Snap ಭಂಡಾರ ನಿಯಮಗಳು

ಬಿಡುಗಡೆ ದಿನಾಂಕ: ಜೂನ್ 18, 2021

ಈ Snap ಭಂಡಾರ ನಿಯಮಗಳು ("ನಿಯಮಗಳು") ನೀವು ಮತ್ತು ಅಥವಾ ಈ ಮುಂದಿನ ಒಬ್ಬರೊಂದಿಗೆ ಕಾನೂನುಬದ್ಧವಾಗಿ ಬಾಧ್ಯತೆಯ ಒಪ್ಪಂದವನ್ನು ರಚಿಸುತ್ತದೆ (i) ಒಂದು ವೇಳೆ ನೀವು ಘಟಕವಾಗಿದ್ದು ವ್ಯವಹಾರದ ಪ್ರಧಾನ ಸ್ಥಳ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದರೆ Snap Inc.; ಅಥವಾ (ii) ಒಂದು ವೇಳೆ ನೀವು ಘಟಕವಾಗಿದ್ದು ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಯುನೈಟೆಡ್ ಸ್ಟೇಟ್ಸ್‌ ಹೊರಗಿದ್ದರೆ Snap Group Limited (“Snap”). ಈ ನಿಯಮಗಳು Snap ನ ಭಂಡಾರ ಮತ್ತು ಯಾವುದೇ ಸಾಫ್ಟ್‌ವೇರ್, API ಗಳು, ಡಾಕ್ಯುಮೆಂಟೇಶನ್, ಡೇಟಾ, ಕೋಡ್, ಮಾಹಿತಿ (Snap ಗೌಪ್ಯ ಮಾಹಿತಿ ಸೇರಿದಂತೆ), ಅಥವಾ ಭಂಡಾರದ ಮೂಲಕ ನಿಮಗೆ ಲಭ್ಯವಾಗಿಸಿದ ಇತರ ಸಾಮಗ್ರಿಗಳ (ಭಂಡಾರದೊಂದಿಗೆ, "Snap ಸ್ವತ್ತು") ನಿಮ್ಮ ಪ್ರವೇಶಿಸುವಿಕೆ ಮತ್ತು ಬಳಕೆಯನ್ನು ನಿಯಂತ್ರಿಸುತ್ತವೆ. ಈ ನಿಯಮಗಳಲ್ಲಿ ಬಳಸಿರುವಂತೆ, "ನೀವು" ಅಥವಾ "ನಿಮ್ಮ" ಅಂದರೆ "ಸ್ವೀಕರಿಸಿ" ಅಥವಾ "ಸಲ್ಲಿಸಿ" ಬಟನ್ ಕ್ಲಿಕ್ ಮಾಡುವ ಅಥವಾ ಇಲ್ಲದಿದ್ದಲ್ಲಿ Snap ಸ್ವತ್ತುಗಳನ್ನು ಪ್ರವೇಶಿಸುವ ಅಥವಾ ಬಳಸುವ ಪಕ್ಷ ಮತ್ತು ಪಕ್ಷವು ಯಾರ ಪರವಾಗಿ ಕಾರ್ಯನಿರ್ವಹಿಸುತ್ತಿದೆಯೋ ಅಂಥ ಯಾವುದೇ ಕಂಪನಿ, ಘಟಕ, ಅಥವಾ ಸಂಸ್ಥೆ. "ಸ್ವೀಕರಿಸಿ" ಅಥವಾ "ಸಲ್ಲಿಸಿ" ಕ್ಲಿಕ್ ಮಾಡುವ ಮೂಲಕ ಅಥವಾ ಇಲ್ಲದಿದ್ದಲ್ಲಿ Snap ಸ್ವತ್ತುಗಳನ್ನು ಪ್ರವೇಶಿಸುವ ಅಥವಾ ಬಳಸುವ ಮೂಲಕ ನೀವು ಈ ನಿಯಮಗಳಿಗೆ ಬದ್ಧರಾಗಿರಲು ಒಪ್ಪುತ್ತೀರಿ. ಯಾವುದೇ ಸಮಯದಲ್ಲಿ Snap ಈ ನಿಯಮಗಳನ್ನು ಅಪ್‌ಡೇಟ್ ಮಾಡಬಹುದು. ಅಂಥ ಯಾವುದೇ ಅಪ್‌ಡೇಟ್‌ಗಳ ಬಗ್ಗೆ Snap ನಿಮಗೆ ಸೂಚನೆ ನೀಡಬಹುದು ಮತ್ತು Snap ಸ್ವತ್ತಿನ ನಿಮ್ಮ ಮುಂದುವರಿದ ಪ್ರವೇಶಿಸುವಿಕೆ ಅಥವಾ ಬಳಕೆಯು ಅಂಥ ಅಪ್‌ಡೇಟ್‌ಗಳ ಸ್ವೀಕೃತಿ ಎಂದು ಪರಿಗಣಿಸಲ್ಪಡುತ್ತದೆ.

1. ಭಂಡಾರ

a. ಎಲ್ಲ Snap ಸ್ವತ್ತನ್ನು Snap ನ ಸ್ವಂತ ವಿವೇಚನೆ ಮೇರೆಗೆ ಈ ಮುಂದಿನ ಉದ್ದೇಶಗಳಿಗಾಗಿ ನಿಮಗೆ ಲಭ್ಯವಾಗಿಸಲಾಗಿದೆ ("ಉದ್ದೇಶ"): ಸಾಧನದ ಮೂಲ ಕ್ಯಾಮೆರಾಗೆ ಸಂಬಂಧಿಸಿದ ಅದರ ಫರ್ಮ್‌ವೇರ್ ಮತ್ತು ಸಾಫ್ಟ್‌ವೇರ್ ಸೇರಿದಂತೆ, ನಿಮ್ಮ ಸಾಧನದಿಂದ ಸಾಮರ್ಥ್ಯಗಳನ್ನು ಬಳಸಿಕೊಂಡು Snapchat ಮೊಬೈಲ್ ಅಪ್ಲಿಕೇಶನ್ ಒಳಗೆ ಹೊಸ ವೈಶಿಷ್ಟ್ಯಗಳ ಆಪ್ಟಿಮೈಸ್ ಮಾಡುವಿಕೆ ಮತ್ತು/ಅಥವಾ ಅಭಿವೃದ್ಧಿ ಮಾಡುವುದರಲ್ಲಿ Snap ಗೆ ಸಹಾಯ ಮಾಡುವುದಕ್ಕಾಗಿ ನಿಮಗೆ ಅವಕಾಶ ಕಲ್ಪಿಸಲು (ಪ್ರತಿಯೊಂದು "ಸಾಧನದ ಅನುಷ್ಠಾನ"). ಅಂಥ ಸಹಾಯವು, ಪ್ರತಿಕ್ರಿಯೆ ಅಥವಾ ಸಲಹೆಗಳನ್ನು ಒದಗಿಸುವುದು, ಮತ್ತು ಸೋರ್ಸ್‌ ಕೋಡ್ ಸೇರಿದಂತೆ, Snap ಗುಣಲಕ್ಷಣ ಸ್ವತ್ತುಗಳನ್ನು ಸುಧಾರಣೆ, ಪರೀಕ್ಷೆ, ಡಿಬಗ್ ಮಾಡುವಿಕೆ, ಅಥವಾ ಮಾರ್ಪಾಡು ಮಾಡುವುದು ಇವುಗಳನ್ನು ಒಳಗೊಂಡಿರಬಹುದು ಆದರೆ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ (ಸಮಗ್ರವಾಗಿ, "ಸೇವೆಗಳು").

b. ಒಂದು ವೇಳೆ ಯುನೈಟೆಡ್ ಸ್ಟೇಟ್ಸ್ ಕಾನೂನುಗಳಡಿ ಅಥವಾ ಅನ್ವಯವಾಗುವ ಇತರ ಯಾವುದೇ ಅಧಿಕಾರ ವ್ಯಾಪ್ತಿಯಡಿ, ನಿಮ್ಮನ್ನು Snap ಗುಣಲಕ್ಷಣ ಸ್ವತ್ತುಗಳನ್ನು ಬಳಸದಂತೆ ನಿರ್ಬಂಧಿಸಿದ್ದರೆ ನೀವು ಅದನ್ನು ಪ್ರವೇಶಿಸಬಾರದು ಅಥವಾ ಬಳಸಬಾರದು, ಉದಾಹರಣೆಗೆ, ಒಂದು ವೇಳೆ ನೀವು ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿದ್ದರೆ ಅಥವಾ ಯಾವುದೇ ಅಧಿಕಾರ ವ್ಯಾಪ್ತಿಯಲ್ಲಿ ಇತರ ಅದೇ ರೀತಿಯ ನಿಷೇಧವನ್ನು ಎದುರಿಸುತ್ತಿದ್ದರೆ.

c. Snap ಸ್ಪಷ್ಟವಾಗಿ ಲಿಖಿತ ರೂಪದಲ್ಲಿ (ಇಮೇಲ್ ಸಾಕಾಗುತ್ತದೆ) ಅಧಿಕಾರ ನೀಡುವ ನಿಮ್ಮ ಉದ್ಯೋಗಿಗಳು ಮಾತ್ರ ಸೇವೆಗಳನ್ನು ನಿರ್ವಹಿಸಬೇಕು ("ಅಧಿಕೃತ ಉದ್ಯೋಗಿಗಳು"). ಕನಿಷ್ಟ ಈ ನಿಮಯಗಳಲ್ಲಿ ಇರುವಷ್ಟೇ ನಿರ್ಬಂಧಿತವಾಗಿರುವ ಬಾಧ್ಯತೆಗಳೊಂದಿಗೆ ಅನುಸರಣೆ ಮಾಡಲು ಅಧಿಕೃತ ಉದ್ಯೋಗಿಗಳು ಲಿಖಿತ ರೂಪದಲ್ಲಿ ಸಮ್ಮತಿ ನೀಡಬೇಕಾಗುತ್ತದೆ. ಅಧಿಕೃತ ಉದ್ಯೋಗಿಗಳು ಎಲ್ಲ ಅನ್ವಯವಾಗುವ ನಿಯಮಗಳು, ನಿಬಂಧನೆಗಳು, ನೀತಿಗಳು ಮತ್ತು Snap ನ ಸೂಚನೆಗಳನ್ನು ಪಾಲಿಸುತ್ತಾರೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳುತ್ತೀರಿ. ಅಧಿಕೃತ ಉದ್ಯೋಗಿಗಳ ಪಟ್ಟಿಯಿಂದ Snap ಯಾವುದೇ ವ್ಯಕ್ತಿಯನ್ನು ಯಾವುದೇ ಸಮಯದಲ್ಲಿ ತೆಗೆದುಹಾಕಬಹುದು ಮತ್ತು ಅಂಥ ತೆಗೆದುಹಾಕುವಿಕೆಗೆ ನೀವು ಸಹಕಾರ ನೀಡುತ್ತೀರಿ.

d. Snap ಗುಣಲಕ್ಷಣ ಸ್ವತ್ತುಗಳ ಪ್ರವೇಶಿಸುವಿಕೆ ಮತ್ತು ಬಳಕೆಗಾಗಿ Snap ನಿಂದ ನಿಮಗೆ ಒದಗಿಸಿರುವ ಯಾವುದೇ ಕೀಗಳು, ಋಜುವಾತುಗಳು, ಪಾಸ್‌ವರ್ಡ್‌ಗಳು ಅಥವಾ ಪ್ರವೇಶಿಸುವಿಕೆ ಟೋಕನ್‌ಗಳನ್ನು ("ಋಜುವಾತುಗಳು") ನೀವು ರಕ್ಷಿಸಬೇಕು, ಗೌಪ್ಯವಾಗಿರಿಸಬೇಕು ಮತ್ತು ಹಂಚಿಕೊಳ್ಳಬಾರದು ಅಥವಾ ಇಲ್ಲದಿದ್ದಲ್ಲಿ ಅಧಿಕೃತ ಉದ್ಯೋಗಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ Snap ಗುಣಲಕ್ಷಣ ಸ್ವತ್ತುಗಳಿಗೆ ಪ್ರವೇಶವನ್ನು ಒದಗಿಸಬಾರದು. ಎಲ್ಲ Snap ಗುಣಲಕ್ಷಣ ಸ್ವತ್ತುಗಳ ಸುರಕ್ಷತೆ ಮತ್ತು ಗೌಪ್ಯತೆಯನ್ನು ರಕ್ಷಿಸಲು ಆಗ ಪ್ರಸ್ತುತವಾಗಿರುವ ಉದ್ಯಮ ಮಾನದಂಡಗಳಿಗೆ ಅನುಸಾರವಾಗಿ ನೀವು ತಾಂತ್ರಿಕ, ಭೌತಿಕ, ಮತ್ತು ಆಡಳಿತಾತ್ಮಕ ಸುರಕ್ಷತೆಗಳನ್ನು ಅನುಷ್ಠಾನಗೊಳಿಸುತ್ತೀರಿ ಮತ್ತು ನಿರ್ವಹಿಸುತ್ತೀರಿ. ಇದರ ಜೊತೆಗೆ, ಈ ಮುಂದಿನವುಗಳ ಬಗ್ಗೆ ನೀವು Snap ಗೆ ತಕ್ಷಣವೇ ಲಿಖಿತ ಸೂಚನೆಯನ್ನು ಒದಗಿಸಬೇಕು (i) ಯಾವುದೇ Snap ಗುಣಲಕ್ಷಣ ಸ್ವತ್ತು ಅಥವಾ ಋಜುವಾತುಗಳ ಅನಧಿಕೃತ ಬಳಕೆ, ಮರುಉತ್ಪಾದನೆ, ಬಹಿರಂಗಪಡಿಸುವಿಕೆ, ಮಾರ್ಪಾಡು, ಶೇಖರಣೆ, ನಾಶಪಡಿಸುವಿಕೆ, ಹಾಳುಮಾಡುವಿಕೆ, ಅಥವಾ ನಷ್ಟಕ್ಕೆ ಕಾರಣವಾಗುವ ಎಲ್ಲ ಘಟನೆಗಳು; ಮತ್ತು (ii) ಒಂದು ವೇಳೆ ಅಧಿಕೃತ ಉದ್ಯೋಗಿ ನಿಮ್ಮಲ್ಲಿ ಈಗ ಕೆಲಸ ಮಾಡುತ್ತಿಲ್ಲದಿದ್ದರೆ ಅಥವಾ ನಿಮ್ಮೊಂದಿಗೆ ತೊಡಗಿಕೊಂಡಿಲ್ಲದಿದ್ದರೆ ಮತ್ತು ಅಂಥ ಅಧಿಕೃತ ಉದ್ಯೋಗಿಯಿಂದ Snap ಗುಣಲಕ್ಷಣ ಸ್ವತ್ತುಗಳಿಗೆ ಇನ್ನು ಮುಂದೆ ಪ್ರವೇಶವನ್ನು ತಡೆಯುವುದಕ್ಕಾಗಿ ನಿಮ್ಮ ಋಜುವಾತುಗಳನ್ನು ಸುರಕ್ಷಿತಗೊಳಿಸುವ, ನಿಷ್ಕ್ರಿಯಗೊಳಿಸುವ ಮತ್ತು/ಅಥವಾ ಅಪ್‌ಡೇಟ್ ಮಾಡುವ ಅಗತ್ಯವಾದ ಮತ್ತು/ಅಥವಾ Snap ನಿಂದ ಅಗತ್ಯಪಡಿಸಿರುವ ಯಾವುದೇ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವ ಸಂದರ್ಭ. ನಿಮ್ಮ ಋಜುವಾತುಗಳನ್ನು ಬಳಸಿಕೊಂಡು ನಡೆಯುವ ಯಾವುದೇ ಚಟುವಟಿಕೆಗೆ ನೀವು ಜವಾಬ್ದಾರರಾಗಿರುತ್ತೀರಿ.

