Snapchat ನಲ್ಲಿ ಸಂಗೀತದ ಮಾರ್ಗಸೂಚಿಗಳು
ಸಂಗೀತ ನಿಮ್ಮ ಭಾವನೆಗಳನ್ನು ಸೆರೆಹಿಡಿಯಬಲ್ಲದು, ನಿಮ್ಮ ಅಭಿವ್ಯಕ್ತಿಗೊಳಿಸುವಿಕೆಯನ್ನು ಮೇಲ್ಮಟ್ಟಕ್ಕೆ ಏರಿಸಬಹುದು, ನೀವು ನಿಜಕ್ಕೂ ಏನು ಅನುಭವಿಸುತ್ತಿದ್ದೀರಿ ಎನ್ನುವುದನ್ನು ಸ್ಪಷ್ಟಪಡಿಸಬಹುದು, ಮತ್ತು ಕ್ಷಣಕ್ಕಾಗಿ ಲಹರಿಯನ್ನು ಸೃಷ್ಟಿಸಬಲ್ಲದು. ಆ ಕಾರಣಕ್ಕಾಗಿ Snapchat ಕ್ಯಾಮೆರಾ ಬಳಸಿ ಒಂದು ಫೋಟೋ ಅಥವಾ ವೀಡಿಯೊ ಸಂದೇಶಗಳಿಗೆ (ಅದನ್ನು ನಾವು "Snaps" ಎಂದು ಕರೆಯುತ್ತೇವೆ) ನೀವು ಸೇರಿಸಬಹುದಾದ ಸಂಗೀತದ ಸಂಗ್ರಹಣೆಯನ್ನು (ಅದನ್ನು ನಾವು "ಧ್ವನಿಗಳು" ಅನ್ನುತ್ತೇವೆ) ಒದಗಿಸುವುದನ್ನು ನಾವು ಆರಂಭಿಸಿದ್ದೇವೆ. ಧ್ವನಿಗಳೊಂದಿಗೆ ನೀವು ಏನನ್ನು ಸೃಷ್ಟಿಸುತ್ತೀರಿ ಎನ್ನುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ, ಆದರೆ ನಿಮ್ಮ ಬಳಕೆಯು Snap ಸೇವೆಯ ನಿಯಮಗಳಿಗೆ ಪೂರಕವಾಗಿರುವ ಈ ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎನ್ನುವುದನ್ನು ದಯವಿಟ್ಟು ಗಮನಿಸಿ.
ಅನಧಿಕೃತ ಸಂಗೀತ ಕೇಳಿಸಿಕೊಳ್ಳುವಿಕೆ ಸೇವೆ ಅಥವಾ ಪ್ರೀಮಿಯಂ ಸಂಗೀತ ವೀಡಿಯೋ ಸ್ಟ್ರೀಮಿಂಗ್ ಸೇವೆಯನ್ನು ಸೃಷ್ಟಿಸುವ ರೀತಿಯಲ್ಲಿ ಧ್ವನಿಗಳನ್ನು ಬಳಸಿಕೊಂಡು ನೀವು Snap ಗಳನ್ನು ಸೃಷ್ಟಿ, ಕಳುಹಿಸುವಿಕೆ ಅಥವಾ ಪೋಸ್ಟ್ ಮಾಡುವಂತಿಲ್ಲ.
ರಾಜಕೀಯ ಮತ್ತು ಧಾರ್ಮಿಕ ಸೇರಿದಂತೆ, ಸ್ವಯಂ ಅಭಿವ್ಯಕ್ತಿಯನ್ನು ನಾವು ಬೆಂಬಲಿಸುತ್ತೇವಾದರೂ, ತಮ್ಮ ಕಾರ್ಯಗಳನ್ನು ಯಾವಾಗ ಮತ್ತು ಹೇಗೆ ರಾಜಕೀಯ ಮತ್ತು ಧಾರ್ಮಿಕ ಹೇಳಿಕೆಗಳಲ್ಲಿ ಬಳಸಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕನ್ನು ಕಲಾವಿದರು ಹೊಂದಿದ್ದಾರೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ, ರಾಜಕೀಯ ಅಥವಾ ಧಾರ್ಮಿಕ ಭಾಷಣಗಳಲ್ಲಿ ನೀವು ಧ್ವನಿಗಳನ್ನು ಬಳಸುವಂತಿಲ್ಲ.
