Snap ಲೆನ್ಸ್ ಕ್ರಿಯೇಟರ್ ಬಹುಮಾನಗಳ ಪ್ರೊಗ್ರಾಂ ನಿಯಮಗಳು

ಜಾರಿ: ಜೂನ್ 1, 2024

ಮಧ್ಯಸ್ಥಿಕೆ ಸೂಚನೆ: ಈ ನಿಯಮಗಳು ಸ್ವಲ್ಪ ಮುಂದಕ್ಕೆ ಮಧ್ಯಸ್ಥಿಕೆಯ ವಿಧಿಯನ್ನು ಒಳಗೊಂಡಿವೆ. 

ಪರಿಚಯ

ನಾವು ಈ ಲೆನ್ಸ್ ಕ್ರಿಯೇಟರ್ ರಿವಾರ್ಡ್‌ಗಳ ಪ್ರೊಗ್ರಾಂ ನಿಯಮಗಳು ("ನಿಯಮಗಳು") ಅನ್ನು ಸಿದ್ಧಪಡಿಸಿದ್ದೇವೆ, ಇದರಿಂದಾಗಿ ಈ ನಿಯಮಗಳಲ್ಲಿ ಹೇಳಲಾಗಿರುವಂತೆ ಅರ್ಹರಾದರೆ, ನಿಮ್ಮ ಲೆನ್ಸ್‌ಗಳ ಸಲ್ಲಿಸುವಿಕೆಯನ್ನು ಮತ್ತು ಲೆನ್ಸ್ ಕ್ರಿಯೇಟರ್ ರಿವಾರ್ಡ್‌ಗಳ ಪ್ರೊಗ್ರಾಂನಲ್ಲಿ (ಪ್ರೊಗ್ರಾಂ) ಭಾಗವಹಿಸುವಿಕೆಯನ್ನು ನಿಯಂತ್ರಿಸುವ ನಿಯಮಗಳನ್ನು ನೀವು ತಿಳಿದುಕೊಳ್ಳುತ್ತಿರಿ.  ಈ ನಿಯಮಗಳಲ್ಲಿ ಹೇಳಿರುವ ಅರ್ಹತಾ ಮಾನದಂಡವನ್ನು ಪೂರೈಸುವ ಬಳಕೆದಾರರಿಗೆ (ಈ ನಿಯಮಗಳುದ್ದಕ್ಕೂ ನಾವು ಅವರನ್ನು "ಸೇವಾ ಪೂರೈಕೆದಾರರು" ಅಥವಾ "ನಿರ್ಮಿಸಿದವರು" ಎಂದು ಕರೆಯುತ್ತೇವೆ) Snapchat ನಲ್ಲಿ Lens Studio ಒಳಗಡೆ ಅಗ್ರ-ಕಾರ್ಯಕ್ಷಮತೆಯ ಲೆನ್ಸ್‌ಗಳನ್ನು ಸಲ್ಲಿಸುವ ಅವರ ಸೇವೆಗಳಿಗೆ ಸಂಬಂಧಿಸಿ Snap ನಿಂದ ಬಹುಮಾನಗಳನ್ನು ಸ್ವೀಕರಿಸುವ ಅವಕಾಶವನ್ನು ಪ್ರೊಗ್ರಾಂ ಅನುಮತಿಸುತ್ತದೆ.  ಈ ನಿಯಮಗಳಲ್ಲಿ ವಿವರಿಸಿರುವ ಪ್ರೊಗ್ರಾಂ ಮತ್ತು ಪ್ರತಿ ಉತ್ಪನ್ನ ಮತ್ತು ಸೇವೆ, Snap ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಿರುವಂತೆ "ಸೇವೆಗಳು" ಆಗಿವೆ.  ಈ ನಿಯಮಗಳು ಉಲ್ಲೇಖದ ಮೂಲಕ Snap ಸೇವೆಯ ನಿಯಮಗಳು, ಕಮ್ಯುನಿಟಿ ಮಾರ್ಗಸೂಚಿಗಳು, Lens Studio ನಿಯಮಗಳು, Lens Studio ಪರವಾನಗಿ ಕರಾರು, Snapchat ಬ್ರಾಂಡ್ ಮಾರ್ಗಸೂಚಿಗಳು, Snapcode ಬಳಕೆಯ ಮಾರ್ಗಸೂಚಿಗಳು, ಮತ್ತು Lens Studio ಸಲ್ಲಿಕೆಯ ಮಾರ್ಗಸೂಚಿಗಳು, ಮತ್ತು ಸೇವೆಗಳನ್ನು ನಿಯಂತ್ರಿಸುವ ಯಾವುದೇ ಇತರ ನಿಯಮಗಳು, ನೀತಿಗಳು ಅಥವಾ ಮಾರ್ಗಸೂಚಿಗಳನ್ನು ಒಳಗೊಳ್ಳುತ್ತವೆ. ನೀವು ಸೇವೆಗಳನ್ನು ಬಳಸಿದಾಗ ನಾವು ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮ ಗೌಪ್ಯತೆ ನೀತಿ ಯನ್ನು ಸಹ ಪರಿಶೀಲಿಸಿ. ದಯವಿಟ್ಟು ಈ ನಿಯಮಗಳನ್ನು ಗಮನವಿಟ್ಟು ಓದಿ.

ಈ ನಿಯಮಗಳು ನಿಮ್ಮ (ಅಥವಾ ನಿಮ್ಮ ಸಂಸ್ಥೆ) ಮತ್ತು Snap (ಕೆಳಗೆ ವ್ಯಾಖ್ಯಾನಿಸಲಾಗಿದೆ) ನಡುವೆ ಕಾನೂನುಬದ್ಧವಾದ ಒಪ್ಪಂದವನ್ನು ರೂಪಿಸುತ್ತವೆ. ಈ ನಿಯಮಗಳ ಉದ್ದೇಶಗಳಿಗಾಗಿ, "Snap" ಎಂದರೆ:

  • Snap Inc. (ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅದರ ಪ್ರಮುಖ ವ್ಯವಹಾರ ಸ್ಥಳವಿರುವ ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ);

  • Snap Camera ಇಂಡಿಯಾ ಪ್ರೈವೇಟ್ ಲಿಮಿಟೆಡ್ (ನೀವು ಭಾರತದಲ್ಲಿ ವಾಸಿಸುತ್ತಿದ್ದರೆ ಅಥವಾ ಭಾರತದಲ್ಲಿ ಅದರ ಪ್ರಮುಖ ವ್ಯವಹಾರ ಸ್ಥಳವಿರುವ ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ); ಅಥವಾ

  • Snap Group Limited (ನೀವು ಪ್ರಪಂಚದ ಬೇರೆಲ್ಲಿಯಾದರೂ ವಾಸಿಸುತ್ತಿದ್ದರೆ ಅಥವಾ ಪ್ರಮುಖ ವ್ಯವಹಾರ ಸ್ಥಳವು ಪ್ರಪಂಚದ ಬೇರೆಲ್ಲಿಯಾದರೂ ಇರುವ ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ.

ಈ ನಿಯಮಗಳು ಸೇವೆಯನ್ನು ನಿಯಂತ್ರಿಸುವ ಇತರ ನಿಯಮಗಳೊಂದಿಗೆ ಸಂಘರ್ಷ ಹೊಂದಿರುವ ಮಟ್ಟಿಗೆ, ಪ್ರೊಗ್ರಾಂಗೆ ಸಂಬಂಧಿಸಿದಂತೆ ಈ ನಿಯಮಗಳು ಮಾತ್ರವೇ ನಿಯಂತ್ರಣ ಹೊಂದಿರುತ್ತವೆ. ಈ ನಿಯಮಗಳಲ್ಲಿ ಬಳಸಿರುವ ಆದರೆ ವ್ಯಾಖ್ಯಾನಿಸದೆ ಇರುವ ಎಲ್ಲ ಕ್ಯಾಪಿಟಲ್ ಅಕ್ಷರದ ಪದಗಳು ಸೇವೆಯನ್ನು ನಿಯಂತ್ರಿಸುವ ಅನ್ವಯಿಸುವ ನಿಯಮಗಳಲ್ಲಿ ಹೇಳಲಾಗಿರುವ ಅವುಗಳ ಸಂಬಂಧಿತ ಅರ್ಥವನ್ನು ಹೊಂದಿರುತ್ತವೆ. ದಯವಿಟ್ಟು ಈ ನಿಯಮಗಳ ಒಂದು ಪ್ರತಿಯನ್ನು ಮುದ್ರಿಸಿ ಮತ್ತು ನಿಮ್ಮ ಉಲ್ಲೇಖಕ್ಕಾಗಿ ಇರಿಸಿಕೊಳ್ಳಿ.  

ಇನ್ನಷ್ಟು ವಿವರವಾಗಿ ಕೆಳಗೆ ವಿವರಿಸಿರುವಂತೆ, ನೀವು ಸಲ್ಲಿಸುವ ಲೆನ್ಸ್‌ಗಳು ಮತ್ತು ನಿಮ್ಮ ಪಾವತಿ ಖಾತೆ (ಕೆಳಗೆ ವ್ಯಾಖ್ಯಾನಿಸಲಾಗಿದೆ) ಅನ್ವಯಿಸುವ ಅರ್ಹತಾ ಮಾನದಂಡವನ್ನು ಪೂರೈಸಿದರೆ ನಿಮ್ಮ ಸೇವೆಗಳಿಗಾಗಿ ನೀವು ಪಾವತಿಗಳನ್ನು ಸ್ವೀಕರಿಸಬಹುದು. ಪ್ರೊಗ್ರಾಂಗೆ ಲೆನ್ಸ್‌ಗಳನ್ನು ಸಲ್ಲಿಸುವ ಕೆಲವೇ ಕೆಲವು ಕ್ರಿಯೇಟರ್‌ಗಳು ಮಾತ್ರ ಪಾವತಿಗಳನ್ನು ಸ್ವೀಕರಿಸುತ್ತಾರೆ.

1. ಕಾರ್ಯಕ್ರಮ ಅರ್ಹತೆ

ಕಾರ್ಯಕ್ರಮಕ್ಕೆ ನೀವು ಸಲ್ಲಿಸಿದ ಎಲ್ಲ ಲೆನ್ಸ್‌ಗಳನ್ನು Lens Studio ನಿಯಮಗಳು ಮತ್ತು Lens Studio ಪರವಾನಗಿ ಕರಾರಿನ ಅನುಸಾರವಾಗಿ ಮತ್ತು ಅದಕ್ಕೆ ಒಳಪಟ್ಟು ಸಲ್ಲಿಸಬೇಕು. ಕಾರ್ಯಕ್ರಮಕ್ಕೆ ಸಲ್ಲಿಸಿದ ಲೆನ್ಸ್‌ಗಳು, ಈ ನಿಯಮಗಳ ಅನುಸರಣೆಗಾಗಿ Snap ನ ಮಿತಗೊಳಿಸುವಿಕೆಯ ಕ್ರಮಾವಳಿಗಳು ಮತ್ತು ವಿಮರ್ಶೆ ಕಾರ್ಯವಿಧಾನಗಳ ಅನುಸಾರವಾಗಿ ವಿಮರ್ಶೆಗೆ ಒಳಪಡುತ್ತವೆ ಮತ್ತು ಅನುಸರಣೆ ಮಾಡದಿರುವ ಲೆನ್ಸ್‌ಗಳು ಕಾರ್ಯಕ್ರಮಕ್ಕೆ ಅರ್ಹವಾಗದಿರಬಹುದು. ಅರ್ಹವಾದ ಲೆನ್ಸ್‌ಗಳನ್ನು Snap ನ ಸ್ವಾಮ್ಯದ ಕಂಟೆಂಟ್ ವಿತರಣಾ ಕ್ರಮಾವಳಿ ಮತ್ತು ಕಾರ್ಯವಿಧಾನಗಳ ಮೂಲಕ ವಿತರಣೆ ಮಾಡಲಾಗುತ್ತದೆ.