2. ಠೇವಣಿ ಸಾಮಗ್ರಿಗಳು

a. ಸಾಧನದ ಅನುಷ್ಠಾನದ ಬಳಿಕ ಸಮಂಜಸವಾಗಿ ಅಗತ್ಯವಿರುವಂತೆ ಅಥವಾ Snap ನಿಂದ ವಿನಂತಿಸಲ್ಪಟ್ಟಂತೆ, ಪರಸ್ಪರ ಒಪ್ಪಿರುವ ಎಲ್ಲವುಗಳ ಪರೀಕ್ಷೆ, ಅಭಿವೃದ್ಧಿ, ಏಕೀಕೃತಗೊಳಿಸುವಿಕೆ, ಅನುಷ್ಠಾನ, ಡೀಬಗ್ ಮಾಡುವಿಕೆ, ನಿರ್ವಹಣೆ, ಮತ್ತು ಬೆಂಬಲವನ್ನು ಸಕ್ರಿಯಗೊಳಿಸಲು, ಸಾಮಗ್ರಿಗಳಿಗೆ ಮಾಡಿದ ಮಾರ್ಪಾಡುಗಳು ಮತ್ತು ಅಪ್‌ಡೇಟ್‌ಗಳನ್ನು ಒಳಗೊಂಡು, SDK(ಗಳು), ಡಾಕ್ಯುಮೆಂಟೇಷನ್, ಮಾಹಿತಿ, ಡೇಟಾ, ತಂತ್ರಜ್ಞಾನ, ಮತ್ತು ಇತರ ಸಂಬಂಧಿತ ಸಾಮಗ್ರಿಗಳನ್ನು ಭಂಡಾರದಲ್ಲಿ ನೀವು ಠೇವಣಿ ಮಾಡುತ್ತೀರಿ ("ಠೇವಣಿ ಸಾಮಗ್ರಿಗಳು"). ಭಂಡಾರಕ್ಕೆ ಯಾವುದೇ ಸಾಮಗ್ರಿಗಳನ್ನು ಠೇವಣಿ ಮಾಡುವುದಕ್ಕೆ ಮುನ್ನ Snap ನ ಲಿಖಿತ ಅನುಮೋದನೆಯನ್ನು (ಇಮೇಲ್ ಸ್ವೀಕಾರಾರ್ಹವಾಗಿದೆ) ನೀವು ಪಡೆದುಕೊಳ್ಳುತ್ತೀರಿ.

b. ಸಾಧನದ ಅನುಷ್ಠಾನವನ್ನು ಬೆಂಬಲಿಸುವುದಕ್ಕಾಗಿ ಅಗತ್ಯವಿರುವಂತೆ ಮತ್ತು Snap ನ ಶಿಫಾರಸುಗಳಿಗೆ ಅನುಸಾರವಾಗಿ ಠೇವಣಿ ಮಾಡಿದ ಸಾಮಗ್ರಿಗಳನ್ನು ತಕ್ಷಣವೇ ಮಾರ್ಪಾಡು ಅಥವಾ ಅಪ್‌ಡೇಟ್ ಮಾಡುವುದಕ್ಕಾಗಿ ನೀವು ವಾಣಿಜ್ಯಾತ್ಮಕವಾಗಿ ಸಮಂಜಸವಾದ ಪ್ರಯತ್ನಗಳನ್ನು ಬಳಸುತ್ತೀರಿ. ಯಾವುದೇ ಠೇವಣಿ ಸಾಮಗ್ರಿಗಾಗಿ ಸೋರ್ಸ್‌ ಕೋಡ್‌ಗೆ ಅಪ್‌ಡೇಟ್‌ಗಳನ್ನು ನೀವು ಭಂಡಾರದ ಹೊರಗೆ ಮಾಡುತ್ತೀರಿ ಮತ್ತು ಒಮ್ಮೆ ಅಪ್‌ಡೇಟ್ ಮಾಡಿದ ಬಳಿಕ, ಹಿಂದಿನ ಆವೃತ್ತಿಗೆ ಬದಲಾಗಿ ಭಂಡಾರದಲ್ಲಿ ಠೇವಣಿ ಮಾಡಲಾಗುತ್ತದೆ.

c. ಪರೀಕ್ಷೆ, ಅಭಿವೃದ್ಧಿ, ಏಕೀಕೃತಗೊಳಿಸುವಿಕೆ, ಡೀಬಗ್ ಮಾಡುವಿಕೆ, ನಿರ್ವಹಣೆ, ಮತ್ತು ಎಲ್ಲ ಸಾಧನ ಅನುಷ್ಠಾನಗಳ ಬೆಂಬಲಿಸುವಿಕೆ ಸೇರಿದಂತೆ, ಉದ್ದೇಶಕ್ಕೆ ಸಂಬಂಧಿಸಿ ಠೇವಣಿ ಸಾಮಗ್ರಿಗಳನ್ನು ಬಳಸಲು ಅನನ್ಯವಲ್ಲದ, ಶಾಶ್ವತವಾದ, ವಿಶ್ವವ್ಯಾಪಿಯಾದ, ರಾಯಲ್ಟಿ-ಮುಕ್ತ ಪರವಾನಗಿಯನ್ನು ನೀವು Snap ಮತ್ತು ಅದರ ಅಂಗಸಂಸ್ಥೆಗಳಿಗೆ ಮಂಜೂರು ಮಾಡುತ್ತೀರಿ.

d. ನಿಮ್ಮ ಪೂರ್ವ ಲಿಖಿತ ಸಮ್ಮತಿಯಿಲ್ಲದೆ ಠೇವಣಿ ಸಾಮಗ್ರಿಗಳನ್ನು ಮಾರ್ಪಾಡು, ರಿವರ್ಸ್ ಎಂಜಿನಿಯರ್, ಅಥವಾ ಡಿಕಂಪೈಲ್ ಮಾಡುವುದಿಲ್ಲ ಎಂದು Snap ಒಪ್ಪಿಕೊಳ್ಳುತ್ತದೆ.

3. Snap ಗುಣಲಕ್ಷಣ ಸ್ವತ್ತು; ನಿರ್ಬಂಧಗಳು

a. ಈ ನಿಯಮಗಳಿಗೆ ಒಳಪಟ್ಟು, ಅಧಿಕೃತ ಉದ್ಯೋಗಿಗಳ ಮೂಲಕ ಆಂತರಿಕವಾಗಿ ಸೀಮಿತವಾದ, ಅನನ್ಯವಲ್ಲದ, ವರ್ಗಾವಣೆ ಮಾಡಲಾಗದ, ಉಪಪರವಾನಗಿ ನೀಡಲಾಗದ ಹಿಂಪಡೆಯಬಹುದಾದ ಪರವಾನಗಿಯನ್ನು Snap ನಿಮಗೆ ಮಂಜೂರು ಮಾಡುತ್ತದೆ: (i) ಉದ್ದೇಶವನ್ನು ನಿರ್ವಹಿಸುವುದಕ್ಕಾಗಿ Snap ಗುಣಲಕ್ಷಣಗಳ ಸ್ವತ್ತುಗಳನ್ನು ಬಳಸಲು ಮತ್ತು ಪ್ರವೇಶಿಸಲು; ಮತ್ತು (ii) Snap ಪರವಾಗಿ ಮತ್ತು ಅದರ ಪ್ರಯೋಜನದ ಉದ್ದೇಶಕ್ಕಾಗಿ ಮಾತ್ರ ಹಾಗೂ Snap ಗುಣಲಕ್ಷಣ ಸ್ವತ್ತುಗಳೊಂದಿಗೆ ಸೇರಿಸಲಾಗಿರುವ ಅಥವಾ ಒದಗಿಸಲಾಗಿರುವ ಅಥವಾ ಕಾಲಕಾಲಕ್ಕೆ Snap ನಿಂದ ಒದಗಿಸಲಾಗುವ ದಾಖಲೆಗಳು ಮತ್ತು ನಿರ್ದಿಷ್ಟತೆಗಳ ಜೊತೆ ಅನುಸರಣೆಯಲ್ಲಿ, ಒಂದು ಸಾಧನದ ಅನುಷ್ಠಾನವನ್ನು ಪರೀಕ್ಷಿಸಲು, ಅಭಿವೃದ್ಧಿಪಡಿಸಲು, ಏಕೀಕೃತಗೊಳಿಸಲು, ಅನುಷ್ಠಾನಗೊಳಿಸಲು, ಡೀಬಗ್ ಮಾಡಲು, ನಿರ್ವಹಿಸಲು, ಮತ್ತು ಬೆಂಬಲಿಸಲು ಅಗತ್ಯ ಇರುವ ಮಟ್ಟಿಗಾಗಿ ಮಾತ್ರ Snap ಗುಣಲಕ್ಷಣ ಸ್ವತ್ತುಗಳನ್ನು ಪ್ರವೇಶಿಸಲು, ಬಳಸಲು, ಮತ್ತು ಮಾರ್ಪಾಡು ಮಾಡಲು.

b. ಈ ಕೆಳಗಿನವುಗಳನ್ನು ಮಾಡುವುದಿಲ್ಲ ಎಂದು ನೀವು ಒಪ್ಪುತ್ತೀರಿ:

i. ಭಂಡಾರದ ಹೊರಗೆ Snap ಗುಣಲಕ್ಷಣ ಸ್ವತ್ತುಗಳ ಪ್ರವೇಶಿಸುವಿಕೆ, ಅವುಗಳ ಮೇಲೆ ಕಾರ್ಯನಿರ್ವಹಣೆ, ವರ್ಗಾವಣೆ, ಅಥವಾ ನಕಲಿಸುವಿಕೆ;

ii. ಈ ನಿಯಮಗಳ ಅಡಿಯಲ್ಲಿ ಸ್ಪಷ್ಟವಾಗಿ ಅನುಮತಿಸಿದವುಗಳನ್ನು ಹೊರತುಪಡಿಸಿ Snap ಗುಣಲಕ್ಷಣ ಸ್ವತ್ತುಗಳ ಮಾರಾಟ, ಬಾಡಿಗೆಗೆ ನೀಡುವಿಕೆ, ಭೋಗ್ಯಕ್ಕೆ ನೀಡುವಿಕೆ, ಉಪಪರವಾನಗಿ ನೀಡುವಿಕೆ, ನಿಯೋಜಿಸುವಿಕೆ, ಸಮೂಹ ನಿಯಂತ್ರಣ, ಮಾರ್ಪಾಡು, ರಿವರ್ಸ್ ಎಂಜಿನಿಯರ್, ಡಿಕಂಪೈಲ್, ನಕಲಿಸುವಿಕೆ, ಮರುಉತ್ಪಾದನೆ, ಗುತ್ತಿಗೆ ನೀಡುವಿಕೆ, ಬಹಿರಂಗಪಡಿಸುವಿಕೆ, ವಿತರಣೆ, ವರ್ಗಾವಣೆ, ಪ್ರತಿರೂಪ ಕಾರ್ಯಗಳ ಸೃಷ್ಟಿಸುವಿಕೆ, ಅಥವಾ ಇಲ್ಲದಿದ್ದಲ್ಲಿ ಬಳಕೆ;

iii. ಯಾವುದೇ Snap ಗುಣಲಕ್ಷಣ ಸ್ವತ್ತುಗಳ ಅಥವಾ Snapchat ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆಗೆ ಅನಧಿಕೃತ ಪ್ರವೇಶಾವಕಾಶ ಅನುಮತಿಸುವ, ನಿಷ್ಕ್ರಿಯಗೊಳಿಸುವ, ಹಾನಿಗೊಳಿಸುವ, ಅಳಿಸುವ, ಅಡಚಣೆ ಉಂಟುಮಾಡುವ, ಅಥವಾ ಸಾಮಾನ್ಯ ಕಾರ್ಯಾಚರಣೆಗೆ ಬಾಧೆ ಉಂಟುಮಾಡುವ ಯಾವುದೇ "ಬ್ಯಾಕ್ ಡೋರ್", "ಟೈಮ್ ಬಾಂಬ್", "ಟ್ರೋಜನ್ ಹಾರ್ಸ್", "ವರ್ಮ್", "ಡ್ರಾಪ್ ಡೆಡ್ ಡಿವೈಸ್", "ವೈರಸ್", "ಸ್ಪೈವೇರ್", ಅಥವಾ "ಮಾಲ್‌ವೇರ್‌", ಅಥವಾ ಯಾವುದೇ ಕಂಪ್ಯೂಟರ್ ಕೋಡ್ ಅಥವಾ ಸಾಫ್ಟ್‌ವೇರ್ ರುಟೀನ್ ("ದುರುದ್ದೇಶಪೂರಿತ ಕೋಡ್") ಅನ್ನು Snap ಗುಣಲಕ್ಷಣ ಸ್ವತ್ತುಗಳಲ್ಲಿ ಪ್ರಸರಣ ಮಾಡುವಿಕೆ;

iv. Snap ಗುಣಲಕ್ಷಣ ಸ್ವತ್ತುಗಳು, ಅಥವಾ ಅವುಗಳ ಯಾವುದೇ ಪ್ರತಿರೂಪಗಳನ್ನು ಸೋರ್ಸ್ ಕೋಡ್‌ಗಳಾಗಿ ಬಹಿರಂಗಪಡಿಸಬೇಕು ಅಥವಾ ವಿತರಿಸಬೇಕು, ಅಂಥ ಸಾಫ್ಟ್‌ವೇರ್‌ನ ಪ್ರತಿರೂಪಗಳನ್ನು ತಯಾರಿಸುವ ಉದ್ದೇಶಕ್ಕಾಗಿ ಪರವಾನಗಿ ನೀಡಬೇಕು, ಅಥವಾ ಉಚಿತವಾಗಿ ಮರುವಿತರಣೆ ಮಾಡಬೇಕು ಎನ್ನುವ ಬಾಧ್ಯತೆಗಳು ಸೇರಿದಂತೆ, ಅಂಥ ಓಪನ್ ಸೋರ್ಸ್ ಸಾಫ್ಟ್‌ವೇರ್‌ಗೆ ಸಂಬಂಧಿಸಿ, Snap ಗುಣಲಕ್ಷಣ ಸ್ವತ್ತು ಅಥವಾ ಅದರ ಯಾವುದೇ ಪ್ರತಿರೂಪಗಳನ್ನು, ಸಂಪೂರ್ಣವಾಗಿ ಅಥವಾ ಭಾಗಶಃ ರೂಪದಲ್ಲಿ, ಪರವಾನಗಿ ಅಥವಾ ಇತರ ಬೌದ್ಧಿಕ ಸ್ವತ್ತು-ಸಂಬಂಧಿತ ನಿಯಮಗಳ ಬಾಧ್ಯತೆಗಳಿಗೆ ಒಳಪಡಿಸಬೇಕಾಗುವುದಕ್ಕೆ ಕಾರಣವಾಗುವ ಯಾವುದೇ ಓಪನ್‌ ಸೋರ್ಸ್ ಸಾಫ್ಟ್‌ವೇರ್‌ನೊಂದಿಗೆ ಅಳವಡಿಸುವುದು, ಸಂಯೋಜಿಸುವುದು, ಅಥವಾ ಇಲ್ಲದಿದ್ದಲ್ಲಿ Snap ಗುಣಲಕ್ಷಣ ಸ್ವತ್ತುಗಳನ್ನು ಅದರೊಂದಿಗೆ ವಿತರಿಸುವಂತೆ ಮಾಡುವುದು;

v. ಡೆಲಿವರೇಬಲ್‌ಗಳ ಜೊತೆಗೆ ಯಾವುದೇ ಬೌದ್ಧಿಕ ಸ್ವತ್ತು ಅಥವಾ ಸಾಮಗ್ರಿಗಳನ್ನು ಅಳವಡಿಸುವುದು ಅಥವಾ ಇಲ್ಲದಿದ್ದಲ್ಲಿ ತೃತೀಯ ಪಕ್ಷದ ಬೌದ್ಧಿಕ ಸ್ವತ್ತಿನ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಭಂಗಪಡಿಸುವ ಡಿಪಾಸಿಟ್ ಮೆಟೀರಿಯಲ್‌ಗಳ ಜೊತೆ Snap ಅನ್ನು ಒದಗಿಸುವಿಕೆ;

vi. Snap ಅಥವಾ Snap ನ ಯಾವುದೇ ಅಂಗಸಂಸ್ಥೆಗಳ ವಿರುದ್ಧ ಯಾವುದೇ ಸಂಭಾವ್ಯ ಪೇಟೆಂಟ್ ಉಲ್ಲಂಘನೆ ಕ್ಲೈಮ್‌ಗಳನ್ನು ಬೆಂಬಲಿಸಲು ಸಾಕ್ಷ್ಯವನ್ನು ಗುರುತಿಸುವ ಅಥವಾ ಒದಗಿಸುವ ಉದ್ದೇಶಕ್ಕಾಗಿ Snap ಗುಣಲಕ್ಷಣಗಳ ಬಳಕೆ;

vii. Snap ಗುಣಲಕ್ಷಣ ಸ್ವತ್ತುಗಳ ಯಾವುದೇ ಭಾಗದಲ್ಲಿ ಕಾಣಿಸಬಹುದಾದ ಕೃತಿಸ್ವಾಮ್ಯ ಸೂಚನೆ ಅಥವಾ ಇತರ ಸ್ವಾಮ್ಯದ ಸೂಚನೆಗಳನ್ನು ಬದಲಾಯಿಸುವಿಕೆ ಅಥವಾ ತೆಗೆದುಹಾಕುವಿಕೆ; ಅಥವಾ

viii. ಯಾವುದೇ Snap ಅಪ್ಲಿಕೇಶನ್‌ಗಳು, ಉತ್ಪನ್ನಗಳು ಅಥವಾ ಸೇವೆಗಳೊಂದಿಗೆ ಸ್ಪರ್ಧಿಸುವುದಕ್ಕೆ ಅಥವಾ ಪ್ರತಿರೂಪ ಸೃಷ್ಟಿಸುವುದಕ್ಕೆ, ಬಳಸುವುದು ಅಥವಾ ಬಳಸಲು ಯಾವುದೇ ತೃತೀಯ ಪಕ್ಷಕ್ಕೆ ಅನುಮತಿಸುವುದು.

4. ಮಾಲೀಕತ್ವ

a. ಎಲ್ಲ Snap ಗುಣಲಕ್ಷಣ ಸ್ವತ್ತು Snap ಮತ್ತು ಅದರ ಅನ್ವಯವಾಗುವ ತೃತೀಯ-ಪಕ್ಷದ ಪರವಾನಗಿದಾರರ ಸ್ವಂತ ಸ್ವತ್ತಾಗಿದೆ ಮತ್ತು ಸ್ವತ್ತಾಗಿ ಉಳಿಯುತ್ತದೆ ಹಾಗೂ ಈ ನಿಯಮಗಳ ಅನುಸಾರ ಉದ್ದೇಶಕ್ಕಾಗಿ ಮಾತ್ರ ನಿಮ್ಮಿಂದ ಬಳಸಲ್ಪಡುತ್ತದೆ. ಎಲ್ಲ ಠೇವಣಿ ಸಾಮಗ್ರಿಗಳು ನಿಮ್ಮ ಮತ್ತು ನಿಮ್ಮ ಅನ್ವಯವಾಗುವ ತೃತೀಯ-ಪಕ್ಷದ ಪರವಾನಗಿದಾರರ ಸ್ವತ್ತುಗಳಾಗಿವೆ ಹಾಗೂ ಸ್ವತ್ತುಗಳಾಗಿ ಉಳಿಯಲಿವೆ ಮತ್ತು ಈ ನಿಯಮಗಳ ಅನುಸಾರವಾಗಿ ಉದ್ದೇಶಕ್ಕಾಗಿ ಮಾತ್ರ Snap ನಿಂದ ಬಳಸಲ್ಪಡುತ್ತದೆ. ಈ ನಿಯಮಗಳಲ್ಲಿ ಹೇಳಿರುವುದನ್ನು ಹೊರತುಪಡಿಸಿ, ಯಾವುದನ್ನೂ ಕೂಡ ನಿಮಗೆ ಯಾವುದೇ Snap ಸ್ವತ್ತಿನ ಅಥವಾ Snap ಗೆ ಯಾವುದೇ ಠೇವಣಿ ಸಾಮಗ್ರಿಗಳ ಮಾಲೀಕತ್ವ ಹಕ್ಕು, ಅಥವಾ ಪರವಾನಗಿಯನ್ನು ಮಂಜೂರು ಮಾಡುತ್ತದೆ ಎಂದು ಅರ್ಥೈಸುವಂತಿಲ್ಲ. ಈ ನಿಯಮಗಳ ಅಡಿಯಲ್ಲಿ ಸ್ಪಷ್ಟವಾಗಿ ಮಂಜೂರು ಮಾಡಿಲ್ಲದ ಪ್ರತಿ ಪಕ್ಷದ ಎಲ್ಲ ಹಕ್ಕುಗಳನ್ನು ಆ ಪಕ್ಷ ಸ್ಪಷ್ಟವಾಗಿ ಮೀಸಲಾಗಿರಿಸಿದೆ.

b. ಯಾವುದೇ: (i) ನಿಮ್ಮಿಂದ ಅಥವಾ ನಿಮ್ಮ ಪರವಾಗಿ ರಚಿಸಲ್ಪಟ್ಟ Snap ಗುಣಲಕ್ಷಣ ಸ್ವತ್ತಿನ ಸುಧಾರಣೆಗಳು, ಮಾರ್ಪಾಡುಗಳು, ಅಥವಾ ಅದಕ್ಕೆ ಅಪ್‌ಡೇಟ್‌ಗಳು ಅಥವಾ ಪ್ರತಿರೂಪ ಕಾರ್ಯಗಳು; ಮತ್ತು (ii) ಸೇವೆಗಳಿಂದ ಇತರ ಫಲಿತಾಂಶಗಳು, ("ಡೆಲಿವರೇಬಲ್‌ಗಳು") "ಬಾಡಿಗೆಗಾಗಿ ಮಾಡಿದ ಕೆಲಸ" (U.S. ಕೃತಿಸ್ವಾಮ್ಯ ಕಾಯ್ದೆಯಡಿ ವ್ಯಾಖ್ಯಾನಿಸಿರುವಂತೆ) ಆಗಿರುತ್ತದೆ ಮತ್ತು Snap ಗುಣಲಕ್ಷಣ ಸ್ವತ್ತಾಗಿರುತ್ತದೆ. ಅನ್ವಯವಾಗುವ ಕಾನೂನಿನಡಿ "ಬಾಡಿಗೆಗಾಗಿ ಮಾಡಿದ ಕೆಲಸ" ಎಂದು ಯಾವುದೇ ಡೆಲಿವರೇಬಲ್‌ಗಳನ್ನು ಪರಿಗಣಿಸಲು ಸಾಧ್ಯವಾಗದಿರುವ ಮಟ್ಟಿಗೆ, ಡೆಲಿವರೇಬಲ್‌ಗಳಲ್ಲಿನ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಹಕ್ಕುಗಳು, ಶೀರ್ಷಿಕೆ ಮತ್ತು ಹಿತಾಸಕ್ತಿಗಳನ್ನು ಹಾಗೂ ಡೆಲಿವರೇಬಲ್‌ಗಳ ಒಳಗಿರುವ ಎಲ್ಲ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀವು Snap ಗೆ ನಿಯೋಜಿಸುತ್ತೀರಿ. ನೀವು ಎಲ್ಲ ದಾಖಲೆಗಳನ್ನು ಜಾರಿ ಮಾಡುತ್ತೀರಿ ಹಾಗೂ ಈ ವಿಭಾಗದಡಿ Snap ನ ಬೌದ್ಧಿಕ ಆಸ್ತಿ ಹಕ್ಕುಗಳನ್ನು Snap ರಕ್ಷಿಸುವುದಕ್ಕಾಗಿ ಮತ್ತು ಜಾರಿ ಮಾಡುವುದಕ್ಕಾಗಿ, Snap ನ ವೆಚ್ಚದಲ್ಲಿ, Snap ಸಮಂಜಸವಾಗಿ ವಿನಂತಿಸಬಹುದಾದ ಇತರ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ.

c. ಪ್ರತಿ ಸಂದರ್ಭದಲ್ಲೂ Snap ನ ಸ್ಪಷ್ಟ ಪೂರ್ವ ಲಿಖಿತ ಅನುಮೋದನೆಯಿಲ್ಲದೆ ಯಾವುದೇ ಸನ್ನಿವೇಶದಲ್ಲೂ ನೀವು ಡೆಲಿವರೇಬಲ್‌ಗಳಲ್ಲಿ ಯಾವುದೇ ತೃತೀಯ-ಪಕ್ಷದ ಕೋಡ್, ಸಾಫ್ಟ್‌ವೇರ್, ಅಥವಾ ಸಾಮಗ್ರಿಗಳನ್ನು ಸೇರಿಸುವುದಿಲ್ಲ. ಮೇಲಿನ ವಿಭಾಗ 4.b ಅನುಸಾರವಾಗಿ "ಬಾಡಿಗೆಗಾಗಿ ಮಾಡಿದ ಕೆಲಸ" ಎಂದು ನಿಯೋಜಿಸಲಾಗದ ಅಥವಾ ಪರಿಗಣಿಸಲಾಗದ ನಿಮ್ಮ ಮುಂಚಿತವಾಗಿ ಇದ್ದ ಬೌದ್ಧಿಕ ಆಸ್ತಿ ಅಥವಾ ತೃತೀಯ ಪಕ್ಷದ ಬೌದ್ಧಿಕ ಆಸ್ತಿಯನ್ನು ನೀವು ಡೆಲಿವರೇಬಲ್‌ಗಳಲ್ಲಿ ಅಳವಡಿಸಿದ ಸಂದರ್ಭದಲ್ಲಿ, ಅದನ್ನು ಬಳಸಲು, ಆರ್ಕೈವ್ ಮಾಡಲು, ನಕಲಿಸಲು, ಕ್ಯಾಶೆ ಮಾಡಲು, ಎನ್‌ಕೋಡ್ ಮಾಡಲು, ಶೇಖರಿಸಲು, ಮರುಉತ್ಪಾದಿಸಲು, ವಿತರಿಸಲು, ಪ್ರಸರಣ ಮಾಡಲು, ಸಿಂಕ್ರೊನೈಸ್ ಮಾಡಲು, ಸಾರ್ವಜನಿಕವಾಗಿ ಪ್ರದರ್ಶಿಸಲು, ಮತ್ತು ಅವುಗಳನ್ನು "ಬಾಡಿಗೆಗಾಗಿ ಮಾಡಿದ ಕೆಲಸ" ಎಂಬಂತೆ ಪರಿಗಣಿಸಿ ಡೆಲಿವರೇಬಲ್‌ಗಳಲ್ಲಿ ಅವುಗಳ ಪೂರ್ಣ ಬಳಕೆ ಮಾಡಿಕೊಳ್ಳುವುದಕ್ಕಾಗಿ ಡೆಲಿವರೇಬಲ್‌ಗಳಲ್ಲಿ ಇರುವ ಬೌದ್ಧಿಕ ಆಸ್ತಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದಕ್ಕೆ ಅನನ್ಯವಲ್ಲದ, ಶಾಶ್ವತವಾದ, ರಾಯಲ್ಟಿ ಮುಕ್ತ, ಹಿಂಪಡೆಯಲಾಗದ, ವಿಶ್ವವ್ಯಾಪಿಯಾದ, ವರ್ಗಾವಣೆ ಮಾಡಬಹುದಾದ, ಉಪಪರವಾನಗಿ ನೀಡಬಹುದಾದ, ಪೂರ್ಣ ಪಾವತಿಸಿದ ಪರವಾನಗಿಯನ್ನು ನೀವು Snap ಮತ್ತು ಅದರ ಅಂಗಸಂಸ್ಥೆಗಳಿಗೆ ಮಂಜೂರು ಮಾಡುತ್ತೀರಿ.

d. ಒಂದು ವೇಳೆ ಉಭಯ ಪಕ್ಷಗಳಲ್ಲಿ ಯಾರಾದರೂ ತಮ್ಮ ಸಂಬಂಧಿತ ಉತ್ಪನ್ನಗಳು ಅಥವಾ ಸೇವೆಗಳ ಕುರಿತು ಮತ್ತೊಬ್ಬರಿಗೆ ಯಾವುದೇ ಕಾಮೆಂಟ್‌ಗಳು, ಸಲಹೆಗಳು, ವಿಚಾರಗಳು, ಸುಧಾರಣೆಗಳು, ಅಥವಾ ಪ್ರತಿಕ್ರಿಯೆ (ಸಮಗ್ರವಾಗಿ "ಪ್ರತಿಕ್ರಿಯೆ") ನೀಡಲು ಬಯಸಿದರೆ, ಅಂಥ ಪ್ರತಿಕ್ರಿಯೆಯನ್ನು ಇರುವಂತೆ ಒದಗಿಸಲಾಗುತ್ತದೆ ಮತ್ತು ಪ್ರತಿಕ್ರಿಯೆಯನ್ನು ಸ್ವೀಕರಿಸುವ ಪಕ್ಷವು ಪ್ರತಿಕ್ರಿಯೆಯನ್ನು ಒದಗಿಸಿದ ಪಕ್ಷಕ್ಕೆ ಗೌಪ್ಯತೆಯ, ಆರೋಪಣದ, ಪರಿಹಾರದ, ಅಥವಾ ಇತರ ಕರ್ತವ್ಯದ ಯಾವುದೇ ಬಾಧ್ಯತೆಗಳಿಲ್ಲದೆ ತನ್ನ ಸ್ವಂತ ಹೊಣೆಗಾರಿಕೆಯ ಮೇಲೆ ಆ ಪ್ರತಿಕ್ರಿಯೆಯನ್ನು ಬಳಸಬಹುದು.

5. ಗೌಪ್ಯತೆ

a. ನೇರವಾಗಿ ಅಥವಾ ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ತೃತೀಯ ಪಕ್ಷದಿಂದ ಗೌಪ್ಯ ಮಾಹಿತಿಯನ್ನು ಸ್ವೀಕರಿಸುವ ("ಸ್ವೀಕೃತಿದಾರ") ಪಕ್ಷವು: (i) ಗೌಪ್ಯತೆಯ ಮಾಹಿತಿಯನ್ನು ಬಹಿರಂಗಪಡಿಸುವ ಪಕ್ಷವು, ಒಂದೋ ನೇರವಾಗಿ ಅಥವಾ ಆ ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ತೃತೀಯ ಪಕ್ಷದಿಂದ ("ಬಹಿರಂಗಪಡಿಸುವವರು") ಲಿಖಿತ ರೂಪದಲ್ಲಿ ಸಮ್ಮತಿ ಸೂಚಿಸದ ಹೊರತು, ಉದ್ದೇಕ್ಕಾಗಿ ಮಾತ್ರ ಗೌಪ್ಯ ಮಾಹಿತಿಯನ್ನು ಬಳಸುತ್ತದೆ; (ii) ತನ್ನ ಮತ್ತು ತನ್ನ ಅಂಗಸಂಸ್ಥೆಗಳ ನಿರ್ದೇಶಕರು, ಉದ್ಯೋಗಿಗಳು, ಗುತ್ತಿಗೆದಾರರು, ಏಜೆಂಟರು, ಮತ್ತು ತಿಳಿದುಕೊಳ್ಳಬೇಕಾದ ಅಗತ್ಯವಿರುವ ಹಾಗೂ ಕನಿಷ್ಟ ಈ ನಿಯಮಗಳಲ್ಲಿರುವಷ್ಟು ನಿರ್ಬಂಧಿತವಾದ ಗೌಪ್ಯತೆಯ ಬಾಧ್ಯತೆಗಳಿಗೆ ಒಳಪಟ್ಟಿರುವ ವೃತ್ತಿಪರ ಸಲಹೆಗಾರರನ್ನು ("ಪ್ರತಿನಿಧಿಗಳು") ಹೊರತುಪಡಿಸಿ ಬೇರೆ ಯಾರಿಗೂ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವಿಕೆ, ವಿತರಣೆ ಅಥವಾ ಇಲ್ಲದಿದ್ದಲ್ಲಿ ಪ್ರಸಾರ ಮಾಡುವುದಿಲ್ಲ; (iii) ಸ್ವೀಕೃತಿದಾರರು ಸಮಂಜಸ ಕಾಳಜಿ ವಹಿಸಬೇಕು ಎನ್ನುವುದನ್ನು ಹೊರತುಪಡಿಸಿ, ಕನಿಷ್ಟ ಅದೇ ಸ್ವರೂಪದ ತನ್ನ ಸ್ವಂತ ಗೌಪ್ಯ ಮಾಹಿತಿಯನ್ನು ರಕ್ಷಿಸಲು ಅದು ಬಳಸುವ ಮಟ್ಟದ ಕಾಳಜಿಯೊಂದಿಗೆ ಗೌಪ್ಯ ಮಾಹಿತಿಯನ್ನು ರಕ್ಷಿಸುತ್ತದೆ; (iv) ಗೌಪ್ಯ ಮಾಹಿತಿ ಕಳೆದುಹೋಗಿದೆ, ದೃಢೀಕರಣವಿಲ್ಲದೆ ಬಳಸಲಾಗಿದೆ, ಅಥವಾ ದೃಢೀಕರಣವಿಲ್ಲದೆ ಬಹಿರಂಗಪಡಿಸಲಾಗಿದೆ ಎನ್ನುವುದು ಕಂಡುಬಂದಾಗ ತಕ್ಷಣವೇ ಬಹಿರಂಗಪಡಿಸುವವರಿಗೆ ಸೂಚನೆ ನೀಡುತ್ತದೆ; ಮತ್ತು (v) ಈ ವಿಭಾಗ 5 ಅನ್ನು ತನ್ನ ಯಾವುದೇ ಪ್ರತಿನಿಧಿಗಳು ಉಲ್ಲಂಘಿಸಿದಾಗ ಜವಾಬ್ದಾರಿಯುತವಾಗಿ ವರ್ತಿಸುತ್ತದೆ. "ಗೌಪ್ಯ ಮಾಹಿತಿ" ಎಂದರೆ (A) ಉದ್ದೇಶಕ್ಕೆ ಸಂಬಂಧಿಸಿ ಸ್ವೀಕರಿಸುವವರು ಅಥವಾ ಅದರ ಅಂಗಸಂಸ್ಥೆಗಳಿಗೆ ಬಹಿರಂಗಪಡಿಸುವವರು ಅಥವಾ ಅದರ ಅಂಗಸಂಸ್ಥೆಗಳು ಬಹಿರಂಗಪಡಿಸುವ ಯಾವುದೇ ಗೌಪ್ಯ ಅಥವಾ ಸ್ವಾಮ್ಯದ ಮಾಹಿತಿ; (B) ಈ ನಿಯಮಗಳು; (C) ಪಕ್ಷಗಳ ನಡುವೆ ಸಂಬಂಧ ಇರುವಿಕೆ; (D) Snap ಗುಣಲಕ್ಷಣ ಸ್ವತ್ತು ಮತ್ತು ಋಜುವಾತುಗಳು; ಅಥವಾ (E) ಬಹಿರಂಗಪಡಿಸುವವರಿಗೆ ಗೌಪ್ಯವಾಗಿರುವ ಅಥವಾ ಸಮಂಜಸವಾಗಿ ಗೌಪ್ಯ ಎಂದು ತಿಳಿಯಬಹುದಾದ, ಬಹಿರಂಗಪಡಿಸಿದ, ಪ್ರವೇಶಿಸಿದ, ಸಂಗ್ರಹಣೆ ಮಾಡಿದ, ಅಥವಾ ಸಂಗ್ರಹಿಸಿದವುಗಳಿಗೆ (ಪ್ರತಿ ಪ್ರಕರಣದಲ್ಲಿ, ಬಹಿರಂಗಪಡಿಸಿದವರಿಂದ ಅಥವಾ ಅವರ ಪರವಾಗಿ) ಸಂಬಂಧಿಸಿದ ಇತರ ಯಾವುದೇ ಮಾಹಿತಿ.

b. Snap ಗುಣಲಕ್ಷಣ ಸ್ವತ್ತುಗಳಿಗೆ ಹೊರತುಪಡಿಸಿ, ವಿಭಾಗ 5.a ಅಡಿಯಲ್ಲಿ ಸ್ವೀಕರಿಸುವವರ ಬಾಧ್ಯತೆಗಳು, ಕಾನೂನುಬದ್ಧವಾಗಿ ಸಾಕಷ್ಟು ಸಾಕ್ಷ್ಯದೊಂದಿಗೆ ಸ್ವೀಕರಿಸುವವರು ಪ್ರಾತ್ಯಕ್ಷಿಕೆ ಮಾಡಬಹುದಾದ ಈ ಮುಂದಿನ ಮಾಹಿತಿಗಳಿಗೆ ವಿಸ್ತರಿಸುವುದಿಲ್ಲ: (i) ಸ್ವೀಕರಿಸುವವರ ತಪ್ಪಿಲ್ಲದೆ ಸಾಮಾನ್ಯವಾಗಿ ಸಾರ್ವಜನಿಕವಾಗಿ ಲಭ್ಯವಿದೆ ಅಥವಾ ಲಭ್ಯವಾಗುತ್ತದೆ; (ii) ಸ್ವೀಕರಿಸುವವರಿಗೆ ಅದನ್ನು ಬಹಿರಂಗಪಡಿಸಿದ ವೇಳೆ, ಯಾವುದೇ ಗೌಪ್ಯತೆಯ ಬಾಧ್ಯತೆಗಳಿಂದ ಮುಕ್ತವಾಗಿ ಸ್ವೀಕರಿಸುವವರಿಗೆ ತಿಳಿದಿತ್ತು; (iii) ಯಾವುದೇ ಗೌಪ್ಯತೆಯ ಬಾಧ್ಯತೆಗಳಿಲ್ಲದೆ ನಂತರ ಸ್ವೀಕರಿಸುವವರಿಗೆ ಸಂವಹನ ಮಾಡಲಾಗಿದೆ; ಅಥವಾ (iv) ಗೌಪ್ಯ ಮಾಹಿತಿಯನ್ನು ಬಳಸದೆ ಅಥವಾ ಪರಿಶೀಲಿಸದೆ ಸ್ವೀಕರಿಸುವವರಿಂದ ಸ್ವತಂತ್ರವಾಗಿ ಅಭಿವೃದ್ಧಿಪಡಿಸಲಾಗಿದೆ.

