗೆ ನೀವು ಸಂವಹನ ನಡೆಸುವ ಸಮಯದಲ್ಲಿನ ನಿಮ್ಮ ಸ್ಥಳವನ್ನು ಆಧರಿಸಿರುತ್ತದೆ.

ಕುಕೀಗಳ ವರ್ಗ

ನಾವು ಈ ಕುಕೀಗಳನ್ನು ಏಕೆ ಬಳಸುತ್ತೇವೆ

ಅತ್ಯಗತ್ಯ

"ಅಗತ್ಯ" ಕುಕೀಗಳು ಎಂದು ಸಹ ಕರೆಯುತ್ತಾರೆ. ನಮ್ಮ ಸೈಟ್ ಅನ್ನು ಚಲಾಯಿಸಲು ಮತ್ತು ಭದ್ರತಾ ಅಪಾಯಗಳನ್ನು ಗುರುತಿಸಲು ಮತ್ತು ತಡೆಯಲು ನಾವು ಈ ಕುಕೀಗಳನ್ನು ಬಳಸುತ್ತೇವೆ.

ಉದಾಹರಣೆಗೆ, ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಇಲ್ಲದೆ ಇತರರು ನಿಮ್ಮ ಪಾಸ್‌ವರ್ಡ್ ಬದಲಾಯಿಸುವುದನ್ನು ತಡೆಯಲು ಅಥವಾ ನಿಮ್ಮ ಕುಕೀ ಆದ್ಯತೆಗಳನ್ನು ನೆನಪಿಟ್ಟುಕೊಳ್ಳಲು ನಿಮ್ಮ ಅಧಿವೇಶನದ ಮಾಹಿತಿಯನ್ನು ಸಂಗ್ರಹಣೆ ಮಾಡಲು ನಾವು ಈ ಕುಕೀಗಳನ್ನು ಬಳಸಬಹುದು.

ನಮ್ಮ ಕೆಲವು ಸೈಟ್‌ಗಳಲ್ಲಿ ಮತ್ತು ಕೆಲವು ಕಾನೂನುವ್ಯಾಪ್ತಿಗಳಲ್ಲಿ, ಒಂದು ಏಕ ಬ್ರೌಸಿಂಗ್ ಅಧಿವೇಶನದ ಅವಧಿಯಲ್ಲಿ ನೀವು ನಮ್ಮ ಸೈಟ್ ಅನ್ನು ಹೇಗೆ ಬಳಸುತ್ತೀರಿ ಎಂದು ಅರ್ಥಮಾಡಿಕೊಳ್ಳಲು ಕೂಡ ನಾವು ಕೆಲವು ಅಧಿವೇಶನದ ಕುಕೀಗಳನ್ನು ಬಳಸಬಹುದು. ಈ ನಿರ್ದಿಷ್ಟ ಅಧಿವೇಶನದ ಕುಕೀಗಳು ತ್ವರಿತವಾಗಿ ಮುಕ್ತಾಯಗೊಳ್ಳುತ್ತವೆ — ಹೆಚ್ಚೆಂದರೆ 24 ಗಂಟೆಗಳಲ್ಲಿ — ಮತ್ತು ಅವುಗಳೊಂದಿಗೆ ಸಂಬಂಧಿಸಿದ ಯಾವುದೇ ಡೇಟಾ ಆ ಸಮಯದಲ್ಲಿ ಅನಾಮಧೇಯವಾಗುತ್ತದೆ. ಅವು ಅವಶ್ಯಕವಾಗಿರುವುದರಿಂದ, ನೀವು ವೆಬ್‌ಸೈಟ್ ಪ್ರವೇಶಿಸಿದ ಕ್ಷಣದಿಂದ ಅವು ಸಕ್ರಿಯವಾಗಬಹುದು. ಆದಾಗ್ಯೂ, ಒಂದು ವೇಳೆ ನೀವು ಬಯಸಿದಲ್ಲಿ, ಅವುಗಳನ್ನು ನೀವು ನಿಷ್ಕ್ರಿಯಗೊಳಿಸಬಹುದು — ಕೆಳಗೆ "ನಿಮ್ಮ ಆಯ್ಕೆಗಳು" ವಿಭಾಗ ನೋಡಿ.

ಆದ್ಯತೆಗಳು

ನಿಮ್ಮ ಸೆಟ್ಟಿಂಗ್‌ಗಳು ಮತ್ತು ಆದ್ಯತೆಗಳನ್ನು ನೆನಪಿಟ್ಟುಕೊಳ್ಳಲು ಹಾಗೂ ನಮ್ಮ ಸೈಟ್‌ನಲ್ಲಿ ನಿಮ್ಮ ಅನುಭವವನ್ನು ಸುಧಾರಿಸಲು ನಾವು ಈ ಕುಕೀಗಳನ್ನು ಬಳಸುತ್ತೇವೆ.

ಉದಾಹರಣೆಗೆ, ನಿಮ್ಮ ಭಾಷೆಯ ಆದ್ಯತೆಗಳನ್ನು ನೆನಪಿಟ್ಟುಕೊಳ್ಳಲು ನಾವು ಈ ಕುಕೀಗಳನ್ನು ಬಳಸಬಹುದು.

ಕಾರ್ಯಕ್ಷಮತೆ ಮತ್ತು ವಿಶ್ಲೇಷಣೆಗಳು

ನೀವು ನಮ್ಮ ಸೈಟ್ ಅನ್ನು ಹೇಗೆ ಬಳಸುತ್ತೀರಿ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲು, ಸೈಟ್ ಕಾರ್ಯಕ್ಷಮತೆಯ ಮೇಲೆ ನಿಗಾ ಇರಿಸಲು ಮತ್ತು ನಮ್ಮ ಸೈಟ್ ಕಾರ್ಯಕ್ಷಮತೆ, ನಮ್ಮ ಸೇವೆಗಳು ಮತ್ತು ನಿಮ್ಮ ಅನುಭವವನ್ನು ಸುಧಾರಿಸಲು ನಾವು ಈ ಕುಕೀಗಳನ್ನು ಬಳಸುತ್ತೇವೆ.

ಉದಾಹರಣೆಗೆ, ನಮ್ಮ ಬಳಕೆದಾರರಲ್ಲಿ ಯಾವ ವೈಶಿಷ್ಟ್ಯಗಳು ಹೆಚ್ಚು ಜನಪ್ರಿಯವಾಗಿವೆ ಮತ್ತು ಯಾವುದಕ್ಕೆ ಕೆಲವು ಟ್ವೀಕ್‌ಗಳು ಬೇಕಾಗಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಈ ಕುಕೀಗಳನ್ನು ಬಳಸಬಹುದು.

ಮಾರ್ಕೆಟಿಂಗ್

ಜಾಹೀರಾತುಗಳನ್ನು ತಲುಪಿಸಲು, ಅವುಗಳನ್ನು ಗ್ರಾಹಕರಿಗೆ ಹೆಚ್ಚು ಪ್ರಸ್ತುತ ಮತ್ತು ಅರ್ಥಪೂರ್ಣವಾಗಿಸಲು, ಹಾಗೂ ನಮ್ಮ ಸೇವೆಗಳು ಮತ್ತು ಇತರ ವೆಬ್‌ಸೈಟ್‌ಗಳು ಅಥವಾ ಮೊಬೈಲ್ ಆ್ಯಪ್‌ಗಳೆರಡರಲ್ಲೂ, ನಮ್ಮ ಜಾಹೀರಾತು ಪ್ರಚಾರಗಳ ದಕ್ಷತೆಯನ್ನು ಟ್ರ್ಯಾಕ್ ಮಾಡಲು ನಾವು ಈ ಕುಕೀಗಳನ್ನು ಬಳಸುತ್ತೇವೆ. ನಿಮ್ಮ ಆಸಕ್ತಿಗಳ ಪ್ರೊಫೈಲ್ ರಚಿಸಲು ಮತ್ತು ಇತರ ಸೈಟ್‌ಗಳಲ್ಲಿ ಸಂಬಂಧಿತ ಜಾಹೀರಾತನ್ನು ತಲುಪಿಸಲು ನಮ್ಮ ಮೂರನೇ-ಪಕ್ಷದ ಜಾಹೀರಾತು ಪಾಲುದಾರರು ಈ ಕುಕೀಗಳನ್ನು ಬಳಸಬಹುದು.