Snap ಸೇವೆಗಳ ನಿಯಮವನ್ನು ಉಲ್ಲಂಘಿಸುವ ರೀತಿ ನೀವು Snap ಗಳ ಸೃಷ್ಟಿ, ಕಳುಹಿಸುವಿಕೆ, ಅಥವಾ ಪೋಸ್ಟ್ ಮಾಡಲು ಧ್ವನಿಗಳನ್ನು ಬಳಸುವಂತಿಲ್ಲ. ಉದಾಹರಣೆಗೆ:
ಕಾನೂನುಬಾಹಿರವಾಗಿರುವ Snap ಗಳು;
ಬೆದರಿಕೆಯ, ಅಶ್ಲೀಲ, ದ್ವೇಷ ಭಾಷಣಕ್ಕೆ ಕಾರಣವಾಗುವ, ಹಿಂಸೆ ಪ್ರಚೋದಿಸುವ, ಅಥವಾ ನಗ್ನತೆ (ಎದೆಹಾಲುಣಿಸುವಿಕೆ ಅಥವಾ ಲೈಂಗಿಕವಲ್ಲದ ಪರಿಭಾಷೆಗಳಲ್ಲಿನ ನಗ್ನತೆಯ ಬಿಂಬಿಸುವಿಕೆಯನ್ನು ಹೊರತುಪಡಿಸಿ),ಅಥವಾ ಗ್ರಾಫಿಕ್ ಅಥವಾ ಅನಪೇಕ್ಷಿತ ಹಿಂಸೆಯನ್ನು ಒಳಗೊಂಡಿರುವ; ಅಥವಾ
ಪ್ರಚಾರ, ಗೌಪ್ಯತೆ, ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್, ಅಥವಾ ಇತರ ಬೌದ್ಧಿಕ ಸ್ವಾಮ್ಯದ ಹಕ್ಕುಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಒನ್ನೊಬ್ಬರ ಹಕ್ಕನ್ನು ಉಲ್ಲಂಘಿಸುವ ಅಥವಾ ಅತಿಕ್ರಮಿಸುವ Snap ಗಳು.
ನೀವು ಮಧುರ ಅಥವಾ ಧ್ವನಿಗಳ ಸಾಹಿತ್ಯದ ಮೂಲಭೂತ ಪಾತ್ರವನ್ನು ಬದಲಾಯಿಸಬಾರದು ಅಥವಾ ಸೌಂಡ್‌ಗಳ ರೂಪಾಂತರಗಳನ್ನು ರಚಿಸಬಾರದು. ನೀವು ಆಕ್ಷೇಪಾರ್ಹ ಅಥವಾ ಆಕ್ರಮಣಕಾರಿ ರೀತಿಯಲ್ಲಿ (ನಮ್ಮ ಸ್ವಂತ ವಿವೇಚನೆಯಿಂದ) ಧ್ವನಿಗಳನ್ನು ಬಳಸಬಾರದು ಅಥವಾ ಅದು ನಮ್ಮನ್ನು, ನಮ್ಮ ಪರವಾನಗಿದಾರರು, ಸೇವೆಗಳು ಅಥವಾ ಇತರ ಬಳಕೆದಾರರನ್ನು ಯಾವುದೇ ಹೊಣೆಗಾರಿಕೆ ಅಥವಾ ಹಾನಿಗೆ ಒಡ್ಡಬಹುದು.
ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಬಳಕೆಗೆ ಮಾತ್ರ ಧ್ವನಿಗಳನ್ನು ಬಳಸಬಹುದು. ಉದಾಹರಣೆಗೆ, ಯಾವುದೇ ಬ್ರ್ಯಾಂಡ್, ಉತ್ಪನ್ನಗಳು, ಸರಕುಗಳು ಅಥವಾ ಸೇವೆಗಳನ್ನು ಪ್ರಾಯೋಜಿಸುವ, ಉತ್ತೇಜಿಸುವ ಅಥವಾ ಜಾಹೀರಾತು ಮಾಡುವ ಸ್ನ್ಯಾಪ್‌ಗಳನ್ನು (ಅಥವಾ ಸ್ನ್ಯಾಪ್‌ಗಳ ಸರಣಿಯನ್ನು) ರಚಿಸಲು, ಕಳುಹಿಸಲು ಅಥವಾ ಪೋಸ್ಟ್ ಮಾಡಲು ಧ್ವನಿಗಳನ್ನು ಬಳಸಲಾಗುವುದಿಲ್ಲ.