c. ಅನ್ವಯವಾಗುವ ಕಾನೂನಿನ ಅಗತ್ಯ ಇರುವಷ್ಟರ ಮಟ್ಟಿಗೆ ಗೌಪ್ಯ ಮಾಹಿತಿಯನ್ನು ಸ್ವೀಕರಿಸುವವರು ಬಹಿರಂಗಪಡಿಸಬಹುದು. ಆದರೆ ಅಗತ್ಯವಿರುವ ಬಹಿರಂಗಪಡಿಸುವಿಕೆ ಬಗ್ಗೆ ಸ್ವೀಕರಿಸುವವರು ಬಹಿರಂಗಪಡಿಸುವವರಿಗೆ ಲಿಖಿತ ರೂಪದಲ್ಲಿ ತಕ್ಷಣವೇ ಸೂಚನೆ ನೀಡಬೇಕು ಮತ್ತು ಬಹಿರಂಗಪಡಿಸುವವರ ವೆಚ್ಚದಲ್ಲಿ, ಬಹಿರಂಗಪಡಿಸುವಿಕೆಯನ್ನು ತಡೆಯುವ ಅಥವಾ ಸೀಮಿತಗೊಳಿಸುವ ರಕ್ಷಣಾತ್ಮಕ ಆದೇಶ ಪಡೆದುಕೊಳ್ಳಲು, ಬಹಿರಂಗಪಡಿಸುವವರಿಗೆ ಸಹಾಯ ಮಾಡಬೇಕು.

d. ತನ್ನ ಸ್ವಂತ ಉತ್ಪನ್ನಗಳು ಮತ್ತು ಸೇವೆಗಳಂತೆಯೇ ಇರಬಹುದಾದ ಅಪ್ಲಿಕೇಶನ್‌ಗಳು, ಕಂಟೆಂಟ್‌, ವೈಶಿಷ್ಟ್ಯಗಳು, ಕಾರ್ಯವಿಧಾನ ಮತ್ತು ಇತರ ಉತ್ಪನ್ನ ಮತ್ತು ಸೇವೆಗಳನ್ನು ಇನ್ನೊಂದು ಪಕ್ಷವು ಸ್ವತಂತ್ರವಾಗಿ ಸೃಷ್ಟಿಸುತ್ತಿರಬಹುದು ಹಾಗೂ ತಾನು ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ಸೇವೆಗಳನ್ನು ಸೃಷ್ಟಿಸುವುದರಿಂದ ಮತ್ತು ಸಂಪೂರ್ಣವಾಗಿ ಅನ್ವೇಷಿಸುವುದರಿಂದ ಉಭಯ ಪಕ್ಷಗಳಲ್ಲಿ ಯಾರಾದರೂ ಒಬ್ಬರನ್ನು ನಿರ್ಬಂಧಿಸುತ್ತದೆ ಅಥವಾ ತಡೆಯುತ್ತದೆ ಎಂದು ಈ ನಿಯಮಗಳಲ್ಲಿ ಇರುವ ಯಾವುದನ್ನೂ ಕೂಡ ಅರ್ಥೈಸುವುದಿಲ್ಲ ಎಂದು ಪ್ರತಿ ಪಕ್ಷವು ಅಂಗೀಕರಿಸುತ್ತದೆ ಮತ್ತು ಒಪ್ಪುತ್ತದೆ.

e. ಈ ನಿಯಮಗಳ ಸಮಾಪ್ತಿಯ ಸಂದರ್ಭ, ಅಥವಾ ಉಭಯ ಪಕ್ಷಗಳಲ್ಲಿ ಯಾರಾದರೂ ಒಬ್ಬರ ಲಿಖಿತ ವಿನಂತಿಯ ಮೇರೆಗೆ, ಬಹಿರಂಗಪಡಿಸುವವರ ಗೌಪ್ಯ ಮಾಹಿತಿಯನ್ನು ಸ್ವೀಕರಿಸುವವರು ಬಹಿರಂಗಪಡಿಸುವವರಿಗೆ ಹಿಂತಿರುಗಿಸುತ್ತಾರೆ, ಅಥವಾ ಒಂದು ವೇಳೆ ಬಹಿರಂಗಪಡಿಸುವವರು ವಿನಂತಿಸಿದಲ್ಲಿ, ಗೌಪ್ಯ ಮಾಹಿತಿಯ ಎಲ್ಲ ಮೂಲ ಮತ್ತು ನಕಲುಪ್ರತಿಗಳನ್ನು ಅಳಿಸುತ್ತಾರೆ ಅಥವಾ ನಾಶಪಡಿಸುತ್ತಾರೆ.

6. ಪ್ರಾತಿನಿಧ್ಯಗಳು ಮತ್ತು ವಾರಂಟಿಗಳು

a. ಸಾಮಾನ್ಯ ಪ್ರಾತಿನಿಧ್ಯಗಳು ಮತ್ತು ವಾರಂಟಿಗಳು. ಪ್ರತಿ ಪಕ್ಷವು ಇನ್ನೊಂದು ಪಕ್ಷಕ್ಕೆ ಈ ಮುಂದಿನವುಗಳನ್ನು ಪ್ರತಿನಿಧಿಸುತ್ತದೆ ಮತ್ತು ವಾರಂಟಿ ನೀಡುತ್ತದೆ: (i) ಈ ನಿಯಮಗಳನ್ನು ಮಾಡಿಕೊಳ್ಳಲು ಅದು ಪೂರ್ಣ ಸಾಮರ್ಥ್ಯವನ್ನು ಹೊಂದಿದೆ ಮತ್ತು ಈ ನಿಯಮಗಳಡಿ ಇರುವ ಬಾಧ್ಯತೆಗಳನ್ನು ನಿಭಾಯಿಸಲು ಪೂರ್ಣ ಹಕ್ಕು, ಸಾಮರ್ಥ್ಯ ಮತ್ತು ಅಧಿಕಾರವನ್ನು ಹೊಂದಿದೆ. (ii) ಅದು ಸ್ಥಾಪನೆಯಾದ ಸ್ಥಳದ ಅಧಿಕಾರವ್ಯಾಪ್ತಿಯ ಅಥವಾ ಅಂಥ ಪಕ್ಷವು ರಚನೆಯಾದ ಅಥವಾ ಸಂಘಟಿತವಾದ ಸ್ಥಳದ ಸಂಸ್ಥೆಯ ಕಾನೂನುಗಳಡಿ ಮಾನ್ಯತೆಯೊಂದಿಗೆ ಅಸ್ತಿತ್ವದಲ್ಲಿ ಇರುವ ಮತ್ತು ಸದ್ಭಾವನೆ ಹೊಂದಿರುವ ಘಟಕವಾಗಿದೆ; (iii) ಈ ನಿಯಮಗಳ ಅಡಿಯಲ್ಲಿ ತನ್ನ ಬಾಧ್ಯತೆಗಳನ್ನು ನಿರ್ವಹಿಸುವಾಗ ಅದು ಅನ್ವಯವಾಗುವ ಕಾನೂನುಗಳು ಮತ್ತು ಅನ್ವಯವಾಗುವ ಗೌಪ್ಯತೆ ಮಾನದಂಡಗಳನ್ನು ಅನುಸರಿಸುತ್ತದೆ; ಮತ್ತು (iv) ಈ ನಿಯಮಗಳ ಅಡಿಯಲ್ಲಿ ಅದರ ಪ್ರವೇಶ ಮತ್ತು ಕಾರ್ಯನಿರ್ವಹಣೆಯು, ಮೂರನೇ ಪಕ್ಷಕ್ಕೆ ಅದು ಹೊಂದಿರುವ ಇತರ ಯಾವುದೇ ಬಾಧ್ಯತೆಗಳು ಅಥವಾ ಕರ್ತವ್ಯಗಳೊಂದಿಗೆ ಸಂಘರ್ಷ ಉಂಟುಮಾಡುವುದಿಲ್ಲ ಅಥವಾ ಭಂಗ ಅಥವಾ ಉಲ್ಲಂಘನೆಗೆ ಕಾರಣವಾಗುವುದಿಲ್ಲ. ಇದರ ಜೊತೆಗೆ, ವಿಭಾಗ 3 ರಲ್ಲಿ ವಿವರಿಸಲಾಗಿರುವ ಅಗತ್ಯಗಳೊಂದಿಗೆ ನೀವು ಅನುಸರಣೆ ಹೊಂದಿದ್ದೀರಿ ಮತ್ತು ಹೊಂದಿರುತ್ತೀರಿ ಎಂದು ನೀವು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ.

b. ಭ್ರಷ್ಟಾಚಾರ ವಿರೋಧಿ. ಪ್ರತಿ ಪಕ್ಷವು ಈ ಮುಂದಿನವುಗಳನ್ನು ಪ್ರತಿನಿಧಿಸುತ್ತದೆ, ವಾರಂಟಿ ನೀಡುತ್ತದೆ ಮತ್ತು ಒಡಂಬಡಿಕೆ ಮಾಡಿಕೊಳ್ಳುತ್ತದೆ: (i) ಎಲ್ಲ ಅನ್ವಯವಾಗುವ ಭ್ರಷ್ಟಾಚಾರ ವಿರೋಧಿ ಕಾನೂನುಗಳು, ನಿಯಮಗಳು, ಮತ್ತು ನಿಬಂಧನೆಗಳನ್ನು ಅದು ಅನುಸರಿಸುತ್ತದೆ ಮತ್ತು ಅದರ ಪರವಾಗಿ ಕಾರ್ಯನಿರ್ವಹಿಸುವ ಯಾರಾದರೂ ಅನುಸರಿಸಬೇಕಾಗುತ್ತದೆ; ಮತ್ತು (ii) ಕ್ರಮ ಕೈಗೊಳ್ಳುವಿಕೆ ಅಥವಾ ಕ್ರಮ ಕೈಗೊಳ್ಳದಿರುವಿಕೆಯನ್ನು ಅನುಚಿತವಾಗಿ ಪ್ರಭಾವಿಸಲು ಮೌಲ್ಯಯುತವಾದ ಯಾವುದನ್ನೂ ಅದು ನೀಡುವುದಿಲ್ಲ, ಪ್ರಸ್ತಾಪ ಮಾಡುವುದಿಲ್ಲ, ನೀಡಲು ಒಪ್ಪುವುದಿಲ್ಲ, ಅಥವಾ ನೇರ ಅಥವಾ ಪರೋಕ್ಷವಾಗಿ ನೀಡುವುದಕ್ಕೆ ಅಧಿಕಾರ ಕೊಡುವುದಿಲ್ಲ. ಈ ನಿಯಮಗಳಲ್ಲಿ ಇರುವ ಇತರ ಯಾವುದೇ ನಿಬಂಧನೆಗಳನ್ನು ಪರಿಗಣಿಸದೆ, ಒಂದು ವೇಳೆ ಇನ್ನೊಂದು ಪಕ್ಷವು ಈ ನಿಬಂಧನೆಯನ್ನು ಉಲ್ಲಂಘಿಸಿದರೆ, ಉಲ್ಲಂಘಿಸದೆ ಇರುವ ಪಕ್ಷವು ಯಾವುದೇ ರಾಜಿ ಅವಧಿಯನ್ನು ಒದಗಿಸದೆ ಈ ನಿಯಮಗಳನ್ನು ಸಮಾಪ್ತಿಗೊಳಿಸಬಹುದು.

c. ವ್ಯಾಪಾರ ನಿಯಂತ್ರಣ. ಪ್ರತಿ ಪಕ್ಷವು ಈ ಮುಂದಿನವುಗಳನ್ನು ಪ್ರತಿನಿಧಿಸುತ್ತದೆ, ವಾರಂಟಿ ನೀಡುತ್ತದೆ ಮತ್ತು ಒಡಂಬಡಿಕೆ ಮಾಡಿಕೊಳ್ಳುತ್ತದೆ: (i) ಈ ನಿಯಮಗಳ ಅಡಿಯಲ್ಲಿ ಅದರ ಕಾರ್ಯನಿರ್ವಹಣೆಯು ಎಲ್ಲ ಅನ್ವಯವಾಗುವ ಆರ್ಥಿಕ ದಿಗ್ಬಂಧನಗಳು, ರಫ್ತು ನಿಯಂತ್ರಣಗಳು ಮತ್ತು ಬಹಿಷ್ಕಾರ ವಿರೋಧಿ ಕಾನೂನುಗಳ ಅನುಸರಣೆ ಹೊಂದಿರುತ್ತದೆ; (ii) ಅದಾಗಲೀ ಅಥವಾ ಈ ನಿಯಮಗಳ ಕಾರ್ಯನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಅದರ ಯಾವುದೇ ಪ್ರಧಾನ ಘಟಕ, ಉಪಸಂಸ್ಥೆ, ಅಥವಾ ಅಂಗಸಂಸ್ಥೆಗಳಾಗಲಿ U.S. ವಿಶೇಷ ನಿಯೋಜಿತ ರಾಷ್ಟ್ರೀಯರ ಪಟ್ಟಿ ಮತ್ತು ವಿದೇಶಿ ದಿಗ್ಬಂಧನಗಳನ್ನು ತಪ್ಪಿಸಿಕೊಂಡವರ ಪಟ್ಟಿ ("ನಿರ್ಬಂಧಿತ ಪಕ್ಷಗಳ ಪಟ್ಟಿಗಳು") ಸೇರಿದಂತೆ, ಯಾವುದೇ ಸಂಬಂಧಿತ ಸರ್ಕಾರಿ ಪ್ರಾಧಿಕಾರ ನಿರ್ವಹಿಸುವ ಯಾವುದೇ ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿ ಸೇರಿಸಲ್ಪಟ್ಟಿಲ್ಲ; (iii) ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿರುವ ಯಾರಿಂದಲೂ ಅದು ಮಾಲೀಕತ್ವ ಹೊಂದಿಲ್ಲ ಅಥವಾ ನಿಯಂತ್ರಿಸಲ್ಪಡುತ್ತಿಲ್ಲ; ಮತ್ತು (iv) ಈ ನಿಯಮಗಳ ಕಾರ್ಯನಿರ್ವಹಣೆಯಲ್ಲಿ, ನಿರ್ಬಂಧಿತ ಪಕ್ಷಗಳ ಪಟ್ಟಿಗಳಲ್ಲಿರುವ ಯಾರೊಂದಿಗೂ ಅಥವಾ ಯಾವುದೇ ಅನ್ವಯವಾಗುವ ದಿಗ್ಬಂಧನಗಳಿಂದ ವ್ಯಾಪಾರ ನಿಷೇಧಿತವಾಗಿರುವ ಯಾವುದೇ ದೇಶದೊಂದಿಗೂ ಅದು ವ್ಯವಹಾರ ಮಾಡುವುದಿಲ್ಲ ಅಥವಾ ಸರಕು ಅಥವಾ ಸೇವೆಗಳನ್ನು ಒದಗಿಸುವುದಿಲ್ಲ. ಈ ನಿಯಮಗಳಲ್ಲಿ ಇರುವ ಇತರ ಯಾವುದೇ ನಿಬಂಧನೆಗಳನ್ನು ಪರಿಗಣಿಸದೆ, ಒಂದು ವೇಳೆ ಇನ್ನೊಂದು ಪಕ್ಷವು ಈ ನಿಬಂಧನೆಯನ್ನು ಉಲ್ಲಂಘಿಸಿದರೆ, ಉಲ್ಲಂಘಿಸದೆ ಇರುವ ಪಕ್ಷವು ಯಾವುದೇ ರಾಜಿ ಅವಧಿಯನ್ನು ಒದಗಿಸದೆ ಈ ನಿಯಮಗಳನ್ನು ತಕ್ಷಣವೇ ಸಮಾಪ್ತಿಗೊಳಿಸಬಹುದು. ಇದರ ಜೊತೆಗೆ, ಅನ್ವಯವಾಗುವ ಯಾವುದೇ ಯುನೈಟೆಡ್ ಸ್ಟೇಟ್ಸ್ ಕಾನೂನುಗಳ ಅಥವಾ ಇತರ ಯಾವುದೇ ಅಧಿಕಾರವ್ಯಾಪ್ತಿಯ ಅನ್ವಯವಾಗುವ ಕಾನೂನುಗಳ ಉಲ್ಲಂಘನೆಯಲ್ಲಿ, ಅಥವಾ ಯಾವುದೇ ನಿರಾಕರಿಸಲ್ಪಟ್ಟಿರುವ ಅಥವಾ ನಿಷೇಧಿಸಲ್ಪಟ್ಟಿರುವ ವ್ಯಕ್ತಿಗೆ, ಘಟಕಕ್ಕೆ, ಅಥವಾ Huawei Technologies Co., Ltd. ಸೇರಿದಂತೆ, ಅಂಥ ಕಾನೂನುಗಳ ಉಲ್ಲಂಘನೆಯಿಂದಾಗಿ ನಿರ್ಬಂಧಿತವಾಗಿರುವ ದೇಶದ ಜೊತೆಗೆ ನೀವು Snap ಗುಣಲಕ್ಷಣ ಸ್ವತ್ತುಗಳನ್ನು ಆಮದು, ರಫ್ತು, ಮರುರಫ್ತು, ಅಥವಾ ವರ್ಗಾವಣೆ ಮಾಡುವುದಿಲ್ಲ ಎಂದು ನೀವು ಒಪ್ಪುತ್ತೀರಿ.

d. ಹಕ್ಕುತ್ಯಾಗ. ಮೇಲೆ ಹೇಳಿರುವ ವಾರಂಟಿಗಳನ್ನು ಹೊರತುಪಡಿಸಿ, ಈ ನಿಯಮಗಳಡಿ ತನ್ನ ಕಾರ್ಯನಿರ್ವಹಣೆಗೆ ಸಂಬಂಧಿಸಿ ಯಾವುದೇ ಬಗೆಯ (ವ್ಯಾಪಾರಾರ್ಹತೆ, ನಿರ್ದಿಷ್ಟ ಉದ್ದೇಶಕ್ಕಾಗಿ ಸದೃಢತೆ, ಶೀರ್ಷಿಕೆ ಅಥವಾ ಉಲ್ಲಂಘಿಸದಿರುವಿಕೆಯ ವಾರಂಟಿಗಳು ಸೇರಿದಂತೆ ಸ್ಪಷ್ಟ, ಸೂಚ್ಯ, ಶಾಸನಾತ್ಮಕ, ಅಥವಾ ಬೇರೆ ರೀತಿಯ) ಎಲ್ಲ ವಾರಂಟಿಗಳನ್ನು ಪ್ರತಿ ಪಕ್ಷವು ಹಕ್ಕುತ್ಯಾಗ ಮಾಡುತ್ತದೆ. ಮೇಲೆ ಹೇಳಿರುವುದಕ್ಕೆ ಸೀಮಿತವಾಗದಂತೆ, SNAP ಗುಣಲಕ್ಷಣ ಸ್ವತ್ತುಗಳನ್ನು "ಇರುವಂತೆ" ಒದಗಿಸಲಾಗಿದೆ ಮತ್ತು SNAP ಗುಣಲಕ್ಷಣ ಸ್ವತ್ತುಗಳ ಪ್ರವೇಶಿಸುವಿಕೆ ಅಥವಾ ಬಳಕೆ ಅಡಚಣೆರಹಿತವಾಗಿರುತ್ತದೆ ಅಥವಾ ದೋಷಮುಕ್ತವಾಗಿರುತ್ತದೆ ಎಂದು SNAP ಯಾವುದೇ ಪ್ರತಿನಿಧಿತ್ವಗಳನ್ನು ಮಾಡುವುದಿಲ್ಲ ಅಥವಾ ವಾರಂಟಿಗಳನ್ನು ನೀಡುವುದಿಲ್ಲ.

7. ಸಮಾಪ್ತಿ

a. ಈ ಮುಂದಿನ ಸಂದರ್ಭಗಳಲ್ಲಿ ನೀವು ಮತ್ತು Snap ಪ್ರತಿಯೊಬ್ಬರೂ ಈ ನಿಯಮಗಳನ್ನು ತಕ್ಷಣವೇ ಸಮಾಪ್ತಿಗೊಳಿಸಬಹುದು: (i) ಇನ್ನೊಂದು ಪಕ್ಷದಿಂದ ವಾಸ್ತವಿಕ ಉಲ್ಲಂಘನೆಯ ಬಗ್ಗೆ ಲಿಖಿತ ಸೂಚನೆ ಸ್ವೀಕರಿಸಿದ ನಂತರ 15 ದಿನಗಳ ಒಳಗೆ ಈ ನಿಯಮಗಳ ವಾಸ್ತವಿಕ ಉಲ್ಲಂಘನೆಯನ್ನು ಸರಿಪಡಿಸಲು ಇನ್ನೊಂದು ಪಕ್ಷ ವಿಫಲವಾದರೆ; ಅಥವಾ (ii) ಈ ಮುಂದಿನವುಗಳ ಸಂದರ್ಭ ಇತರ ಪಕ್ಷಕ್ಕೆ ಲಿಖಿತ ಸೂಚನೆ ನೀಡಿದಾಗ: (x) ಇತರ ಪಕ್ಷದ ಸಾಲಗಳ ಇತ್ಯರ್ಥಕ್ಕಾಗಿ ಇತರ ಪಕ್ಷದಿಂದ ಅಥವಾ ಅದರ ವಿರುದ್ಧ ಸಾಲ ತೀರಿಸಲಾಗದಿರುವಿಕೆ, ರಿಸೀವರ್‌ಶಿಪ್, ಅಥವಾ ದಿವಾಳಿತನ ವಿಚಾರಣೆಯನ್ನು ಆರಂಭಿಸಿದ್ದರೆ; (y) ಸಾಲಗಾರರ ಪ್ರಯೋಜನಕ್ಕಾಗಿ ಇನ್ನೊಂದು ಪಕ್ಷ ನಿಯೋಜನೆಯನ್ನು ಮಾಡಿದ್ದರೆ; ಅಥವಾ (z) ಇತರ ಪಕ್ಷದ ವಿಭಜನೆಯಾಗಿದ್ದರೆ.

b. Snap ನ ಸ್ವಂತ ವಿವೇಚನೆ ಮೇರೆಗೆ, ಯಾವುದೇ ಸಮಯದಲ್ಲಿ, ಮತ್ತು ಯಾವುದೇ ಸೂಚನೆ ನೀಡದೆ ಈ ನಿಯಮಗಳನ್ನು Snap ಸಮಾಪ್ತಿಗೊಳಿಸಬಹುದು ಮತ್ತು/ಅಥವಾ ಅಮಾನತುಗೊಳಿಸಬಹುದು, ಅಥವಾ Snap ಗುಣಲಕ್ಷಣ ಸ್ವತ್ತುಗಳು, ಅಥವಾ ಅದರ ಯಾವುದೇ ಭಾಗದ ನಿಮ್ಮ ಪ್ರವೇಶಿಸುವಿಕೆ ಅಥವಾ ಬಳಕೆಯನ್ನು ಮಿತಿಗೊಳಿಸಬಹುದು. ಈ ನಿಯಮಗಳ ಮತ್ತು/ಅಥವಾ Snap ಗುಣಲಕ್ಷಣ ಸ್ವತ್ತುಗಳಿಗೆ ನಿಮ್ಮ ಪ್ರವೇಶಿಸುವಿಕೆಯ ಸಮಾಪ್ತಿಯ ನಂತರ, ಅಥವಾ ಯಾವುದೇ ಸಮಯದಲ್ಲಿ Snap ನ ಲಿಖಿಯ ವಿನಂತಿಯ ಬಳಿಕ, Snap ಗುಣಲಕ್ಷಣ ಸ್ವತ್ತುಗಳ ಬಳಕೆ ಮತ್ತು ಪ್ರವೇಶಿಸುವಿಕೆಯನ್ನು ನೀವು ತಕ್ಷಣವೇ ನಿಲ್ಲಿಸಬೇಕು ಹಾಗೂ ಭಂಡಾರದಿಂದ ನೀವು ಠೇವಣಿ ಸಾಮಗ್ರಿಗಳನ್ನು ತೆಗೆದುಹಾಕಬಹುದು.

c. ಸಂದೇಹದ ನಿವಾರಣೆಗಾಗಿ, ಈ ನಿಯಮಗಳ ಯಾವುದೇ ಸಮಾಪ್ತಿಯು, Snapchat ಅಪ್ಲಿಕೇಶನ್‌ನಲ್ಲಿ ಅನುಷ್ಠಾನಗೊಳಿಸಿದಂತೆ ನಿಮ್ಮ ಠೇವಣಿ ಸಾಮಗ್ರಿಗಳನ್ನು ಬಳಸುವ Snap ನ ಪ್ರಸ್ತುತ ಚಾಲ್ತಿಯಲ್ಲಿರುವ ಹಕ್ಕಿಗೆ ಪೂರ್ವಾಗ್ರಹವನ್ನು ಹೊಂದಿರುವುದಿಲ್ಲ.

8. ನಷ್ಟಭರ್ತಿ

a. ಈ ನಿಯಮಗಳ ಅಡಿಯಲ್ಲಿ ಪ್ರತಿನಿಧಿಸುವಿಕೆಗಳು ಮತ್ತು ವಾರಂಟಿಗಳನ್ನು ಒಂದು ಪಕ್ಷ ಉಲ್ಲಂಘಿಸುವುದರಿಂದ ಉದ್ಭವಿಸುವ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ತೃತೀಯ-ಪಕ್ಷದ ಕ್ಲೈಮ್‌ಗಳು, ದೂರುಗಳು, ಬೇಡಿಕೆಗಳು, ದಾವೆಗಳು, ವಿಚಾರಣೆಗಳು ಅಥವಾ ಇತರ ತೃತೀಯ-ಪಕ್ಷದ ಕ್ರಮಗಳಿಂದ (ಪ್ರತಿಯೊಂದು, "ಕ್ಲೈಮ್") ಉದ್ಭವಿಸುವ ಎಲ್ಲ ಹೊಣೆಗಾರಿಕೆಗಳು, ಹಾನಿಗಳು, ವೆಚ್ಚಗಳು, ಮತ್ತು ಎಲ್ಲ ಸಂಬಂಧಿತ ಖರ್ಚುಗಳಿಂದ ಮತ್ತು ಅದರ ವಿರುದ್ಧ (ಸಮಂಜಸವಾದ ವಕೀಲರ ಶುಲ್ಕಗಳು ಸೇರಿದಂತೆ) ಇನ್ನೊಂದು ಪಕ್ಷ, ಅದರ ಸಂಬಂಧಿತ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಮತ್ತು ಏಜೆಂಟರಿಗೆ ಪ್ರತಿ ಪಕ್ಷವೂ ನಷ್ಟಭರ್ತಿ ಒದಗಿಸುತ್ತದೆ, ಪ್ರತಿವಾದಿಸುತ್ತದೆ, ಮತ್ತು ಅವರಿಗೆ ಹಾನಿಯಾಗದಂತೆ ತಡೆಯುುತ್ತದೆ.

b. ನಷ್ಟಭರ್ತಿ ಕೋರುವ ಪಕ್ಷವು ನಷ್ಟಭರ್ತಿ ಒದಗಿಸುವ ಪಕ್ಷಕ್ಕೆ ಯಾವುದೇ ಕ್ಲೈಮ್‌ಗಳ ಬಗ್ಗೆ ತಕ್ಷಣವೇ ಲಿಖಿತ ರೂಪದಲ್ಲಿ ಸೂಚನೆ ನೀಡುತ್ತದೆ, ಆದರೆ ನಷ್ಟಭರ್ತಿ ಒದಗಿಸುವ ಪಕ್ಷಕ್ಕೆ ಸೂಚನೆ ನೀಡುವಲ್ಲಿನ ಯಾವುದೇ ವೈಫಲ್ಯವು, ಆ ವೈಫಲ್ಯದಿಂದ ನೀವು ಭೌತಿಕವಾಗಿ ಪಕ್ಷಪಾತಕ್ಕೆ ಒಳಗಾಗಿದಿರಿ ಎನ್ನುವಷ್ಟರ ಮಟ್ಟಿಗೆ ಹೊರತುಪಡಿಸಿ, ಈ ವಿಭಾಗದಡಿ ನೀವು ಹೊಂದಿರಬಹುದಾದ ಯಾವುದೇ ಹೊಣೆಗಾರಿಕೆ ಅಥವಾ ಬಾಧ್ಯತೆಗಳಿಂದ ನಿಮಗೆ ಬಿಡುಗಡೆ ಒದಗಿಸುವುದಿಲ್ಲ. ನಷ್ಟಭರ್ತಿ ಪಡೆದುಕೊಂಡ ಪಕ್ಷವು ನಷ್ಟಭರ್ತಿ ಒದಗಿಸುವ ಪಕ್ಷದೊಂದಿಗೆ, ಯಾವುದೇ ಕ್ಲೈಮ್‌ಗೆ ಸಂಬಂಧಿತ ಪ್ರತಿವಾದ, ರಾಜಿಸಂಧಾನ ಅಥವಾ ಇತ್ಯರ್ಥಕ್ಕೆ ಸಂಬಂಧಿಸಿ, ನಷ್ಟಭರ್ತಿ ಒದಗಿಸುವ ಪಕ್ಷದ ವೆಚ್ಚದಲ್ಲಿ, ಸಮಂಜಸ ಸಹಕಾರ ನೀಡುತ್ತದೆ. ಅಸಮಂಜಸವಾಗಿ ತಡೆಹಿದಿರುವುದನ್ನು ಬಿಟ್ಟು, ನಷ್ಟಭರ್ತಿ ಒದಗಿಸುವ ಪಕ್ಷವು ನಷ್ಟಭರ್ತಿ ಪಡೆಯುವ ಪಕ್ಷದ ಪೂರ್ವ ಲಿಖಿತ ಸಮ್ಮತಿಯಿಲ್ಲದೆ ಯಾವುದೇ ಕ್ಲೈಮ್ ಅನ್ನು ಯಾವುದೇ ರೀತಿಯಲ್ಲಿ ರಾಜಿಸಂಧಾನ ಅಥವಾ ಇತ್ಯರ್ಥ ಮಾಡಿಕೊಳ್ಳುವುದಿಲ್ಲ. ತನ್ನ ಆಯ್ಕೆಯ ವಕೀಲರೊಂದಿಗೆ ಕ್ಲೈಮ್‌ನ ಪ್ರತಿವಾದ, ರಾಜಿಸಂಧಾನ, ಮತ್ತು ಇತ್ಯರ್ಥದಲ್ಲಿ ನಷ್ಟಭರ್ತಿ ಪಡೆಯುವ ಪಕ್ಷವು (ತನ್ನ ವೆಚ್ಚದಲ್ಲಿ) ಭಾಗವಹಿಸಬಹುದು.

9. ಬಾಧ್ಯತೆಯ ಮಿತಿ

ಒಟ್ಟಾರೆ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ತಪ್ಪುನಡವಳಿಕೆ, ಬೌದ್ಧಿಕ ಸ್ವತ್ತು ಹಕ್ಕುಗಳ ಉಲ್ಲಂಘನೆ, ಅಥವಾ ವಿಭಾಗ 5, 6, ಅಥವಾ 8 ರಿಂದ ಉದ್ಭವಿಸುವ ಬಾಧ್ಯತೆಗಳಿಗೆ ಸಂಬಂಧಿಸಿದವುಗಳನ್ನು ಹೊರತುಪಡಿಸಿ, ಕಾನೂನಿನಿಂದ ಅನುಮತಿಸಿರುವ ಗರಿಷ್ಠ ಮಟ್ಟಿಗೆ, ಅಂಥ ಹಾನಿಗಳ ಬಗ್ಗೆ ಅದಕ್ಕೆ ಸಲಹೆ ನೀಡಲಾಗಿದ್ದರೂ ಸಹ, ಈ ನಿಯಮಗಳ ಅಡಿಯಲ್ಲಿನ ಯಾವುದೇ ಪರೋಕ್ಷ, ಆಕಸ್ಮಿಕ, ವಿಶೇಷ ಪರಿಣಾಮದ, ಶಿಕ್ಷಾರ್ಹ, ಅಥವಾ ಬಹು ಹಾನಿಗಳಿಗೆ, ಅಥವಾ ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾದ ಯಾವುದೇ ಲಾಭ, ಆದಾಯ, ಅಥವಾ ವ್ಯವಹಾರ ನಷ್ಟಗಳಿಗೆ, ಅಥವಾ ಯಾವುದೇ ಡೇಟಾ, ಬಳಕೆ, ಸದಭಿಪ್ರಾಯದ ನಷ್ಟಗಳಿಗೆ, ಅಥವಾ ಇತರ ಅಸ್ಪಷ್ಟ ಹಾನಿಗಳಿಗೆ ಯಾವುದೇ ಪಕ್ಷವಾಗಲೀ ಅಥವಾ ಅದರ ಅಂಗಸಂಸ್ಥೆಗಳಾಗಲಿ ಹೊಣೆಗಾರರಾಗಿರುವುದಿಲ್ಲ.

10. ಸಾಮಾನ್ಯ

a. ನೋಟೀಸ್‌ಗಳು. ಇಮೇಲ್ ಮೂಲಕ ನಿಮಗೆ Snap ನೋಟೀಸ್‌ಗಳನ್ನು ನೀಡಬಹುದು. ನಿಮ್ಮ ಸಂಪರ್ಕ ಮತ್ತು ಖಾತೆ ಮಾಹಿತಿ ಪ್ರಸ್ತುತವಾಗಿದೆ ಮತ್ತು ಸರಿಯಾಗಿದೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು, ಮತ್ತು ಅಂಥ ಮಾಹಿತಿಗೆ ಯಾವುದೇ ಬದಲಾವಣೆಗಳನ್ನು ತಕ್ಷಣವೇ ಲಿಖಿತ ರೂಪದಲ್ಲಿ Snap ಗೆ ತಿಳಿಸಬೇಕು. Snap ಗೆ ನೀವು ನೀಡುವ ನೋಟೀಸ್‌ಗಳು ಲಿಖಿತ ರೂಪದಲ್ಲಿ ಇರಬೇಕು ಹಾಗೂ ಈ ಕೆಳಗಿನ ವಿಳಾಸದಾರರಿಗೆ ಅಥವಾ Snap ಲಿಖಿತ ರೂಪದಲ್ಲಿ ನಿರ್ದಿಷ್ಟಪಡಿಸುವ ಇತರ ಯಾವುದೇ ವಿಳಾಸಕ್ಕೆ ಕಳುಹಿಸಬೇಕು: (i) ಒಂದು ವೇಳೆ Snap Inc. ಗೆ ಆಗಿದ್ದಲ್ಲಿ, 3000 31st St. Suite C, Santa Monica, CA 90405, ಗಮನಕ್ಕೆ: ಪ್ರಧಾನ ವಕೀಲರು; ಇವರಿಗೆ ಒಂದು ಪ್ರತಿಯೊಂದಿಗೆ: legalnotices@snap.com; Snap ಮತ್ತು (ii) ಒಂದು ವೇಳೆ Snap ಗ್ರೂಪ್ ಲಿಮಿಟೆಡ್‌ಗೆ ಆಗಿದ್ದರೆ, 7-11, Lexington Street, London, United Kingdom, W1F 9AF, ಗಮನಕ್ಕೆ: ಪ್ರಧಾನ ವಕೀಲರು; ಇವರಿಗೆ ಒಂದು ಪ್ರತಿಯೊಂದಿಗೆ: legalnotices@snap.com. ಒಂದು ವೇಳೆ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿರುವ ಅಂಚೆ ಸೇವೆ (ಉದಾ, ಫೆಡರಲ್ ಎಕ್ಸ್‌ಪ್ರೆಸ್), ಒಂದು ದಿನದ ಕೊರಿಯರ್, ಅಥವಾ ಪ್ರಮಾಣಿತ ಅಥವಾ ನೋಂದಾಯಿತ ಅಂಚೆ, ಪೋಸ್ಟೇಜ್ ಪೂರ್ವ-ಪಾವತಿ, ರಿಟರ್ನ್ ಸ್ವೀಕೃತಿ ವಿನಂತಿಸಿದ ಅಂಚೆ ಮೂಲಕ ತಲುಪಿಸಿದ್ದಲ್ಲಿ, ವೈಯಕ್ತಿಕ ಡೆಲಿವರಿಯ ಬಳಿಕ ಅಥವಾ ಇಮೇಲ್ ಮೂಲಕ ಕಳುಹಿಸಿದ್ದಲ್ಲಿ ಮಾನ್ಯವಾದ ಪ್ರಸರಣೆಯ ಬಳಿಕ ನೋಟೀಸ್‌ ಅನ್ನು ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

b. ಅಸ್ತಿತ್ವದಲ್ಲಿರುವಿಕೆ. ಈ ನಿಯಮಗಳ ಯಾವುದೇ ಸಮಾಪ್ತಿಯ ಬಳಿಕವೂ ಈ ಕೆಳಗಿನ ವಿಭಾಗಗಳು ಅಸ್ತಿತ್ವದಲ್ಲಿ ಇರುತ್ತವೆ: ವಿಭಾಗಗಳಾದ 1(d), 3(b), 4 ರಿಂದ 6, 7(c) ಮತ್ತು 8 ರಿಂದ 10, ಮತ್ತು ನಿರಂತರವಾದ ಬಾಧ್ಯತೆಯನ್ನು ಬಿಂಬಿಸುವ ಈ ನಿಯಮಗಳ ಇತರ ಯಾವುದೇ ನಿಬಂಧನೆ. ಈ ನಿಯಮಗಳ ಸಮಾಪ್ತಿಯ ಜಾರಿ ದಿನಾಂಕದಿಂದ ಇತರ ಎಲ್ಲ ಬಾಧ್ಯತೆಗಳು ಸಮಾಪ್ತಿಯಾಗುತ್ತವೆ.

c. ಪಕ್ಷಗಳ ಸಂಬಂಧ. ಈ ನಿಯಮಗಳು ಪಕ್ಷಗಳ ನಡುವೆ ಯಾವುದೇ ಏಜೆನ್ಸಿ, ಪಾಲುದಾರಿಕೆ, ಅಥವಾ ಜಂಟಿ ಉದ್ಯಮವನ್ನು ಸ್ಥಾಪಿಸುವುದಿಲ್ಲ.

d. ನಿಯೋಜನೆ.  ವಿಲೀನ, ಕಾನೂನಿನ ಕಾರ್ಯಾಚರಣೆ, ಬಲಪಡಿಸುವಿಕೆ, ಮರುಸಂಘಟಿಸುವಿಕೆ ಮೂಲಕ, ಎಲ್ಲ ಅಥವಾ ಗಮನಾರ್ಹವಾಗಿ ಎಲ್ಲ ಸ್ವತ್ತುಗಳ ಮಾರಾಟದ ಮೂಲಕ ಅಥವಾ ಇಲ್ಲದಿದ್ದಲ್ಲಿ, Snap ನ ಪೂರ್ವಲಿಖಿತ ಸೂಚನೆ ಇಲ್ಲದೆ, ನೀವು ಈ ನಿಯಮಗಳ ಯಾವುದೇ ಭಾಗವನ್ನು ನಿಯೋಜಿಸುವಂತಿಲ್ಲ ಅಥವಾ ವರ್ಗಾವಣೆ ಮಾಡುವಂತಿಲ್ಲ.

e. ಉಳಿಯುವಿಕೆಯ ಕಲಂ ಮತ್ತು ವಿನಾಯಿತಿ. ಒಂದು ವೇಳೆ ಈ ನಿಯಮಗಳಲ್ಲಿನ ಯಾವುದೇ ನಿಬಂಧನೆ ಜಾರಿಮಾಡಲಾಗದ್ದು ಅಥವಾ ಅಮಾನ್ಯವಾದದ್ದು ಎಂದು ಕಂಡುಬಂದರೆ, ಆ ಅಂಶವು ಈ ನಿಯಮಗಳಲ್ಲಿನ ಇತರ ಯಾವುದೇ ನಿಬಂಧನೆಯ ಮೇಲೆ ಪರಿಣಾಮ ಬೀರುವುದಿಲ್ಲ. ಒಂದು ಸಂದರ್ಭದಲ್ಲಿ ಈ ನಿಯಮಗಳ ಯಾವುದೇ ನಿಬಂಧನೆಯನ್ನು ವಿನಾಯಿತಿಗೊಳಿಸುವುದು ಅಥವಾ ಜಾರಿ ಮಾಡಲು ವಿಫಲರಾಗುವುದು, ಆ ನಿಬಂಧನೆಯನ್ನು ಅಥವಾ ಇತರ ಯಾವುದೇ ನಿಬಂಧನೆಯನ್ನು ನಂತರ ಜಾರಿ ಮಾಡುವುದಂತೆ ಒಂದು ಪಕ್ಷವನ್ನು ಪ್ರತಿಬಂಧಿಸುವುದಿಲ್ಲ.

f. ನಿಯಂತ್ರಿಸುವ ಕಾನೂನು; ಅನನ್ಯ ಸ್ಥಳ; ಕಾನೂನು ವ್ಯಾಪ್ತಿಗೆ ಸಮ್ಮತಿ; ನ್ಯಾಯಾಧೀಶರ ವಿಚಾರಣೆಯಿಂದ ವಿನಾಯಿತಿ. ಖಾಸಗಿ ತಕ್ಸೀರು, ಕ್ಲೈಮ್‌ಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಈ ನಿಯಮಗಳು ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಕ್ರಮ, ಯಾವುದೇ ಕಾನೂನು ಸಂಘರ್ಷ ಸಿದ್ಧಾಂತಗಳಿಗೆ ಅವಕಾಶವಿಲ್ಲದಂತೆ, ಕ್ಯಾಲಿಫೋರ್ನಿಯಾ ರಾಜ್ಯದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತದೆ. ಈ ನಿಯಮಗಳಿಗೆ ಸಂಬಂಧಿಸಿ ಅಥವಾ ಅದರಿಂದ ಉದ್ಭವಿಸುವ ಯಾವುದೇ ವಿವಾದಗಳನ್ನು ಅನನ್ಯವಾಗಿ, ಸೆಂಟ್ರಲ್ ಡಿಸ್ಟ್ರಿಕ್ಸ್ ಆಫ್ ಕ್ಯಾಲಿಫೋರ್ನಿಯಾದ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ನ್ಯಾಯಾಲಯಕ್ಕೆ ಸಲ್ಲಿಸಬೇಕು, ಆದರೆ ಒಂದು ವೇಳೆ ದಾವೆಗೆ ಸಂಬಂಧಿಸಿ ನ್ಯಾಯಾಲಯ ಮೂಲ ಅಧಿಕಾರ ವ್ಯಾಪ್ತಿ ಹೊಂದಿಲ್ಲದಿದ್ದರೆ, ಆಗ ಕ್ಯಾಲಿಫೋರ್ನಿಯಾದ ಸುಪ್ರೀಂ ಕೋರ್ಟ್, ಲಾಸ್ ಏಂಜಲೀಸ್ ಕೌಂಟಿಯು ದಾವೆಯನ್ನು ಬಗೆಹರಿಸಲು ಅನನ್ಯ ವೇದಿಕೆಯಾಗಿರುತ್ತದೆ. ಎರಡೂ ನ್ಯಾಯಾಲಯಗಳಲ್ಲಿ ವೈಯಕ್ತಿಕ ನ್ಯಾಯವ್ಯಾಪ್ತಿಗೆ ಪಕ್ಷಗಳು ಸಮ್ಮತಿಸುತ್ತವೆ. ಉಭಯ ಪಕ್ಷಗಳಲ್ಲಿ ಯಾರಾದರೂ ಒಬ್ಬರಿಂದ ಅಥವಾ ಒಬ್ಬರ ವಿರುದ್ಧ ಸಲ್ಲಿಸಲ್ಪಟ್ಟ ಯಾವುದೇ ಕ್ರಮ ಅಥವಾ ವಿಚಾರಣೆಗಳಲ್ಲಿ ನ್ಯಾಯಾಧೀಶರಿಂದ ವಿಚಾರಣೆಯ ಯಾವುದೇ ಹಕ್ಕನ್ನು ಪ್ರತಿ ಪಕ್ಷವು ಸ್ಪಷ್ಟವಾಗಿ ಬಿಟ್ಟಕೊಡುತ್ತದೆ.

g. ಅರ್ಥೈಸುವಿಕೆ. ಒಂದು ವಿಭಾಗದ ಉಲ್ಲೇಖಗಳು ಅದರ ಎಲ್ಲಾ ಉಪವಿಭಾಗಗಳನ್ನು ಒಳಗೊಂಡಿರುತ್ತವೆ. ವಿಭಾಗ ಶೀರ್ಷಿಕೆಗಳು ಕೇವಲ ಅನುಕೂಲಕ್ಕಾಗಿ ಮಾತ್ರ ಇವೆ ಮತ್ತು ಈ ನಿಯಮಗಳನ್ನು ಹೇಗೆ ಅರ್ಥೈಸಲಾಗಿದೆ ಎನ್ನುವುದರ ಮೇಲೆ ಪರಿಣಾಮ ಬೀರುವುದಿಲ್ಲ. ಈ ನಿಯಮಗಳು ನಿರ್ದಿಷ್ಟವಾಗಿ "ವ್ಯವಹಾರ ದಿನಗಳು" ಅನ್ನು ಉಲ್ಲೇಖಿಸದ ಹೊರತು, "ದಿನಗಳ" ಎಲ್ಲ ಉಲ್ಲೇಖಗಳು ಕ್ಯಾಲೆಂಡರ್ ದಿನಗಳಾಗಿರುತ್ತವೆ. ಈ ನಿಯಮಗಳನ್ನು ಉಭಯಪಕ್ಷಗಳು ಜಂಟಿಯಾಗಿ ಸಿದ್ಧಪಡಿಸಿವೆ ಎಂಬಂತೆ ವ್ಯಾಖ್ಯಾನಿಸಬೇಕು, ಮತ್ತು ಯಾವುದೇ ನಿಬಂಧನೆಯನ್ನು ಯಾವುದೇ ಪಕ್ಷದ ವಿರುದ್ಧ ಅರ್ಥೈಸಬಾರದು ಏಕೆಂದರೆ ಅಂಥ ನಿಬಂಧನೆಯನ್ನು ಆ ಪಕ್ಷ ರೂಪಿಸಿರುತ್ತದೆ. "ಸೇರಿರುತ್ತದೆ", "ಸೇರಿಸಲ್ಪಡುತ್ತದೆ", ಅಥವಾ "ಸೇರಿದಂತೆ" ಎಂಬ ಪದಗಳು "ಸೇರಿದಂತೆ, ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ" ಎನ್ನುವ ಅರ್ಥ ಹೊಂದಿರುತ್ತವೆ.

h. ವಕೀಲರ ಶುಲ್ಕಗಳು. ಈ ನಿಯಮಗಳು ಅಥವಾ ಅಥವಾ ಸೇವೆಗಳಿಂದ ಉದ್ಭವಿಸುವ ಅಥವಾ ಸಂಬಂಧಿಸಿದ ಯಾವುದೇ ಕ್ರಮದಲ್ಲಿ, ತನ್ನ ಸಮಂಜಸ ವಕೀಲರ ಶುಲ್ಕಗಳು ಮತ್ತು ವೆಚ್ಚಗಳನ್ನು ವಸೂಲು ಮಾಡಲು ಗೆಲ್ಲುವ ಪಕ್ಷವು ಅರ್ಹತೆ ಹೊಂದಿರುತ್ತದೆ.

i. ತೃತೀಯ ಪಕ್ಷದ ಫಲಾನುಭವಿಗಳು ಇಲ್ಲ. ಪ್ರಯೋಜನಗಳನ್ನು ನೀಡಲಾಗುತ್ತದೆ ಎಂದು ಸ್ಪಷ್ಟವಾಗಿ ಹೇಳದ ಹೊರತು, ಈ ನಿಯಮಗಳು ಯಾವುದೇ ತೃತೀಯ ಪಕ್ಷಕ್ಕೆ ಯಾವುದೇ ಪ್ರಯೋಜನಗಳನ್ನು ಒದಗಿಸುವುದಿಲ್ಲ.

j. ಪ್ರಚಾರ ಮತ್ತು ಗುರುತುಗಳು. ಪ್ರತಿ ಸಂದರ್ಭದಲ್ಲಿ Snap ನ ಪೂರ್ವ ಲಿಖಿತ ಅನುಮೋದನೆಯೊಂದಿಗೆ ಹೊರತುಪಡಿಸಿ, ಸೇವಾ ಪೂರೈಕೆದಾರರು ಈ ಮುಂದಿನ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದಿಲ್ಲ (i) ಈ ನಿಯಮಗಳ ವಿಷಯಕ್ಕೆ ಸಂಬಂಧಿಸಿ, ಅಥವಾ ಈ ನಿಯಮಗಳಿಗೆ ಸಂಬಂಧಿಸಿ Snap ನೊಂದಿಗೆ ವ್ಯವಹಾರ ಸಂಬಂಧ ಅಸ್ತಿತ್ವದಲ್ಲಿರುವ ಬಗ್ಗೆ; ಅಥವಾ (ii) Snap ಗುರುತುಗಳನ್ನು ಬಳಸಿಕೊಂಡು ಈ ನಿಯಮಗಳ ಅಡಿಯಲ್ಲಿ ಅಂಥ ಬಳಕೆಯನ್ನು Snap ದೃಢೀಕರಿಸಿದ ಸಂದರ್ಭದಲ್ಲಿ, ಅಂಥ ಬಳಕೆಯು Snap ಪ್ರಯೋಜನಕ್ಕಾಗಿ ಮಾತ್ರ ಹೊಂದಿಸಲ್ಪಡುತ್ತದೆ ಮತ್ತು ತನ್ನ ಸ್ವಂತ ವಿವೇಚನೆ ಮೇರೆಗೆ Snap ನಿಂದ ಯಾವುದೇ ಸಮಯದಲ್ಲಿ ಹಿಂಪಡೆಯಬಲ್ಲದಾಗಿರುತ್ತದೆ. ಯಾವುದೇ ಉದ್ದೇಶಕ್ಕಾಗಿ Snap ಸೇವಾ ಪೂರೈಕೆದಾರರ ಹೆಸರು, ಲೋಗೋ(ಗಳು), ಅಥವಾ ಇತರ ಗುರುತಿಸುವಿಕೆ ಮಾಹಿತಿ ಅಥವಾ ಚಿತ್ರವನ್ನು ಬಳಸಬಹುದು. ಇಲ್ಲಿ ಅನುಮತಿಸಿರುವ ಮಿತಿಯ ಮಟ್ಟಿಗೆ, ಒಂದು ಪಕ್ಷದ ಹೆಸರು, ಲೋಗೋ(ಗಳು), ಅಥವಾ ಇತರ ಗುರುತಿಸುವಿಕೆ ಮಾಹಿತಿ ಅಥವಾ ಚಿತ್ರವನ್ನು ಬಳಸುವಾಗ ಪ್ರತಿ ಪಕ್ಷವು ಇನ್ನೊಂದು ಪಕ್ಷದ ಲಿಖಿತ ರೂಪದಲ್ಲಿ ನೀಡಲಾಗಿರುವ ಲೋಗೋ ಮತ್ತು ಟ್ರೇಡ್‌ಮಾರ್ಕ್ ಬಳಕೆಯ ಮಾರ್ಗಸೂಚಿಗಳನ್ನು ಪಾಲಿಸುತ್ತವೆ.

k. ಸಂಪೂರ್ಣ ಒಪ್ಪಂದ; ಸಂಘರ್ಷಗಳು. ಈ ನಿಯಮಗಳ ವಿಷಯ ವಸ್ತುವಿಗೆ ಸಂಬಂಧಿಸಿ ಈ ನಿಯಮಗಳು ಪಕ್ಷಗಳ ಸಂಪೂರ್ಣ ಒಪ್ಪಂದವನ್ನು ರೂಪಿಸುತ್ತವೆ ಮತ್ತು ಪಕ್ಷಗಳ ನಡುವಿನ ಎಲ್ಲ ಹಿಂದಿನ ಹಾಗೂ ಸಮಕಾಲೀನ ಚರ್ಚೆಗಳನ್ನು ಸೂಪರ್‌ಸೀಡ್ ಮಾಡುತ್ತವೆ. ಇಲ್ಲಿ ವಿವರಿಸಿರುವುದನ್ನು ಉಳಿದು, ಲಿಖಿತ ರೂಪದಲ್ಲಿ ಹೇಳದ ಮತ್ತು ಪಕ್ಷಗಳಿಂದ ಸಹಿ ಹಾಕದ ಹೊರತು ಈ ನಿಯಮಗಳನ್ನು ತಿದ್ದುಪಡಿ ಮಾಡಲು ಸಾಧ್ಯವಂತಿಲ್ಲ.