Snap ವಾಣಿಜ್ಯ ವಿಷಯ ನೀತಿ
ಜಾರಿ: ಡಿಸೆಂಬರ್ 14, 2023
Snap ವಾಣಿಜ್ಯ ವಿಷಯ ನೀತಿ
ಜಾರಿ: ಡಿಸೆಂಬರ್ 14, 2023
Snapchat ಎನ್ನುವುದು ಒಂದು ಆ್ಯಪ್ ಆಗಿದ್ದು, ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದ ಹೊಂದಲು ಜನರಿಗೆ ಅವಕಾಶ ಕಲ್ಪಿಸುತ್ತದೆ. Snapchatter ಗಳು ವಿನೋದಿಸಬೇಕು ಮತ್ತು ಸುರಕ್ಷಿತವಾಗಿರಬೇಕು ಎಂದು ನಾವು ಬಯಸುತ್ತೇವೆ ಮತ್ತು ಆ ಗುರಿಗಳು ನಮ್ಮ ನೀತಿಗಳನ್ನು ಮುನ್ನಡೆಸುತ್ತವೆ. Snap ನಿಂದ ಪ್ರಾಯೋಜಿತವಾಗಿರುವ, ಪ್ರಚಾರ ಮಾಡಲ್ಪಡುವ ಅಥವಾ ಜಾಹೀರಾತು ನೀಡಲಾಗುವ ಯಾವುದೇ ಬ್ರ್ಯಾಂಡ್, ಉತ್ಪನ್ನಗಳು, ಸರಕುಗಳು ಅಥವಾ ಸೇವೆಯ (ನಿಮ್ಮ ಸ್ವಂತ ಬ್ರ್ಯಾಂಡ್ ಅಥವಾ ವ್ಯವಹಾರ ಸೇರಿದಂತೆ) ಜಾಹೀರಾತುಗಳು ಮತ್ತು ಹಣದ ಪಾವತಿ ಅಥವಾ ಉಚಿತ ಉಡುಗೊರೆಗಳನ್ನು ಸ್ವೀಕರಿಸುವ ಮೂಲಕ ಪೋಸ್ಟ್ ಮಾಡಲು ನಿಮಗೆ ಪ್ರೋತ್ಸಾಹಕವನ್ನು ನೀಡಲಾಗಿರುವ ಕಂಟೆಂಟ್ ಅನ್ನು ಹೊರತುಪಡಿಸಿ Snap ವೇದಿಕೆಯಲ್ಲಿನ ಕಂಟೆಂಟ್‌ಗೆ ಈ ವಾಣಿಜ್ಯ ಕಂಟೆಂಟ್ ನೀತಿ ಅನ್ವಯಿಸುತ್ತದೆ.
ನೀವು Snap ನ ಸೇವೆಯ ನಿಯಮಗಳು ಮತ್ತು ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ನಮ್ಮ ಸೇವೆಗಳ ಬಳಕೆಯನ್ನು ನಿಯಂತ್ರಿಸುವ ಎಲ್ಲಾ ಇತರ Snap ನೀತಿಗಳನ್ನು ಅನುಸರಿಸಬೇಕು. ನಾವು ಕಾಲಕಾಲಕ್ಕೆ ನಮ್ಮ ನಿಯಮಗಳು, ನೀತಿಗಳು ಮತ್ತು ಮಾರ್ಗಸೂಚಿಗಳನ್ನು ನವೀಕರಿಸಬಹುದು, ಆದ್ದರಿಂದ ದಯವಿಟ್ಟು ಅವುಗಳನ್ನು ಪರಿಶೀಲಿಸಿ ಮತ್ತು ನಿಯಮಿತವಾಗಿ ಪರಿಶೀಲಿಸುತ್ತಿರಿ.
ನಿಮ್ಮ ವಿಷಯವು ಪ್ರಚಾರ ಮಾಡುವ ಬ್ರ್ಯಾಂಡ್‌ಗಳು, ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ನೀವು ಪ್ರಾಮಾಣಿಕವಾಗಿರಬೇಕು; ತಪ್ಪುದಾರಿಗೆಳೆಯುವ, ಮೋಸಗೊಳಿಸುವ ಅಥವಾ ಮನನೋಯಿಸುವ ವಿಷಯವನ್ನು ನೀವು ತಪ್ಪಿಸಬೇಕು; ಮತ್ತು ನಮ್ಮ ಬಳಕೆದಾರರ ಗೌಪ್ಯತೆಯನ್ನು ನೀವು ಎಂದಿಗೂ ರಾಜಿ ಮಾಡಿಕೊಳ್ಳಬಾರದು.
ನಿಮ್ಮ ವಿಷಯ, ಮತ್ತು ಅದು ಪ್ರಚಾರ ಮಾಡುವ ಯಾವುದೇ ಬ್ರ್ಯಾಂಡ್, ಉತ್ಪನ್ನ ಅಥವಾ ಸೇವೆಯು 13 ಕ್ಕಿಂತ ಹೆಚ್ಚು ವರ್ಷ ವಯಸ್ಸಿನ Snapchatter ಗಳಿಗೆ ಸೂಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ. ನೀವು ಲಭ್ಯವಾಗಿಸುವ ವಿಷಯವನ್ನು ವಯೋ ಗುರಿಯಾಗಿಸುವ ಆಯ್ಕೆಯನ್ನು ನಾವು ಒದಗಿಸಬಹುದು. ಈ ನೀತಿಯಲ್ಲಿ ಅಥವಾ ವಿಷಯವು ಪ್ರಸಾರವಾಗುವ ಪ್ರದೇಶದಲ್ಲಿ ಅನ್ವಯಿಸುವ ಕಾನೂನುಗಳು ಅಥವಾ ಉದ್ಯಮ ಮಾನದಂಡಗಳಿಂದ ವಿಷಯವು ವಯೋ ಗುರಿಯಾಗಬೇಕಾದ ಅಗತ್ಯವಿದ್ದರೆ, ಆ ಗುರಿಯಾಗಿಸುವಿಕೆಯ ಆಯ್ಕೆಗಳನ್ನು ಬಳಸುವುದಕ್ಕೆ ಮತ್ತು ಸರಿಯಾದ ವಯಸ್ಸನ್ನು(ಗಳನ್ನು) ಆಯ್ಕೆ ಮಾಡುವುದಕ್ಕೆ ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಹಾಗೆ ಮಾಡಲು ನೀವು ವಿಫಲರಾದರೆ ನಾವು ಹೊಣೆಗಾರರಾಗುವುದಿಲ್ಲ. ಒಂದು ವೇಳೆ ನೀಡಿದ ವಯೋ-ಗುರಿಯ ಆಯ್ಕೆಯು ಲಭ್ಯವಿಲ್ಲದಿದ್ದರೆ, ಆ ವಿಷಯವನ್ನು ಪೋಸ್ಟ್ ಮಾಡಬೇಡಿ.
