logo


Snap ಸ್ಪಾಟ್‍ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳು

ಜಾರಿ: ಏಪ್ರಿಲ್ 1, 2024

ಮಧ್ಯಸ್ಥಿಕೆ ಸೂಚನೆ: ಈ ನಿಯಮಗಳು ಸ್ವಲ್ಪ ಮುಂದಕ್ಕೆ ಮಧ್ಯಸ್ಥಿಕೆ ವಿಧಿಯನ್ನು ಹೊಂದಿವೆ.

  • ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ವ್ಯವಹಾರದ ಪ್ರಧಾನ ಸ್ಥಳವನ್ನು ಹೊಂದಿರುವ ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ, SNAP INC. ನ ಮಧ್ಯಸ್ಥಿಕೆಯ ವಿಧಿಯಲ್ಲಿ ಉಲ್ಲೇಖಿಸಿರುವ ವಿವಾದಗಳನ್ನು ಹೊರತುಪಡಿಸಿ. ಸೇವೆಯ ನಿಯಮಗಳು, ನೀವು ಮತ್ತು SNAP INC. ನಮ್ಮ ನಡುವಿನ ವಿವಾದಗಳನ್ನು THE SNAP INC.ನಲ್ಲಿನ ಕಡ್ಡಾಯಮಧ್ಯಸ್ಥಿಕೆಯ ವಿಧಿಯಿಂದ ಪರಿಹರಿಸಲಾಗುತ್ತದೆ ಎಂದು ಒಪ್ಪುತ್ತೀರಿ. ಸೇವೆಯ ನಿಯಮಗಳು ,ಮತ್ತು ನೀವು ಮತ್ತು SNAP INC. ವರ್ಗ-ಕ್ರಿಯೆಯ ಮೊಕದ್ದಮೆ ಅಥವಾ ವರ್ಗ-ವ್ಯಾಪ್ತಿಯ ಮಧ್ಯಸ್ಥಿಕೆಯಲ್ಲಿ ಭಾಗವಹಿಸುವ ಯಾವುದೇ ಹಕ್ಕನ್ನು ತ್ಯಜಿಸಿರುತ್ತೀರಾ. ಆ ವಿಧಿಯಲ್ಲಿ ವಿವರಿಸಿರುವಂತೆ ಮಧ್ಯಸ್ಥಿಕೆಯಿಂದ ಹೊರಗುಳಿಯುವ ಹಕ್ಕನ್ನು ನೀವು ಹೊಂದಿದ್ದೀರಿ.

  • ಒಂದು ವೇಳೆ ಯುನೈಟೆಡ್ ಸ್ಟೇಟ್ಸ್ ಹೊರಗಿನ ಸ್ಥಳದಲ್ಲಿ ತನ್ನ ವ್ಯವಹಾರದ ಪ್ರಧಾನ ಕಚೇರಿಯನ್ನು ಹೊಂದಿರುವ ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, ಆಗ ನಮ್ಮ ನಡುವಿನ ವಿವಾದಗಳನ್ನು THE SNAP GROUP LIMITED ಸೇವೆಯ ನಿಯಮಗಳಲ್ಲಿನಮಧ್ಯಸ್ಥಿಕೆವಿಧಿಯಿಂದ ಬಗೆಹರಿಸಲಾಗುತ್ತದೆ ಎಂದು ನೀವು ಮತ್ತು SNAP (ಕೆಳಗೆ ವ್ಯಾಖ್ಯಾನಿಸಲಾಗಿದೆ) ಒಪ್ಪುತ್ತೀರಿ.

