ಸೀಮಿತ ಡೇಟಾ ಬಳಕೆಯ ನಿಯಮಗಳು
ಜಾರಿ: ನವೆಂಬರ್ 3, 2021
ದಯವಿಟ್ಟು ಗಮನಿಸಿ: ಮೇಲಿನ ದಿನಾಂಕದಂದು ನಾವು ಈ ನಿಯಮಗಳನ್ನು ನವೀಕರಿಸಿದ್ದೇವೆ. ಒಂದು ವೇಳೆ ಈ ನಿಯಮಗಳ ಹಿಂದಿನ ಆವೃತ್ತಿಗೆ ನೀವು ಒಪ್ಪಿದ್ದರೆ (ಇಲ್ಲಿ ನೋಡಬಹುದು), ನವೀಕರಿಸಿದ ನಿಯಮಗಳು ನವೆಂಬರ್ 17, 2021 ರಿಂದ ಜಾರಿಯಲ್ಲಿರುತ್ತವೆ.
ಈ ಸೀಮಿತ ಡೇಟಾ ಬಳಕೆಯ ನಿಯಮಗಳು ನಿಮ್ಮ ಮತ್ತು Snap ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ ಮತ್ತು ವ್ಯವಹಾರ ಸೇವೆಗಳ ನಿಯಮಗಳಲ್ಲಿ ಸಂಯೋಜಿಸಲ್ಪಟ್ಟಿವೆ. ಈ ಸೀಮಿತ ಡೇಟಾ ಬಳಕೆಯ ನಿಯಮಗಳಲ್ಲಿ ಬಳಸಿರುವ ಕೆಲವು ನಿಯಮಗಳನ್ನು ವ್ಯವಹಾರ ಸೇವೆಗಳ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿದೆ.
ಒಂದು ವೇಳೆ Snap ಪರಿವರ್ತನೆ ನಿಯಮಗಳ ಅಡಿಯಲ್ಲಿನ ನಿಮ್ಮ ಮೊಬೈಲ್ ಆ್ಯಪ್‌ಗಳು ಅಥವಾ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ಈವೆಂಟ್ ಡೇಟಾವು Snap ಮನ್ನಣೆ ನೀಡುವ ಸೀಮಿತ ಡೇಟಾ ಬಳಕೆ ಸಿಗ್ನಲ್ ಅನ್ನು ಒಳಗೊಂಡಿದ್ದರೆ (ಇಲ್ಲಿ ವಿವರಿಸಿರುವಂತೆ), ಆಗ ಆ ಈವೆಂಟ್ ಡೇಟಾದೊಳಗೆ ಯಾವುದೇ ಗುರುತಿಸಬಹುದಾದ ಬಳಕೆದಾರ ಅಥವಾ ಸಾಧನ ಡೇಟಾವನ್ನು, ಗುರಿಯಾಗಿಸಿದ ಜಾಹೀರಾತು ನೀಡುವಿಕೆ ಅಥವಾ ಜಾಹೀರಾತು ನೀಡುವಿಕೆ ಮಾಪನ ಉದ್ದೇಶಗಳಿಗಾಗಿ Snap ನ ಮೊಬೈಲ್ ಆ್ಯಪ್‌ಗಳು ಸಂಗ್ರಹಿಸಿದ ಆ ಬಳಕೆದಾರನಿಗೆ ಸಂಬಂಧಿಸಿದ ಯಾವುದೇ ಗುರುತಿಸಬಹುದಾದ ಬಳಕೆದಾರ ಅಥವಾ ಸಾಧನ ಡೇಟಾದೊಂದಿಗೆ ಲಿಂಕ್ ಆಫ್ ಮಾಡದಿರಲು Snap ಒಪ್ಪುತ್ತದೆ.
ಒಂದು ವೇಳೆ ಈ ಸೀಮಿತ ಡೇಟಾ ಬಳಕೆಯ ನಿಯಮಗಳು ವ್ಯವಹಾರ ಸೇವೆಗಳ ನಿಯಮಗಳು, ಇತರ ಯಾವುದೇ ಪೂರಕ ನಿಯಮಗಳು ಮತ್ತು ನೀತಿಗಳು ಅಥವಾ Snap ಸೇವೆಯ ನಿಯಮಗಳ ಜೊತೆಗೆ ಸಂಘರ್ಷ ಉಂಟುಮಾಡಿದರೆ, ಆಗ ಸಂಘರ್ಷದ ವ್ಯಾಪ್ತಿಯ ಮಟ್ಟಿಗೆ ನಿಯಂತ್ರಿಸುವ ದಾಖಲೆಗಳು, ಈ ಅವರೋಹಣ ಕ್ರಮದಲ್ಲಿರುತ್ತವೆ: ಈ ಸೀಮಿತ ಡೇಟಾ ಬಳಕೆಯ ನಿಯಮಗಳು, ಇತರ ಪೂರಕ ನಿಯಮಗಳು ಮತ್ತು ನೀತಿಗಳು, ವ್ಯವಹಾರ ಸೇವೆಗಳ ನಿಯಮಗಳು, ಮತ್ತು Snap ಸೇವೆಯ ನಿಯಮಗಳು.