ಹೌಸಿಂಗ್, ಸಾಲ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಮತ್ತು ನಿರ್ದಿಷ್ಟ ಜನಾಂಗ, ಕುಲ, ಧರ್ಮ ಅಥವಾ ನಂಬಿಕೆ, ರಾಷ್ಟ್ರೀಯ ಮೂಲ, ವಯಸ್ಸು, ಲೈಂಗಿಕ ಅಭಿರುಚಿ, ಲಿಂಗ, ಲಿಂಗ ಗುರುತು ಅಥವಾ ಅಭಿವ್ಯಕ್ತಿ, ವೈಕಲ್ಯ ಅಥವಾ ಸ್ಥಿತಿಗೆ ಅಥವಾ ಸಂರಕ್ಷಿತ ವರ್ಗದ ಯಾವುದೇ ಸದಸ್ಯನಿಗೆ ನಿರ್ದೇಶಿತವಾಗಿರುವ ಅಥವಾ ಗುರಿಯಾಗಿಸಿದ (ಅನ್ವಯಿಸುತ್ತಿದ್ದಲ್ಲಿ) ಜಾಹೀರಾತಿಗೆ ಅನುಮತಿಯಿಲ್ಲ.
ನಿಮ್ಮ ವಿಷಯ ಮತ್ತು ಯಾವುದೇ ಬಹಿರಂಗಪಡಿಸುವಿಕೆಗಳು ಅನ್ವಯವಾಗುವ ಎಲ್ಲಾ ಕಾನೂನುಗಳು, ಶಾಸನಗಳು, ಆದೇಶಗಳು, ನಿಯಮಗಳು, ಸಾರ್ವಜನಿಕ ಆದೇಶ ನಿಯಮಗಳು, ಉದ್ಯಮ ಸಂಕೇತಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿರುತ್ತವೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯೂ ನಿಮ್ಮದಾಗಿದೆ.
ಎಲ್ಲ ಬಹಿರಂಗಪಡಿಸುವಿಕೆಗಳು, ಹಕ್ಕುನಿರಾಕರಣೆಗಳು ಮತ್ತು ಎಚ್ಚರಿಕೆಗಳು ಸ್ಪಷ್ಟವಾಗಿರಬೇಕು ಮತ್ತು ಎದ್ದುಕಾಣುವಂತಿರಬೇಕು.
ವಾಣಿಜ್ಯ ಕಂಟೆಂಟ್, ಕಂಟೆಂಟ್‌ನ ವಾಣಿಜ್ಯ ಸ್ವರೂಪವನ್ನು ಮತ್ತು ಯಾವುದೇ ಪ್ರಚಾರ ಮಾಡಿದ ಬ್ರ್ಯಾಂಡ್ ಅನ್ನು ಗುರುತಿಸಬೇಕು. ಈ ಕಂಟೆಂಟ್ ಲೇಬಲ್ ಮಾಡಲು ನೀವು Snap ನ ಪಾವತಿಸಿದ ಪಾಲುದಾರಿಕೆ ಟೂಲ್ ಬಳಸಬೇಕು ಮತ್ತು ಅಗತ್ಯವಿದ್ದರೆ, ನಿಮ್ಮ ವಾಣಿಜ್ಯ ಕಂಟೆಂಟ್‌ಗೆ ಮರುಸ್ಪರ್ಶ ನೀಡಲಾಗಿದೆ ಎಂದು ಸೂಚಿಸುವ ಯಾವುದೇ ಅವಶ್ಯಕ ಹಕ್ಕುನಿರಾಕರಣೆ ಅಥವಾ ವಾಟರ್‌ಮಾರ್ಕ್ ಕೂಡ ಸೇರಿಸಬೇಕು.
ನೀವು ಪಾವತಿಸಿದ ಪಾಲುದಾರಿಕೆ ಟೂಲ್ ಬಳಸಬೇಕಾಗಬಹುದಾದ ಸನ್ನಿವೇಶಗಳ ಕೆಲವು ಉದಾಹರಣೆಗಳು ಇಲ್ಲಿವೆ:
ನೀವು ಒಬ್ಬ ಕ್ರಿಯೇಟರ್ ಆಗಿದ್ದು ರೋಲರ್ ಸ್ಕೇಟಿಂಗ್ ವೀಡಿಯೊಗಳನ್ನು ಮಾಡುತ್ತೀರಿ. ಒಂದು Snap ನಲ್ಲಿ ತಮ್ಮ ಬ್ರ್ಯಾಂಡ್ ಉಲ್ಲೇಖಿಸಲು ರೋಲರ್ ಸ್ಕೇಟ್ ಬ್ರ್ಯಾಂಡ್‌ವೊಂದು ನಿಮಗೆ ಹಣ ಕಳುಹಿಸುತ್ತದೆ.
ನೀವು "ಪಾವತಿಸಿದ ಪಾಲುದಾರಿಕೆ" ಲೇಬಲ್ ಅನ್ವಯಿಸಬೇಕೇ? ಹೌದು, ಏಕೆಂದರೆ ಪ್ರಚಾರ ಮಾಡಲು ನಿಮಗೆ ಪಾವತಿಸಲಾಗಿದೆ.
ರೋಲರ್ ಸ್ಕೇಟ್ ಬ್ರ್ಯಾಂಡ್ ನಿಮಗೆ ಹಣ ಕಳುಹಿಸುವುದಿಲ್ಲ, ಆದರೆ ಅವರು ನಿಮಗೆ ಒಂದು ಜೋಡಿ ರೋಲರ್ ಸ್ಕೇಟ್‌ಗಳನ್ನು "ಉಚಿತವಾಗಿ" ಕಳುಹಿಸುತ್ತಾರೆ - ನೀವು ಅವುಗಳನ್ನು ಇಷ್ಟಪಟ್ಟರೆ ಸ್ಕೇಟ್‌ಗಳ ವಿಮರ್ಶೆ ಮಾಡಬೇಕೆಂಬ ವಿನಂತಿಯೊಂದಿಗೆ.
ನೀವು "ಪಾವತಿಸಿದ ಪಾಲುದಾರಿಕೆ" ಲೇಬಲ್ ಅನ್ವಯಿಸಬೇಕೇ? ಹೌದು, ಏಕೆಂದರೆ ಪ್ರಚಾರಕ್ಕೆ ಪ್ರತಿಯಾಗಿ ನೀವು ಮೌಲ್ಯಯುತವಾದುದನ್ನು (ಸ್ಕೇಟ್‌ಗಳು) ಸ್ವೀಕರಿಸಿದ್ದೀರಿ.