ಧ್ವನಿಗಳನ್ನು ಬಳಸುವ Snap ಗಳನ್ನು ಕೇವಲ ಸೇವೆಗಳ ಮೂಲಕ ಮಾತ್ರ ಕಳುಹಿಸಬಹುದು ಅಥವಾ ಪೋಸ್ಟ್ ಮಾಡಬಹುದು. ತೃತೀಯ-ಪಕ್ಷದ ಸೇವೆಗಳಲ್ಲಿ ನೀವು ಧ್ವನಿಗಳೊಂದಿಗಿನ Snap ಗಳನ್ನು ಕಳುಹಿಸುವಿಕೆ, ಹಂಚಿಕೊಳ್ಳುವಿಕೆ ಅಥವಾ ಪೋಸ್ಟ್ ಮಾಡುವಂತಿಲ್ಲ. ಧ್ವನಿಗಳನ್ನು ಒಳಗೊಂಡಿರುವ Snap ಗಳ ಅನಧಿಕೃತ ವಿತರಣೆಯು ಕೃತಿಸ್ವಾಮ್ಯ ಉಲ್ಲಂಘನೆ ಕಾನೂನುಗಳು, ಮತ್ತು ಹಕ್ಕುಗಳು, ನೀತಿಗಳು, ಮತ್ತು ಯಾವುದೇ ತೃತೀಯ ಪಕ್ಷ ಸೇವೆಯ ಅಧಿಕಾರ ಸೇರಿದಂತೆ ಯಾವುದೇ ಅನ್ವಯವಾಗುವ ಕಾನೂನುಗಳಿಗೆ ಒಳಪಡುತ್ತದೆ.
ಈ ಮಾರ್ಗಸೂಚಿಗಳನ್ನು ಅನುಸರಿಸದ ರೀತಿಯಲ್ಲಿ ನೀವು ಧ್ವನಿಗಳನ್ನು ಬಳಸಿದ್ದಲ್ಲಿ, ನಿಮಗೆ ಸೂಚನೆ ನೀಡದೆ ಅಂತಹ ಬಳಕೆಯನ್ನು ತೆಗೆದುಹಾಕಬಹುದು, ಮತ್ತು ನೀವು ಕೃತಿಸ್ವಾಮ್ಯ ಉಲ್ಲಂಘನೆ ಕಾನೂನುಗಳು ಸೇರಿದಂತೆ ಅನ್ವಯವಾಗುವ ಕಾನೂನುಗಳ ಜಾರಿಗೆ ಒಳಪಡಬಹುದು. 'ಧ್ವನಿಗಳು'ನಲ್ಲಿ ಲಭ್ಯವಿರುವ ಸಂಗೀತವನ್ನು ಮೂರನೇ ವ್ಯಕ್ತಿಗಳ ಪರವಾನಗಿ ಅಡಿಯಲ್ಲಿ ಒದಗಿಸಲಾಗಿದೆ. ಅನ್ವಯವಾಗುವ ಹಕ್ಕುದಾರರ ಪ್ರತ್ಯೇಕ ಪರವಾನಗಿ ಇಲ್ಲದೆ ಪಠ್ಯ ಅಥವಾ ಡೇಟಾ ಮೈನಿಂಗ್ ಉದ್ದೇಶಗಳಿಗಾಗಿ ಈ ಸಂಗೀತವನ್ನು ಬಳಸಲು ನಿಮಗೆ ಅನುಮತಿ ಇಲ್ಲ. ಅಂತಹ ಎಲ್ಲಾ ಹಕ್ಕುಗಳನ್ನು ಅನ್ವಯಿಸುವ ಹಕ್ಕುದಾರರಿಗೆ ಕಾಯ್ದಿರಿಸಲಾಗಿದೆ.
ಒಂದು ವೇಳೆ ನಿಮ್ಮ ಕಂಟೆಂಟ್ ಧ್ವನಿಗಳಿಗೆ ಹೊರತಾದ ಸಂಗೀತವನ್ನು ಒಳಗೊಂಡಿದ್ದರೆ, ಅಂಥ ಸಂಗೀತಕ್ಕೆ ಅಗತ್ಯವಿರಬಹುದಾದ ಯಾವುದೇ ಪರವಾನಗಿಗಳು ಮತ್ತು ಹಕ್ಕುಗಳನ್ನು ಪಡೆದುಕೊಳ್ಳಲು ನೀವು ಜವಾಬ್ದಾರಾಗಿರುತ್ತೀರಿ. ಒಂದು ವೇಳೆ ನಿಮ್ಮ ಸಂಗೀತದ ಬಳಕೆ ಅಧಿಕೃತವಾಗಿಲ್ಲದಿದ್ದರೆ, ಅಂಥ ಯಾವುದೇ ಕಂಟೆಂಟ್ ಅನ್ನು ಮ್ಯೂಟ್ ಮಾಡಬಹುದು, ತೆಗೆದುಹಾಕಬಹುದು, ಅಥವಾ ಅಳಿಸಬಹುದು. ಸಂಗೀತ ಮಾರ್ಗಸೂಚಿಗಳ ಉಲ್ಲಂಘನೆಗಳು ನಿಮ್ಮ Snap ಖಾತೆಯನ್ನು ನಿಷ್ಕ್ರಿಯಗೊಳಿಸುವುದಕ್ಕೆ ಕಾರಣವಾಗಬಹುದು. ಧ್ವನಿಗಳು ಎಲ್ಲ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು.