Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು

ಜಾರಿ ದಿನಾಂಕ: ಆಗಸ್ಟ್ 15, 2025

ಮಧ್ಯಸ್ಥಿಕೆ ಸೂಚನೆ: ನೀವು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿದ್ದರೆ ನೀವು SNAP INC. ನಲ್ಲಿ ವಿವರಿಸಿರುವ ಮಧ್ಯಸ್ಥಿಕೆ ನಿಬಂಧನೆಗೆ ಒಳಪಡುತ್ತೀರಿ. ಸೇವೆಯ ನಿಯಮಗಳು.

1. ಪೀಠಿಕೆ

ದಯವಿಟ್ಟು ಈ Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳನ್ನು ಎಚ್ಚರಿಕೆಯಿಂದ ಓದಿ. ಈ Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು ನಿಮ್ಮ ಮತ್ತು Snap ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ ಮತ್ತು ರಿವಾರ್ಡ್‌ಗೆ ಪ್ರತಿಯಾಗಿ Snapchat ಅಕೌಂಟ್ ರಚಿಸಲು ಸೇವೆಗಳ ಸಂಭಾವ್ಯ ಬಳಕೆದಾರರನ್ನು ಆಹ್ವಾನಿಸಲು ನಿಮಗೆ ಅವಕಾಶ ಕಲ್ಪಿಸುವ Snap ನಿಂದ ಆಫರ್ ಮಾಡಲಾಗಿರುವ ಯಾವುದೇ ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ನಿಯಂತ್ರಿಸುತ್ತದೆ ("Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ"). ಈ Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು ಉಲ್ಲೇಖದ ಮೂಲಕ Snap ಸೇವೆಯ ನಿಯಮಗಳು, ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ಅನ್ವಯಿಸುವ ಇತರ ಯಾವುದೇ ನಿಯಮಗಳು, ಮಾರ್ಗಸೂಚಿಗಳು ಮತ್ತು ನೀತಿಗಳನ್ನು ಒಳಗೊಳ್ಳುತ್ತವೆ. ಈ Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು ಯಾವುದೇ ಇತರ ನಿಯಮಗಳೊಂದಿಗೆ ಸಂಘರ್ಷಿಸುವ ಮಟ್ಟಿಗೆ, ಈ Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು ಮೇಲುಗೈ ಸಾಧಿಸುತ್ತವೆ. Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ಎಂಬುದು Snap ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿರುವಂತೆ Snap ನ “ಸೇವೆಗಳ” ಭಾಗವಾಗಿದೆ. 

2. ರೆಫರಲ್‌ಗಳು

a. ಈ Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು ಮತ್ತು ನಮ್ಮ ಸ್ವಂತ ವಿವೇಚನೆ ಮೇರೆಗೆ ನಾವು ನಿರ್ಧರಿಸುವಂತೆ ಮತ್ತು ನಿಮಗೆ ಸೂಚನೆ ನೀಡುವಂತೆ ಯಾವುದೇ ಇತರ ಅರ್ಹತಾ ಮಾನದಂಡಗಳಿಗೆ ನಿಮ್ಮ ಅನುಸರಣೆಗೆ ಒಳಪಟ್ಟು (“ಅರ್ಹತಾ ಮಾನದಂಡ”), Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂನಲ್ಲಿ ಭಾಗವಹಿಸಲು ನಾವು ನಿಮಗೆ ಅನುಮತಿಸಬಹುದು. Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂಗೆ ಒಮ್ಮೆ ಸ್ವೀಕರಿಸಲ್ಪಟ್ಟ ಬಳಿಕ, ಸೇವೆಗಳ ಮೂಲಕ ನಿಮಗೆ ಸೂಚನೆ ನೀಡಲಾದಂತೆ Snap ನಿಮಗೆ ರಿವಾರ್ಡ್ ನೀಡುವುದಕ್ಕೆ ("ರಿವಾರ್ಡ್") ಪ್ರತಿಯಾಗಿ ವ್ಯಕ್ತಿಗಳನ್ನು ("ಆಹ್ವಾನಿತರು") Snapchat ಅಕೌಂಟ್ ರಚಿಸಲು ("ಸೈನ್ ಅಪ್") ಆಹ್ವಾನಿಸುವುದಕ್ಕೆ ನಿಮಗೆ ಅನುಮತಿಸಬಹುದು. 

