ದಯವಿಟ್ಟು ಗಮನಿಸಿ: ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ ನಾವು ಈ ಸ್ಥಳೀಯ ನಿಯಮಗಳನ್ನು ನವೀಕರಿಸಿದ್ದೇವೆ. ಮಾರ್ಚ್ 31, 2024 ರವರೆಗೆ ಎಲ್ಲ ಬಳಕೆದಾರರಿಗೆ ಅನ್ವಯವಾಗುವ ಹಿಂದಿನ ಸ್ಥಳೀಯ ನಿಯಮಗಳನ್ನು ನೀವು ಇಲ್ಲಿ ನೋಡಬಹುದು.

ಸ್ಥಳೀಯ ನಿಯಮಗಳು

ಜಾರಿ: ಏಪ್ರಿಲ್ 1, 2024

ಪರಿಚಯ

ಈ ಸ್ಥಳೀಯ ನಿಯಮಗಳು ನೀವು ಮತ್ತು Snap ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ, ಕೆಳಗೆ ಪಟ್ಟಿ ಮಾಡಿರುವ ಸ್ಥಳದಲ್ಲಿ ತನ್ನ ಪ್ರಧಾನ ವ್ಯವಹಾರ ಸ್ಥಳವನ್ನು ಹೊಂದಿರುವ ಘಟಕವು ವ್ಯವಹಾರ ಸೇವೆಗಳನ್ನು ಬಳಸುತ್ತಿದ್ದರೆ ಮತ್ತು ವ್ಯವಹಾರ ಸೇವೆಗಳ ನಿಯಮಗಳಲ್ಲಿ ಅಳವಡಿಸಿಕೊಂಡಿದ್ದರೆ ಅನ್ವಯಿಸುತ್ತದೆ. ಈ ಸ್ಥಳೀಯ ನಿಯಮಗಳಲ್ಲಿ ಬಳಸಿರುವ ಕೆಲವು ನಿಯಮಗಳನ್ನು ವ್ಯವಹಾರ ಸೇವೆಗಳ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿದೆ.

1. Snap ಘಟಕ

ವ್ಯವಹಾರ ಸೇವೆಗಳನ್ನು ಬಳಸುವ ಘಟಕವು ಕೆಳಗೆ ಪಟ್ಟಿ ಮಾಡಿರುವ ದೇಶಗಳ ಪೈಕಿ ಒಂದರಲ್ಲಿ ತನ್ನ ಪ್ರಧಾನ ವ್ಯವಹಾರದ ಸ್ಥಳವನ್ನು ಹೊಂದಿದ್ದರೆ ಮತ್ತು ವಿಷಯವನ್ನು ರಚಿಸುವುದು ಮತ್ತು ನಿರ್ವಹಿಸುವುದಕ್ಕಾಗಿ (ಜಾಹೀರಾತುಗಳು ಮತ್ತು ಕೆಟಲಾಗ್‌ಗಳು ಸೇರಿದಂತೆ), ಪಾವತಿಗಳಿಗಾಗಿ, Snap ನ ಗ್ರಾಹಕರ ಪಟ್ಟಿ ಪ್ರೇಕ್ಷಕರ ಪ್ರೊಗ್ರಾಂಗಾಗಿ ಅಥವಾ Snap ನ ಕನ್ವರ್ಷನ್ ಪ್ರೊಗ್ರಾಂಗಾಗಿ ವ್ಯವಹಾರ ಸೇವೆಗಳನ್ನು ಬಳಸುತ್ತಿದ್ದರೆ, ಬೇರೊಂದು ಕಡೆ ಇನ್ನೊಂದು ಘಟಕಕ್ಕಾಗಿ ಆ ಘಟಕವು ಏಜೆಂಟ್ ರೀತಿ ಕಾರ್ಯನಿರ್ವಹಿಸುತ್ತಿದ್ದರೂ ಸಹ, ಆಗ, ಸ್ವಯಂ ಪೂರೈಕೆ ಜಾಹೀರಾತು ನೀಡುವಿಕೆ ನಿಯಮಗಳು, ಪಾವತಿ ನಿಯಮಗಳು, ಕೆಟಲಾಗ್ ನಿಯಮಗಳು, Snap ಕ್ರಿಯೇಟಿವ್ ಸೇವೆಗಳ ನಿಯಮಗಳು, ಗ್ರಾಹಕರ ಪಟ್ಟಿ ಪ್ರೇಕ್ಷಕರ ನಿಯಮಗಳು, Snap ಕನ್ವರ್ಷನ್ ನಿಯಮಗಳು, ವೈಯಕ್ತಿಕ ಡೇಟಾ ನಿಯಮಗಳು, ಡೇಟಾ ಪ್ರಕ್ರಿಯೆಗೊಳಿಸುವಿಕೆ ಒಪ್ಪಂದ, ಪ್ರಮಾಣಿತ ಗುತ್ತಿಗೆಯ ಕರಾರುಗಳು ಮತ್ತು ವ್ಯವಹಾರ ಸೇವೆಯ ನಿಯಮಗಳ ಉದ್ದೇಶಗಳಿಗಾಗಿ, “Snap” ಅಂದರೆ ಕೆಳಗೆ ಸೂಚಿಸಿರುವ ಘಟಕವಾಗಿರುತ್ತದೆ:

ರಾಷ್ಟ್ರ

Snap ಘಟಕ

ಆಸ್ಟ್ರೇಲಿಯಾ

Snap Aus Pty Ltd

ಆಸ್ಟ್ರಿಯ

Snap Camera GmbH

ಕೆನಡಾ

Snap ULC

ಫ್ರಾನ್ಸ್

Snap Group SAS

ಜರ್ಮನಿ

Snap Camera GmbH

ಭಾರತ

Diamond Centre, Unit No 26, near Vardham Industrial Estate Vikhroli (West), Mumbai, Maharashtra India 400083 ಈ ನೋಂದಾಯಿತ ವಿಳಾಸದೊಂದಿಗೆ Snap Camera India Private Limited

ಹಾಂಗ್ ಕಾಂಗ್, ಇಂಡೋನೇಷ್ಯಾ, ಜಪಾನ್, ಮಲೇಷ್ಯಾ, ಪಾಕಿಸ್ತಾನ, ಫಿಲಿಪೈನ್ಸ್, ಸಿಂಗಾಪುರ, ದಕ್ಷಿಣ ಕೊರಿಯಾ

Snap Group Limited ಸಿಂಗಾಪುರ ಶಾಖೆ

ನ್ಯೂಜಿಲೆಂಡ್

Snap Aus Pty Ltd

ಸ್ವಿಟ್ಜರ್ಲ್ಯಾಂಡ್

Snap Camera GmbH

2. ಚೀನಾ

ವ್ಯವಹಾರ ಸೇವೆಗಳನ್ನು ಬಳಸುವ ಘಟಕವು ತನ್ನ ವ್ಯವಹಾರದ ಪ್ರಧಾನ ಸ್ಥಳವನ್ನು ಚೀನಾದಲ್ಲಿ ಹೊಂದಿದ್ದರೆ ಮತ್ತು ಪಾವತಿಗಳಿಗಾಗಿ ವ್ಯವಹಾರ ಸೇವೆಗಳನ್ನು ಬಳಸುತ್ತಿದ್ದರೆ, ಆಗ, ಪಾವತಿ ನಿಯಮಗಳ ಉದ್ದೇಶಗಳಿಗಾಗಿ ಈ ಕೆಳಗಿನ ಪೂರಕ ನಿಯಮಗಳು ಅನ್ವಯಿಸುತ್ತವೆ:

  • ಶುಲ್ಕಗಳು ಕೆಳಗೆ ವಿವರಿಸಿರುವಂತೆ ಸ್ಥಳೀಯ ವ್ಯಾಟ್ ಮತ್ತು ಸ್ಥಳೀಯ ಸರ್‌ಚಾರ್ಜ್‌ಗಳಿಗೆ ಹೊರತಾಗಿರುತ್ತವೆ. ನೀವು Snap ನ ಪರವಾಗಿ ಚೀನಾದ ಸೂಕ್ತ ತೆರಿಗೆ ಪ್ರಾಧಿಕಾರಕ್ಕೆ ಸ್ಥಳೀಯ ವ್ಯಾಟ್ ಮತ್ತು ಸ್ಥಳೀಯ ಸರ್‌ಚಾರ್ಜ್‌ಗಳನ್ನು ಪಾವತಿಸುತ್ತೀರಿ ಮತ್ತು ವರದಿ ಮಾಡುತ್ತೀರಿ. Snap ನ ವಿನಂತಿ ಮೇರೆಗೆ, ತೆರಿಗೆ ವಿಧಿಸಬಹುದಾದ ಮೊತ್ತ, ಸ್ಥಳೀಯ ವ್ಯಾಟ್ ಮೊತ್ತ ಮತ್ತು ಶುಲ್ಕಗಳಿಗೆ ಸಂಬಂಧಿಸಿದ ಸ್ಥಳೀಯ ಸರ್‌ಚಾರ್ಜ್‌ಗಳ ಮೊತ್ತ ಸೇರಿದಂತೆ, ಚೀನಾದ ಸೂಕ್ತ ತೆರಿಗೆ ಪ್ರಾಧಿಕಾರದಿಂದ ಜಾರಿ ಮಾಡಲಾದ ಪಾವತಿಯ ಪುರಾವೆಯನ್ನು ನೀವು Snap ಗೆ ತಕ್ಷಣವೇ ಒದಗಿಸುತ್ತೀರಿ.

  • ಅನ್ವಯಿಸುವ ಇನ್‌ವಾಯ್ಸ್‌ನಲ್ಲಿ ಹೇಳಿರುವ ಶುಲ್ಕಗಳಿಂದ ನೀವು ಯಾವುದೇ ಸ್ಥಳೀಯ ವ್ಯಾಟ್ ಅಥವಾ ಸರ್‌ಚಾರ್ಜ್‌ಗಳನ್ನು ತಡೆಹಿಡಿಯುವುದಿಲ್ಲ. ಒಂದು ವೇಳೆ ನೀವು ಅಥವಾ ಜಾಹೀರಾತುದಾರರು ಶುಲ್ಕಗಳಿಂದ ಅಂತಹ ಮೊತ್ತಗಳನ್ನು ತಡೆಹಿಡಿಯುವ ಅಥವಾ ಕಡಿತ ಮಾಡುವ ಮೂಲಕ ಯಾವುದೇ ಸ್ಥಳೀಯ ವ್ಯಾಟ್ ಅಥವಾ ಸ್ಥಳೀಯ ಸರ್‌ಚಾರ್ಜ್‌ಗಳನ್ನು ಪಾವತಿಸುವ ಅಗತ್ಯವಿದ್ದರೆ, ಅವಶ್ಯಕವಿರುವ ಯಾವುದೇ ಹೆಚ್ಚುವರಿ ಮೊತ್ತವನ್ನು ನೀವು Snap ಗೆ ಪಾವತಿಸುತ್ತೀರಿ, ಇದರಿಂದಾಗಿ ಅನ್ವಯಿಸುವ ಇನ್‌ವಾಯ್ಸ್‌ನಲ್ಲಿ ಹೇಳಿರುವ ಶುಲ್ಕಗಳಿಗೆ ಸಮನಾದ ನಿವ್ವಳ ಮೊತ್ತವನ್ನು Snap ಸ್ವೀಕರಿಸುತ್ತದೆ.

