Snapchat+ ಸಬ್‌ಸ್ಕ್ರಿಪ್ಶನ್ ಉಡುಗೊರೆ ನೀಡುವಿಕೆ ನಿಯಮಗಳು
ಜಾರಿ: ಆಗಸ್ಟ್ 15, 2023
ದಯವಿಟ್ಟು ಈ Snapchat+ ಉಡುಗೊರೆ ನೀಡುವಿಕೆ ನಿಯಮಗಳನ್ನು ("Snapchat+ ಉಡುಗೊರೆ ನೀಡುವಿಕೆ ನಿಯಮಗಳು") ಗಮನವಿಟ್ಟು ಓದಿ. ಈ Snapchat+ ಉಡುಗೊರೆ ನೀಡುವಿಕೆ ನಿಯಮಗಳು ನಿಮ್ಮ ಮತ್ತು Snap ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ ಮತ್ತು ಇನ್ನೊಬ್ಬ Snapchat ಬಳಕೆದಾರನಿಗೆ Snapchat+ ಗೆ ನಿಮ್ಮ ಸಬ್‌ಸ್ಕ್ರಿಪ್ಶನ್ ಖರೀದಿ ಮತ್ತು ಉಡುಗೊರೆ ನೀಡುವಿಕೆಯನ್ನು ("Snapchat+ ಸಬ್‌ಸ್ಕ್ರಿಪ್ಶನ್") ನಿಯಂತ್ರಿಸುತ್ತದೆ. ಈ Snapchat+ ಉಡುಗೊರೆ ನೀಡುವಿಕೆ ನಿಯಮಗಳು ಉಲ್ಲೇಖದ ಮೂಲಕ Snapchat+ ಸಬ್‌ಸ್ಕ್ರಿಪ್ಶನ್ ನಿಯಮಗಳನ್ನು ಮತ್ತು ಇತರ ಯಾವುದೇ ಅನ್ವಯಿಸುವ ನಿಯಮಗಳು, ಮಾರ್ಗಸೂಚಿಗಳು ಮತ್ತು ನೀತಿಗಳನ್ನು ಒಳಗೊಳ್ಳುತ್ತವೆ. ಈ Snapchat+ ಉಡುಗೊರೆ ನೀಡುವಿಕೆ ನಿಯಮಗಳು ಇತರ ಯಾವುದೇ ನಿಯಮಗಳೊಂದಿಗೆ ಸಂಘರ್ಷ ಹೊಂದಿರುವ ಮಟ್ಟಿಗೆ, Snapchat+ ಸಬ್‌ಸ್ಕ್ರಿಪ್ಶನ್‌ಗಳ ಉಡುಗೊರೆ ನೀಡುವಿಕೆಗೆ ಸಂಬಂಧಿಸಿ ಈ Snapchat+ ಉಡುಗೊರೆ ನೀಡುವಿಕೆ ನಿಯಮಗಳು ನಿಯಂತ್ರಣ ಹೊಂದಿರುತ್ತವೆ. Snapchat+ ಸಬ್‌ಸ್ಕ್ರಿಪ್ಶನ್‌ಗಳನ್ನು ಉಡುಗೊರೆ ನೀಡುವ ಸಾಮರ್ಥ್ಯವು Snap ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಿರುವ Snap ನ "ಸೇವೆಗಳ" ಭಾಗವಾಗಿದೆ.
ಸೇವೆಗಳ ಮೂಲಕ ಇನ್ನೊಬ್ಬ Snapchat ಬಳಕೆದಾರನಿಗೆ ಪೂರ್ವಪಾವತಿಸಿದ Snapchat+ ಸಬ್‌ಸ್ಕ್ರಿಪ್ಶನ್ ಖರೀದಿಸಿ ಉಡುಗೊರೆ ನೀಡುವ ಸಾಮರ್ಥ್ಯವನ್ನು ನಾವು ನಿಮಗೆ ಒದಗಿಸಬಹುದು ("ಉಡುಗೊರೆ ಸಬ್‌ಸ್ಕ್ರಿಪ್ಶನ್"). ನೀವು ಸೇವೆಗಳ ಮೂಲಕ ಅಥವಾ ಕಾಲಕಾಲಕ್ಕೆ ನಾವು ಲಭ್ಯವಾಗಿಸುವ ಅಂತಹ ಇತರ ವಿಧಾನಗಳ ಮೂಲಕ ಉಡುಗೊರೆ ಸಬ್‌ಸ್ಕ್ರಿಪ್ಶನ್ ಖರೀದಿಸಬಹುದು ಮತ್ತು ಯಾವುದೇ ಖರೀದಿಯು Snapchat+ ಸಬ್‌ಸ್ಕ್ರಿಪ್ಶನ್ ನಿಯಮಗಳಲ್ಲಿ ಹೇಳಿರುವ ಪಾವತಿ ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ. ನೀವು ಒಂದು ಉಡುಗೊರೆ ಸಬ್‌ಸ್ಕ್ರಿಪ್ಶನ್ ಖರೀದಿಸಿದ ಬಳಿಕ, ನೀವು ನಿಯೋಜಿಸಿದ ಸ್ವೀಕೃತಿದಾರರು ("ಸ್ವೀಕೃತಿದಾರ"), ಅವರಿಗಾಗಿ ನೀವು ಒಂದು ಉಡುಗೊರೆ ಸಬ್‌ಸ್ಕ್ರಿಪ್ಶನ್ ಖರೀದಿಸಿದ್ದೀರಿ ಎನ್ನುವ ಅಧಿಸೂಚನೆಯನ್ನು ಸೇವೆಗಳ ಮೂಲಕ ಪಡೆಯುತ್ತಾರೆ ಮತ್ತು ಸೇವೆಗಳಲ್ಲಿ ಅವರ ಉಡುಗೊರೆ ಸಬ್‌ಸ್ಕ್ರಿಪ್ಶನ್ ಅನ್ನು ಪಡೆದುಕೊಳ್ಳುವ ಆಯ್ಕೆಯನ್ನು ನೀಡುತ್ತದೆ.
ಸಾರಾಂಶದಲ್ಲಿ: ನೀವು ಪ್ರಿಪೇಯ್ಡ್ Snapchat+ ಸಬ್‌ಸ್ಕ್ರಿಪ್ಶನ್‌ಗಳನ್ನು ಖರೀದಿಸಬಹುದು ಮತ್ತು ಕೆಳಗಿನ ನಿಯಮಗಳಿಗೆ ಒಳಪಟ್ಟು ಸೇವೆಗಳ ಇತರ ಬಳಕೆದಾರರಿಗೆ ಉಡುಗೊರೆ ನೀಡಬಹುದು.
a. ಉಡುಗೊರೆ ಸಬ್‌ಸ್ಕ್ರಿಪ್ಶನ್ ಅನ್ನು ಸ್ವೀಕರಿಸಲು ಮತ್ತು ರಿಡೀಮ್ ಮಾಡಲು, ಸ್ವೀಕರಿಸುವವರು ಅಸ್ತಿತ್ವದಲ್ಲಿರುವ Snapchat ಖಾತೆ ಹೊಂದಿರಬೇಕು ಮತ್ತು ಸೇವೆಗಳ ಮೂಲಕ ಅವರೊಂದಿಗೆ ನೀವು ಸ್ನೇಹಿತ/ತೆ ಆಗಿ ಸಂಪರ್ಕ ಹೊಂದಿರಬೇಕು. ತಮ್ಮ Snapchat ಅಕೌಂಟ್ ಬಳಸಿಕೊಂಡು ಅಥವಾ ಕಾಲಕಾಲಕ್ಕೆ ನಾವು ಲಭ್ಯವಾಗಿಸಬಹುದಾದ ಅಂತಹ ಇತರ ವಿಧಾನಗಳ ಮೂಲಕ ಸ್ವೀಕೃತಿದಾರರು ಸೇವೆಗಳ ಮೂಲಕ ಮಾತ್ರ ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳನ್ನು ಪಡೆದುಕೊಳ್ಳಬಹುದು. ಒಂದು ಉಡುಗೊರೆ ಸಬ್‌ಸ್ಕ್ರಿಪ್ಶನ್‌ನಿಂದ ಸ್ವೀಕೃತಿದಾರರ Snapchat+ ಬಳಕೆಯು Snap ಸೇವೆಯ ನಿಯಮಗಳು ಮತ್ತು ಇತರ ಯಾವುದೇ ಅನ್ವಯಿಸುವ ನಿಯಮಗಳು, ಮಾರ್ಗಸೂಚಿಗಳು ಮತ್ತು ನೀತಿಗಳ ಅನುಸರಣೆಗೆ ಒಳಪಟ್ಟಿರುತ್ತದೆ.
b. ಉಡುಗೊರೆ ಸಬ್‌ಸ್ಕ್ರಿಪ್ಶನ್‌ನ ಸ್ವೀಕೃತಿದಾರರು ಅದನ್ನು ಪಡೆದ ಬಳಿಕ, ಉಡುಗೊರೆ ಸಬ್‌ಸ್ಕ್ರಿಪ್ಶನ್‌ನ ಅವಧಿಗೆ ಸ್ವೀಕೃತಿದಾರರಿಗೆ ಬಿಲ್ ಮಾಡಲಾಗುವುದಿಲ್ಲ. ಉಡುಗೊರೆ ಸಬ್‌ಸ್ಕ್ರಿಪ್ಶನ್ ಈ ಮುಂದೆ ವಿವರಿಸಿರುವ ಸಂಧರ್ಭಗಳಲ್ಲಿ ಆರಂಭವಾಗುತ್ತದೆ: (i) ಒಂದು ವೇಳೆ ಸ್ವೀಕೃತಿದಾರರು ಈಗಾಗಲೇ ಪಾವತಿಸಿದ ಸಕ್ರಿಯ Snapchat+ ಸಬ್‌ಸ್ಕ್ರಿಪ್ಶನ್ ಅನ್ನು ಹೊಂದಿದ್ದರೆ, ಅವರ ಪ್ರಸ್ತುತ ಬಿಲ್ಲಿಂಗ್ ಅವಧಿ ಮುಗಿದ ಬಳಿಕ ಅವರು ಸಕ್ರಿಯ ಸಬ್‌ಸ್ಕ್ರಿಪ್ಶನ್ ಕೊಡುಗೆ ಹೊಂದಿಲ್ಲದ ಹೊರತು, ಸಬ್‌ಸ್ಕ್ರಿಪ್ಶನ್ ಕೊಡುಗೆಯ ಅವಧಿ ಮುಗಿದಾಗ ಉಡುಗೊರೆ ಸಬ್‌ಸ್ಕ್ರಿಪ್ಶನ್ ಆರಂಭವಾಗುತ್ತದೆ; (ii) ಒಂದು ವೇಳೆ ಸ್ವೀಕೃತಿದಾರರು ಸಕ್ರಿಯ Snapchat+ ಸಬ್‌ಸ್ಕ್ರಿಪ್ಶನ್ ಹೊಂದಿಲ್ಲದಿದ್ದರೆ, ಅವರು ಉಡುಗೊರೆ ಸಬ್‌ಸ್ಕ್ರಿಪ್ಶನ್ ರಿಡೀಮ್ ಮಾಡಿದ ಬಳಿಕ; ಅಥವಾ (iii) ಒಂದು ವೇಳೆ ಸ್ವೀಕೃತಿದಾರರು ಈಗಾಗಲೇ ಸಕ್ರಿಯ ಉಡುಗೊರೆ ಸಬ್‌ಸ್ಕ್ರಿಪ್ಶನ್ ಹೊಂದಿದ್ದರೆ, ಪ್ರಸ್ತುತ ಉಡುಗೊರೆ ಸಬ್‌ಸ್ಕ್ರಿಪ್ಶನ್ ವಾಯಿದೆ ಮುಗಿದ ಬಳಿಕ (Snapchat+ ಸಬ್‌ಸ್ಕ್ರಿಪ್ಶನ್ ಉಡುಗೊರೆ ನೀಡುವ ನಿಯಮಗಳಲ್ಲಿ ಹೇಳಲಾಗಿರುವ ಯಾವುದೇ ನಿರ್ಬಂಧಗಳಿಗೆ ಒಳಪಟ್ಟು).
c. ಇತರ Snapchat+ ಸಬ್‌ಸ್ಕ್ರಿಪ್ಶನ್‌ಗಳಿಗಿಂತ ಭಿನ್ನವಾಗಿರುವ ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳು ಸ್ವೀಕೃತಿದಾರರು ಹೀಗೆ ಮಾಡದ ಹೊರತು ಸ್ವಯಂಚಾಲಿತವಾಗಿ ನವೀಕರಣವಾಗುವುದಿಲ್ಲ: (i) Snapchat+ ಸಬ್‌ಸ್ಕ್ರಿಪ್ಶನ್ ನಿಯಮಗಳಿಗೆ ಅನುಸಾರವಾಗಿ ಪಾವತಿಸಿದ Snapchat+ ಸಬ್‌ಸ್ಕ್ರಿಪ್ಶನ್ ಖರೀದಿಸುವ ಮೂಲಕ ನವೀಕರಿಸಲು ಆಯ್ಕೆ ಮಾಡುತ್ತಾರೆ; ಅಥವಾ (ii) ಉಡುಗೊರೆ ಸಬ್‌ಸ್ಕ್ರಿಪ್ಶನ್ ರಿಡಿಂಪ್ಶನ್ ಸಂದರ್ಭ ಪಾವತಿಸಿದ ಸಕ್ರಿಯ Snapchat+ ಸಬ್‌ಸ್ಕ್ರಿಪ್ಶನ್ ಹೊಂದಿದ್ದಾರೆ (ಆ ಸಮಯದಲ್ಲಿ ಅವರ ಖಾತೆಗೆ ಅನ್ವಯಿಸಿದ ಯಾವುದೇ ಲೈವ್ ಸಬ್‌ಸ್ಕ್ರಿಪ್ಶನ್ ಕೊಡುಗೆಗಳನ್ನು ಪರಿಗಣಿಸದೆ) ಮತ್ತು ತಮ್ಮ ಎಲ್ಲ ರಿಡೀಮ್ ಮಾಡಿದ ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳ ವಾಯಿದೆ ಮುಗಿಯುವುದಕ್ಕೆ ಮುನ್ನ ಪಾವತಿಸಿದ Snapchat+ ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಗೊಳಿಸಿಲ್ಲ. ಒಂದು ವೇಳೆ ಸ್ವೀಕೃತಿದಾರರು ಉಡುಗೊರೆ ಸಬ್‌ಸ್ಕ್ರಿಪ್ಶನ್‌ನ ವಾಯಿದೆ ಮುಗಿದ ಬಳಿಕ ತಮ್ಮ Snapchat+ ಸಬ್‌ಸ್ಕ್ರಿಪ್ಶನ್ ನವೀಕರಿಸಲು ಆಯ್ಕೆ ಮಾಡಿದರೆ ಅಥವಾ ಉಡುಗೊರೆ ಸಬ್‌ಸ್ಕ್ರಿಪ್ಶನ್‌ನ ಮುಕ್ತಾಯಕ್ಕೆ ಮೊದಲು ತಮ್ಮ ಪಾವತಿಸಿದ Snapchat+ ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಗೊಳಿಸದಿದ್ದರೆ, ಉಡುಗೊರೆ ಸಬ್‌ಸ್ಕ್ರಿಪ್ಶನ್ ಅವಧಿ ಮುಗಿದ ಬಳಿಕ Snapchat+ ಸಬ್‌ಸ್ಕ್ರಿಪ್ಶನ್ ನಿಯಮಗಳ ಅನುಸಾರ ಅವರ ಸಬ್‌ಸ್ಕ್ರಿಪ್ಶನ್‌ಗಾಗಿ ಬಿಲ್ ಮಾಡಲಾಗುತ್ತದೆ.