ವಿಶ್ಲೇಷಣೆ ಮತ್ತು ಜಾಹೀರಾತು ಸೇವೆಗಳು
ಇತರರು ಒದಗಿಸಿದ್ದು

ನಮ್ಮ ಸೇವೆಗಳಲ್ಲಿ ಕುಕೀಗಳನ್ನು ಬಳಸಲು ಇತರ ಸಂಸ್ಥೆಗಳಿಗೆ ನಾವು ಅವಕಾಶ ನೀಡಬಹುದು. ಕಾಲಾಂತರದಲ್ಲಿ ನೀವು ನಮ್ಮ ಸೇವೆಗಳನ್ನು ಹೇಗೆ ಬಳಸುತ್ತೀರಿ ಎನ್ನುವ ಕುರಿತು ಈ ಸಂಸ್ಥೆಗಳು ಮಾಹಿತಿ ಸಂಗ್ರಹಿಸಬಹುದು ಹಾಗೂ ಅದನ್ನು ಇತರ ಸೇವೆಗಳು ಮತ್ತು ಸಂಸ್ಥೆಗಳ ಅದೇ ರೀತಿಯ ಮಾಹಿತಿಯೊಂದಿಗೆ ಒಟ್ಟುಗೂಡಿಸಬಹುದು. ಈ ಮಾಹಿತಿಯನ್ನು, ಇತರ ವಿಷಯಗಳು ಸೇರಿದಂತೆ, ಡೇಟಾವನ್ನು ವಿಶ್ಲೇಷಿಸಲು ಮತ್ತು ಟ್ರ್ಯಾಕ್ ಮಾಡಲು, ಕೆಲವು ವಿಷಯಗಳ ಜನಪ್ರಿಯತೆಯನ್ನು ನಿರ್ಧರಿಸಲು ಮತ್ತು ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ಬಳಸಬಹುದು.

ಇದರ ಜೊತೆಗೆ, ವಂಚನೆ ಅಥವಾ ಇತರ ಅನಧಿಕೃತ ಅಥವಾ ಕಾನೂನು ಬಾಹಿರ ಚಟುವಟಿಕೆಯನ್ನು ತಡೆಯುವುದಕ್ಕೆ ಹಾಗೂ ಜಾಹೀರಾತುಗಳ ಕಾರ್ಯನಿರ್ವಹಣೆಯನ್ನು ಅಳೆಯುವುದಕ್ಕೆ ಮತ್ತು ಅತ್ಯುತ್ತಮಗೊಳಿಸುವುದಕ್ಕೆ ಮತ್ತು ನಮ್ಮ ಪರವಾಗಿ ಅಥವಾ ತೃತೀಯ-ಪಕ್ಷದ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳು ಸೇರಿದಂತೆ ಇತರ ಸಂಸ್ಥೆಗಳ ಪರವಾಗಿ ಹೆಚ್ಚು ಸಂಬಂಧಿತವಾಗಿ ಜಾಹೀರಾತುಗಳನ್ನು ಒದಗಿಸುವುದಕ್ಕೆ ನಮ್ಮ ಅಂಗಸಂಸ್ಥೆಗಳು ಸೇರಿದಂತೆ, ಕೆಲವು ಸಂಸ್ಥೆಗಳು ನಮ್ಮ ಸೇವೆಗಳಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಬಳಸಬಹುದು. ಆಸಕ್ತಿ ಆಧಾರಿತ ಜಾಹೀರಾತುಗಳ ಕುರಿತು ಮತ್ತು ನಿಮಗೆ ಲಭ್ಯವಿರುವ ಆಯ್ಕೆಗಳ ಕುರಿತು ಇನ್ನಷ್ಟು ಮಾಹಿತಿಗಾಗಿ, ಇಲ್ಲಿಗೆ ಹೋಗಿ.

ನಾವು ಒದಗಿಸಿದ್ದು

ನಾವು ಒದಗಿಸಿದ ಕುಕೀಗಳನ್ನು ಬಳಸುವ ತೃತೀಯ ಪಕ್ಷಕಾರ ಸೇವೆಗಳಲ್ಲಿ ನಿಮ್ಮ ಚಟುವಟಿಕೆಯ ಕುರಿತು ನಾವು ಮಾಹಿತಿ ಸಂಗ್ರಹಿಸಬಹುದು. ಈ ಮಾಹಿತಿಯನ್ನು ನಾವು, ಜಾಹೀರಾತುಗಳ ಕಾರ್ಯನಿರ್ವಹಣೆಯನ್ನು ಅಳೆಯುವುದು ಮತ್ತು ನಿಮಗೆ ಹೆಚ್ಚು ಸಂಬಂಧಿತವಾದ ಜಾಹೀರಾತುಗಳನ್ನು ತೋರಿಸುವುದು ಸೇರಿದಂತೆ, ನಮ್ಮ ಜಾಹೀರಾತು ಸೇವೆಗಳನ್ನು ಸುಧಾರಿಸುವುದಕ್ಕೆ ಬಳಸುತ್ತೇವೆ. Snapchat ಜಾಹೀರಾತು ನೀಡುವಿಕೆ ಮತ್ತು ನೀವು ನೋಡುವ ಜಾಹೀರಾತುಗಳನ್ನು ಆಯ್ಕೆ ಮಾಡಲು ಬಳಸಿದ ಮಾಹಿತಿಯನ್ನು ನೀವು ಹೇಗೆ ನಿಯಂತ್ರಿಸಬಹುದು ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಜಾಹೀರಾತು ಆದ್ಯತೆಗಳ ಪುಟಕ್ಕೆ ಭೇಟಿ ನೀಡಿ.

ನಿಮ್ಮ ಆಯ್ಕೆಗಳು

ನಮ್ಮ ಸೈಟ್‌ಗಳಲ್ಲಿ ನಾವು ನಿಮಗೆ ಲಭ್ಯವಾಗಿಸುವ ಸೆಟ್ಟಿಂಗ್‌ಗಳ ಜೊತೆಗೆ ಹೆಚ್ಚುವರಿಯಾಗಿ ನಿಮ್ಮ ಬ್ರೌಸರ್ ಅಥವಾ ಸಾಧನದಲ್ಲಿ ನಿಮ್ಮ ಕುಕೀ ಸೆಟ್ಟಿಂಗ್‌ಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ನಿಮಗೆ ಸಾಧ್ಯವಾಗಬಹುದು. ನಿಮಗೆ ಲಭ್ಯವಿರಬಹುದಾದ ಪ್ರತಿ ಆಯ್ಕೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೋಡಿ.

ಬ್ರೌಸರ್ ಸೆಟ್ಟಿಂಗ್‌ಗಳು

ಕೆಲವು ಅಥವಾ ಅನಿವಾರ್ಯವಲ್ಲದ ಎಲ್ಲಾ ಬ್ರೌಸರ್ ಕುಕೀಗಳನ್ನು ನಿರಾಕರಿಸುವ ಆಯ್ಕೆಯನ್ನು ನಿಮ್ಮ ಬ್ರೌಸರ್ ನಿಮಗೆ ಒದಗಿಸಬಹುದು. ನಿಮ್ಮ ಬ್ರೌಸರ್‌ನಿಂದ ಕುಕೀಗಳನ್ನು ತೆಗೆದುಹಾಕಲು ಸಹ ನಿಮಗೆ ಸಾಧ್ಯವಾಗಬಹುದು. ಬ್ರೌಸರ್ ಕುಕೀಗಳನ್ನು ನಿರ್ವಹಿಸುವುದು ಹೇಗೆ ಎನ್ನುವ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಿಮ್ಮ ಬ್ರೌಸರ್ ಒದಗಿಸಿದ ಮಾಹಿತಿಯನ್ನು ಅನುಸರಿಸಿ.

ಸಾಧನ ಗುರುತಿಸುವಿಕೆಯ ಸೆಟ್ಟಿಂಗ್‌ಗಳು

ಆಸಕ್ತಿ ಆಧರಿತ ಜಾಹೀರಾತಿಗಾಗಿ ಬಳಸುವ ಕೆಲವು ಸಾಧನ ಗುರುತಿಸುವಿಕೆಗಳನ್ನು ಹೊಂದುವುದರಿಂದ ಹೊರಗುಳಿಯಲು ನಿಮ್ಮ ಸಾಧನದ ಆಪರೇಟಿಂಗ್ ಸಿಸ್ಟಂ ನಿಮಗೆ ಅವಕಾಶ ಕಲ್ಪಿಸಬಹುದು. ನಿಮ್ಮ ಮೊಬೈಲ್ ಸಾಧನದ ಉತ್ಪಾದಕರು ಒದಗಿಸಿದ ಸೂಚನೆಗಳನ್ನು ನೀವು ಪರಿಶೀಲಿಸಬೇಕು; ಈ ಮಾಹಿತಿಯು ಸಾಮಾನ್ಯವಾಗಿ ನಿಮ್ಮ ಮೊಬೈಲ್ ಸಾಧನದ "ಸೆಟ್ಟಿಂಗ್‌ಗಳು" ವೈಶಿಷ್ಟ್ಯದ ಅಡಿಯಲ್ಲಿ ಇರುತ್ತದೆ.

ಮತ್ತು ಖಂಡಿತವಾಗಿಯೂ ನಿಮ್ಮ ಮೊಬೈಲ್ ಸಾಧನವು ಅನ್‌ಇನ್‌ಸ್ಟಾಲ್ ಪ್ರಕ್ರಿಯೆಯನ್ನು ನೀಡಿದರೆ, Snapchat ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವ ಮೂಲಕ ನೀವು ಯಾವಾಗಲೂ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸುವುದರಿಂದ ನಮ್ಮನ್ನು ತಡೆಯಬಹುದು.

ವೆಬ್‌ಸೈಟ್ ಸೆಟ್ಟಿಂಗ್‌ಗಳು

ನಮ್ಮ ಸೈಟ್‌ಗಳಲ್ಲಿ ನಿಮ್ಮ ಸೆಟ್ಟಿಂಗ್‌ಗಳನ್ನು ಸರಿಹೊಂದಿಸುವ ಮೂಲಕ ಯಾವ ಕುಕೀಗಳನ್ನು ಹೊಂದಿಸಬಹುದು ಎಂಬುದನ್ನು ಸಹ ನೀವು ಕಸ್ಟಮೈಸ್ ಮಾಡಬಹುದು. ನಿಮಗೆ ಹಾಗೆ ಮಾಡಲು ಅವಕಾಶ ಕಲ್ಪಿಸುವ ನಮ್ಮ ಸೈಟ್‌ಗಳಲ್ಲಿನ ಕುಕೀ ಮೆನುವನ್ನು ನೋಡಿ:

Snap.com ಕುಕೀ ಸೆಟ್ಟಿಂಗ್‌ಗಳು

Snapchat.com ಕುಕೀ ಸೆಟ್ಟಿಂಗ್‌ಗಳು

Spectacles.com ಕುಕೀ ಸೆಟ್ಟಿಂಗ್‌ಗಳು

Yellowla.com ಕುಕೀ ಸೆಟ್ಟಿಂಗ್‌ಗಳು

Snapfoundation.org ಕುಕೀ ಸೆಟ್ಟಿಂಗ್‌ಗಳು

Arcadiacreativestudio.com ಕುಕೀ ಸೆಟ್ಟಿಂಗ್‌ಗಳು

Pixy.com ಕುಕೀ ಸೆಟ್ಟಿಂಗ್‌ಗಳು