ರೋಲರ್ ಸ್ಕೇಟ್ ಬ್ರ್ಯಾಂಡ್ ನಿಮಗೆ ಇರಿಸಿಕೊಳ್ಳಲು ಸ್ಕೇಟ್‌ಗಳನ್ನು ನೀಡಿಲ್ಲ, ಆದರೆ ಎಲ್ಲಿಯಾದರೂ ಅವರ ಬ್ರ್ಯಾಂಡ್ ಅನ್ನು ಉಲ್ಲೇಖಿಸುವುದಾದರೆ ಅಥವಾ ಲೋಗೋ ತೋರಿಸುವುದಾದರೆ, ಒಂದು ವೀಡಿಯೊಗಾಗಿ ಕೆಲವು ಸ್ಕೇಟ್‌ಗಳನ್ನು ಎರವಲು ಪಡೆಯಲು ಅವಕಾಶ ನೀಡಿದ್ದಾರೆ.
ನೀವು "ಪಾವತಿಸಿದ ಪಾಲುದಾರಿಕೆ" ಲೇಬಲ್ ಅನ್ವಯಿಸಬೇಕೇ? ಹೌದು.
ವಿಮರ್ಶಿಸುವ ಸಲುವಾಗಿ ನೀವು ಸ್ವತಃ ಸ್ಕೇಟ್‌ಗಳನ್ನು ಖರೀದಿಸಿದ್ದೀರಿ; ಇತರ ಸ್ಕೇಟ್ ಬ್ರ್ಯಾಂಡ್‌ಗಳಿಗಾಗಿ ಕೂಡ ನೀವು ಇದನ್ನು ಮಾಡುತ್ತೀರಿ.
ನೀವು "ಪಾವತಿಸಿದ ಪಾಲುದಾರಿಕೆ" ಲೇಬಲ್ ಅನ್ವಯಿಸಬೇಕೇ? ಬೇಡ, ಏಕೆಂದರೆ ಯಾವುದೇ ರೀತಿಯಲ್ಲಿ ಬ್ರ್ಯಾಂಡ್ ನಿಮಗೆ ಪಾವತಿ ಮಾಡುತ್ತಿಲ್ಲ.
ನೀವು ರೋಲರ್ ಸ್ಕೇಟ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತೀರಿ.
ನೀವು "ಪಾವತಿಸಿದ ಪಾಲುದಾರಿಕೆ" ಲೇಬಲ್ ಅನ್ವಯಿಸಬೇಕೇ? ಹೌದು, ರೋಲರ್ ಸ್ಕೇಟ್‌ಗಳನ್ನು ಪ್ರಚಾರ ಮಾಡಲು ನೀವು ಉತ್ಸುಕರಾಗಿದ್ದೀರಿ (ಲಾಭಕ್ಕಾಗಿ) ಎಂದು ಬಹಿರಂಗಪಡಿಸಲು.
ನಿಮ್ಮ ಸಾರ್ವಜನಿಕ ಪ್ರೊಫೈಲ್‌ನಲ್ಲಿ ನೀವು ಪೋಸ್ಟ್ ಮಾಡಿರುವ ಜಾಹೀರಾತು ವಿಷಯವನ್ನು Snapchat ನ ನಿಮಗಾಗಿ ವಿಭಾಗದಲ್ಲಿ ಕೂಡ ಲಭ್ಯವಾಗಿಸಬಹುದು ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ಎಲ್ಲ ಬಹಿರಂಗಪಡಿಸುವಿಕೆಗಳು ಆ ಸನ್ನಿವೇಶದಲ್ಲಿ ಸೂಕ್ತವಾಗಿವೆ ಎಂದು ನೀವು ಖಚಿತಪಡಿಸಿಕೊಳ್ಳುತ್ತೀರಿ. ಕಥೆಗಳು, ಸ್ಪಾಟ್‌ಲೈಟ್, ಮ್ಯಾಪ್ ಅಥವಾ ಆ್ಯಪ್‌ನ ಇತರ ಪ್ರದೇಶಗಳಲ್ಲಿ ನಿಮ್ಮ ವಾಣಿಜ್ಯ ಕಂಟೆಂಟ್ ಸಾಧ್ಯವಿರುವ ಅತಿಹೆಚ್ಚು ಪ್ರೇಕ್ಷಕರನ್ನು ತಲುಪುವ ಸಲುವಾಗಿ, ನಿಮ್ಮ ಬಹಿರಂಗಪಡಿಸುವಿಕೆಯು ಕಾಣುವಂತಿರಬೇಕು ಮತ್ತು ಆ ಸನ್ನಿವೇಶಗಳಲ್ಲಿ ಸೂಕ್ತವಾಗಿರಬೇಕು. ಉದಾಹರಣೆಗೆ: ನೀವು ಜಾಹೀರಾತು ವಿಷಯದ 6 Snap ಗಳನ್ನು ಪೋಸ್ಟ್ ಮಾಡಿದ್ದು, ಆದರೆ ಅದರಲ್ಲಿ ಮೊದಲ Snap ಮಾತ್ರ ಜಾಹೀರಾತು ಸ್ವರೂಪವನ್ನು ಬಹಿರಂಗಪಡಿಸಿದ್ದರೆ, ಆಗ ಮೊದಲ Snap ನಿಮ್ಮ ಸಾರ್ವಜನಿಕ ಪ್ರೊಫೈಲ್‌ನ ಆಚೆಗೆ ವರ್ಧನೆಗೆ ಅರ್ಹವಾಗಿರುತ್ತದೆ.
ಒಂದು ವೇಳೆ ನೀವು ವೈಯಕ್ತಿಕ ಮಾಹಿತಿಗಾಗಿ Snapchatter ಗಳನ್ನು ಕೇಳಿದರೆ, ಡೇಟಾವನ್ನು ನೀವು ಸಂಗ್ರಹಿಸುತ್ತಿದ್ದೀರಿ ಹೊರತು Snap ಅಲ್ಲ ಎನ್ನುವುದನ್ನು ನೀವು ಸ್ಪಷ್ಟಪಡಿಸಬೇಕು ಮತ್ತು ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸುವಲ್ಲಿ ಗೌಪ್ಯತಾ ನೀತಿ ಸುಲಭವಾಗಿ ಸಿಗುವಂತೆ ನೀವು ಒದಗಿಸಬೇಕು.
ಜಾಹೀರಾತು ವಿಷಯವು ಜನಾಂಗ ಅಥವಾ ಕುಲದ ಮೂಲ, ರಾಜಕೀಯ ಅಭಿಪ್ರಾಯ, ಧಾರ್ಮಿಕ ಅಥವಾ ತಾತ್ವಿಕ ನಂಬಿಕೆಗಳು, ಟ್ರೇಡ್-ಯೂನಿಯನ್ ಸದಸ್ಯತ್ವ, ಆರೋಗ್ಯ, ಲೈಂಗಿಕ ಜೀವನ ಅಥವಾ ವೈದ್ಯಕೀಯ ಇತಿಹಾಸದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸದಿರಬಹುದು.
ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿ ಪ್ರಕ್ರಿಯೆಗೊಳಿಸಬೇಕು.
ಜಾಹೀರಾತು ವಿಷಯವು ಯಾವುದೇ ವ್ಯಕ್ತಿ ಅಥವಾ ಘಟಕದ ಬೌದ್ಧಿಕ ಆಸ್ತಿ, ಗೌಪ್ಯತೆ, ಪ್ರಚಾರ ಅಥವಾ ಇತರ ಕಾನೂನು ಹಕ್ಕುಗಳನ್ನು ಉಲ್ಲಂಘಿಸಬಾರದು. ಮ್ಯೂಸಿಕ್, ಲೆನ್ಸ್‌ಗಳು ಮತ್ತು ಜಿಯೋಫಿಲ್ಟರ್‌ಗಳಂತಹ ಯಾವುದೇ Snap ಒದಗಿಸಿದ ವಿಷಯದ ಬಳಕೆ ಸೇರಿದಂತೆ ನಿಮ್ಮ ವಿಷಯದ ಎಲ್ಲಾ ಅಂಶಗಳಿಗೆ ಅಗತ್ಯವಿರುವ ಎಲ್ಲ ಹಕ್ಕುಗಳು ಮತ್ತು ಅನುಮತಿಗಳನ್ನು ನೀವು ಹೊಂದಿರಬೇಕು. ಒಬ್ಬ ವ್ಯಕ್ತಿಯ ಅಥವಾ ಬ್ರ್ಯಾಂಡ್‌ನ ಹೆಸರು ಅಥವಾ ಹೋಲಿಕೆ (ನೋಟ-ಸಮಾನತೆಗಳನ್ನು ಒಳಗೊಂಡಂತೆ), ಧ್ವನಿ (ಧ್ವನಿ-ಸಮಾನತೆಗಳನ್ನು ಒಳಗೊಂಡಂತೆ) ಅಥವಾ ಇತರ ಗುರುತಿಸುವ ವೈಶಿಷ್ಟ್ಯಗಳನ್ನು ಅವರ ಒಪ್ಪಿಗೆಯಿಲ್ಲದೆ ಪ್ರದರ್ಶಿಸಬಾರದು.
ನಿಮ್ಮ ಹಕ್ಕುಸ್ವಾಮ್ಯ, ಟ್ರೇಡ್‌ಮಾರ್ಕ್ ಅಥವಾ ಪ್ರಚಾರದ ಹಕ್ಕುಗಳನ್ನು Snapchat ನಲ್ಲಿನ ಜಾಹೀರಾತು ವಿಷಯದಿಂದ ಉಲ್ಲಂಘಿಸಲಾಗಿದೆ ಎಂದು ನೀವು ಭಾವಿಸಿದರೆ, ಪ್ರಕಾಶಕರೊಂದಿಗೆ ನಿಮ್ಮ ಸಮಸ್ಯೆಗಳನ್ನು ನೇರವಾಗಿ ಸಂಪರ್ಕಿಸಲು ಮತ್ತು ಪರಿಹರಿಸಲು ಪ್ರಯತ್ನಿಸುವುದಕ್ಕೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಪರ್ಯಾಯವಾಗಿ, ಹಕ್ಕುಗಳನ್ನು ಹೊಂದಿರುವವರು ಮತ್ತು ಅವರ ಏಜೆಂಟರು ಆಪಾದಿತ ಬೌದ್ಧಿಕ ಆಸ್ತಿ ಉಲ್ಲಂಘನೆಯನ್ನು Snap ಗೆ ಇಲ್ಲಿ ವರದಿ ಮಾಡಬಹುದು. ನಾವು ಅಂಥ ಎಲ್ಲ ವರದಿಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ.
ಜಾಹೀರಾತು ವಿಷಯವು Snap ಅಥವಾ ಅದರ ಉತ್ಪನ್ನಗಳೊಂದಿಗೆ ಸಂಬಂಧವನ್ನು ಅಥವಾ ಅವುಗಳಿಂದ ಪ್ರೋತ್ಸಾಹವನ್ನು ಬಿಂಬಿಸಬಾರದು. ಅಂದರೆ Snapchat ಬ್ರಾಂಡ್ ಮಾರ್ಗಸೂಚಿಗಳು ಅಥವಾ Bitmoji ಬ್ರಾಂಡ್ ಮಾರ್ಗಸೂಚಿಗಳಲ್ಲಿ ಅನುಮತಿಸಲಾಗಿರುವುದನ್ನು ಹೊರತುಪಡಿಸಿ, ವಾಣಿಜ್ಯ ಕಂಟೆಂಟ್ ಯಾವುದೇ Snap-ಮಾಲೀಕತ್ವದ ಟ್ರೇಡ್‌ಮಾರ್ಕ್, Bitmoji ಕಲಾಕೃತಿ ಅಥವಾ Snapchat ಬಳಕೆದಾರ ಇಂಟರ್‌ಫೇಸ್‌ನ ಯಾವುದೇ ಪ್ರತಿನಿಧಿತ್ವಗಳನ್ನು ಬಳಸಬಾರದು. ಜಾಹೀರಾತು ವಿಷಯವು ಯಾವುದೇ Snap ಒಡೆತನದ ಟ್ರೇಡ್‍ಮಾರ್ಕ್‌ನ ಮಾರ್ಪಡಿಸಿದ ಅಥವಾ ಬಹುತೇಕ ಅದೇ ಎಂಬ ಭಾವ ಹುಟ್ಟಿಸುವ ಸಾಮ್ಯತೆಗಳನ್ನು ಹೊಂದಿರಬಾರದು.
Snapchat ನಲ್ಲಿನ ಪ್ರಚಾರಗಳು Snap ನ ಪ್ರಚಾರ ನಿಯಮಗಳಿಗೆ ಒಳಪಟ್ಟಿವೆ.
ಮದ್ಯಸೇವನೆಯನ್ನು ಪ್ರಚಾರ ಮಾಡುವ ಜಾಹೀರಾತು ವಿಷಯವನ್ನು, ವಿಷಯ ಪ್ರದರ್ಶಿಸುತ್ತಿರುವಲ್ಲಿ ಅನ್ವಯಿಸುವ ಕಾನೂನುಬದ್ಧ ಮದ್ಯಸೇವನೆ ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಗೆ ಅಥವಾ ಅಂತಹ ವಿಷಯಕ್ಕೆ ಅನುಮತಿ ಇಲ್ಲದಿರುವಲ್ಲಿ ಪ್ರದರ್ಶಿಸಬಾರದು. ನೀವು ಲಭ್ಯವಿರುವ ಗುರಿಯಾಗಿಸುವ ಆಯ್ಕೆಗಳನ್ನು ಬಳಸಬೇಕು. ಅಂತಹ ವಿಷಯವು ಅತಿಯಾದ ಅಥವಾ ಬೇಜವಾಬ್ದಾರಿತನದ ಮದ್ಯಸೇವನೆಯನ್ನು ಅಥವಾ ಮದ್ಯಸೇವಿಸಿದವರನ್ನು ಅಥವಾ ಇಲ್ಲದಿದ್ದಲ್ಲಿ ಮದ್ಯದ ನಶೆಯಲ್ಲಿರುವ ವ್ಯಕ್ತಿಗಳನ್ನು ತೋರಿಸಬಾರದು.
