Purchase Orders and Payments

ಅಪ್‌ಡೇಟ್ ಮಾಡಲಾಗಿದೆ: ಜನವರಿ 8, 2021

Snap ನಲ್ಲಿ ಹೊಸ ಪೂರೈಕೆದಾರರಾಗಿದ್ದೀರಾ?
  • ನೀವು Snap ನಲ್ಲಿ ಹೊಸ ಪೂರೈಕೆದಾರರಾಗಿದ್ದರೆ, ನಾವು ವ್ಯವಹಾರ ನಡೆಸುವುದಕ್ಕಾಗಿ, ನೀವು ನಮ್ಮ ಪರ್ಚೇಸ್ ಆರ್ಡರ್ ಮತ್ತು ಪಾವತಿ ಸಿಸ್ಟಂ ಆದ, Oracle ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಿಮ್ಮ Snap ಸಂಪರ್ಕ ಸಿಬ್ಬಂದಿಗೆ ಪೂರೈಕೆದಾರರ ಆನ್‌ಬೋರ್ಡಿಂಗ್ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗತ್ತದೆ. ಇದಾದ ಬಳಿಕ ನೀವು ಪೂರೈಕೆದಾರರ ನೋಂದಣಿ ಇಮೇಲ್ ಸ್ವೀಕರಿಸುತ್ತೀರಿ. ನೋಂದಣಿ ಇಮೇಲ್ ನಿಮ್ಮನ್ನು Snap ಪೂರೈಕೆದಾರರ ನೋಂದಣಿ ಪೋರ್ಟಲ್‌ಗೆ ಕರೆದೊಯ್ಯುತ್ತದೆ, ಅಲ್ಲಿ ನೀವು ಪೂರೈಕೆದಾರ ಮತ್ತು ಬಳಕೆದಾರ ಖಾತೆಯನ್ನು ರಚಿಸುತ್ತೀರಿ.

  • ನೀವು ನೋಂದಣಿ ಇಮೇಲ್ ವಿನಂತಿಯನ್ನು ಸ್ವೀಕರಿಸಿದ ಬಳಿಕ ದಯವಿಟ್ಟು ಈ ಹಂತ ಹಂತದ ಆನ್‌ಬೋರ್ಡಿಂಗ್ ಮಾರ್ಗದರ್ಶಿಯನ್ನು ಪರಿಶೀಲಿಸಿ. ಈ ಡಾಕ್ಯುಮೆಂಟ್ ನಿಮಗೆ ನೋಂದಣಿ ಪ್ರಕ್ರಿಯೆಯನ್ನು ವಿವರಿಸುತ್ತದೆ. ನೀವು ಯಾವುದೇ ಪ್ರಶ್ನೆಗಳು ಅಥವಾ ಕಳವಳಗಳನ್ನು ಹೊಂದಿದ್ದರೆ, ದಯವಿಟ್ಟು suppliers@snap.com ಸಂಪರ್ಕಿಸಿ.

Snap ಜೊತೆಗೆ ವ್ಯವಹಾರ ನಡೆಸಲು ಪರ್ಚೇಸ್ ಆರ್ಡರ್‌ಗಳ ಅಗತ್ಯವಿದೆಯೇ?
  • Snap ತನ್ನ ಎಲ್ಲ ಜಾಗತಿಕ ವ್ಯವಹಾರ ಘಟಕಗಳಿಗಾಗಿ ಪರ್ಚೇಸ್ ಆರ್ಡರ್‌ಗಳನ್ನು ಬಿಡುಗಡೆ ಮಾಡಿದೆ. ಪರ್ಚೇಸ್ ಆರ್ಡರ್ ಹೊಂದಿಲ್ಲದ ಯಾವುದೇ ಖರೀದಿ ವಿನಂತಿಗಳನ್ನು ನೀವು ಹೊಂದಿದ್ದರೆ, ಯಾವುದೇ ಸರಕುಗಳು ಅಥವಾ ಸೇವೆಗಳನ್ನು ತಲುಪಿಸುವುದಕ್ಕೆ ಮೊದಲು ಅದರ ಅಗತ್ಯವಿದೆಯೇ ಎಂದು ನಿರ್ಧರಿಸಲು ದಯವಿಟ್ಟು ನಿಮ್ಮ Snap ಸಂಪರ್ಕದ ಅಥವಾ Snap ನ ಖರೀದಿ ತಂಡದ (purchasing@snap.com) ಜೊತೆಗೆ ಸಮಾಲೋಚಿಸಿ.

  • PO ರಚನೆಗೆ ಮುಂದಿನ ದಿನಾಂಕವನ್ನು ತೋರಿಸುವ ಯಾವುದೇ ಇನ್‌ವಾಯ್ಸ್‌ಗಳನ್ನು ಆಂತರಿಕ ವಿಮರ್ಶೆಗಳಿಗೆ ಒಳಪಡಿಸಲಾಗುತ್ತದೆ, ಇದರಿಂದ ಪಾವತಿ ವಿಳಂಬ ಉಂಟಾಗುವ ಸಂಭಾವ್ಯತೆಯಿದೆ.

ನಾನು ಪಾವತಿಯನ್ನು ಹೇಗೆ ಪಡೆಯಬಹುದು?

ಎಲ್ಲ ಇನ್‌ವಾಯ್ಸ್‌ಗಳನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ap.invoices@snapchat.com ಗೆ ಇಮೇಲ್ ಮಾಡಬೇಕು.

ಪ್ರಕ್ರಿಯೆಗೊಳಿಸುವುದರಲ್ಲಿ ಅಥವಾ ಪಾವತಿಯಲ್ಲಿ ವಿಳಂಬಗಳು ಉಂಟಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಇನ್‌ವಾಯ್ಸ್ ಸಲ್ಲಿಸುವುದಕ್ಕೆ ಮೊದಲು ಕನಿಷ್ಠ ಇನ್‌ವಾಯ್ಸ್ ಅಗತ್ಯಗಳನ್ನು ಪೂರೈಸುವಂತೆ ನಾವು ಕೋರುತ್ತೇವೆ.

  • ಇನ್‌ವಾಯ್ಸ್ ಕನಿಷ್ಠ ಅಗತ್ಯಗಳು:

    • ಇನ್‌ವಾಯ್ಸ್ PDF ಫಾರ್ಮ್ಯಾಟ್‌ನಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ (1 ಇನ್‌ವಾಯ್ಸ್‌ ಪ್ರತಿ ಲಗತ್ತಿಗೆ)

    • ನಿಮ್ಮ ಕಂಪನಿಯ ಹೆಸರು

    • ಇನ್‌ವಾಯ್ಸ್ ಸಂಖ್ಯೆ

    • ಇನ್‌ವಾಯ್ಸ್ ದಿನಾಂಕ

    • Snap ಜಾರಿ ಮಾಡಿದ PO ಸಂಖ್ಯೆ (PR ಸಂಖ್ಯೆ ಅಲ್ಲ)

    • Snap ಜಾರಿ ಮಾಡಿರುವ PO ದಲ್ಲಿ ತಿಳಿಸಿರುವಂತೆ Snap ಕಾನೂನುಬದ್ಧ ಘಟಕ ಮತ್ತು ಬಿಲ್ಲಿಂಗ್ ವಿಳಾಸ

    • ಬಾಕಿಯಿರುವ ಒಟ್ಟು ಮೊತ್ತ ಮತ್ತು ಪಾವತಿ ಕರೆನ್ಸಿ

    • ಶಿಪ್ಪಿಂಗ್‌ಗೆ ಶುಲ್ಕ ವಿಧಿಸಿದರೆ, ದಯವಿಟ್ಟು ಸ್ಪಷ್ಟವಾಗಿ ಅದನ್ನು ಪ್ರತ್ಯೇಕವಾಗಿ ಲೇಬಲ್ ಮಾಡಿ

    • ಪಾವತಿ ಸೂಚನೆಗಳು (ಐಚ್ಛಿಕ)

ನೀವು ಸೇವೆಗಳನ್ನು ಒದಗಿಸುತ್ತಿದ್ದರೆ, ಇನ್‌ವಾಯ್ಸ್ ಕಡ್ಡಾಯವಾಗಿ (1) ಗಂಟೆಯ ದರಗಳು (2) ಸೇವೆಯ ದಿನಾಂಕಗಳು ಅಥವಾ ದಿನಾಂಕ ಶ್ರೇಣಿ ಮತ್ತು (3) ನಿರ್ವಹಣಾ ಸೇವೆಯಾಗಿದ್ದಲ್ಲಿ, ಅನ್ವಯಿಸುವ ಸಹಿ ಮಾಡಿರುವ ಸೇವಾ ಆರ್ಡರ್‌ಗಳ ಪ್ರತಿಗಳನ್ನು ಒಳಗೊಂಡಿರಬೇಕು.

ನನ್ನ ಇನ್‌ವಾಯ್ಸ್ ಅನ್ನು ಯಾವಾಗ ಪಾವತಿಸಲಾಗುತ್ತದೆ?
  • ಪಕ್ಷಗಳ ನಡುವೆ ಜಾರಿಗೊಳಿಸಿದ ಕರಾರಿನ ಮೇಲೆ ಸಮ್ಮತಿಸದ ಹೊರತು, Snap ನ ಪ್ರಮಾಣಿತ ಪಾವತಿ ನಿಯಮಗಳು, ನಾವು ಪ್ರಕ್ರಿಯೆಗೊಳಿಸಿದ ಬಳಿಕ ನಿಖರವಾದ ಇನ್‌ವಾಯ್ಸ್ ಅನ್ನು Snap ಸ್ವೀಕರಿಸುವುದನ್ನು ಆಧರಿಸಿ, ಇನ್‌ವಾಯ್ಸ್ ದಿನಾಂಕದಿಂದ 60 ದಿನಗಳವರೆಗೆ ನಿವ್ವಳವಾಗಿರುತ್ತದೆ.

  • ನಮ್ಮ Oracle ಪೂರೈಕೆದಾರರ ಪೋರ್ಟಲ್ ಆ್ಯಕ್ಸೆಸ್ ಬಳಸಿಕೊಂಡು ನಿಮ್ಮ ಇನ್‌ವಾಯ್ಸ್ ಮತ್ತು ಪಾವತಿ ಸ್ಥಿತಿಯನ್ನು ಪರಿಶೀಲಿಸಿ. ಈ ಕೆಳಗಿನ ಲಿಂಕ್ ಪೂರೈಕೆದಾರರ ಪೋರ್ಟಲ್‌ಗೆ ಸಂಬಂಧಿಸಿ ನಿಮಗೆ ಮಾರ್ಗದರ್ಶನ ನೀಡುತ್ತದೆ.

ಇನ್ನೂ Oracle ಪೂರೈಕೆದಾರರ ಪೋರ್ಟಲ್‌ನಲ್ಲಿ ಇಲ್ಲವೇ?
  • ನಿಮ್ಮ Snap ಸಂಪರ್ಕ ಸಿಬ್ಬಂದಿ ಸಂಬಂಧಪಟ್ಟ ಪೂರೈಕೆದಾರರ ಆನ್‌ಬೋರ್ಡಿಂಗ್ ದಾಖಲೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಅವರಿಗೆ ಇಮೇಲ್ ಮಾಡಿ.

  • ಒಂದು ವೇಳೆ ನಿಮ್ಮ Snap ಸಂಪರ್ಕ ಸಿಬ್ಬಂದಿ ಈಗಾಗಲೇ ಪೂರೈಕೆದಾರರ ಆನ್‌ಬೋರ್ಡಿಂಗ್ ದಾಖಲೆಗಳನ್ನು ಪೂರ್ಣಗೊಳಿಸಿದ್ದರೆ ಮತ್ತು ನೀವು Oracle ನಿಂದ ಇನ್ನೂ ಇಮೇಲ್ ಅನ್ನು ಸ್ವೀಕರಿಸಿಲ್ಲದಿದ್ದರೆ, ಫಾಲೋ ಅಪ್ ಮಾಡಲು ದಯವಿಟ್ಟು ನಮ್ಮನ್ನು suppliers@snap.com ನಲ್ಲಿ ಸಂಪರ್ಕಿಸಿ.

Have additional Accounts Payable or invoice related questions?

Please contact the relevant Accounts Payable team via:

Country

Area of support

AP Email Address

Global

Invoice & Payment Concerns

ap@snapchat.com

Global

Invoice Submission Only

ap.invoices@snapchat.com

Global

PO Questions and Concerns

purchasing@snapchat.com

Global

Supplier Registration & Profile Management

suppliers@snapchat.com