  • ಈ ಪಾವತಿ ನಿಯಮಗಳ ಉದ್ದೇಶಗಳಿಗಾಗಿ: (a) "ಸ್ಥಳೀಯ ವ್ಯಾಟ್ ಎಂದರೆ ಚೀನಾದಲ್ಲಿ ಅನ್ವಯಿಸುವ ಕಾನೂನಿನಡಿಯಲ್ಲಿ ವಿಧಿಸಲಾಗುವ ವ್ಯಾಟ್ (ಯಾವುದೇ ದಂಡಗಳು ಮತ್ತು ವಿಳಂಬ ಪಾವತಿ ಸರ್‌ಚಾರ್ಜ್‌ಗಳು ಸೇರಿದಂತೆ) ಎಂದರ್ಥ; ಮತ್ತು (b) "ಸ್ಥಳೀಯ ಸರ್‌ಚಾರ್ಜ್‌ಗಳು" ಎಂದರೆ ನಗರ ನಿರ್ವಹಣೆ ಮತ್ತು ನಿರ್ಮಾಣ ತೆರಿಗೆ, ಶಿಕ್ಷಣ ಸರ್‌ಚಾರ್ಜ್, ಸ್ಥಳೀಯ ಶಿಕ್ಷಣ ಸರ್‌ಚಾರ್ಜ್ ಮತ್ತು ಯಾವುದೇ ದಂಡಗಳು ಮತ್ತು ವಿಳಂಬ ಪಾವತಿ ಸರ್‌ಚಾರ್ಜ್‌ಗಳು ಸೇರಿದಂತೆ, ಪಾವತಿಸಬೇಕಾದ ಸ್ಥಳೀಯ ವ್ಯಾಟ್ ಮೊತ್ತದ ಮೇಲೆ ಪಾವತಿಸಬೇಕಾದ ಯಾವುದೇ ತೆರಿಗೆಗಳು, ಸುಂಕಗಳು ಅಥವಾ ಸರ್‌ಚಾರ್ಜ್‌ಗಳು ಎಂದರ್ಥವಾಗಿದೆ.

3. ಫ್ರಾನ್ಸ್

ವ್ಯವಹಾರ ಸೇವೆಗಳನ್ನು ಬಳಸುವ ಘಟಕವು ಫ್ರಾನ್ಸ್‌ನಲ್ಲಿ ತನ್ನ ವ್ಯವಹಾರದ ಪ್ರಧಾನ ಸ್ಥಳವನ್ನು ಹೊಂದಿದ್ದರೆ, ಆಗ, ಪಾವತಿ ನಿಯಮಗಳ ಉದ್ದೇಶಗಳಿಗಾಗಿ ವಿಭಾಗ 1 ರಲ್ಲಿ ತಿಳಿಸಿರುವುದರ ಜೊತೆಗೆ ಈ ಕೆಳಗಿನ ಪೂರಕ ನಿಯಮಗಳು ಅನ್ವಯಿಸುತ್ತವೆ:

  • ವಿಳಂಬ ಪಾವತಿಯ ಸಂದರ್ಭದಲ್ಲಿ, ಪಾವತಿ ಗಡುವಿನ ದಿನಾಂಕದಿಂದ ಫ್ರೆಂಚ್ ಕಾನೂನುಬದ್ಧ ಬಡ್ಡಿ ದರದ ಮೂಎರು ಪಟ್ಟು ದಂಡವನ್ನು ಅನ್ವಯಿಸಲಾಗುತ್ತದೆ; ವಿಳಂಬ ಪಾವತಿಯು EURO €40 ರಿಕವರಿ ಶುಲ್ಕಗಳ ನಿಶ್ಚಿತ ಪರಿಹಾರದ ಹಕ್ಕನ್ನು ಕೂಡ ನೀಡುತ್ತದೆ.

4. ಭಾರತ

ವ್ಯವಹಾರದ ಸೇವೆಗಳನ್ನು ಬಳಸುತ್ತಿರುವ ಘಟಕವು ತನ್ನ ವ್ಯವಹಾರದ ಪ್ರಧಾನ ಸ್ಥಳವನ್ನು ಭಾರತದಲ್ಲಿ ಹೊಂದಿದ್ದರೆ ಹಾಗೂ ಪಾವತಿಗಳಿಗಾಗಿ ವ್ಯವಹಾರದ ಸೇವೆಗಳನ್ನು ಬಳಸುತ್ತಿದ್ದರೆ, ಪಾವತಿ ನಿಯಮಗಳ ಉದ್ದೇಶಗಳಿಗಾಗಿ, ಈ ಕೆಳಗಿನ ನಿಯಮಗಳು ಅನ್ವಯಿಸುತ್ತವೆ, ಹಾಗೂ ಸ್ಥಳೀಯ ನಿಯಮಗಳು ಮತ್ತು ಪಾವತಿ ನಿಯಮಗಳ ನಡುವೆ ಸಂಘರ್ಷ ಅಥವಾ ಅಸಂಗತತೆ ಇದ್ದಲ್ಲಿ, ಇವುಗಳೇ ಆದ್ಯತೆಯನ್ನು ಪಡೆದುಕೊಳ್ಳುತ್ತವೆ:

  • ನೀವು ಅಥವಾ ಜಾಹೀರಾತುದಾರರು ಯಾವುದೇ ತೆರಿಗೆಗಳನ್ನು ತಡೆಹಿಡಿಯುವ ಅಥವಾ ಕಡಿತಗೊಳಿಸುವ ಅಥವಾ ಶುಲ್ಕಗಳಿಗೆ ಹೆಚ್ಚುವರಿಯಾಗಿ ಮೂಲದಲ್ಲಿ ಕಡಿತಗೊಳಿಸಲ್ಪಡುವ ಯಾವುದೇ ತೆರಿಗೆಯನ್ನು ("ಟಿಡಿಎಸ್") ಪಾವತಿಸುವ ಅಗತ್ಯವಿದ್ದರೆ, ನೀವು: (ಎ) ನಿಮ್ಮ ವಹಿವಾಟುಗಳಿಗೆ ಅನ್ವಯವಾಗುವ ಯಾವುದೇ ಟಿಡಿಎಸ್ ಅನ್ನು ಭಾರತೀಯ ತೆರಿಗೆ ಅಧಿಕಾರಿಗಳಿಗೆ ಪಾವತಿಸುವ ಜವಾಬ್ದಾರಿಯನ್ನು ಹೊಂದಿರುತ್ತೀರಿ; ಹಾಗೂ (ಬಿ) ನೀವು ಮತ್ತು ಜಾಹೀರಾತುದಾರರು ಆ ತೆರಿಗೆಗಳನ್ನು ತಡೆಹಿಡಿಯುವ ಅಥವಾ ಕಡಿತಗೊಳಿಸುವ ಅಗತ್ಯವನ್ನು ಅನುಸರಿಸಿದ್ದೀರಿ ಎಂದು ಸಾಬೀತುಪಡಿಸಲು, ಭಾರತದಲ್ಲಿ ಅನ್ವಯವಾಗುವ ಕಾನೂನಿನ ಪ್ರಕಾರ Snap ಗೆ ಅಗತ್ಯವಿರುವ ಟಿಡಿಎಸ್ ಪ್ರಮಾಣಪತ್ರಗಳನ್ನು (ನಮೂನೆ 16A) ತ್ವರಿತವಾಗಿ ಮತ್ತು ಸಮಯೋಚಿತವಾಗಿ ಹಾಗೂ Snap ಸಮಂಜಸವಾಗಿ ವಿನಂತಿಸುವಂತೆ ಕಳುಹಿಸುವುದು.

ಸಂಕ್ಷಿಪ್ತವಾಗಿ ತಿಳಿಸಬೇಕೆಂದರೆ: ವ್ಯವಹಾರದ ಸೇವೆಗಳ ನಿಬಂಧನೆಗಾಗಿ ನೀವು ಯಾವ Snap ಘಟಕದೊಂದಿಗೆ ಬದ್ಧತೆಗೊಳಪಡಿಸುವ ಒಪ್ಪಂದಕ್ಕೆ ಪ್ರವೇಶಿಸುವಿರಿ ಎನ್ನುವುದನ್ನು ಈ ಸ್ಥಳೀಯ ನಿಯಮಗಳಲ್ಲಿ ನಿಗದಿಪಡಿಸಲಾಗಿರುವಂತೆ ನಿಮ್ಮ ವ್ಯವಹಾರದ ಪ್ರಧಾನ ಸ್ಥಳದಿಂದ ನಿರ್ಧರಿಸಲಾಗುತ್ತದೆ.