ಡೇಟಿಂಗ್ ಸೇವೆಯನ್ನು ಪ್ರಚಾರ ಮಾಡುವ ಜಾಹೀರಾತು ವಿಷಯವು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಉದ್ದೇಶಿಸಿರಬಾರದು. ನೀವು ಲಭ್ಯವಿರುವ ಗುರಿಯಾಗಿಸುವಿಕೆ ಆಯ್ಕೆಗಳನ್ನು ಬಳಸಬೇಕು. ಅಂತಹ ವಿಷಯಗಳು ಸ್ವರೂಪದಲ್ಲಿ ಅತಿಯಾದ ಲೈಂಗಿಕತೆಯನ್ನು ಹೊಂದಿರಬಾರದು, ಹಣಕ್ಕಾಗಿ ಪ್ರಣಯವನ್ನು ಉಲ್ಲೇಖಿಸಬಾರದು, ದಾಂಪತ್ಯದ್ರೋಹವನ್ನು ಪ್ರಚಾರ ಅಥವಾ ಆಕರ್ಷಣೀಯವಾಗಿಸಬಾರದು ಅಥವಾ ಸೇವೆಯನ್ನು ಬಳಸಲು ತುಂಬಾ ಸಣ್ಣ ವಯಸ್ಸಿನವರಾದ ಅಥವಾ ಸಣ್ಣ ವಯಸ್ಸಿನವರಂತೆ ಕಂಡುಬರುವ ವ್ಯಕ್ತಿಗಳನ್ನು ಪ್ರದರ್ಶಿಸಬಾರದು. ಈ ಕೆಳಗಿನ ದೇಶಗಳಿಗೆ ಆನ್‌ಲೈನ್ ಡೇಟಿಂಗ್ ಸೇವೆಗಳಿಗೆ ವಿಷಯವನ್ನು ನಿರ್ದೇಶಿಸಲು Snap ಅನುಮತಿಸುವುದಿಲ್ಲ: ಅಲ್ಜೀರಿಯಾ, ಬಹ್ರೇನ್, ಈಜಿಪ್ಟ್, ಗಾಜಾ ಮತ್ತು ವೆಸ್ಟ್ ಬ್ಯಾಂಕ್, ಇರಾಕ್, ಜಪಾನ್, ಜೋರ್ಡಾನ್, ಕುವೈತ್, ಲೆಬನಾನ್, ಮೊರಾಕ್ಕೊ, ಒಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಟ್ಯುನಿಷಿಯಾ, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.
ತೂಕ ಇಳಿಸಿಕೊಳ್ಳುವಿಕೆ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಚಾರ ಮಾಡುವ ಜಾಹೀರಾತು ವಿಷಯವನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಗುರಿಯಾಗಿಸಬಾರದು. ನೀವು ಲಭ್ಯವಿರುವ ಗುರಿಯಾಗಿಸುವಿಕೆ ಆಯ್ಕೆಗಳನ್ನು ಬಳಸಬೇಕು. ಅಂತಹ ವಿಷಯವು ಸಂಬಂಧಿತ ಆರೋಗ್ಯ ಮತ್ತು ಪೌಷ್ಟಿಕಾಂಶ ಕುರಿತ ದಾವೆಗಳು ಸೇರಿದಂತೆ ಆಹಾರ ಉತ್ಪನ್ನಗಳ ಬಗ್ಗೆ ಸುಳ್ಳು ದಾವೆಗಳು ಅಥವಾ ತಪ್ಪಾದ ವಿವರಗಣೆಗಳನ್ನು ಒಳಗೊಂಡಿರಬಾರದು.
ಜೂಜಾಟದ ಸೇವೆಗಳನ್ನು ಪ್ರಚಾರ ಮಾಡುವ ಜಾಹೀರಾತು ವಿಷಯವನ್ನು, ವಿಷಯ ಪ್ರದರ್ಶಿಸುತ್ತಿರುವಲ್ಲಿ ಕಾನೂನುಬದ್ಧ ಜೂಜಾಟವಾಡಬಹುದಾದ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯಾರಿಗೂ ಅಥವಾ ಅಂತಹ ವಿಷಯಕ್ಕೆ ಅನುಮತಿ ಇಲ್ಲದಿರುವ ಸ್ಥಳದಲ್ಲಿ ಗುರಿಯಾಗಿಸಬಾರದು. ನೀವು ಲಭ್ಯವಿರುವ ಗುರಿಯಾಗಿಸುವಿಕೆ ಆಯ್ಕೆಗಳನ್ನು ಬಳಸಬೇಕು.
ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು ಮತ್ತು ಟ್ರೇಡಿಂಗ್ ವೇದಿಕೆಗಳನ್ನು ಒಳಗೊಂಡಿರಬಹುದಾದ, ಕೆಲವು ಸಂಕೀರ್ಣ ಹಣಕಾಸು ಉತ್ಪನ್ನಗಳನ್ನು ಪ್ರಚಾರ ಮಾಡುವ ಜಾಹೀರಾತು ವಿಷಯವನ್ನು, ವಿಷಯ ಪ್ರದರ್ಶಿಸುತ್ತಿರುವಲ್ಲಿ ಅನ್ವಯಿಸುವ ಕಾನೂನುಬದ್ಧ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯಾರನ್ನೂ ಅಥವಾ ಅಂತಹ ವಿಷಯಕ್ಕೆ ಅನುಮತಿ ಇಲ್ಲದಿರುವಲ್ಲಿ ಗುರಿಯಾಗಿಸಬಾರದು. ನೀವು ಲಭ್ಯವಿರುವ ಗುರಿಯಾಗಿಸುವಿಕೆ ಆಯ್ಕೆಗಳನ್ನು ಬಳಸಬೇಕು.
ಆನ್‌ಲೈನ್ ಫಾರ್ಮಸಿಗಳು, ವೈದ್ಯರ ಸೂಚನೆ ಮೇರೆಗೆ ಕೊಡುವ ಔಷಧಗಳು, ವೈದ್ಯರ ಸೂಚನೆಯಿಲ್ಲದೆ ಅಂಗಡಿಯಲ್ಲಿ ಖರೀದಿಸುವ ಔಷಧಗಳು, ಆರೋಗ್ಯ ಮತ್ತು ಪಥ್ಯದ ಪೂರಕ ಆಹಾರಗಳು, ಕಾಂಡೋಮ್‌ಗಳು, ಹಾರ್ಮೋನ್‌ಗಳ ನಿರೋಧಕಗಳು ಅಥವಾ ಕಾಸ್ಮೆಟಿಕ್ ಸರ್ಜರಿ/ ಕಾರ್ಯವಿಧಾನಗಳು ಸೇರಿದಂತೆ, ಔಷಧ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಚಾರ ಮಾಡುವ ಜಾಹೀರಾತು ವಿಷಯವನ್ನು, ವಿಷಯ ಪ್ರದರ್ಶಿಸುತ್ತಿರುವಲ್ಲಿ ಅನ್ವಯಿಸುವ ಕಾನೂನುಬದ್ಧ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯಾರಿಗೂ ಅಥವಾ ಅಂತಹ ವಿಷಯಕ್ಕೆ ಅನುಮತಿ ಇಲ್ಲದಿರುವ ಸ್ಥಳದಲ್ಲಿ ಗುರಿಯಾಗಿಸಬಾರದು. ನೀವು ಲಭ್ಯವಿರುವ ಗುರಿಯಾಗಿಸುವಿಕೆ ಆಯ್ಕೆಗಳನ್ನು ಬಳಸಬೇಕು.