b. Snap ನಿಮಗೆ ವಿಶಿಷ್ಟ URL ಲಿಂಕ್ ಅನ್ನು ಒದಗಿಸುತ್ತದೆ, ಅದನ್ನು ನೀವು ಆಹ್ವಾನಿತರ ಜೊತೆಗೆ ಹಂಚಿಕೊಳ್ಳಬಹುದು (“ಆಹ್ವಾನ ಲಿಂಕ್”). Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂಗೆ ಸಂಬಂಧಿಸಿ ಆಹ್ವಾನಿತರನ್ನು ಆಹ್ವಾನಿಸುವ ಉದ್ದೇಶಕ್ಕಾಗಿ ಮಾತ್ರ ನೀವು ಆಹ್ವಾನ ಲಿಂಕ್ ಅನ್ನು ಬಳಸುತ್ತೀರಿ.

3. ಅರ್ಹತೆ ಮತ್ತು ಹೊರಗಿಡುವಿಕೆಗಳು

a. Snapchat ರೆಫರಲ್ ರಿವಾರ್ಡ್ ಪ್ರೋಗ್ರಾಂ (ಸೈನ್‌ ಅಪ್‌ಗಳು ನಡೆಯಬೇಕಾದ ಸಮಯಾವಧಿ ಸೇರಿದಂತೆ) ಸೇವೆಗಳ ಮೂಲಕ ನಿಮಗೆ ಸೂಚನೆ ನೀಡಿದಂತೆ ನಿರ್ದಿಷ್ಟ ಸಮಯಾವಧಿಗೆ ಲಭ್ಯವಿರುತ್ತದೆ (“ರಿವಾರ್ಡ್ ಪ್ರೊಗ್ರಾಂ ಅವಧಿ”), ಇದು ಲಭ್ಯತೆಗೆ ಒಳಪಟ್ಟಿದೆ ಮತ್ತು ನಮ್ಮ ಸ್ವಂತ ವಿವೇಚನೆ ಮೇರೆಗೆ ನಾವು ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳಬಹುದು. ರಿವಾರ್ಡ್ ಪ್ರೊಗ್ರಾಂ ಅವಧಿಯನ್ನು ಅನ್‌ಲಾಕ್ ಮಾಡಲು ಸೇವೆಗಳಲ್ಲಿ ನಿಮಗೆ ಸೂಚಿಸಲಾಗಿರುವ ಅಥವಾ ಈ Snapchat ರಿವಾರ್ಡ್ ಪ್ರೊಗ್ರಾಂ ನಿಯಮಗಳಲ್ಲಿ ಹೇಳಲಾಗಿರುವ (ಉದಾಹರಣೆಗೆ, ಸೈನ್ ಅಪ್‌ಗಳ ಸಂಖ್ಯೆ) ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು.