d. ತಾವು ಸ್ವೀಕರಿಸಿದ ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳ ಸಂಖ್ಯೆಯನ್ನು ಪರಿಗಣಿಸದೆ, ಸ್ವೀಕೃತಿದಾರರು ಒಂದು ಬಾರಿಗೆ ಕೇವಲ ಒಂದು ಉಡುಗೊರೆ ಸಬ್‌ಸ್ಕ್ರಿಪ್ಶನ್ ಅನ್ನು ಮಾತ್ರ ಪಡೆಯಬಹುದು. ಉಡುಗೊರೆ ಸಬ್‌ಸ್ಕ್ರಿಪ್ಶನ್ ಅನ್ನು ಉಡುಗೊರೆ ನೀಡಿದ ದಿನಾಂಕದಿಂದ 7 ವರ್ಷಗಳ ಬಳಿಕ ಅದನ್ನು ಪಡೆಯುವ ಸಾಮರ್ಥ್ಯ ವಾಯಿದೆ ಮುಗಿಯುತ್ತದೆ, ಆ ಬಳಿಕ ಅದು ಸ್ವೀಕೃತಿದಾರರಿಗೆ ಲಭ್ಯವಿರುವುದಿಲ್ಲ ಮತ್ತು ಒಂದು ಉಡುಗೊರೆ ಸಬ್‌ಸ್ಕ್ರಿಪ್ಶನ್ ಅನ್ನು ಪಡೆಯುವುದಕ್ಕೆ ಮುಂಚೆ ಅದು ವಾಯಿದೆ ಮುಗಿದರೆ ಅದಕ್ಕೆ ಮರುಪಾವತಿ ಪಡೆಯಲು ನೀವು ಅರ್ಹರಾಗಿರುವುದಿಲ್ಲ. ಸೇವೆ ಅಥವಾ ನಿಷ್ಕ್ರಿಯ ಸ್ಥಿತಿಗೆ ಯಾವುದೇ ಶುಲ್ಕಗಳಿಲ್ಲ.
ಸಾರಾಂಶದಲ್ಲಿ: ನೀವು ಮತ್ತು ಉಡುಗೊರೆ ಸಬ್‌ಸ್ಕ್ರಿಪ್ಶನ್‌ನ ಸ್ವೀಕೃತದಾರರಿಬ್ಬರೂ Snapchat ಖಾತೆ ಹೊಂದಿರಬೇಕು ಮತ್ತು ಖರೀದಿಗೆ ಮುನ್ನ ನೀವು ಸ್ನೇಹಿತರಾಗಿ ಸಂಪರ್ಕ ಹೊಂದಿರಬೇಕು. ಒಂದು ವೇಳೆ ಸ್ವೀಕೃತಿದಾರರು ಅಸ್ತಿತ್ವದಲ್ಲಿರುವ Snapchat+ ಸಬ್‌ಸ್ಕ್ರಿಪ್ಶನ್ ಅನ್ನು ಅಥವಾ ಒಂದು ಅಥವಾ ಹೆಚ್ಚಿನ ರಿಡೀಮ್ ಮಾಡದೆ ಇರುವ ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳನ್ನು ಈಗಾಗಲೇ ಹೊಂದಿದ್ದರೆ, ನಿಮ್ಮ ಉಡುಗೊರೆ ಸಬ್‌ಸ್ಕ್ರಿಪ್ಶನ್‌ನ ಆರಂಭವು ಮೇಲೆ ಹೇಳಿರುವ ಸಮಯಗಳಿಗೆ ಒಳಪಟ್ಟಿರುತ್ತದೆ. ಸ್ವೀಕೃತಿದಾರರು ನಿಮ್ಮ ಉಡುಗೊರೆ ಸಬ್‌ಸ್ಕ್ರಿಪ್ಶನ್ ಅನ್ನು ರಿಡೀಮ್ ಮಾಡಿಕೊಂಡ ಸಮಯದಲ್ಲಿ Snapchat+ ಗೆ ಪಾವತಿಸಿರುವ ಸಕ್ರಿಯ ಸಬ್‌ಸ್ಕ್ರಿಪ್ಶನ್ ಹೊಂದಿಲ್ಲದ ಹೊರತು, ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳು ಒಮ್ಮೆ ಅವಧಿ ಮುಗಿದ ಬಳಿಕ ಸ್ವಯಂಚಾಲಿತವಾಗಿ ನವೀಕರಣಗೊಳ್ಳುವುದಿಲ್ಲ. ರಿಡೀಮ್ ಮಾಡದೆ ಇರುವ ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳು ಉಡುಗೊರೆ ನೀಡಿದ ದಿನಾಂಕದಿಂದ 7ವರ್ಷಗಳ ಬಳಿಕ ಅವಧಿ ಮುಗಿಯುತ್ತವೆ.
ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳನ್ನು ಯಾವುದೇ ವ್ಯಕ್ತಿ ಅಥವಾ ಖಾತೆಗೆ ವರ್ಗಾಯಿಸುವಂತಿಲ್ಲ, ನಿಯೋಜಿಸುವಂತಿಲ್ಲ, ಮರುಉಡುಗೊರೆ ನೀಡುವಂತಿಲ್ಲ ಅಥವಾ ಮರುಮಾರಾಟ ಮಾಡುವಂತಿಲ್ಲ ಮತ್ತು ಉದ್ದೇಶಿತ ಸ್ವೀಕೃತಿದಾರರು ಮಾತ್ರ ಪಡೆದುಕೊಳ್ಳಬಹುದು. ಅನ್ವಯಿಸುವ ಕಾನೂನಿನಿಂದ ಬೇರೆ ರೀತಿ ಅಗತ್ಯಪಡಿಸದ ಹೊರತು, ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳನ್ನು ಮರುಪಾವತಿಸಲಾಗದು, ವರ್ಗಾಯಿಸಲಾಗದು ಅಥವಾ ನಗದು ಹಣಕ್ಕಾಗಿ ಹಿಂಪಡೆಯಲಾಗದು. ವರ್ಗಾಯಿಸಿದ, ನಿಯೋಜಿಸಿದ, ಮರುಉಡುಗೊರೆ ನೀಡಿದ ಅಥವಾ ಮರುಮಾರಾಟ ಮಾಡಿದ ಯಾವುದೇ ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳು Snap ನ ಸ್ವಂತ ವಿವೇಚನೆ ಮೇರೆಗೆ ಅಮಾನ್ಯಗೊಳಿಸುವಿಕೆಗೆ ಒಳಪಡುತ್ತವೆ. Snap ತನ್ನ ಸ್ವಂತ ವಿವೇಚನೆಯ ಮೇರೆಗೆ, ವಂಚನೆಯ ಮೂಲಕ ಅಥವಾ ಅಕ್ರಮ ಮಾರ್ಗಗಳ ಮೂಲಕ ಅಥವಾ ಯಾವುದೇ ವಂಚನೆ ಅಥವಾ ಅಕ್ರಮ ಉದ್ದೇಶಗಳಿಗಾಗಿ ಖರೀದಿಸಲಾಗಿದೆ ಅಥವಾ ಪಡೆದುಕೊಳ್ಳಲಾಗಿದೆ ಎಂದು ಭಾವಿಸುವ ಯಾವುದೇ ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳು Snap ನಿಂದ ಅಮಾನ್ಯಗೊಳಿಸುವಿಕೆಗೆ ಒಳಪಡುತ್ತವೆ.
ಸಾರಾಂಶದಲ್ಲಿ: ಉಡುಗೊರೆ ಸಬ್‌ಸ್ಕ್ರಿಪ್ಶನ್‌ಗಳನ್ನು ಖರೀದಿಯ ಸಂದರ್ಭದಲ್ಲಿ ನೀವು ನಿಯೋಜಿಸುವ ಆರಂಭಿಕ ಸ್ವೀಕೃತಿದಾರರು ಮಾತ್ರ ಬಳಸಬಹುದು ಮತ್ತು ಬೇರೆ ಯಾರಿಗೂ ಮರುಮಾರಾಟ ಅಥವಾ ವರ್ಗಾವಣೆ ಮಾಡಲಾಗದು. ಕೆಲವು ಇರುವ ಸಂಧರ್ಭಗಳಲ್ಲಿ ನಾವುಉಡುಗೊರೆ ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಮಾಡಬಹುದು ಅಥವಾ ಅಮಾನ್ಯಗೊಳಿಸಬಹುದು.