ಈ ಕೆಳಗಿನವುಗಳಿಗೆ ಸಂಬಂಧಿಸಿದ ಜಾಹೀರಾತು ವಿಷಯಕ್ಕೆ ಅನುಮತಿಯಿಲ್ಲ:
ಶಾಸನಸಭೆಗಳಿಗಾಗಿ ಅಭ್ಯರ್ಥಿಗಳು ಅಥವಾ ಪಕ್ಷಗಳ ಕುರಿತ ಚುನಾವಣಾ-ಸಂಬಂಧಿತ ವಿಷಯ, ಮತದಾನ ಕ್ರಮಗಳು ಅಥವಾ ಜನಾಭಿಪ್ರಾಯ ಸಂಗ್ರಹಣೆಗಳು, ರಾಜಕೀಯ ಕ್ರಿಯಾ ಸಮಿತಿಗಳು ಮತ್ತು ಜನರಿಗೆ ಮತದಾನ ಮಾಡುವಂತೆ ಅಥವಾ ಮತದಾನಕ್ಕಾಗಿ ನೋಂದಣಿ ಮಾಡಿಕೊಳ್ಳುವಂತೆ ಒತ್ತಾಯಿಸುವ ವಿಷಯ.
ಸ್ಥಳೀಯ, ರಾಷ್ಟ್ರೀಯ ಅಥವಾ ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿರುವ ಅಥವಾ ಸಾರ್ವಜನಿಕ ಪ್ರಾಮುಖ್ಯತೆಯ ಸಮಸ್ಯೆಗಳು ಅಥವಾ ಸಂಘಟನೆಗಳಿಗೆ ಸಂಬಂಧಿಸಿದ ವಕಾಲತ್ತು ಅಥವಾ ಸಮಸ್ಯೆಯ ವಿಷಯ. ಉದಾಹರಣೆಗಳಲ್ಲಿ ಇವು ಸೇರಿವೆ: ಗರ್ಭಪಾತ, ವಲಸೆ, ಪರಿಸರ, ಶಿಕ್ಷಣ, ತಾರತಮ್ಯ ಮತ್ತು ಗನ್‌ಗಳ ಕುರಿತ ವಿಷಯ.
ತಮ್ಮ ಸ್ವಂತ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು Snapchatter ಗಳು ಸ್ವತಂತ್ರರಿದ್ದಾರೆ, ಆದರೆ ಸಾಂಪ್ರದಾಯಿಕ ಜಾಹೀರಾತು ಸ್ವರೂಪಗಳಿಗೆ ರಾಜಕೀಯ ಸಂದೇಶ ಕಳುಹಿಸುವಿಕೆಯ ಪಾವತಿ ಪಡೆದ ಪ್ರಚಾರವನ್ನು Snap ನಿರ್ಬಂಧಿಸುತ್ತದೆ. ನಮ್ಮ ಸಮುದಾಯಕ್ಕೆ ಉತ್ತರದಾಯಿಯಾಗಿರುವ ಮತ್ತು ಪಾರದರ್ಶಕತೆಯನ್ನು ನಿರ್ವಹಿಸುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ. ರಾಜಕೀಯ ಜಾಹೀರಾತಿನ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಮ್ಮ ಜಾಹೀರಾತು ನೀತಿಗಳು ಅನ್ನು ನೋಡಿ.
ಜಾಹೀರಾತು ವಿಷಯ ಸೇರಿದಂತೆ, Snapchat ನಲ್ಲಿರುವ ಎಲ್ಲ ವಿಷಯಗಳಿಗೆ ಪ್ರಮಾಣಿತ ಆಧಾರವಾಗಿರುವ ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ದಯವಿಟ್ಟು ತಿಳಿದುಕೊಳ್ಳಿ. ಜಾಹೀರಾತು ವಿಷಯಗದ ಸನ್ನಿವೇಶದಲ್ಲಿ, ಮುಂದುವರಿದು ನಾವು ಇವುಗಳನ್ನು ನಿಷೇಧಿಸುತ್ತೇವೆ:
ಯಾವುದೇ ಬಗೆಯ ಲೈಂಗಿಕ ಕೋರಿಕೆ
ಯಾವುದೇ ಸನ್ನಿವೇಶದಲ್ಲಿ ಜನನಾಂಗಗಳ ಚಿತ್ರಣಗಳು ಅಥವಾ ಗ್ರಾಫಿಕ್ ವಿವರಣೆಗಳು, ತೆರೆದಿರುವ ಮೊಲೆತೊಟ್ಟುಗಳು ಅಥವಾ ನಗ್ನ ಪೃಷ್ಠ ಅಥವಾ ಭಾಗಶಃ-ಅಸ್ಪಷ್ಟವಾದ ನಗ್ನತೆ (ಉದಾ. ಬಾಡಿ ಪೇಂಟ್ ಅಥವಾ ಇಮೋಜಿಗಳ ಹೊರತಾಗಿ ನಗ್ನನಾಗಿರುವ ವ್ಯಕ್ತಿ)
ಯಾವುದೇ ಸನ್ನಿವೇಶದಲ್ಲಿ ನಿರ್ದಿಷ್ಟ ಲೈಂಗಿಕ ಕೃತ್ಯಗಳ ಚಿತ್ರಣಗಳು ಅಥವಾ ಉಲ್ಲೇಖಗಳು. ಇದರಲ್ಲಿ, ರಂಗಪರಿಕರದೊಂದಿಗೆ ಅಥವಾ ಇಲ್ಲದೆ, ನಿರ್ದಿಷ್ಟ ಲೈಂಗಿಕ ಕ್ರಿಯೆಯನ್ನು ಅನುಕರಿಸುವ ಸನ್ನೆಗಳು ಸೇರಿವೆ
ಸಾಂಧರ್ಭಿಕ ಲೈಂಗಿಕ ಕ್ರಿಯೆಗೆ ಮಹತ್ವ ನೀಡುವ ಡೇಟಿಂಗ್ ಸೇವೆಗಳು
ವಯಸ್ಕ ಮನರಂಜನೆ (ಉದಾ. ಅಶ್ಲೀಲ ಕಾಮಕೇಳಿ, ಲೈಂಗಿಕ ಲೈವ್ ಸ್ಟ್ರೀಮ್‌ಗಳು, ಸ್ಟ್ರಿಪ್ ಕ್ಲಬ್‌ಗಳು ಮತ್ತು ಬೆತ್ತಲೆ ಪ್ರದರ್ಶನ)
ಪರಸ್ಪರ ಸಮ್ಮತಿಯಿಲ್ಲದ ಲೈಂಗಿಕ ಸಾಮಗ್ರಿ (ಸೋರಿಕೆಯ, ಖಾಸಗಿ, ಸೂಚ್ಯ ಫೋಟೋಗಳನ್ನು ಪ್ರಕಟಿಸುವ ಟ್ಯಾಬ್ಲಾಯ್ಡ್‌ಗಳು)
ಲೈಂಗಿಕ ಹಿಂಸೆಯ ಚಿತ್ರಣಗಳು ಅಥವಾ ಅದರ ಅನಪೇಕ್ಷಿತ ಉಲ್ಲೇಖಗಳು
ಬೆದರಿಸುವುದು ಅಥವಾ ಅವಮಾನಿಸುವುದು. ಉದಾಹರಣೆಗೆ: ಫಿಟ್‌ನೆಸ್‌ಗೆ ಸಂಬಂಧಿಸಿದ ಜಾಹೀರಾತು ವಿಷಯವು ದೇಹದ ಆಕಾರ ಅಥವಾ ಗಾತ್ರದ ಆಧಾರದ ಮೇಲೆ ಯಾರನ್ನೂ ಕೀಳಾಗಿ ಕಾಣಬಾರದು.