b. ಒಂದು ರಿವಾರ್ಡ್ ಪ್ರೊಗ್ರಾಂ ಅವಧಿಗೆ ಅರ್ಹತೆ ಪಡೆಯಲು, ನೀವು ಅಥವಾ ಆಹ್ವಾನಿತರು (ಅನ್ವಯಿಸುವಂತೆ) ಈ ಮುಂದಿನ ಮಾನದಂಡಗಳನ್ನು ಪೂರೈಸಬೇಕು: (i) ನಿಮ್ಮ ಆಹ್ವಾನ ಲಿಂಕ್ ಬಳಸಿಕೊಂಡು ಸೇವೆಗಳಲ್ಲಿ ಆಹ್ವಾನಿತರು ಖಾತೆಯನ್ನು ರಚಿಸಬೇಕು; (ii) ಸೇವೆಗಳ ಮೂಲಕ ನಿಮಗೆ ಸೂಚಿಸಲಾಗಿರುವಂತೆ ಅರ್ಹತಾ ಅವಧಿಯೊಳಗೆ ಆಹ್ವಾನಿತರು Snapchat ಖಾತೆಯನ್ನು ರಚಿಸಬೇಕು. ಅಂತಹ ಅರ್ಹತಾ ಅವಧಿಯ ನಂತರ, ಆಹ್ವಾನ ಲಿಂಕ್ ಅವಧಿ ಮುಗಿಯುತ್ತದೆ ಮತ್ತು ಬಳಸಲಾಗದು; (iii) ಆಹ್ವಾನಿತರು ಸೇವೆಗಳಲ್ಲಿ ಈಗಾಗಲೇ ಒಂದು ಖಾತೆ ಹೊಂದಿರಬಾರದು ಅಥವಾ ಯಾವುದೇ ಸಮಯದಲ್ಲಿ ಸೇವೆಗಳಲ್ಲಿ ಎಂದೂ ಖಾತೆಯನ್ನು ಹೊಂದಿರಬಾರದು; (iv) ಸೇವೆಗಳಲ್ಲಿ ನಿಮಗೆ ಸೂಚಿಸಲಾಗಿರುವ ದೇಶದಲ್ಲಿ ನೀವು ವಾಸವಾಗಿರಬೇಕು; ಮತ್ತು (v) ನೀವು ಉತ್ತಮ ನಿಲುವಿನಲ್ಲಿರುವ Snapchat ಖಾತೆಯನ್ನು ಹೊಂದಿರಬೇಕು ಮತ್ತು Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು, ಕಮ್ಯುನಿಟಿ ಮಾರ್ಗಸೂಚಿಗಳು, ಅಥವಾ ಯಾವುದೇ Snap ನಿಯಮಗಳು ಅಥವಾ ನೀತಿಗಳ ಉಲ್ಲಂಘನೆಗಾಗಿ Snap ನಿಂದ ಸಕ್ರಿಯ ತನಿಖೆ ಅಥವಾ ಶಿಸ್ತು ಕ್ರಮ ಎದುರಿಸುತ್ತಿರಬಾರದು.

c. Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿ ಈ ಮುಂದಿನ ಯಾವುದನ್ನೂ ನೀವು ಮಾಡಬಾರದು (“ನಿಷೇಧಿತ ಚಟುವಟಿಕೆಗಳು”): (i) ಸ್ವಯಂಚಾಲಿತಗೊಳಿಸಿದ ಅಥವಾ ಅರೆ-ಸ್ವಯಂಚಾಲಿತಗೊಳಿಸಿದ ಮಾರ್ಗಗಳ ಮೂಲಕ, ಆಹ್ವಾನ ಲಿಂಕ್ ಅಥವಾ ಇತರ ಯಾವುದೇ ಕಂಟೆಂಟ್ ಜೊತೆಗೆ ಆಹ್ವಾನಿತರನ್ನು ಸ್ಪ್ಯಾಮ್ ಮಾಡುವುದು; (ii) ಆಹ್ವಾನಿತರಿಗೆ ಅಪೇಕ್ಷಿಸದ ಆಹ್ವಾನಗಳನ್ನು ಕಳುಹಿಸುವುದು; (iii) ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳ ಜೊತೆಗೆ ಅನುಸರಣೆಯಾಗದ ಯಾವುದೇ ಕಂಟೆಂಟ್ ಅನ್ನು ಕಳುಹಿಸುವುದು; (iv) ಸೈನ್-ಅಪ್‌ಗಳನ್ನು ಕೋರಲು ಸುಳ್ಳು ಅಥವಾ ದಾರಿತಪ್ಪಿಸುವ ವಿಧಾನಗಳನ್ನು ಬಳಸುವುದು, ಇದರಲ್ಲಿ ಸಂದರ್ಶಕರ ಸ್ವಯಂಚಾಲಿತ ಅಥವಾ ಮೋಸಗೊಳಿಸುವ ಮರುನಿರ್ದೇಶನ, ಬ್ಲೈಂಡ್ ಪಠ್ಯ ಲಿಂಕ್‌ಗಳು, ದಾರಿತಪ್ಪಿಸುವ ಲಿಂಕ್‌ಗಳು ಅಥವಾ ಬಲವಂತದ ಕ್ಲಿಕ್‌ಗಳು ಸೇರಿವೆ; (v) ಬಾಟ್‌ಗಳು ಅಥವಾ ಇತರ ಮಾನವೇತರ ಅಥವಾ ಸ್ವಯಂಚಾಲಿತಗೊಳಿಸಿದ ಮಾರ್ಗಗಳನ್ನು ಬಳಸಿಕೊಳ್ಳುವುದು ಸೇರಿದಂತೆ, ಸುಳ್ಳಿನಿಂದ ರಚಿಸುವುದು ಅಥವಾ ಸುಳ್ಳಿನಿಂದ ರಚಿಸುವಂತೆ ಇತರರನ್ನು ಕೋರುವುದು; (vi) ಸೇವೆಗಳಲ್ಲಿ ಒಂದು ಖಾತೆ ರಚಿಸಲು ಆಹ್ವಾನಿತರಿಗೆ ಹಣ ಪಾವತಿ ಮಾಡುವುದು ಅಥವಾ ಇತರ ಪ್ರಲೋಭನೆಗಳನ್ನು ಒಡ್ಡುವುದು; (vii) Snap ಅಥವಾ ಇನ್ನೊಬ್ಬ ವ್ಯಕ್ತಿಯ ಸೋಗು ಹಾಕಲು ಪ್ರಯತ್ನಿಸುವುದು, ಅಥವಾ Snap ಜೊತೆಗೆ ಸಹಭಾಗಿತ್ವ ಇದೆ ಎಂಬಂತೆ ಬಿಂಬಿಸುವುದು; (viii) ಯಾವುದೇ ಸಿಸ್ಟಂ, ಡೇಟಾ ಅಥವಾ ವೈಯಕ್ತಿಕ ಮಾಹಿತಿಯನ್ನು ಹಾನಿ ಮಾಡುವ, ಅದರಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಅದನ್ನು ರಹಸ್ಯವಾಗಿ ತಡೆಯುವ ಅಥವಾ ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಹೊಂದಿರುವ ಯಾವುದೇ ವೈರಸ್‌ಗಳು, ಟ್ರೋಜನ್ ಹಾರ್ಸ್‌ಗಳು, ವರ್ಮ್‌ಗಳು, ಟೈಮ್‌ ಬಾಂಬ್‌ಗಳು, ಕ್ಯಾನ್ಸಲ್‌ಬಾಟ್‌ಗಳು ಅಥವಾ ಇತರ ಕಂಪ್ಯೂಟರ್ ಪ್ರೊಗ್ರಾಮಿಂಗ್ ರೂಟೀನ್‌ಗಳನ್ನು ಒಳಗೊಂಡಿರುವ ಕಂಟೆಂಟ್ ಅನ್ನು ಕಳುಹಿಸುವುದು; ಅಥವಾ (ix) ತೃತೀಯ ಪಕ್ಷಗಳ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಅತಿಕ್ರಮಿಸುವ ಕಂಟೆಂಟ್ ಅನ್ನು ಕಳುಹಿಸುವುದು.

d. Snap ತನ್ನ ಸ್ವಂತ ವಿವೇಚನೆ ಮೇರೆಗೆ ನಿಮ್ಮ URL ಲಿಂಕ್‌ಗೆ ಸಂಬಂಧಪಡಿಸಲಾಗದ್ದು ಅಥವಾ ಒಂದು ಅಥವಾ ಹೆಚ್ಚಿನ ನಿಷೇಧಿತ ಚಟುವಟಿಕೆಗಳ ಮೂಲಕ ಸಂಭವಿಸಿದೆ ಎಂದು ನಿರ್ಧರಿಸುವ ಯಾವುದೇ ಸೈನ್ ಅಪ್‌ಗಳನ್ನು ಪರಿಗಣನೆಯಿಂದ ಹೊರಗಿಡಬಹುದು.