ಕಾರ್ಯಕ್ರಮಕ್ಕೆ ಲೆನ್ಸ್‌ಗಳನ್ನು ಸಲ್ಲಿಸುವ ನಿರ್ಮಿಸಿದವರಲ್ಲಿ ಕೆಲವೇ ಕೆಲವರು ಮಾತ್ರ ಪಾವತಿಗಳನ್ನು ಸ್ವೀಕರಿಸುತ್ತಾರೆ. ಪಾವತಿಗಳನ್ನು ಸ್ವೀಕರಿಸುವ ಸಾಮರ್ಥ್ಯ ಸೀಮಿತ ಸಂಖ್ಯೆಯ ದೇಶಗಳಲ್ಲಿ ಮಾತ್ರ ಲಭ್ಯವಿದೆ, ಅವುಗಳನ್ನು ಕಾರ್ಯಕ್ರಮ ಮಾರ್ಗಸೂಚಿಗಳು ಮತ್ತು ಎಫ್‌ಎಕ್ಯೂ ನಲ್ಲಿ ಪಟ್ಟಿ ಮಾಡಲಾಗಿದೆ (“ಅರ್ಹ ದೇಶಗಳು”).  ಯಾವುದೇ ಸಮಯದಲ್ಲಿ, ಅರ್ಹ ದೇಶಗಳ ಪಟ್ಟಿಗೆ Snap ದೇಶಗಳನ್ನು ಸೇರಿಸಬಹುದು ಅಥವಾ ಅದರಿಂದ ತೆಗೆದುಹಾಕಬಹುದು. ಯಾವುದಾದರೂ ಇದ್ದಲ್ಲಿ, ಪಾವತಿಯನ್ನು Snapನಿಂದ ನೀಡಲಾಗುವುದು (ನಿಮಗೆ ನಮ್ಮ ಪಾವತಿ, ಕೆಳಗೆ ಸಂಭಾವ್ಯವಾಗಿ ಮಾರ್ಪಡಿಸಿರುವಂತೆ, "ಸೇವೆಯ ಪಾವತಿ" ಅಥವಾ ಕೇವಲ "ಪಾವತಿ"). 

ಪಾವತಿಗೆ ಅರ್ಹರಾಗಲು, ನೀವು (i) ಒಂದು ಅರ್ಹತಾ ಲೆನ್ಸ್ ಸಲ್ಲಿಸಬೇಕು ಮತ್ತು (ii) ಈ ಕೆಳಗೆ ವಿವರಿಸಿರುವಂತೆ ಎಲ್ಲ ಪಾವತಿ ಖಾತೆ ಅರ್ಹತೆ ಅಗತ್ಯಗಳನ್ನು ಪೂರೈಸಬೇಕು.

ಅರ್ಹತಾ ಲೆನ್ಸ್‌ಗಳು. "ಅರ್ಹತಾ ಲೆನ್ಸ್" ಎಂದು ಪರಿಗಣಿಸಲು, ಅರ್ಹತೆ ಅವಧಿಯಲ್ಲಿ ನೀವು ಕಾರ್ಯಕ್ರಮಕ್ಕೆ ಸಲ್ಲಿಸುವ ಲೆನ್ಸ್: (i) Lens Studio ದಲ್ಲಿ "ಸಾರ್ವಜನಿಕ" ಎಂದು ನಿಯೋಜಿತವಾಗಿರಬೇಕು; ಮತ್ತು (ii) ಕಾಲಕಾಲಕ್ಕೆ ನಮ್ಮಿಂದ ಸರಿಹೊಂದಾಣಿಕೆ ಮಾಡಲ್ಪಡಬಹುದಾದ ಮತ್ತು ಖಾತೆ ಕಾರ್ಯಕ್ಷಮತೆ ಮತ್ತು ಬಳಕೆದಾರರ ತೊಡಗಿಕೊಳ್ಳುವಿಕೆಯನ್ನು(ಜೊತೆಯಾಗಿ "ಅರ್ಹತೆಯ ಮಾನದಂಡ”) ಒಳಗೊಂಡಿರಬಹುದಾದ ಹಲವು ಅಂಶಗಳನ್ನು ಆಧರಿಸಿರುವ ನಮ್ಮ ಸ್ವಾಮ್ಯದ ಸೂತ್ರಕ್ಕೆ ಅನುಸಾರವಾಗಿ ಲೆಕ್ಕಾಚಾರ ಮಾಡಿದ, ಎಲ್ಲ ಪ್ರದೇಶಗಳಾದ್ಯಂತ ಒಟ್ಟುಗೂಡಿಸಲಾದ ಹೆಚ್ಚಿನ ಕಾರ್ಯಕ್ಷಮತೆಯ ಲೆನ್ಸ್ ಆಗಿರಬೇಕು.  "ಅರ್ಹತಾ ಅವಧಿ" ಎಂದರೆ ಲೆನ್ಸ್ ಸಲ್ಲಿಸಿದ ನಂತರ 90 ಕ್ಯಾಲೆಂಡರ್ ದಿನಗಳಾಗಿವೆ. ಕಾರ್ಯಕ್ರಮಕ್ಕೆ ಅಂತಹ ಲೆನ್ಸ್‌ಗಳನ್ನು ಆಯ್ಕೆ ಮಾಡುವ ಮೂಲಕ 'ನನ್ನ ಲೆನ್ಸ್‌ಗಳು' ಒಳಗೆ ಅರ್ಹತಾ ಅವಧಿಯ ಯಾವುದೇ ಸಮಯದಲ್ಲಿ ನೀವು ಒಂದು ಲೆನ್ಸ್ ಅನ್ನು ಕಾರ್ಯಕ್ರಮದಲ್ಲಿ ನೋಂದಾಯಿಸಬಹುದು. "ಪ್ರದೇಶಗಳು" ಮತ್ತು ಅರ್ಹತಾ ಲೆನ್ಸ್‌ಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಡೆವಲಪರ್ ಮಾರ್ಗದರ್ಶಿ‌ಯಲ್ಲಿ ಸೇರಿಸಲಾಗಿದೆ. ಯಾವುದೇ ಸಮಯದಲ್ಲಿ, ಪ್ರದೇಶಗಳ ಪಟ್ಟಿಗೆ ದೇಶಗಳನ್ನು Snap ಸೇರಿಸಬಹುದು ಅಥವಾ ಅದರಿಂದ ತೆಗೆದುಹಾಕಬಹುದು.

ಪಾವತಿ ಖಾತೆ ಅರ್ಹತೆ. ಪಾವತಿಗಳಿಗೆ ಅರ್ಹರಾಗಲು, ನೀವು ಎಲ್ಲ ಪಾವತಿ ಖಾತೆ ಅರ್ಹತಾ ಅಗತ್ಯಗಳನ್ನು ಕೂಡ ಪೂರೈಸಬೇಕು (ಕೆಳಗೆ ವ್ಯಾಖ್ಯಾನಿಸಲಾಗಿದೆ).

ಒಂದು ವೇಳೆ, ಅನ್ವಯಿಸುವ ಅರ್ಹತಾ ಅವಧಿಯಲ್ಲಿ ನೀವು ಅರ್ಹತಾ ಲೆನ್ಸ್ ಸಲ್ಲಿಸಿದರೆ, ಪಾವತಿ ಖಾತೆ ಅರ್ಹತೆಯ ಅಗತ್ಯಗಳ(ಕೆಳಗೆ ವ್ಯಾಖ್ಯಾನಿಸಲಾಗಿದೆ) ನಿಮ್ಮ ಪೂರೈಸುವಿಕೆಗೆ ಮತ್ತು ಈ ನಿಯಮಗಳ ಅನುಸರಣೆಗೆ ಒಳಪಟ್ಟು, ನಿಮ್ಮ ಅರ್ಹತಾ ಲೆನ್ಸ್‌ನೊಂದಿಗೆ ಸಂಬಂಧಿಸಿದ ನಿಮ್ಮ ಸೇವೆಗಳಿಗಾಗಿ ಪಾವತಿಯನ್ನು ಸ್ವೀಕರಿಸಲು ನೀವು ಅರ್ಹರಾಗಿರುತ್ತೀರಿ ("ಅರ್ಹತಾ ಚಟುವಟಿಕೆ").

ಕಾಲಕಾಲಕ್ಕೆ ನಮ್ಮಿಂದ ಹೊಂದಾಣಿಕೆ ಮಾಡಬಹುದಾದ ಮತ್ತು ನಿಮ್ಮ ಭೌಗೋಳಿಕ ಸ್ಥಳ ಅಥವಾ ನಿಮ್ಮ ಅರ್ಹತೆಯ ಲೆನ್ಸ್ ಸಲ್ಲಿಸುವಾಗ ಅಥವಾ ಕಾರ್ಯಕ್ರಮದ ಇರುವ ಇತರ ಲೆನ್ಸ್‌ಗಳ ಹೋಲಿಕೆಯಲ್ಲಿ ನಿಮ್ಮ ಅರ್ಹತಾ ಲೆನ್ಸ್‌ನ ಸಾಪೇಕ್ಷ ಕಾರ್ಯಕ್ಷಮತೆ ಮತ್ತು ಅದರಿಂದ ಉದ್ಭವಿಸಿದ ತೊಡಗಿಕೊಳ್ಳುವಿಕೆ - ಇಂತಹುಗಳನ್ನು ಒಳಗೊಳ್ಳಬಹುದಾದ ಹಲವು ಅಂಶಗಳನ್ನು ಆಧರಿಸಿದ ನಮ್ಮ ಸ್ವಾಮ್ಯದ ಪಾವತಿ ಸೂತ್ರದ ಅನುಸಾರ ನಾವು ಪಾವತಿಗಳನ್ನು ಹಂಚಿಕೆ ಮಾಡುತ್ತೇವೆ.

ನೀವು ಅರ್ಹತಾ ಮಾನದಂಡವನ್ನು ಪೂರೈಸುತ್ತೀರಾ ಎನ್ನುವುದು ಮತ್ತು ನೀವು ಸ್ವೀಕರಿಸಲು ಅರ್ಹರಾಗಿರಬಹುದಾದ ಯಾವುದೇ ಪಾವತಿಯ ಮೊತ್ತವು, ನಮ್ಮ ಮಿತಗೊಳಿಸುವಿಕೆ ಮತ್ತು ವಿಷಯ ಸಲಹೆ ಕ್ರಮಾವಳಿಗಳು ಮತ್ತು ಕಾರ್ಯವಿಧಾನಗಳಿಂದಲೂ ಪ್ರಭಾವಕ್ಕೊಳಗಾಗಬಹುದಾಗಿದ್ದು, ಇದು ವಿಶಿಷ್ಟ ವೀಕ್ಷಣೆಗಳು ಮತ್ತು ಲೆನ್ಸ್‌ಗೆ ಅನ್ವಯಿಸಬಹುದಾದ ಮೆಚ್ಚಿನವುಗಳ ಒಟ್ಟು ಸಂಖ್ಯೆ, ನಿಮ್ಮ ಲೆನ್ಸ್ ನೋಡುವ ದೈನಂದಿನ ಬಳಕೆದಾರರ ಸಂಖ್ಯೆ, ನಿಮ್ಮ ಲೆನ್ಸ್‌ನೊಂದಿಗೆ ತೊಡಗಿಕೊಳ್ಳಲು ಬಳಕೆದಾರರು ವ್ಯಯಿಸುವ ಒಟ್ಟು ಸಮಯ, ನಿಮ್ಮ ಭೌಗೋಳಿಕ ಸ್ಥಳ ಮತ್ತು ಖಾತೆಯ ಸ್ಥಿತಿ ಅಥವಾ Snapchat ಅಪ್ಲಿಕೇಶನ್‌ನಲ್ಲಿನ ಟ್ರೆಂಡಿಂಗ್ ಪುಟದ ಮೂಲಕ ಅಥವಾ Snapchat ಟ್ರೆಂಡ್‌ಗಳು ಪುಟದಲ್ಲಿ ಕಾಲಕಾಲಕ್ಕೆ ನಾವು ಪ್ರಕಟಿಸಬಹುದಾದ ಪ್ರಸ್ತುತ ಟ್ರೆಂಡ್‌ಗಳು ಮತ್ತು ವಿಷಯಗಳಿಗೆ ನಿಮ್ಮ ಲೆನ್ಸ್ ಸಂಬಂಧಿಸಿದೆಯೇ ಮತ್ತು ನಿಮ್ಮ ಕಂಟೆಂಟ್ ಮತ್ತು ಖಾತೆಯು ಈ ನಿಯಮಗಳ (ಉಲ್ಲೇಖದ ಮೂಲಕ ಒಳಗೊಂಡಿರುವ ಎಲ್ಲ ಮಾರ್ಗಸೂಚಿಗಳು ಸೇರಿದಂತೆ) ಪಾಲನೆ ಮಾಡುತ್ತದೆಯೇ ಎನ್ನುವುದು ಒಳಗೊಂಡಂತೆ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಕಂಟೆಂಟ್ ಅನ್ನು ಆದ್ಯತೆಗೊಳಿಸಬಹುದು.

ಒಂದು ನಿಗದಿತ ಅವಧಿಯಲ್ಲಿ ನಿಮ್ಮ ಅರ್ಹತಾ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಮತ್ತು ದಾಖಲಿಸಲು ನಾವು ಬಳಸುವ ಮಾಪನದ ಘಟಕವಾದ "ಕ್ರಿಸ್ಟಲ್‌ಗಳನ್ನು" ಬಳಸಿ ನಮ್ಮ ಆಂತರಿಕ ವ್ಯವಸ್ಥೆಗಳಿಗಾಗಿ ಅರ್ಹತಾ ಚಟುವಟಿಕೆಯನ್ನು ಪರಿಗಣಿಸಲಾಗುತ್ತದೆ.

ಅರ್ಹತಾ ಚಟುವಟಿಕೆಗಾಗಿ ನಾವು ದಾಖಲಿಸುವ ಕ್ರಿಸ್ಟಲ್‌ಗಳ ಸಂಖ್ಯೆಯು ನಮ್ಮ ಸ್ವಂತ ವಿವೇಚನೆ ಮೇರೆಗೆ ನಾವು ಕಾಲಕಾಲಕ್ಕೆ ಮಾರ್ಪಾಡು ಮಾಡಬಹುದಾದ ನಮ್ಮ ಆಂತರಿಕ ಮಾನದಂಡ ಮತ್ತು ಸೂತ್ರಗಳನ್ನು ಆಧರಿಸಿ ವ್ಯತ್ಯಾಸವಾಗಬಹುದು. ನಿಮ್ಮ ಪ್ರೊಫೈಲ್‌ಗೆ ("ಪ್ರೊಫೈಲ್") ಹೋಗುವ ಮೂಲಕ ನಿಮ್ಮ ಅರ್ಹತಾ ಚಟುವಟಿಕೆಗೆ ನಾವು ದಾಖಲಿಸಿರುವ ಅಂದಾಜು ಕ್ರಿಸ್ಟಲ್‌ಗಳ ಸಂಖ್ಯೆಯನ್ನು ನೀವು ನೋಡಬಹುದು. ನಿಮ್ಮ ಪ್ರೊಫೈಲ್ ಮೂಲಕ ವೀಕ್ಷಿಸಬಹುದಾದ ಅಂಥ ಯಾವುದೇ ಸಂಖ್ಯೆಗಳು ನಮ್ಮ ಆಂತರಿಕ ಲೆಕ್ಕಾಚಾರದ ಉದ್ದೇಶಕ್ಕಾಗಿ ಮಾಡಲಾದ ಪೂರ್ವಭಾವಿ ಅಂದಾಜುಗಳಾಗಿರುತ್ತವೆ ಎನ್ನುವುದನ್ನು ದಯವಿಟ್ಟು ಗಮನಿಸಿ. ಕ್ರಿಸ್ಟಲ್‌ಗಳು ಕೇವಲ ಒಂದು ಆಂತರಿಕ ಅಳತೆಯ ಉಪಕರಣವಾಗಿದ್ದು, ಅರ್ಹತಾ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ಕಂಟೆಂಟ್‌ನ ಜನಪ್ರಿಯತೆಯನ್ನು ಅಳೆಯಲು ನಾವು ಬಳಸುತ್ತೇವೆ.  ಸ್ಪಷ್ಟತೆಗಾಗಿ, ಕ್ರಿಸ್ಟಲ್‌ಗಳು ಯಾವುದೇ ಹಕ್ಕುಗಳನ್ನು ನೀಡುವ ಅಥವಾ ಸೂಚಿಸುವ ಉದ್ದೇಶವನ್ನು ಹೊಂದಿಲ್ಲ ಅಥವಾ ಯಾವುದೇ ಬಾಧ್ಯತೆಗಳನ್ನು ಪ್ರತಿನಿಧಿಸುವುದಿಲ್ಲ, ಸ್ವತ್ತನ್ನು ರಚಿಸುವುದಿಲ್ಲ, ಅವುಗಳನ್ನು ವರ್ಗಾವಣೆ ಮಾಡಲು ಅಥವಾ ನಿಯೋಜಿಸಲು ಸಾಧ್ಯವಿಲ್ಲ, ಮತ್ತು ಖರೀದಿ ಮಾಡಲು ಸಾಧ್ಯವಿಲ್ಲ ಅಥವಾ ಮಾರಾಟ, ವಸ್ತುವಿನಿಮಯ ಅಥವಾ ವಿನಿಮಯದ ಭಾಗವಾಗಿಸುವಂತಿಲ್ಲ.

ನಮ್ಮಿಂದ ಕಾಲಕಾಲಕ್ಕೆ ಹೊಂದಾಣಿಕೆ ಮಾಡಲ್ಪಡಬಹುದಾದ, ನಮ್ಮ ಸ್ವಾಮ್ಯದ ಪಾವತಿ ಸೂತ್ರದ ಅನುಸಾರವಾಗಿ ನಿರ್ದಿಷ್ಟ ಅವಧಿಯಲ್ಲಿ ಕ್ರಿಯೇಟರ್‌ನ ಅರ್ಹತೆ ಪಡೆಯುವ ಚಟುವಟಿಕೆಗಾಗಿ ನಾವು ದಾಖಲಿಸಿರುವ ಕ್ರಿಸ್ಟಲ್‌ಗಳ ಅಂತಿಮ ಸಂಖ್ಯೆಯನ್ನು ಆಧರಿಸಿ ಪಾವತಿ ಮೊತ್ತಗಳನ್ನು ನಿರ್ಧರಿಸಲಾಗುತ್ತದೆ.

ಚಟುವಟಿಕೆಯು ಅರ್ಹತಾ ಚಟುವಟಿಕೆಯನ್ನು ರಚಿಸುತ್ತದೆಯೇ ಎಂದು ನಿರ್ಧರಿಸಲು, "ಆಮಾನ್ಯ ಚಟುವಟಿಕೆ" ಅಂದರೆ ನಿಮ್ಮ ಲೆನ್ಸ್‌ನ ವೀಕ್ಷಣೆಗಳ ಸಂಖ್ಯೆ ಅಥವಾ ಇತರ ಕಾರ್ಯಕ್ಷಮತೆ, ವೀಕ್ಷಕರ ಸಂಖ್ಯೆ ಅಥವಾ ತೊಡಗಿಕೊಳ್ಳುವಿಕೆಯ ಮೆಟ್ರಿಕ್ಸ್ ಅನ್ನು ಕೃತಕವಾಗಿ ಹೆಚ್ಚಿಸುವ ಚಟುವಟಿಕೆಯನ್ನು ನಾವು ಹೊರತುಪಡಿಸಬಹುದು. ಅಮಾನ್ಯ ಚಟುಚವಟಿಕೆಯನ್ನು Snap ಎಲ್ಲ ಸಮಯಗಳಲ್ಲೂ ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುತ್ತದೆ ಮತ್ತು ಇವುಗಳನ್ನು ಒಳಗೊಳ್ಳುತ್ತದೆ ಆದರೆ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ: (i) ನಿಮ್ಮ ಮೊಬೈಲ್ ಸಾಧನ, ನಿಮ್ಮ ನಿಯಂತ್ರಣದಲ್ಲಿರುವ ಮೊಬೈಲ್ ಸಾಧನಗಳು ಅಥವಾ ಹೊಸ ಅಥವಾ ಸಂದೇಹಾಸ್ಪದ ಖಾತೆಗಳೊಂದಿಗಿನ ಮೊಬೈಲ್ ಸಾಧನಗಳಿಂದ ಸೃಷ್ಟಿಯಾಗುವ ಯಾವುದೇ ಕ್ಲಿಕ್‌ಗಳು ಅಥವಾ ಇಂಪ್ರೆಶನ್‌ಗಳ ಮೂಲಕ ಸೇರಿದಂತೆ, ಯಾವುದೇ ವ್ಯಕ್ತಿ, ಬಾಟ್, ಸ್ವಯಂಚಾಲಿತ ಪ್ರೊಗ್ರಾಂ ಅಥವಾ ಅದೇ ರೀತಿಯ ಸಾಧನದಿಂದ ಉದ್ಭವಿಸುವ ಸ್ಪ್ಯಾಮ್, ಅಮಾನ್ಯ ತೊಡಗಿಕೊಳ್ಳುವಿಕೆ ಅಥವಾ ಅಮಾನ್ಯ ವೀಕ್ಷಣೆಗಳು ಅಥವಾ ಮೆಚ್ಚಿನವುಗಳು; (ii) ತೃತೀಯ ಪಕ್ಷಗಳಿಗೆ ಹಣ ಪಾವತಿಸುವಿಕೆ ಅಥವಾ ಇತರ ಪ್ರಚೋದನೆಗಳ ಮೂಲಕ ಉದ್ಭವಿಸಿದ ತೊಡಗಿಕೊಳ್ಳುವಿಕೆಗಳು, ವೀಕ್ಷಣೆಗಳು, ಮೆಚ್ಚಿನವುಗಳು, ತಪ್ಪಾದ ಪ್ರತಿನಿಧಿಸುವಿಕೆ ಅಥವಾ Snaps ಗಳ ವೀಕ್ಷಣೆಗೆ ವ್ಯಾಪಾರ ಪ್ರಸ್ತಾವನೆ; (iii) ಸೇವೆಯನ್ನು ನಿಯಂತ್ರಿಸುವ ನಿಯಮಗಳ ಉಲ್ಲಂಘನೆ ಮಾಡುವ ಚಟುವಿಕೆಯ ಮೂಲಕ ಉದ್ಭವಿಸಿದ ತೊಡಗಿಕೊಳ್ಳುವಿಕೆ, ವೀಕ್ಷಣೆಗಳು, ಮೆಚ್ಚಿನವುಗಳು (iv) ಮೇಲಿನ (i), (ii), (iii), ಮತ್ತು (iv) ನಲ್ಲಿ ವಿವರಿಸಿರುವ ಯಾವುದೇ ಚಟುವಟಿಕೆಯೊಂದಿಗೆ ಕೈ-ಜೋಡಿಸಿರುವ ತೊಡಗಿಕೊಳ್ಳುವಿಕೆ, ಕ್ಲಿಕ್‌ಗಳು ಅಥವಾ ವೀಕ್ಷಣೆಗಳು, ಮೆಚ್ಚಿನವುಗಳು. ನೀವು ಅಮಾನ್ಯ ಚಟುವಟಿಕೆಯಲ್ಲಿ ತೊಡಗಿದ್ದೀರಿ ಎಂದು ನಾವು ನಿರ್ಧರಿಸಿದರೆ, ಕಾರ್ಯಕ್ರಮದಲ್ಲಿ ನಿಮ್ಮ ಲೆನ್ಸ್‌ನ ವಿತರಣೆಯನ್ನು ನಾವು ಮಿತಿಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು ಮತ್ತು ಪಾವತಿಗಳಿಗಾಗಿ ನಿಮ್ಮನ್ನು ಅನರ್ಹ ಎಂದು ಪರಿಗಣಿಸಬಹುದು.

2. ಪಾವತಿ ಖಾತೆ ಅರ್ಹತೆ

Snap ನಿಂದ ಪಾವತಿಗಳನ್ನು ಸ್ವೀಕರಿಸುವುದಕ್ಕೆ ಅರ್ಹತೆ ಪಡೆಯಲು ನೀವು ಈ ಕೆಳಗಿನ ಎಲ್ಲ ಅಗತ್ಯಗಳನ್ನು ("ಪಾವತಿ ಖಾತೆ ಅರ್ಹತಾ ಅಗತ್ಯಗಳು) ಕೂಡ ಪೂರೈಸಬೇಕು.

ಒಂದು ವೇಳೆ ನೀವು ವ್ಯಕ್ತಿಯಾಗಿದ್ದಲ್ಲಿ, ನೀವು ಅರ್ಹ ದೇಶದ ಕಾನೂನುಬದ್ಧ ನಿವಾಸಿಯಾಗಿರಬೇಕು ಮತ್ತು ಅಂತಹ ಅರ್ಹ ದೇಶದಲ್ಲಿ ಇರುವಾಗ ಅರ್ಹತೆ ಪಡೆಯುವ ಲೆನ್ಸ್‌ ಅನ್ನು ಸಲ್ಲಿಸಿರಬೇಕು.

ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನೀವು ಕಾನೂನುಬದ್ಧ ಪ್ರಾಪ್ತ ವಯಸ್ಕರಾಗಿರಬೇಕು ಅಥವಾ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ನಮ್ಮ ಕಾರ್ಯವಿಧಾನಗಳಿಗೆ ಅನುಸಾರವಾಗಿ ಅಗತ್ಯ ಪೋಷಕರ ಅಥವಾ ಕಾನೂನುಬದ್ಧ ಪಾಲಕರ ಸಮ್ಮತಿಯ(ಗಳ)ನ್ನು ಪಡೆದಿರಬೇಕು.

ನಿಮ್ಮ ಕಾನೂನುಬದ್ಧ ಮೊದಲ ಹೆಸರು ಮತ್ತು ಕೊನೆಯ ಹೆಸರು, ಇಮೇಲ್, ಫೋನ್ ಸಂಖ್ಯೆ, ರಾಜ್ಯ ಮತ್ತು ವಾಸವಿರುವ ದೇಶ ಮತ್ತು ಜನ್ಮದಿನಾಂಕ ಸೇರಿದಂತೆ ನೀವು ನಮಗೆ ಸಂಪೂರ್ಣ ಮತ್ತು ನಿಖರ ಸಂಪರ್ಕ ಮಾಹಿತಿಯನ್ನು ಒದಗಿಸಬೇಕು ("ಸಂಪರ್ಕ ಮಾಹಿತಿ").

ನೀವು (ಅಥವಾ ಅನ್ವಯಿಸುವಂತೆ, ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕ) Snap ನ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರೊಂದಿಗೆ ಪಾವತಿ ಖಾತೆಯನ್ನು ರಚಿಸಬೇಕು ಮತ್ತು ಎಲ್ಲ ಅವಶ್ಯಕ ಅಗತ್ಯಗಳನ್ನು ಪೂರ್ಣಗೊಳಿಸಬೇಕು ("ಪಾವತಿ ಖಾತೆ"). ನಿಮ್ಮ ಪಾವತಿ ಖಾತೆಯು ನಿಮ್ಮ ಅರ್ಹ ದೇಶಕ್ಕೆ ಹೋಲಿಕೆಯಾಗಬೇಕು.

ಈ ನಿಯಮಗಳ ಅಡಿಯಲ್ಲಿ ಪಾವತಿಯ ಷರತ್ತಾಗಿ, ನೀವು ಒದಗಿಸಿದ ಸಂಪರ್ಕ ಮಾಹಿತಿ (ಕೆಳಗೆ ವ್ಯಾಖ್ಯಾನಿಸಲಾಗಿದೆ), ಹಾಗೆಯೇ ಪೋಷಕರ / ಕಾನೂನುಬದ್ಧ ಪಾಲಕರ ಗುರುತು ಮತ್ತು ಅಪ್ರಾಪ್ತ ವಯಸ್ಕರಿಗೆ ಒಪ್ಪಿಗೆಯ ಅಗತ್ಯದ ಪರಿಶೀಲನೆಯನ್ನು ಕೋರುವ ನಮ್ಮ ಹಕ್ಕನ್ನು ನಾವು ನಮ್ಮ, ನಮ್ಮ ಅಂಗಸಂಸ್ಥೆಗಳ ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಪರವಾಗಿ ಕಾಯ್ದಿರಿಸಿದ್ದೇವೆ.

ನಮ್ಮ ಮತ್ತು ನಮ್ಮ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳಿಗೆ ಅನುಸಾರವಾಗಿ ನಿಮ್ಮ ವ್ಯವಹಾರ ಘಟಕಕ್ಕೆ ನಿಮ್ಮ ಪಾವತಿಗಳನ್ನು ವರ್ಗಾಯಿಸಲು ನೀವು ನಮಗೆ ಅಧಿಕಾರ ನೀಡಿದ್ದರೆ, ಅಂತಹ ಘಟಕವು ನಿಮ್ಮ ಅರ್ಹ ದೇಶದೊಳಗೆ ಸ್ಥಾಪನೆಯಾಗಿರಬೇಕು, ಪ್ರಧಾನ ಕಚೇರಿ ಹೊಂದಿರಬೇಕು ಅಥವಾ ಒಂದು ಕಚೇರಿ ಹೊಂದಿರಬೇಕು.

ನೀವು Snap ಮತ್ತು ಅದರ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರಿಗೆ ಅಗತ್ಯವಿರುವಂತೆ ನಿಖರವಾದ ಸಂಪರ್ಕ ಮತ್ತು ಇತರ ಮಾಹಿತಿಯನ್ನು ಒದಗಿಸಿದ್ದೀರಿ, ಇದರಿಂದಾಗಿ Snap ಅಥವಾ ಅದರ ತೃತೀಯ-ಪಕ್ಷದ ಪಾವತಿ ಪೂರೈಕೆದಾರರು, ನೀವು ಪಾವತಿಗೆ ಅರ್ಹತೆ ಹೊಂದಿದ್ದರೆ, ನಿಮ್ಮನ್ನು ಸಂಪರ್ಕಿಸಬಹುದು ಮತ್ತು ನಿಮಗೆ (ಅಥವಾ ನಿಮ್ಮ ಪೋಷಕರಿಗೆ / ಕಾನೂನುಬದ್ಧ ಪಾಲಕರಿಗೆ ಅಥವಾ ಅನ್ವಯಿಸಿದರೆ, ವ್ಯವಹಾರ ಘಟಕಕ್ಕೆ) ಪಾವತಿ ಮಾಡಬಹುದು ಅಥವಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ನಿಮ್ಮ Snapchat ಖಾತೆ ಮತ್ತು ಪಾವತಿ ಖಾತೆ ಸಕ್ರಿಯವಾಗಿವೆ, ಉತ್ತಮ ಸ್ಥಿತಿಯಲ್ಲಿವೆ (ನಮ್ಮಿಂದ ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರಿಂದ ನಿರ್ಧರಿಸಲ್ಪಟ್ಟಂತೆ), ಮತ್ತು ಈ ನಿಯಮಗಳ ಅನುಸರಣೆಯಲ್ಲಿದೆ.

ಒಂದು ವೇಳೆ ನೀವು (ಅಥವಾ ನಿಮ್ಮ ಪೋಷಕರು/ಕಾನೂನುಬದ್ಧ ಪೋಷಕ(ರು) ಅಥವಾ ಅನ್ವಯಿಸುತ್ತಿದ್ದಲ್ಲಿ, ವ್ಯವಹಾರ ಘಟಕ) ನಮ್ಮ ಅಥವಾ ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಅನುಸರಣಾ ಪರಿಶೀಲನೆಯಲ್ಲಿ ಉತ್ತೀರ್ಣರಾಗದಿದ್ದರೆ ಯಾವುದೇ ಪಾವತಿಯನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ, ಮತ್ತು ನಾವು ನಿಮಗೆ ಪಾವತಿಸುವುದಿಲ್ಲ. ಅಂಥ ವಿಮರ್ಶೆಗಳನ್ನು ನಿಯತಕಾಲಿಕವಾಗಿ ನಡೆಸಲಾಗುತ್ತದೆ ಮತ್ತು U.S. ವಿಶೇಷವಾಗಿ ನಿಯೋಜಿತರಾದ ರಾಷ್ಟ್ರೀಯರ ಪಟ್ಟಿ ಮತ್ತು ವಿದೇಶಿ ನಿರ್ಬಂಧಗಳನ್ನು ತಪ್ಪಿಸಿಕೊಂಡವರ ಪಟ್ಟಿ ಸೇರಿದಂತೆ, ಯಾವುದೇ ಸಂಬಂಧಿತ ಸರ್ಕಾರಿ ಪ್ರಾಧಿಕಾರ ನಿರ್ವಹಿಸುವ ನಿರ್ಬಂಧಿತ ಪಕ್ಷಗಳ ಒಟ್ಟಿಯಲ್ಲಿ ಒಂದು ವೇಳೆ ನೀವು ಕಾಣಿಸಿಕೊಂಡಿದ್ದೀರೇ ಎನ್ನುವುದನ್ನು ನಿರ್ಧರಿಸಲು ತಪಾಸಣೆ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಪರಿಶೀಲನೆಗಳು ಅದರಲ್ಲಿ ಸೇರಿರಬಹುದು. ಈ ನಿಯಮಗಳಲ್ಲಿ ವಿವರಿಸಲಾಗಿರುವ ಯಾವುದೇ ಇತರ ಬಳಕೆಗಳಿಗೆ ಹೆಚ್ಚುವರಿಯಾಗಿ, ನಿಮ್ಮ ಗುರುತನ್ನು ಪರಿಶೀಲಿಸಲು, ಅನುಸರಣಾ ವಿಮರ್ಶೆಗಳನ್ನು ನಡೆಸಲು, ಮತ್ತು ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಮಗೆ ಒದಗಿಸುವ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು.

ಒಂದು ವೇಳೆ ನೀವು (i) Snap ಅಥವಾ ಅದರ ಪ್ರಧಾನ ಸಂಸ್ಥೆ, ಉಪಸಂಸ್ಥೆಗಳು, ಅಥವಾ ಅಂಗಸಂಸ್ಥೆಗಳ ಉದ್ಯೋಗಿ, ಅಧಿಕಾರಿ ಅಥವಾ ನಿರ್ದೇಶಕರಾಗಿದ್ದರೆ, (ii) ಒಂದು ಸರ್ಕಾರಿ ಘಟಕ, ಸರ್ಕಾರಿ ಘಟಕದ ಉಪಸಂಸ್ಥೆ ಅಥವಾ ಅಂಗಸಂಸ್ಥೆ ಅಥವಾ ರಾಜ ಕುಟುಂಬದ ಸದಸ್ಯರಾಗಿದ್ದರೆ, ಅಥವಾ (iii) ಒಂದು ವ್ಯವಹಾರ ಖಾತೆಯಿಂದ ಪ್ರೊಗ್ರಾಂಗೆ ಲೆನ್ಸ್‌ಗಳನ್ನು ಸಲ್ಲಿಸಿದ್ದರೆ, ನೀವು ಪಾವತಿಗಳಿಗೆ ಅರ್ಹರಾಗಿರುವುದಿಲ್ಲ.

Snapಗೆ ನಿರ್ದಿಷ್ಟವಾಗಿ ಲೆನ್ಸ್‌ಗಳನ್ನು Snapನಿಂದ ಅಥವಾ ಅದರ ಪರವಾಗಿ ರಚಿಸಲು ಅಥವಾ ಒದಗಿಸಲು ಈ ನಿಯಮಗಳ ಹೊರಗೆ ನೀವು ತೊಡಗಿಸಿಕೊಂಡಿದ್ದರೆ, ಆ ತೊಡಗಿಕೊಳ್ಳುವಿಕೆಯ ಭಾಗವಾಗಿ ನೀವು ರಚಿಸಿದ ಆ ಲೆನ್ಸ್‌ಗಳ ಪಾವತಿಗಳಿಗೆ ನೀವು ಅರ್ಹರಾಗಿಲ್ಲದಿರಬಹುದು.

 ಪಾವತಿ ಮಾಡುವುದಕ್ಕೆ ಮೊದಲು ಒಂದು ಲೆನ್ಸ್ ಅನ್ನು ನೀವು ಅಳಿಸಿದರೆ, ಯಾವುದೇ ಸಂಚಿತ ತೊಡಗಿಕೊಳ್ಳುವಿಕೆಗಾಗಿ ಪಾವತಿ ಸ್ವೀಕರಿಸಲು ಇನ್ನು ಮುಂದೆ ನೀವು ಅರ್ಹರಾಗಿರುವುದಿಲ್ಲ.

3. ಪಾವತಿ ಅಧಿಸೂಚನೆ ಮತ್ತು ಪ್ರಕ್ರಿಯೆ

ನೀವು ಅರ್ಹತೆ ಪಡೆಯುವ ಚಟುವಟಿಕೆಯಲ್ಲಿ ತೊಡಗಿದ್ದೀರಿ ಎಂದು ನಾವು ನಿರ್ಧರಿಸಿದರೆ, ಆಗ ನಾವು Snapchat ಅಪ್ಲಿಕೇಶನ್ ಮೂಲಕ ನಿಮಗೆ ಒಂದು ಅಧಿಸೂಚನೆ ಕಳುಹಿಸುವ ಮೂಲಕ ನಿಮ್ಮ ಅರ್ಹತೆಯ ಕುರಿತು ಸೂಚನೆ ನೀಡುತ್ತೇವೆ. 

ಈ ನಿಯಮಗಳಿಗೆ ನಿಮ್ಮ ಅನುಸರಣೆಗೆ ಒಳಪಟ್ಟು, ನಂತರ, ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ನಿಮ್ಮ ಪ್ರೊಫೈಲ್‌ನಲ್ಲಿ ಸಂಬಂಧಿತ ಆಯ್ಕೆಯನ್ನು ಆರಿಸುವ ಮೂಲಕ ಪಾವತಿಯನ್ನು ಕೋರಲು ನಿಮಗೆ (ಅಥವಾ ಅನ್ವಯಿಸುವಂತೆ ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕಕ್ಕೆ) ಸಾಧ್ಯವಾಗುತ್ತದೆ.  ನೀವು ಮಾನ್ಯವಾಗಿ ಒಂದು ಪಾವತಿಯನ್ನು ವಿನಂತಿಸುವ ಸಲುವಾಗಿ, $100 USD ಕನಿಷ್ಟ ಪಾವತಿ ಮಿತಿಯನ್ನು ("ಪಾವತಿ ಕನಿಷ್ಟಮಿತಿ") ಪೂರೈಸಲು ಸಾಕಷ್ಟು ಕ್ರಿಸ್ಟಲ್‌ಗಳನ್ನು ನಾವು ಮೊದಲು ದಾಖಲಿಸಿರಬೇಕು ಮತ್ತು ನಿಮಗೆ ನಿಯೋಜಿಸರಬೇಕು.

ದಯವಿಟ್ಟು ಗಮನಿಸಿ: ಒಂದು ವೇಳೆ (A) ಒಂದು ವರ್ಷದ ಅವಧಿಯಲ್ಲಿ ನಿಮ್ಮಿಂದ ಯಾವುದೇ ಅರ್ಹ ಚಟುವಟಿಕೆಗಾಗಿ ನಾವು ಯಾವುದೇ ಕ್ರಿಸ್ಟಲ್‌ಗಳನ್ನು ದಾಖಲು ಮಾಡಿಲ್ಲದಿದ್ದರೆ ಮತ್ತು ನಿಯೋಜಿಸಿಲ್ಲದಿದ್ದರೆ ಅಥವಾ (B) ಎರಡು ವರ್ಷಗಳ ಅವಧಿಗೆ ತಕ್ಷಣದ ಹಿಂದಿನ ಪ್ಯಾರಾಗೆ ಸಂಬಂಧಿಸಿ ನೀವು ಪಾವತಿಯನ್ನು ಮಾನ್ಯವಾಗಿ ವಿನಂತಿಸಿಲ್ಲದಿದ್ದರೆ, ಆಗ — ಅನ್ವಯಿಸುವ ಅವಧಿಯ ಕೊನೆಯಲ್ಲಿ — ಅಂಥ ಅವಧಿಯ ಕೊನೆಗೆ ನಿಮ್ಮ ಅರ್ಹ ಚಟುವಟಿಕೆಗೆ ನಾವು ದಾಖಲಿಸಿರುವ ಮತ್ತು ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳನ್ನು ಆಧರಿಸಿದ ಮೊತ್ತದಲ್ಲಿ ನಿಮ್ಮ ಪಾವತಿ ಖಾತೆಗೆ ನಾವು ಪಾವತಿಯನ್ನು ವಿತರಿಸುತ್ತೇವೆ, ಆದರೆ ಪ್ರತಿ ಪ್ರಕರಣದಲ್ಲೂ ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು:
(I) ನೀವು ಪಾವತಿ ಮಿತಿಯನ್ನು ತಲುಪಿದ್ದೀರಿ, (II) ನೀವು ಪಾವತಿ ಖಾತೆಯನ್ನು ಸೃಷ್ಟಿಸಿದ್ದೀರಿ, (III) ನೀವು ಎಲ್ಲ ಅಗತ್ಯ ಮಾಹಿತಿಯನ್ನು ಮತ್ತು ನಿಮಗೆ ಪಾವತಿಯನ್ನು ಮಾಡಲು ಅಗತ್ಯವಿರುವ ಇತರ ಯಾವುದೇ ಮಾಹಿತಿಯನ್ನು ಪೂರೈಸಿದ್ದೀರಿ, (IV) ಅಂಥ ಅರ್ಹ ಚಟುವಟಿಕೆಗೆ ನಾವು ದಾಖಲಿಸಿರುವ ಮತ್ತು ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳಿಗೆ ಸಂಬಂಧಿಸಿ ನಿಮಗೆ ನಾವು ಇನ್ನೂ ಪಾವತಿಯನ್ನು ಮಾಡಿಲ್ಲ, (V) ನಿಮ್ಮ SNAPCHAT ಖಾತೆ ಮತ್ತು ಪಾವತಿ ಖಾತೆ ಉತ್ತಮ ಸ್ಥಿತಿಯಲ್ಲಿವೆ, ಮತ್ತು (VI) ಇಲ್ಲದಿದ್ದಲ್ಲಿ ನೀವು ಈ ನಿಯಮಗಳು ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳು ಮತ್ತು ನಿಯಮಗಳಿಗೆ ಅನುಸರಣೆ ಹೊಂದಿದ್ದೀರಿ.  ಅದಾಗ್ಯೂ, ಒಂದು ವೇಳೆ ಅನ್ವಯಿಸುವ ಅವಧಿಯ ಕೊನೆಯಲ್ಲಿ ಮೇಲೆ ಹೇಳಿದ ಎಲ್ಲ ಅಗತ್ಯಗಳನ್ನು ನೀವು ಪೂರ್ಣವಾಗಿ ಪೂರೈಸದಿದ್ದರೆ, ಅಂಥ ಅರ್ಹ ಚಟುವಟಿಕೆಗೆ ಸಂಬಂಧಿಸಿ ಯಾವುದೇ ಪಾವತಿಗಳನ್ನು ಸ್ವೀಕರಿಸಲು ನೀವು ಆನಂತರ ಅರ್ಹರಾಗಿರುವುದಿಲ್ಲ.

Snap ಪರವಾಗಿ, ಉಪಸಂಸ್ಥೆ ಅಥವಾ ಅಂಗಸಂಸ್ಥೆ ಘಟಕಗಳು ಅಥವಾ ಈ ನಿಯಮಗಳ ಅಡಿಯಲ್ಲಿ ಪಾವತಿದಾರನಾಗಿ ಕಾರ್ಯನಿರ್ವಹಿಸಬಹುದಾದ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರು ನಿಮಗೆ ಪಾವತಿ ಮಾಡಬಹುದು. ಈ ನಿಯಮಗಳು ಅಥವಾ ಅನ್ವಯವಾಗುವ ಪಾವತಿ ಖಾತೆಯ ನಿಯಮಗಳನ್ನು ಅನುಸರಿಸಲು ನಿಮ್ಮ ವೈಫಲ್ಯ ಸೇರಿದಂತೆ Snap ನ ನಿಯಂತ್ರಣದಲ್ಲಿ ಇಲ್ಲದ ಯಾವುದೇ ಕಾರಣಗಳಿಂದಾಗಿ ನಿಮ್ಮ ಪಾವತಿ ಖಾತೆಗೆ ಪಾವತಿಗಳನ್ನು ವರ್ಗಾಯಿಸಲು ಉಂಟಾಗುವ ಯಾವುದೇ ವಿಳಂಬ, ವೈಫಲ್ಯ ಅಥವಾ ಅಸಾಮರ್ಥ್ಯಕ್ಕೆ Snap ಜವಾಬ್ದಾರನಾಗಿರುವುದಿಲ್ಲ. ನಿಮ್ಮ Snapchat ಅಕೌಂಟ್ ಬಳಸಿಕೊಂಡು ನಿಮ್ಮ ಅರ್ಹ ಚಟುವಟಿಕೆಗೆ ನಾವು ದಾಖಲಿಸಿರುವ ಮತ್ತು ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳನ್ನು ಆಧರಿಸಿದ ಪಾವತಿಗಾಗಿ ಅಥವಾ ನಿಮ್ಮ ಪಾವತಿ ಖಾತೆ ಮಾಹಿತಿ ಬಳಸಿಕೊಂಡು ಪಾವತಿಗಳ ವರ್ಗಾವಣೆಗಾಗಿ, Snap ನ ನಿಯಂತ್ರಣದಲ್ಲಿ ಇಲ್ಲದ ಯಾವುದೇ ಕಾರಣದಿಂದ, ನಿಮ್ಮನ್ನು (ಅಥವಾ ಅನ್ವಯಿಸುವಂತೆ ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕವನ್ನು) ಹೊರತುಪಡಿಸಿ ಬೇರೊಬ್ಬರು ಮಾಡುವ ವಿನಂತಿಗಳಿಗೆ Snap ಜವಾಬ್ದಾರನಾಗಿರುವುದಿಲ್ಲ. ನಮ್ಮ ಮತ್ತು ನಮ್ಮ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳಿಗೆ ಅನುಸಾರವಾಗಿ ಒಂದು ವ್ಯವಹಾರ ಘಟಕದಿಂದ ಪಾವತಿಗಳನ್ನು ವರ್ಗಾವಣೆ ಮಾಡಲು Snap ಗೆ ನೀವು ಅಧಿಕಾರ ನೀಡಿದರೆ, ಈ ನಿಯಮಗಳ ಅಡಿಯಲ್ಲಿ ನಿಮಗೆ ಪಾವತಿಸಬೇಕಿರುವ ಯಾವುದೇ ಮತ್ತು ಎಲ್ಲ ಮೊತ್ತಗಳನ್ನು Snap ಈ ನಿಯಮಗಳ ಅನುಸರಣೆಗೆ ಒಳಪಟ್ಟು, ಅಂತಹ ವ್ಯವಹಾರ ಘಟಕಕ್ಕೆ ವರ್ಗಾಯಿಸಬಹುದು ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ಪಾವತಿಗಳನ್ನು ಯುನೈಟೆಡ್ ಸ್ಟೇಟ್ಸ್ ಡಾಲರ್‌ಗಳಲ್ಲಿ ಮಾಡಲಾಗುತ್ತದೆ, ಆದರೆ, ಮುಂದೆ ಪ್ರೊಗ್ರಾಂ ಮಾರ್ಗಸೂಚಿಗಳು ಮತ್ತು ಎಫ್‌ಎಕ್ಯೂನಲ್ಲಿ ವಿವರಿಸಿದಂತೆ ಬಳಕೆ, ವಿನಿಮಯ ಮತ್ತು ವಹಿವಾಟು ಶುಲ್ಕಗಳಿಗೆ ಒಳಪಟ್ಟು ಹಾಗೂ ನಮ್ಮ ತೃತೀಯ ಪಕ್ಷದ ಪೂರೈಕೆದಾರರ ನಿಯಮಗಳಿಗೆ ಒಳಪಟ್ಟು ನಿಮ್ಮ ಸ್ಥಳೀಯ ಕರೆನ್ಸಿಯಲ್ಲಿ ನಿಮ್ಮ ಪಾವತಿ ಖಾತೆಯಿಂದ ಹಣವನ್ನು ವಿದ್‌ಡ್ರಾ ಮಾಡಿಕೊಳ್ಳಲು ನೀವು ಆಯ್ಕೆ ಮಾಡಿಕೊಳ್ಳಬಹುದು. Snapchat ಅಪ್ಲಿಕೇಶನ್‌ನಲ್ಲಿ ತೋರಿಸಿರುವ ಯಾವುದೇ ಪಾವತಿ ಮೊತ್ತವು ಅಂದಾಜು ಮೌಲ್ಯಗಳು ಮತ್ತು ಬದಲಾವಣೆಗೆ ಒಳಪಟ್ಟಿರುತ್ತದೆ. ಯಾವುದೇ ಪಾವತಿಗಳ ಅಂತಿಮ ಮೊತ್ತವು ನಿಮ್ಮ ಪಾವತಿ ಖಾತೆಯಲ್ಲಿ ಪ್ರತಿಫಲಿಸುತ್ತದೆ.

ಇತರ ಹಕ್ಕುಗಳು ಮತ್ತು ಪರಿಹಾರಗಳ ಜೊತೆಗೆ, ಕಾನೂನು ಅನುಮತಿಸಿದ ಮಟ್ಟಿಗೆ, ಯಾವುದೇ ಮುಂಚಿತ ಸೂಚನೆ ನೀಡದೆ, ಸಂದೇಹಾಸ್ಪದ ಅಮಾನ್ಯ ಚಟುವಟಿಕೆ, ಈ ನಿಯಮಗಳೊಂದಿಗೆ ಅನುಸರಣೆ ಮಾಡಲು ವಿಫಲರಾಗುವುದು, ತಪ್ಪಾಗಿ ನಿಮಗೆ ಮಾಡಿದ ಯಾವುದೇ ಹೆಚ್ಚುವರಿ ಪಾವತಿಗಳಿಗಾಗಿ, ಅಥವಾ ಇತರ ಯಾವುದೇ ಒಪ್ಪಂದಗಳಡಿ ನೀವು ನಮಗೆ ಪಾವತಿಸಬೇಕಿರುವ ಅಂತ ಮೊತ್ತಗಳನ್ನು ಸರಿದೂಗಿಸಿಕೊಳ್ಳುವುದಕ್ಕಾಗಿ ಈ ನಿಯಮಗಳಡಿ ನಿಮಗೆ ಯಾವುದೇ ಪಾವತಿಗಳನ್ನು ನಾವು ತಡೆಹಿಡಿಯುವಿಕೆ, ಸರಿದೂಗಿಸುವಿಕೆ, ಹೊಂದಾಣಿಕೆ ಅಥವಾ ಹೊರಗಿಡುವಿಕೆಯನ್ನು ಮಾಡಬಹುದು.

ನೀವು ನಮಗೆ ಅಥವಾ ನಮ್ಮ ಅಂಗಸಂಸ್ಥೆಗಳು, ಸಹಾಯಕ ಸಂಸ್ಥೆಗಳು ಅಥವಾ ಅಧಿಕೃತ ಪಾವತಿ ಪೂರೈಕೆದಾರರಿಗೆ ಒದಗಿಸುವ ಎಲ್ಲಾ ಮಾಹಿತಿಯು ಸತ್ಯ ಮತ್ತು ನಿಖರವಾಗಿದೆ ಮತ್ತು ಅಂತಹ ಮಾಹಿತಿಯ ನಿಖರತೆಯನ್ನು ನೀವು ಎಲ್ಲಾ ಸಮಯದಲ್ಲೂ ನಿರ್ವಹಿಸುತ್ತೀರಿ ಎಂದು ನೀವು ಪ್ರತಿನಿಧಿಸುತ್ತೀರಿ.

4. ತೆರಿಗೆಗಳು

ಸೇವೆಗೆ ಸಂಬಂಧಿಸಿ ನೀವು ಸ್ವೀಕರಿಸಬಹುದಾದ ಯಾವುದೇ ಪಾವತಿಗಳಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲ ತೆರಿಗೆಗಳು, ಕರಗಳು, ಅಥವಾ ಶುಲ್ಕಗಳಿಗೆ ನೀವು ಏಕಮಾತ್ರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೊಂದಿರುತ್ತೀರಿ ಎನ್ನುವುದನ್ನು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಪಾವತಿಗಳು ಯಾವುದೇ ಅನ್ವಯವಾಗುವ ಮಾರಾಟ, ಬಳಕೆ, ಅಬಕಾರಿ, ಮೌಲ್ಯ ವರ್ಧಿತ, ಸರಕು ಮತ್ತು ಸೇವೆಗಳು ಅಥವಾ ನಿಮಗೆ ಪಾವತಿಸಬೇಕಿರುವ ಅದೇ ರೀತಿಯ ತೆರಿಗೆಗಳನ್ನು ಒಳಗೊಂಡಿರುತ್ತವೆ. ಅನ್ವಯವಾಗುವ ಕಾನೂನಿನಡಿಯಲ್ಲಿ, ನಿಮಗೆ ಯಾವುದೇ ಪಾವತಿಗಳಿಂದ ತೆರಿಗೆಗಳನ್ನು ಕಡಿತಗೊಳಿಸುವುದು ಅಥವಾ ತಡೆಹಿಡಿಯುವುದು ಅಗತ್ಯವಿದ್ದರೆ, Snap, ಅದರ ಅಂಗಸಂಸ್ಥೆ ಅಥವಾ ಅದರ ಅಧಿಕೃತ ಮೂರನೇ ವ್ಯಕ್ತಿ ಪಾವತಿ ಒದಗಿಸುವವರು ಅನ್ವಯವಾಗುವ ಕಾನೂನಿನ ಪ್ರಕಾರ ಅಂತಹ ತೆರಿಗೆಗಳನ್ನು ನಿಮಗೆ ಪಾವತಿಸಬೇಕಾದ ಮೊತ್ತದಿಂದ ಕಡಿತಗೊಳಿಸಬಹುದು ಮತ್ತು ಅಂತಹ ತೆರಿಗೆಗಳನ್ನು ಸೂಕ್ತವಾದ ತೆರಿಗೆ ಪ್ರಾಧಿಕಾರಕ್ಕೆ ಪಾವತಿಸಬಹುದು. ಅಂತಹ ಕಡಿತಗಳು ಅಥವಾ ತಡೆಹಿಡಿಯುವಿಕೆಗಳಿಂದ ಕಡಿಮೆ ಮಾಡಿದ ಪಾವತಿಗಳು ಈ ನಿಯಮಗಳ ಅಡಿಯಲ್ಲಿ ನಿಮಗೆ ಪಾವತಿಸಬೇಕಾದ ಮೊತ್ತಗಳ ಪೂರ್ಣ ಪಾವತಿ ಮತ್ತು ಇತ್ಯರ್ಥವನ್ನು ರೂಪಿಸುತ್ತವೆ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಈ ನಿಯಮಗಳ ಅಡಿಯಲ್ಲಿ ಯಾವುದೇ ಪಾವತಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ವರದಿ ಮಾಡುವಿಕೆ ಅಥವಾ ತಡೆಹಿಡಿಯುವಿಕೆ ತೆರಿಗೆ ಬಾಧ್ಯತೆಗಳನ್ನು ಪೂರೈಸಲು ಅಗತ್ಯವಿರಬಹುದಾದಂತೆ ಯಾವುದೇ ನಮೂನೆಗಳು, ದಾಖಲೆಗಳು ಅಥವಾ ಇತರ ಪ್ರಮಾಣಪತ್ರಗಳನ್ನು ನೀವು Snap, ಅದರ ಉಪಸಂಸ್ಥೆಗಳು, ಅಂಗಸಂಸ್ಥೆಗಳು ಮತ್ತು ಯಾವುದೇ ಅಧಿಕೃತ ಪಾವತಿ ಪೂರೈಕೆದಾರರಿಗೆ ಒದಗಿಸುತ್ತೀರಿ

5. ನಿಮ್ಮ ಪ್ರತಿನಿಧಿತ್ವಗಳು ಮತ್ತು ವಾರಂಟಿಗಳು

ನೀವು ಈ ಮುಂದಿನವುಗಳನ್ನು ಪ್ರತಿನಿಧಿಸುತ್ತಿರಿ ಮತ್ತು ವಾರಂಟಿ ನೀಡುತ್ತೀರಿ: (i) ನಿಮ್ಮ ಕಾನೂನುಬದ್ಧ ವಾಸ್ತವ್ಯದ ಸ್ಥಳದಲ್ಲಿ (ಒಂದು ವೇಳೆ ವ್ಯಕ್ತಿಯಾಗಿದ್ದಲ್ಲಿ) ನೀವು ಕಾನೂನುಬದ್ಧ ಪ್ರಾಪ್ತ ವಯಸ್ಕರಾಗಿದ್ದೀರಿ, ಮತ್ತು ಇಲ್ಲದಿದ್ದಲ್ಲಿ ನೀವು ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಯ ಪರವಾಗಿ ಈ ನಿಯಮಗಳಿಗೆ ಪ್ರವೇಶಿಸಲು ನೀವು ಪೂರ್ಣ ಹಕ್ಕು, ಅಧಿಕಾರ, ಮತ್ತು ದೃಢೀಕರಣವನ್ನು ಹೊಂದಿದ್ದೀರಿ, ಅಥವಾ ಈ ನಿಯಮಗಳಿಗೆ ಒಪ್ಪಿಗೆ ಸೂಚಿಸಲು, ನಿಮ್ಮ ವಾಸ್ತವ್ಯದ ದೇಶದಲ್ಲಿ ಅಗತ್ಯವಿರುವ ಪೋಷಕರ/ಕಾನೂನುಬದ್ಧ ಪಾಲಕರ ಸಮ್ಮತಿಯನ್ನು ನೀವು ಪಡೆದಿದ್ದೀರಿ; (ii) ಪ್ರಚಾರ ಮತ್ತು ಗೌಪ್ಯತೆಯ ಹಕ್ಕು ಹಾಗೂ ನಿಮ್ಮ ಲೆನ್ಸ್‌ನಲ್ಲಿ ಕಾಣಿಸಿಕೊಳ್ಳುವ ಯಾವುದೇ ವ್ಯಕ್ತಿಯ ಹೆಸರು, ಸಾಮ್ಯತೆ, ಧ್ವನಿಗೆ ಸಂಬಂಧಿಸಿದ ಇತರ ಯಾವುದೇ ಹಕ್ಕುಗಳು ಮತ್ತು ನಿಮ್ಮ ಲೆನ್ಸ್‌ನಲ್ಲಿ ಕಾಣಿಸಿಕೊಳ್ಳುವ ಹದಿನೆಂಟು (18) ವರ್ಷ ವಯಸ್ಸಿಗಿಂತ ಅಥವಾ ಯಾವುದೇ ಅನ್ವಯಿಸುವ ಪ್ರಾಪ್ತ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯ ಕಾಣಿಸಿಕೊಳ್ಳುವಿಕೆಗಾಗಿ ಎಲ್ಲ ಅವಶ್ಯಕ ಪೋಷಕರು ಅಥವಾ ಕಾನೂನು ಪಾಲಕ(ರ) ಸಮ್ಮತಿ ಸೇರಿದಂತೆ ಎಲ್ಲ ಅವಶ್ಯಕ ತೃತೀಯ ಪಕ್ಷದ ಹಕ್ಕುಗಳನ್ನು ನೀವು ಪಡೆದಿದ್ದೀರಿ; (iii) ನಮ್ಮ ಸೇವೆಯ ನಿಯಮಗಳು, ಕಮ್ಯುನಿಟಿ ಮಾರ್ಗಸೂಚಿಗಳು, Lens Studio ನಿಯಮಗಳು, Lens Studio ಪರವಾನಗಿ ಕರಾರು, Snapchat ಬ್ರ್ಯಾಂಡ್ ಮಾರ್ಗಸೂಚಿಗಳು, Snapcode ಬಳಕೆಯ ಮಾರ್ಗಸೂಚಿಗಳು, ಮತ್ತು Lens Studio ಸಲ್ಲಿಕೆಯ ಮಾರ್ಗಸೂಚಿಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಈ ಎಲ್ಲ ನಿಯಮಗಳನ್ನು ನೀವು ಓದಿದ್ದೀರಿ, ಅರ್ಥಮಾಡಿಕೊಂಡಿದ್ದೀರಿ ಮತ್ತು ಅನುಸರಿಸಲು ಒಪ್ಪುತ್ತೀರಿ; (iv) ಪ್ರೊಗ್ರಾಂಗೆ ನೀವು ಸಲ್ಲಿಸುವ ಲೆನ್ಸ್‌ಗಳು ಕೇವಲ ನಿಮ್ಮಿಂದ ರಚಿಸಲ್ಪಟ್ಟಿದ್ದಾಗಿವೆ, ಹಕ್ಕುಸ್ವಾಮ್ಯ (ಮಾಸ್ಟರ್, ಸಿಂಕ್ ಮತ್ತು ಸಾರ್ವಜನಿಕ ಪ್ರದರ್ಶನ ಸಂಗೀತ ಹಕ್ಕುಸ್ವಾಮ್ಯ ಹಕ್ಕುಗಳು ಸೇರಿದಂತೆ), ಟ್ರೇಡ್‌ಮಾರ್ಕ್‌, ಪ್ರಚಾರ, ಗೌಪ್ಯತೆ ಅಥವಾ ಯಾವುದೇ ಇತರ ಅನ್ವಯಿಸುವ ಹಕ್ಕು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ ಯಾವುದೇ ತೃತೀಯ ಪಕ್ಷದ ಹಕ್ಕುಗಳನ್ನು ಅತಿಕ್ರಮಿಸುವುದಿಲ್ಲ. ಉಲ್ಲಂಘಿಸುವುದಿಲ್ಲ ಅಥವಾ ದುರ್ಬಳಕೆ ಮಾಡುವುದಿಲ್ಲ ಮತ್ತು ಅನ್ವಯಿಸುವ ಕಾನೂನಿನ ಅನುಸರಣೆ ಮಾಡುತ್ತದೆ; (v) ನಿಮ್ಮ ಲೆನ್ಸ್‌ಗಳಿಗೆ ಸಂಬಂಧಿಸಿ ಯಾವುದೇ ತೃತೀಯ ಪಕ್ಷಗಳಿಗೆ ಯಾವುದೇ ಅಗತ್ಯವಿರುವ ಪಾವತಿಗಳನ್ನು ನೀವು ಮಾಡುತ್ತೀರಿ ಮತ್ತು ನಿಮ್ಮ ಕಂಟೆಂಟ್ ವಿತರಣೆ ಮಾಡಿದ ಪರಿಣಾಮವಾಗಿ ಯಾವುದೇ ತೃತೀಯ ಪಕ್ಷಕ್ಕೆ ಯಾವುದೇ ಜವಾಬ್ದಾರಿಯನ್ನು Snap ವಹಿಸಿಕೊಳ್ಳುವಂತೆ ನೀವು ಮಾಡುವುದಿಲ್ಲ; ಮತ್ತು (vi) ನೀವು ಯುನೈಟೆಡ್ ಸ್ಟೇಟ್ಸ್ ಹೊರತಾದ ದೇಶದ ಕಾನೂನುಬದ್ಧ ನಿವಾಸಿಯಾಗಿದ್ದರೆ, ಪ್ರೊಗ್ರಾಂಗೆ ಲೆನ್ಸ್‌ಗಳನ್ನು ರಚಿಸುವ ಮತ್ತು ಸಲ್ಲಿಸುವ ಸೇವೆಯನ್ನು ನಿರ್ವಹಿಸಿದಾಗ ನೀವು ಯುನೈಟೆಡ್ ಸ್ಟೇಟ್ಸ್ ಹೊರಗಿನ ಸ್ಥಳದಲ್ಲಿ ಭೌತಿಕವಾಗಿ ಇದ್ದಿರಿ.

6. ಗೌಪ್ಯತೆ

Snap ನಿಂದ ಒದಗಿಸಿರಬಹುದಾದ ಯಾವುದೇ ಸಾರ್ವಜನಿಕವಲ್ಲದ ಮಾಹಿತಿ ಗೌಪ್ಯವಾದುದು ಮತ್ತು Snap ನ ಸ್ಪಷ್ಟ, ಪೂರ್ವ ಲಿಖಿತ ಅನುಮತಿಯಿಲ್ಲದೆ ನೀವು ಅದನ್ನು ಯಾವುದೇ ತೃತೀಯ ಪಕ್ಷಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಒಪ್ಪುತ್ತೀರಿ.

7. ಗೌಪ್ಯತೆ

ನಿಮ್ಮ ಗೌಪ್ಯತೆ ನಮಗೆ ಮುಖ್ಯವಾಗಿದೆ.  ನೀವು ನಮ್ಮ ಸೇವೆಗಳನ್ನು ಬಳಸಿದಾಗ ನಿಮ್ಮ ಮಾಹಿತಿಯನ್ನು ಹೇಗೆ ನಿಭಾಯಿಸಲಾಗುತ್ತದೆ ಎನ್ನುವುದನ್ನು ನಮ್ಮ ಗೌಪ್ಯತಾ ನೀತಿ ಓದುವ ಮೂಲಕ ನೀವು ತಿಳಿದುಕೊಳ್ಳಬಹುದು.

8. ಸಮಾಪ್ತಿಗೊಳಿಸುವಿಕೆ; ಅಮಾನತು

ನಾವು ಹೊಂದಿರಬಹುದಾದ ಯಾವುದೇ ಇತರ ಹಕ್ಕುಗಳು ಅಥವಾ ಪರಿಹಾರಗಳ ಜೊತೆಗೆ, ಪ್ರೊಗ್ರಾಂ, ಸೇವೆಗಳ ಭಾಗವಾಗಿ ನಿಮ್ಮ ಲೆನ್ಸ್‌ಗಳ ವಿತರಣೆಯನ್ನು ಅಥವಾ ಮೇಲೆ ಹೇಳಿದವುಗಳಲ್ಲಿ ಯಾವುದಕ್ಕಾದರೂ ನಿಮ್ಮ ಪ್ರವೇಶವನ್ನು ಅಮಾನತು ಅಥವಾ ಸಮಾಪ್ತಿಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ನೀವು ಈ ನಿಯಮಗಳ ಅನುಸರಣೆ ಮಾಡದ ಸಂದರ್ಭದಲ್ಲಿ, ಸಂಚಯಗೊಂಡಿರುವ ಆದರೆ ಇನ್ನೂ ನಿಮ್ಮ ಪಾವತಿ ಖಾತೆಗೆ ವರ್ಗಾಯಿಸಿದೆ ಇರುವ ಯಾವುದೇ ಪಾವತಿಸದಿರುವ ಮೊತ್ತವನ್ನು ಸ್ವೀಕರಿಸುವ ಅರ್ಹತೆಯಿಂದ ನಿಮ್ಮನ್ನು ಅನರ್ಹಗೊಳಿಸದಿರಬಹುದು. ಈ ನಿಯಮಗಳ ಯಾವುದ ಭಾಗಕ್ಕೆ ನೀವು ಯಾವುದೇ ಸಮಯದಲ್ಲಿ ಒಪ್ಪದಿದ್ದರೆ, ನೀವು ಪ್ರೊಗ್ರಾಂ ಅಥವಾ ಸೇವೆಯ ಅನ್ವಯಿಸುವ ಭಾಗಗಳನ್ನು ಬಳಸುವುದನ್ನು ನಿಲ್ಲಿಸಬೇಕು.

ಅನ್ವಯವಾಗುವ ಕಾನೂನುಗಳಿಂದ ಅನುಮತಿಸಿದ ಗರಿಷ್ಠ ಮಟ್ಟಿಗೆ, ನಿಮಗೆ ಪೂರ್ವ ಸೂಚನೆ ಅಥವಾ ಉತ್ತರದಾಯಿತ್ವ ಇಲ್ಲದೆ, ನಮ್ಮ ಸ್ವಂತ ವಿವೇಚನೆ ಮೇರೆಗೆ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ಕಾರ್ಯಕ್ರಮವನ್ನು ಅಥವಾ ಯಾವುದೇ ಸೇವೆಗಳನ್ನು ಸ್ಥಗಿತಗೊಳಿಸುವ, ಮಾರ್ಪಡಿಸುವ, ಆಫರ್ ಮಾಡದಿರುವ ಅಥವಾ ಆಫರ್ ಮಾಡುವುದನ್ನು ಅಥವಾ ಬೆಂಬಲಿಸುವುದನ್ನು ನಿಲ್ಲಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಪ್ರೊಗ್ರಾಂ ಅಥವಾ ಯಾವುದೇ ಸೇವೆಗಳು ಎಲ್ಲ ಸಮಯದಲ್ಲಿ ಅಥವಾ ಯಾವುದೇ ನೀಡಿರುವ ಸಮಯದಲ್ಲಿ ಲಭ್ಯ ಇರುತ್ತವೆ ಎಂದಾಗಲೀ ಅಥವಾ ಮೇಲೆ ಹೇಳಿದ ಯಾವುದನ್ನಾದರೂ ನಾವು ನಿರ್ದಿಷ್ಟ ಅವಧಿಯವರೆಗೆ ಆಫರ್ ಮಾಡುವುದನ್ನು ಮುಂದುವರಿಸುತ್ತೇವೆ ಎಂದಾಗಲೀ ನಾವು ಖಾತರಿ ನೀಡುವುದಿಲ್ಲ.  ಯಾವುದೇ ಕಾರಣಕ್ಕಾಗಿ ಕಾರ್ಯಕ್ರಮ ಅಥವಾ ಸೇವೆಗಳ ಮುಂದುವರಿದ ಲಭ್ಯತೆಯ ಮೇಲೆ ನೀವು ಅವಲಂಬಿತರಾಗಬಾರದು.

9. ಯಾವುದೇ ಏಜೆನ್ಸಿ ಸಂಬಂಧವಿಲ್ಲ

ಈ ನಿಯಮಗಳಲ್ಲಿ ಇರುವ ಯಾವುದೂ ಕೂಡ ನಿಮ್ಮ ಮತ್ತು Snap ನಡುವೆ ಜಂಟಿ ಉದ್ಯಮ, ಪ್ರಧಾನ-ಏಜೆಂಟ್, ಅಥವಾ ಉದ್ಯೋಗ ಸಂಬಂಧವನ್ನು ಸೂಚಿಸಲು ವ್ಯಾಖ್ಯಾನ ರಚಿಸುವುದಿಲ್ಲ.

10. ಅಧಿಸೂಚನೆಗಳು

ಮೇಲೆ ಉಲ್ಲೇಖಿಸಿರುವಂತೆ, ನೀವು ಪಾವತಿ ಸ್ವೀಕರಿಸಲು ಅರ್ಹರಾಗಿರಬಹುದು ಎಂದು Snap ನಿರ್ಧಿರಿಸಿದರೆ, Snap ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರು Snapchat ಅಪ್ಲಿಕೇಶನ್ ಮೂಲಕ ಅಥವಾ ಇಮೇಲ್ ವಿಳಾಸ ಸೇರಿದಂತೆ, ನಿಮ್ಮ ಬಳಕೆದಾರರ ಪ್ರೊಫೈಲ್‌ನಲ್ಲಿ ನೀವು ಒದಗಿಸಿರುವ ಸಂಪರ್ಕ ಮಾಹಿತಿಯ ಮೂಲಕ ನಿಮಗೆ ಸೂಚನೆ ನಿಡಬಹುದು. ಪಾವತಿಗಳನ್ನು ಸ್ವೀಕರಿಸಲು ಅರ್ಹವಾಗಿಲ್ಲದ ನಿಮ್ಮ ಲೆನ್ಸ್‌ಗಳು ಮತ್ತು ಇತರ ಕಾರಣಗಳಿಗಾಗಿಯೂ ಸಹ Snap ನಿಮ್ಮನ್ನು ಸಂಪರ್ಕಿಸಬಹುದು. ದಯವಿಟ್ಟು ನಿಮ್ಮ Snapchat ಅಧಿಸೂಚನೆಗಳನ್ನು ಆಗಾಗ್ಗೆ ಪರಿಶೀಲಿಸಿ, ನಿಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ನವೀಕೃತವಾಗಿರಿಸಿ ಮತ್ತು ನಿಮ್ಮ ಇಮೇಲ್ ಅನ್ನು ಪರಿಶೀಲಿಸಿ.

11. ಮಧ್ಯಸ್ಥಿಕೆ ಮತ್ತು ನಿಯಂತ್ರಿಸುವ ಕಾನೂನು

ಜ್ಞಾಪನೆಯಾಗಿ, ಈ ನಿಯಮಗಳು Snap Inc. ಸೇವೆಯ ನಿಯಮಗಳು ಅಥವಾ Snap Group Limited ಸೇವೆಯ ನಿಯಮಗಳು ಅನ್ನು ಒಳಗೊಳ್ಳುತ್ತವೆ (ನೀವು ಎಲ್ಲಿ ನೆಲೆಸಿದ್ದೀರಿ ಅಥವಾ ಒಂದು ವೇಳೆ ನೀವು ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ, ವ್ಯವಹಾರ ಪ್ರಧಾನ ಸ್ಥಳ ಎಲ್ಲಿದೆ ಎಂಬುದನ್ನು ಆಧರಿಸಿ ನಿಮಗೆ ಯಾವುದು ಅನ್ವಯಿಸುತ್ತದೋ ಅದು). ಎಲ್ಲ Snap Inc. ಸೇವೆಯ ನಿಯಮಗಳು ಅಥವಾ Snap Group Limited ಸೇವೆಯ ನಿಯಮಗಳು (ಯಾವುದು ಅನ್ವಯಿಸುತ್ತದೋ ಅದು) ನಿಮಗೆ ಅನ್ವಯಿಸುತ್ತದಾದರೂ, ಈ ನಿಯಮಗಳು ಮಧ್ಯಸ್ಥಿಕೆ, ಸಮೂಹ-ಕ್ರಮ ವರ್ಜನೆ ಮತ್ತು ತೀರ್ಪುಗಾರರ ಮನ್ನಾ ವಿಧಿ, ಕಾನೂನಿನ ಆಯ್ಕೆ ವಿಧಿ ಮತ್ತು Snap Inc. ನ ಅನನ್ಯ ಸ್ಥಳ ವಿಧಿಯಿಂದ ನಿಯಂತ್ರಿಸಲ್ಪಡುತ್ತವೆ ಎಂದು ನಿರ್ದಿಷ್ಟವಾಗಿ ನಿಮ್ಮ ಗಮನ ಸೆಳೆಯಲು ನಾವು ಬಯಸುತ್ತೇವೆ. ಸೇವೆಯ ನಿಯಮಗಳು (ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ, ಅಥವಾ ಒಂದು ವ್ಯವಹಾರದ ಪರವಾಗಿ ನೀವು ಕಾರ್ಯನಿರ್ವಹಿಸುತ್ತಿದ್ದರೆ ಆ ವ್ಯವಹಾರದ ಪ್ರಧಾನ ಕಚೇರಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದರೆ) ಅಥವಾ ವಿವಾದ ಪರಿಹಾರ, ಮಧ್ಯಸ್ಥಿಕೆಯ ವಿಧಿ, ಕಾನೂನಿನ ಆಯ್ಕೆ ವಿಧಿ, ಮತ್ತು Snap Group Limited ಸೇವೆಯ ನಿಯಮಗಳ ಅನನ್ಯ ಸ್ಥಳ ವಿಧಿ (ನೀವು ಅಥವಾ ನೀವು ಕಾರ್ಯನಿರ್ವಹಿಸುತ್ತಿರುವ ವ್ಯವಹಾರದ ಪ್ರಧಾನ ಕಚೇರಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದರೆ).

ಮಧ್ಯಸ್ಥಿಕೆಯ ಅಧಿಸೂಚನೆ: ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಒಂದು ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, SNAP INC. ಸೇವೆಯ ನಿಯಮಗಳಲ್ಲಿ ಉಲ್ಲೇಖಿಸಿರುವ ವಿವಾದಗಳ ಕೆಲವು ವಿಧಗಳಿಗೆ ಹೊರತುಪಡಿಸಿ, ನಮ್ಮ ನಡುವೆ ಉದ್ಭವಿಸುವ ಶಾಸನಾತ್ಮಕ ಕ್ಲೈಮ್‌ಗಳು ಮತ್ತು ವಿವಾದಗಳು ಸೇರಿದಂತೆ, ಕ್ಲೈಮ್‌ಗಳು ಮತ್ತು ವಿವಾದಗಳನ್ನು THE SNAP INC. ಸೇವೆಯ ನಿಯಮಗಳಲ್ಲಿನ ಕಡ್ಡಾಯ ಬಾಧ್ಯತೆಯ ಮಧ್ಯಸ್ಥಿಕೆಯ ವಿಧಿಯಿಂದ ಪರಿಹರಿಸಲಾಗುತ್ತದೆ ಎಂದು ನೀವು ಮತ್ತು SNAP ಒಪ್ಪುತ್ತೀರಿ ಮತ್ತು ನೀವು ಮತ್ತು SNAP INC. ಸಾಮೂಹಿಕ ದಾವೆ ಅಥವಾ ಸಾಮೂಹಿಕ ಮಧ್ಯಸ್ಥಿಕೆಯಲ್ಲಿ ಭಾಗವಹಿಸಲು ಯಾವುದೇ ಹಕ್ಕನ್ನು ತ್ಯಜಿಸಿ. ಒಂದು ವೇಳೆ ಯುನೈಟೆಡ್ ಸ್ಟೇಟ್ಸ್ ಹೊರಗಿನ ಸ್ಥಳದಲ್ಲಿ ತನ್ನ ವ್ಯವಹಾರದ ಪ್ರಧಾನ ಕಚೇರಿಯನ್ನು ಹೊಂದಿರುವ ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, ಆಗ ನಮ್ಮ ನಡುವಿನ ವಿವಾದಗಳನ್ನು THE SNAP GROUP LIMITED ಸೇವೆಯ ನಿಯಮಗಳಲ್ಲಿನ ಮಧ್ಯಸ್ಥಿಕೆಯ ವಿಧಿಯಿಂದ ಬಗೆಹರಿಸಲಾಗುತ್ತದೆ ಎಂದು ನೀವು ಮತ್ತು SNAP GROUP LIMITED ಒಪ್ಪುತ್ತೀರಿ.

12. ಇತರೇ

ಕಾಲಕಾಲಕ್ಕೆ, ನಾವು ಈ ನಿಯಮಗಳನ್ನು ಪರಿಷ್ಕರಿಸಬಹುದು. ಮೇಲ್ಭಾಗದಲ್ಲಿ "ಜಾರಿಗೊಳಿಸಿದ್ದು" ದಿನಾಂಕವನ್ನು ಪರಿಶೀಲಿಸುವ ಮೂಲಕ ಈ ನಿಯಮಗಳನ್ನು ಯಾವಾಗ ಕೊನೆಯದಾಗಿ ಪರಿಷ್ಕರಿಸಲಾಗಿದೆ ಎನ್ನುವುದನ್ನು ನೀವು ನಿರ್ಧರಿಸಬಹುದು. ಈ ನಿಯಮಗಳಿಗೆ ಯಾವುದೇ ಬದಲಾವಣೆಗಳು ಮೇಲಿನ "ಜಾರಿ" ದಿನಾಂಕದಿಂದ ಜಾರಿಗೆ ಬರುತ್ತವೆ ಮತ್ತು ಆ ಸಮಯದ ಬಳಿಕ ಸೇವೆಗಳ ನಿಮ್ಮ ಬಳಕೆಗೆ ಅನ್ವಯಿಸುತ್ತವೆ. ಅಂತಹ ನಿಯಮಗಳ ಅತ್ಯಂತ ಇತ್ತೀಚಿನ ಆವೃತ್ತಿಯ ಕುರಿತು ನೀವು ತಿಳಿದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಅಪ್‌ಡೇಟ್‌ಗಳು ಸೇರಿದಂತೆ, ಈ ನಿಯಮಗಳನ್ನು ನಿಯಮಿತವಾಗಿ ಪರಿಶೀಲಿಸಲು ನೀವು ಒಪ್ಪುತ್ತೀರಿ. ಅಪ್‌ಡೇಟ್ ಮಾಡಿದ ನಿಯಮಗಳ ಸಾರ್ವಜನಿಕ ಪ್ರಕಟಣೆಯ ಬಳಿಕ ಸೇವೆಗಳನ್ನು ಬಳಸುವ ಮೂಲಕ, ಅಪ್‌ಡೇಟ್ ಮಾಡಿದ ನಿಯಮಗಳಿಗೆ ನೀವು ಒಪ್ಪಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ನೀವು ಮಾರ್ಪಾಡುಗಳಿಗೆ ಒಪ್ಪದಿದ್ದರೆ, ನೀವು ಸೇವೆಯನ್ನು ಬಳಸುವುದನ್ನು ನಿಲ್ಲಿಸಬೇಕು. ಈ ನಿಯಮಗಳ ಯಾವುದೇ ನಿಬಂಧನೆ ಜಾರಿಮಾಡಲಾಗದ್ದು ಎಂದು ಕಂಡುಬಂದರೆ, ಆಗ ಆ ನಿಬಂಧನೆಯನ್ನು ಪ್ರತ್ಯೇಕಿಸಲಾಗುತ್ತದೆ ಮತ್ತು ಯಾವುದೇ ಉಳಿದ ನಿಬಂಧನೆಗಳ ಮಾನ್ಯತೆ ಮತ್ತು ಜಾರಿಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