ಪಾಷಂಡತನ, ಅಶ್ಲೀಲತೆ ಅಥವಾ ಅಶ್ಲೀಲ ಸನ್ನೆಗಳು
ಒಂದು ಉತ್ಪನ್ನ ಅಥವಾ ಸೇವೆಯನ್ನು ಖರೀದಿಸಲು ಯಾರನ್ನಾದರೂ ಬೆದರಿಸುವ ಅಥವಾ ಭೀತಿ ಹುಟ್ಟಿಸುವ ಪ್ರಯತ್ನಗಳು
ಸುದ್ದಿ ಅಥವಾ ಡಾಕ್ಯುಮೆಂಟರಿ ಸನ್ನಿವೇಶಕ್ಕೆ ಹೊರತಾದ ಗ್ರಾಫಿಕ್, ನೈಜ-ಬಹುಕಿನ ಹಿಂಸೆ
ಸ್ವಯಂ-ಹಾನಿ, ಯುದ್ಧ, ಕೊಲೆ, ದೌರ್ಜನ್ಯ ಅಥವಾ ಪ್ರಾಣಿ ಮೇಲಿನ ದೌರ್ಜನ್ಯದ ವೈಭವೀಕರಣ ಸೇರಿದಂತೆ, ಹಿಂಸೆಯ ವೈಭವೀಕರಣ
ಸಾವು ಅಥವಾ ದೀರ್ಘಕಾಲಿಕ ಬಾಧೆಗೆ ಕಾರಣವಾಗಬಹುದಾದ ಗಂಭೀರ ದೈಹಿಕ ಹಾನಿಯ ಕಿರಿಕಿರಿ ಉಂಟುಮಾಡುವ, ಗ್ರಾಫಿಕ್ ಚಿತ್ರಣಗಳು.
ಮೋಸಗೊಳಿಸುವ ದಾವೆಗಳು, ಆಫರ್‌ಗಳು, ಕಾರ್ಯಗಳು ಅಥವಾ ವ್ಯವಹಾರ ಅಭ್ಯಾಸಗಳು ಸೇರಿದಂತೆ, ಸುಳ್ಳು ಅಥವಾ ದಾರಿತಪ್ಪಿಸುವ ವಿಷಯ
ನಕಲಿ ದಾಖಲೆಗಳು ಅಥವಾ ಪ್ರಮಾಣಪತ್ರಗಳು ಅಥವಾ ನಕಲಿ ಉತ್ಪನ್ನಗಳು ಸೇರಿದಂತೆ, ವಂಚನೆಯ ಸರಕುಗಳು ಅಥವಾ ಸೇವೆಗಳ ಪ್ರಚಾರ
Snapchat ವೈಶಿಷ್ಟ್ಯಗಳು ಅಥವಾ ಸ್ವರೂಪಗಳ ಮೇಲ್ನೋಟ ಅಥವಾ ಕಾರ್ಯವನ್ನು ನಕಲು ಮಾಡುವ ವಿಷಯವನ್ನು ಸೃಷ್ಟಿಸುವುದು ಅಥವಾ ಹಂಚಿಕೊಳ್ಳುವುದು
ಪ್ರಚಾರ ಮಾಡಲಾಗುತ್ತಿರುವ ಬ್ರ್ಯಾಂಡ್ ಅಥವಾ ವಿಷಯಕ್ಕೆ ಸಂಬಂಧವಿಲ್ಲದ ಲ್ಯಾಂಡಿಂಗ್ ಪುಟಗಳಿಗೆ ಭೇಟಿ ನೀಡುವಂತೆ ವಂಚನೆಯ ಕರೆಗಳನ್ನು ಮಾಡುವುದು ಅಥವಾ ಗಾಳ ಹಾಕಿ ಹಿಡಿಯುವ ಲಿಂಕ್‌ಗಳನ್ನು ಕಳುಹಿಸುವುದು
ವಿಮರ್ಶೆಯನ್ನು ತಪ್ಪಿಸುವ ಪ್ರಯತ್ನದಲ್ಲಿ ಭಿನ್ನ ವಿಷಯ ಒದಗಿಸುವುದು (ಕ್ಲಾಕಿಂಗ್), ಇಲ್ಲದಿದ್ದಲ್ಲಿ ಲ್ಯಾಂಡಿಂಗ್ ಪುಟದ ಪ್ರವೇಶವನ್ನು ನಿರ್ಬಂಧಿಸುವುದು ಅಥವಾ ಸಲ್ಲಿಕೆಯ ಬಳಿಕ URL ವಿಷಯಕ್ಕೆ ಮಾರ್ಪಾಡು ಮಾಡುವುದು
ಅಪ್ರಾಮಾಣಿಕ ನಡವಳಿಕೆಯನ್ನು ಉತ್ತೇಜಿಸುವುದು (ಉದಾ. ನಕಲಿ ID ಗಳಿಗೆ ಸಂಬಂಧಿಸಿದ ಜಾಹೀರಾತು ವಿಷಯ, ಕೃತಿಚೌರ್ಯ, ಪ್ರಬಂಧ ಬರೆಯುವ ಸೇವೆಗಳು)
ಸರಕುಗಳನ್ನು ತಲುಪಿಸದಿರುವುದು ಅಥವಾ ತಪ್ಪಾಗಿ ಪ್ರತಿನಿಧಿಸಿದ ರವಾನೆ ವಿಳಂಬಗಳು ಅಥವಾ ದಾಸ್ತಾನು ಅಡೆತಡೆಗಳು
ಖೋಟಾ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಧಾನವಾಗಿ ಮೀಸಲಾಗಿರುವ ಉತ್ಪನ್ನಗಳು ಅಥವಾ ಸೇವೆಗಳು, ಉದಾಹರಣೆಗೆ ಡಿಸೈನರ್ ಅಥವಾ ಅಧಿಕೃತ ಪರವಾನಗಿಯ ಉತ್ಪನ್ನಗಳ ನಕಲು ಮಾಡುವಂತಹವು
ಪ್ರಸಿದ್ಧರ ಸುಳ್ಳು ಪ್ರಶಂಸೆ ಅಥವಾ ಬಳಕೆಯನ್ನು ಪ್ರತಿನಿಧಿಸುವ ಉತ್ಪನ್ನಗಳು ಅಥವಾ ಸೇವೆಗಳು
ಸಂಬಳದಲ್ಲಿ ಮುರಿದುಕೊಳ್ಳುವ ಕರಾರಿನ ಮೇರೆಗೆ ನೀಡುವ ಅಧಿಕ ಬಡ್ಡಿಯ (ಪೇಡೇ) ಸಾಲಗಳು, ಸುಲಿಗೆಗಾಗಿ ಸಾಲ ನೀಡುವಿಕೆ, ಹಣಕಾಸು ಉತ್ಪನ್ನಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ಇನ್‌ಸೈಡರ್ ಸಲಹೆಗಳು, ಶೀಘ್ರದಲ್ಲಿ ಶ್ರೀಮಂತರಾಗಲು ಆಫರ್‌ಗಳು, ಪಿರಮಿಡ್ ಸ್ಕೀಮ್‌ಗಳು ಅಥವಾ ಇತರ ಮೋಸಗೊಳಿಸುವ ಅಥವಾ ತುಂಬಾ ಉತ್ತಮ ಎಂಬಂತೆ ಕಂಡುಬರುವ ಹಣಕಾಸು ಆಫರ್‌ಗಳಂತಹ ಮೋಸಗೊಳಿಸುವ ಹಣಕಾಸು ಉತ್ಪನ್ನಗಳು,
ನಿರ್ದಿಷ್ಟ ಜನಾಂಗ, ಕುಲ, ಸಂಸ್ಕೃತಿ, ದೇಶ, ನಂಬಿಕೆ, ರಾಷ್ಟ್ರೀಯ ಪ್ರದೇಶ, ವಯಸ್ಸು, ಲೈಂಗಿಕ ಅಭಿರುಚಿ, ಲಿಂಗ, ಲಿಂಗ ಗುರುತು ಅಥವಾ ಅಭಿವ್ಯಕ್ತಿ, ವೈಕಲ್ಯ ಅಥವಾ ಸ್ಥಿತಿ ಅಥವಾ ಸಂರಕ್ಷಿತ ವರ್ಗದ ಯಾವುದೇ ಸದಸ್ಯರನ್ನು ಕೀಳಾಗಿ ಕಾಣುವ, ಅವಮಾನಿಸುವ, ತಾರತಮ್ಯ ಮಾಡುವ ಅಥವಾ ಅವರ ಬಗ್ಗೆ ದ್ವೇಷವನ್ನು ತೋರಿಸುವ ವಿಷಯ
ಅಕ್ರಮ ಚಟುವಟಿಕೆಗಳಿಗೆ (ನಡವಳಿಕೆ, ಉತ್ಪನ್ನ ಅಥವಾ ಉದ್ಯಮಗಳು) ಸೌಲಭ್ಯ ಕಲ್ಪಿಸುವುದು ಅಥವಾ ಪ್ರೋತ್ಸಾಹಿಸುವುದು ಉದಾಹರಣೆಗೆ:
ಕಾನೂನುಬಾಹಿರ ವನ್ಯಜೀವಿ ಮಾರಾಟವನ್ನು ಅಥವಾ ಅಳಿವಿನಂಚಿನಲ್ಲಿರುವ ಅಥವಾ ಅಪಾಯ ಎದುರಿಸುತ್ತಿರುವ ಪ್ರಬೇಧಗಳಿಂದ ತಯಾರಿಸಿದ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಚಾರ ಮಾಡುವುದು
ಕೃತಿಸ್ವಾಮ್ಯ ರಕ್ಷಣೆ ಕಾರ್ಯವಿಧಾನಗಳನ್ನು ಹಾದುಹೋಗಲು ವಿನ್ಯಾಸಗೊಳಿಸಲಾಗಿರುವಂತಹ, ಮುಖ್ಯವಾಗಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಲು ಬಳಸುವ ಉತ್ಪನ್ನಗಳು ಅಥವಾ ಸೇವೆಗಳು (ಉದಾಹರಣೆಗೆ, ಸಾಫ್ಟ್‌ವೇರ್ ಅಥವಾ ಕೇಬಲ್ ಸಿಗ್ನಲ್ ಡಿಸ್ಕ್ಯಾಂಬ್ರ್ಲರ್‌ಗಳು)
ವಾಹನ ಚಾಲನೆ ಮಾಡುವಾಗ ಫೋಟೋ ತೆಗೆಯುವಂತಹ ಅಥವಾ ಆಹಾರೇತರ ವಸ್ತುಗಳನ್ನು ತಿನ್ನುವಂತಹ ಅಪಾಯಕಾರಿ ಅಥವಾ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸುವುದು ಅಥವಾ ಅದಕ್ಕಾಗಿ ನೋಂದಣಿ ಮಾಡುವುದು.
ಅಕ್ರಮ ಮಾದಕಪದಾರ್ಥದ ಬಳಕೆ ಅಥವಾ ಮನರಂಜನೆಗಾಗಿ ಔಷಧಗಳ ಬಳಕೆಯ ಚಿತ್ರಣ.
ಸಾರ್ವಜನಿಕ ಆರೋಗ್ಯ ಸಂದೇಶ ಅಥವಾ ಧೂಮಪಾನ ನಿಷೇಧದ ಸನ್ನಿವೇಶವನ್ನು ಹೊರತುಪಡಿಸಿ, ಧೂಮಪಾನ ಅಥವಾ ಹುಕ್ಕಾ ಸೇವನೆಯ ಚಿತ್ರಣ.
ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಹಾಗೂ ಸಂಬಂಧಿತ ಪರಿಕರಗಳನ್ನು ಪ್ರಚಾರ ಮಾಡುವ ಕಂಟೆಂಟ್. ಇದರಲ್ಲಿ ಬಂದೂಕುಗಳು, ಮದ್ದುಗುಂಡು, ಪಟಾಕಿಗಳು, ದಾಳಿ ಮಾಡಲು ಬಳಸುವ ಚಾಕಗಳು ಮತ್ತು ಮೆಣಸಿನಹುಡಿ ಸಿಂಪಡಣೆ ಸೇರಿವೆ.