4. ರಿವಾರ್ಡ್ ಪ್ರೊಗ್ರಾಂ ಅವಧಿ

ರಿವಾರ್ಡ್ ಪ್ರೋಗ್ರಾಂ ಅವಧಿಗಳು ಯಾವುದೇ ನಗದು ಮೌಲ್ಯವನ್ನು ಹೊಂದಿರುವುದಿಲ್ಲ ಮತ್ತು ನಗದು ಅಥವಾ ಇತರ ಪ್ರಯೋಜನಗಳಿಗೆ ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ, ಅಥವಾ ಯಾವುದೇ ವ್ಯಕ್ತಿ ಅಥವಾ ಖಾತೆಗೆ ವರ್ಗಾಯಿಸಲು, ನಿಯೋಜಿಸಲು, ಮರುಉಡುಗೊರೆ ನೀಡಲು ಅಥವಾ ಮರುಮಾರಾಟ ಮಾಡಲು ಸಾಧ್ಯವಿಲ್ಲ. ನೀವು ಸ್ವೀಕರಿಸಲು ಅರ್ಹರಾಗಿರುವ ರಿವಾರ್ಡ್ ಪ್ರೊಗ್ರಾಂಗಳ ಸಂಖ್ಯೆಯನ್ನು Snap ಮಿತಿಗೊಳಿಸಬಹುದು ಅಥವಾ ತನ್ನ ಸ್ವಂತ ವಿವೇಚನೆ ಮೇರೆಗೆ ಇತರ ನಿರ್ಬಂಧಗಳನ್ನು ವಿಧಿಸಬಹುದು. ರಿವಾರ್ಡ್ ಪ್ರೊಗ್ರಾಂ ಅವಧಿ ಆರಂಭವಾದ ಬಳಿಕ ಈ Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು ಅಥವಾ ಕಮ್ಯುನಿಟಿ ಮಾರ್ಗಸೂಚಿಗಳನ್ನು ನೀವು ಉಲ್ಲಂಘಿಸಿದ್ದೀರಿ ಎಂಬುದು ನಮಗೆ ಕಂಡುಬರುವುದು ಸೇರಿದಂತೆ, ತನ್ನ ಸ್ವಂತ ವಿವೇಚನೆ ಮೇರೆಗೆ ಯಾವುದೇ ಸಮಯದಲ್ಲಿ ಯಾವುದೇ ರಿವಾರ್ಡ್ ಪ್ರೊಗ್ರಾಂ ಅವಧಿಗಳನ್ನು Snap ಹಿಂಪಡೆಯಬಹುದು ಅಥವಾ ರದ್ದುಮಾಡಬಹುದು.

5. Snapchat+ ರಿವಾರ್ಡ್ ಪ್ರೊಗ್ರಾಂ

a. ರಿವಾರ್ಡ್ ಆಗಿ Snapchat+ ಗೆ ಅರ್ಹರಾಗಲು (“Snapchat+ ರಿವಾರ್ಡ್ ಪ್ರೊಗ್ರಾಂ”), ನೀವು ಈ ಮುಂದಿನ ಮಾನದಂಡಗಳನ್ನು ಪೂರೈಸಬೇಕು: (i) ನೀವು ಈ ಹಿಂದೆ Snapchat+ ಗೆ ಸಬ್‌ಸ್ಕ್ರೈಬ್ ಮಾಡಿರಬಾರದು; ಮತ್ತು (ii) ನೀವು US ನಲ್ಲಿ ನೆಲೆಸಿರಬೇಕು. 

b. ಈ Snapchat ರೆಫರಲ್ ರಿವಾರ್ಡ್ ಪ್ರೊಗ್ರಾಂ ನಿಯಮಗಳು ಮತ್ತು ಅರ್ಹತಾ ಮಾನದಂಡಕ್ಕೆ ಒಳಪಟ್ಟು, ರಿವಾರ್ಡ್ ಆಗಿ ನೀವು ಸ್ವೀಕರಿಸುವ Snapchat+ ಆವೃತ್ತಿಯು ಸ್ನೇಹಿತರ ಪಾಸ್‌ಗಳು ಮತ್ತು ಉಚಿತ ಸ್ಟ್ರೀಕ್ ಮರುಸ್ಥಾಪನೆಯನ್ನು ಒಳಗೊಂಡಿರುವುದಿಲ್ಲ.