1. ಪ್ರಸ್ತಾವನೆ

Snapchat ನಲ್ಲಿ ಬಳಕೆದಾರರಿಂದ ರಚಿತವಾದ ಕಂಟೆಂಟ್‌ಗಾಗಿ ಮನರಂಜನಾ ವೇದಿಕೆಯಾದ Spotlight ಗೆ ಸ್ವಾಗತ, ಇಲ್ಲಿ ನೀವು Snapchat ಕಮ್ಯುನಿಟಿಯಿಂದ ಕೆಲವು ಅತ್ಯಂತ ಮನರಂಜನೆಯ Snap ಗಳನ್ನು ಆನಂದಿಸಬಹುದು. ಸ್ಪಾಟ್‌ಲೈಟ್ ಅನ್ನುವುದು ನಮ್ಮ ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಿರುವಂತೆ ಒಂದು "ಸೇವೆ" ಆಗಿದ್ದು, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು, ಸ್ಪಾಟ್‌ಲೈಟ್ ಮಾರ್ಗಸೂಚಿಗಳು ಮತ್ತು ಎಫ್‌ಎಕ್ಯೂ, Snapchat ಮಾರ್ಗಸೂಚಿ ಮೇಲಿನ ಸಂಗೀತ, ಮತ್ತು ಸೇವೆಯನ್ನು ನಿಯಂತ್ರಿಸುವ ಯಾವುದೇ ಇತರ ನಿಯಮಗಳ ಜೊತೆಗೆ ಅದನ್ನು ಉಲ್ಲೇಖದ ಮೂಲಕ ಈ Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳಲ್ಲಿ (“ಸ್ಪಾಟ್‌ಲೈಟ್ ನಿಯಮಗಳು”) ಒಳಗೊಳ್ಳಲಾಗಿದೆ. ನೀವು ಸೇವೆಗಳನ್ನು ಬಳಸಿದಾಗ ನಾವು ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವ ಕುರಿತು ತಿಳಿದುಕೊಳ್ಳಲು ದಯವಿಟ್ಟು ನಮ್ಮ ಗೌಪ್ಯತಾ ನೀತಿಯನ್ನು ಕೂಡ ಪರಿಶೀಲಿಸಿ. ದಯವಿಟ್ಟು ಸ್ಪಾಟ್‌ಲೈಟ್ ನಿಯಮಗಳನ್ನು ಜಾಗರೂಕತೆಯಿಂದ ಓದಿ. ಈ ಸ್ಪಾಟ್‌ಲೈಟ್ ನಿಯಮಗಳು ನಿಮ್ಮ (ಅಥವಾ ನಿಮ್ಮ ಸಂಸ್ಥೆ) ಮತ್ತು Snap Inc. ನಡುವೆ ಕಾನೂನುಬದ್ಧವಾಗಿ ಒಪ್ಪಂದ ಮಾಡಿಕೊಳ್ಳುತ್ತವೆ (ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ವ್ಯವಹಾರದ ಪ್ರಮುಖ ಸ್ಥಳದೊಂದಿಗೆ ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ) ಅಥವಾSnap ಗ್ರೂಪ್ ಲಿಮಿಟೆಡ್ (ನೀವು ಯುನೈಟೆಡ್ ಸ್ಟೇಟ್ಸ್‌ನ ಹೊರಗಡೆ ಇರುವ ವ್ಯವಹಾರದ ಪ್ರಮುಖ ಸ್ಥಳದೊಂದಿಗೆ ವ್ಯವಹಾರದ ಪರವಾಗಿ ವಾಸಿಸುತ್ತಿದ್ದರೆ ಅಥವಾ ಸೇವೆಗಳನ್ನು ಬಳಸುತ್ತಿದ್ದರೆ). ಈ Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳು ಸೇವೆಯನ್ನು ನಿಯಂತ್ರಿಸುವ ಇತರ ನಿಯಮಗಳೊಂದಿಗೆ ಸಂಘರ್ಷಕ್ಕೆ ಒಳಗಾಗುತ್ತವೆ, ಈ Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳು ನಿಮ್ಮ ಸ್ಪಾಟ್‌ಲೈಟ್ ಬಳಕೆಗೆ ಸಂಬಂಧಿಸಿದಂತೆ ಮಾತ್ರ ನಿಯಂತ್ರಿಸುತ್ತವೆ. ಈ Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳಲ್ಲಿ ಬಳಸಲಾಗಿರುವ ಆದರೆ ವ್ಯಾಖ್ಯಾನಿಸದ ಎಲ್ಲಾ ದೊಡ್ಡಕ್ಷರ ಪದಗಳು ಸೇವೆಯನ್ನು ನಿಯಂತ್ರಿಸುವ ಅನ್ವಯವಾಗುವ ನಿಯಮಗಳಲ್ಲಿ ಸೂಚಿಸಿರುವಂತೆ ಅವುಗಳ ಅರ್ಥಗಳನ್ನು ಹೊಂದಿವೆ. ದಯವಿಟ್ಟು ಈ Spotlight ನಿಯಮಗಳ ಒಂದು ಪ್ರತಿಯನ್ನು ಮುದ್ರಿಸಿ ಮತ್ತು ಪರಿಶೀಲನೆಗಾಗಿ ನಿಮ್ಮ ಬಳಿ ಇರಿಸಿಕೊಳ್ಳಿ.

ಕೆಳಗೆ ಇನ್ನಷ್ಟು ವಿವರವಾಗಿ ವಿವರಿಸಿರುವಂತೆ, ನಿಮ್ಮ SNAPCHAT ಖಾತೆ, ಸ್ಪಾಟ್‌ಲೈಟ್‌ಗೆ ನೀವು ಸಲ್ಲಿಸುವ SNAP ಗಳು ಮತ್ತು ನಿಮ್ಮ ಪಾವತಿ ಖಾತೆಯು (ಕೆಳಗೆ ವ್ಯಾಖ್ಯಾನಿಸಲಾಗಿದೆ) ಅನ್ವಯಿಸುವ ಅರ್ಹತಾ ಮಾನದಂಡವನ್ನು ಪೂರೈಸಿದರೆ, ನಿಮ್ಮ ಸ್ಪಾಟ್‌ಲೈಟ್ ಚಟುವಟಿಕೆಗೆ ಸಂಬಂಧಿಸಿದ ನಿಮ್ಮ ಸೇವೆಗಳಿಂದಾಗಿ ನೀವು ಪಾವತಿಗಳ ಸ್ವೀಕೃತರಾಗಬಹುದು. ಸ್ಪಾಟ್‌ಲೈಟ್‌ಗೆ SNAP ಗಳನ್ನು ಸಲ್ಲಿಸುವ ಕೆಲವೇ ಕ್ರಿಯೇಟರ್‌ಗಳು ಮಾತ್ರ ಪಾವತಿಗಳ ಸ್ವೀಕೃತರಾಗುತ್ತಾರೆ.

2. ಸ್ಪಾಟ್‌ಲೈಟ್‌ಗೆ ನೀವು ಸಲ್ಲಿಸುವ ಕಂಟೆಂಟ್‌ಗಾಗಿ ಅಗತ್ಯಗಳು ಮತ್ತು ಹಕ್ಕುಗಳು

ಯಾವುದೇ ಅರ್ಹ Snapchat ಬಳಕೆದಾರ ಕಂಟೆಂಟ್ ಅನ್ನು (ಅದನ್ನು ನಾವು “Snap ಗಳು” ಎನ್ನುತ್ತೇವೆ) ಸ್ಪಾಟ್‌ಲೈಟ್‌ಗೆ ಸಲ್ಲಿಸಬಹುದು (ಸ್ಪಾಟ್‌ಲೈಟ್‌ಗೆ Snap ಸಲ್ಲಿಸುವ ಪ್ರತಿ ಬಳಕೆದಾರ, ಒಬ್ಬ “ಸೇವಾ ಪೂರೈಕೆದಾರ” ಅಥವಾ “ಕ್ರಿಯೇಟರ್”). ಸ್ಪಾಟ್‌ಲೈಟ್‌ಗೆ ಸಲ್ಲಿಸಿದ ಯಾವುದೇ Snap ಗಳು Snap Inc. ಸೇವೆಯ ನಿಯಮಗಳು ವಿಭಾಗ 3 ಅಥವಾ Snap Group Limited ಸೇವೆಯ ನಿಯಮಗಳು ವಿಭಾಗ 3 ರಲ್ಲಿ ವ್ಯಾಖ್ಯಾನಿಸಿರುವಂತೆ "ಸಾರ್ವಜನಿಕ ವಿಷಯ" ಆಗಿರುತ್ತವೆ (ನೀವು ಎಲ್ಲಿ ವಾಸಿಸುತ್ತಿದ್ದೀರಿ ಅಥವಾ ಒಂದು ವೇಳೆ ನೀವು ಒಂದು ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ, ಆ ವ್ಯವಹಾರದ ಪ್ರಧಾನ ವ್ಯವಹಾರ ಸ್ಥಳ ಎಲ್ಲಿದೆ ಎನ್ನುವುದನ್ನು ಆಧರಿಸಿ ನಿಮಗೆ ಯಾವುದು ಅನ್ವಯಿಸುತ್ತದೋ ಅದು).

Snap ಗಳು ಸಾರ್ವಜನಿಕ ಕಂಟೆಂಟ್ ಆಗಿರುವ ಕಾರಣ, ಸ್ಪಾಟ್‌ಲೈಟ್‌ಗೆ ನೀವು ಸಲ್ಲಿಸುವ ಯಾವುದೇ Snap ಗಳು, ನೀವು ಹೊಂದಿರಬಹುದಾದ ಇತರ ಯಾವುದೇ ಬಾಧ್ಯತೆಗಳಿಗೆ ಸೀಮಿತಗೊಳಿಸದೆ, (i) ನಿಮ್ಮ Snap ಗಳಲ್ಲಿರುವ ಎಲ್ಲ ಕಂಟೆಂಟ್‌ಗೆ, ಸಂಗೀತ ಕೃತಿಸ್ವಾಮ್ಯಗಳು ಮತ್ತು ಪ್ರಚಾರದ ಹಕ್ಕುಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಯಾವುದೇ ಅಗತ್ಯ ತೃತೀಯ-ಪಕ್ಷದ ಹಕ್ಕುಗಳನ್ನು ನೀವು ಹೊಂದಿರಬೇಕು, (ii) ನೀವು ಸಾರ್ವಜನಿಕ ವಿಷಯವನ್ನು ಕಾಣಿಸಿಕೊಂಡಾಗ, ರಚಿಸುವಾಗ, ಅಪ್‌ಲೋಡ್ ಮಾಡುವಾಗ, ಪೋಸ್ಟ್ ಮಾಡುವಾಗ ಅಥವಾ ಕಳುಹಿಸುವಾಗ, ನೀವು Snap, ನಮ್ಮ ಅಂಗಸಂಸ್ಥೆಗಳು ಮತ್ತು ನಮ್ಮ ವ್ಯಾಪಾರ ಪಾಲುದಾರರಿಗೆ ನಿಮ್ಮ ಹೆಸರು, ಹೋಲಿಕೆ ಮತ್ತು ಧ್ವನಿ ಬಳಸಲು ಅನಿಯಂತ್ರಿತ, ವಿಶ್ವಾದ್ಯಂತ, ರಾಯಧನ ರಹಿತ ಹಕ್ಕು ಮತ್ತು ಅಂತಹ ಹಕ್ಕುಗಳ ಅವಧಿಗೆ ಪರವಾನಗಿ ನೀಡುತ್ತೀರಿ. ವಾಣಿಜ್ಯ ಅಥವಾ ಪ್ರಾಯೋಜಿತ ವಿಷಯಕ್ಕೆ ಸಂಬಂಧಿಸಿದಂತೆ, (iii) ನಿಮ್ಮ ವಿಷಯದ ಉತ್ಪನ್ನಗಳನ್ನು ಮಾಡಲು ನೀವು ನಮಗೆ ಉಪಪರವಾನಗಿ ನೀಡಬಹುದಾದ ಹಕ್ಕನ್ನು ನೀಡಿದ್ದರಿಂದ, ನೀವು ನಮಗೆ ಮತ್ತು ಸೇವೆಗಳ ಇತರ ಬಳಕೆದಾರರಿಗೆ ಸಂವಹನ ಮತ್ತು ಪ್ರದರ್ಶನ, ವಾಣಿಜ್ಯ ಅಥವಾ ಪ್ರಾಯೋಜಿತ ವಿಷಯಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕವಾಗಿ ನಕಲಿಸಲು, ಸಂಪಾದಿಸಲು ಮತ್ತು ಪ್ರತ್ಯೇಕವಾಗಿ ಸಿಂಕ್ರೊನೈಸ್ ಮಾಡಲು ರಾಯಧನ ರಹಿತ ಹಕ್ಕನ್ನು ನೀಡಿದ್ದೀರಿ. ಮತ್ತು ಇಲ್ಲದಿದ್ದಲ್ಲಿ ಹೊಸ Snap ಗಳು ಮತ್ತು ಹೊಸ ಸಾರ್ವಜನಿಕ ವಿಷಯ ಸೇರಿದಂತೆ, ಹೊಸ ವಿಷಯ ರಚಿಸಲು ಯಾವುದೇ ವಿಷಯವನ್ನು (ನಿಮ್ಮ Snap ನಲ್ಲಿನ ಆಡಿಯೊ ಮತ್ತು ವೀಡಿಯೊ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ) ಬಳಸುವುದು ಮತ್ತು ವಿತರಣೆ ಮಾಡುವುದು, ಮತ್ತು (iv) ಒಂದು ವೇಳೆ ನಿಮ್ಮ Snap, ನಿಮ್ಮ ವಿಷಯ, ಧ್ವನಿ ರೆಕಾರ್ಡಿಂಗ್, ಸಂಯೋಜನೆಗಳು ಅಥವಾ ನಿಮ್ಮ ಹೆಸರು, ಹೋಲಿಕೆ ಅಥವಾ ಧ್ವನಿಯನ್ನು ಸೇವೆಯ ಮೂಲಕ, Snapchat ಅಪ್ಲಿಕೇಶನ್‌ನಲ್ಲಿ ಅಥವಾ ನಮ್ಮ ವ್ಯಾಪಾರ ಪಾಲುದಾರರ ಪ್ಲಾಟ್‌ಫಾರ್ಮ್‌ಗಳಲ್ಲಿ ತಿಳಿಸಿದರೆ, ಈ Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳಲ್ಲಿ ವಿವರಿಸಿದಂತೆ ರಚನೆಕಾರನಾಗಿ ಹಣವನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊರತುಪಡಿಸಿ, Snap, ನಮ್ಮ ಅಂಗಸಂಸ್ಥೆಗಳು, ನಮ್ಮ ವ್ಯಾಪಾರ ಪಾಲುದಾರರು ಅಥವಾ ಅನ್ವಯಿಸಿದರೆ ಇತರ ಬಳಕೆದಾರರಿಂದ ಯಾವುದೇ ಪರಿಹಾರಕ್ಕೆ ನೀವು ಅರ್ಹರಾಗಿರುವುದಿಲ್ಲ.

ಎಲ್ಲ ಕ್ರಿಯೇಟರ್‌ಗಳು ಮತ್ತು ಸ್ಪಾಟ್‌ಲೈಟ್‌ಗೆ ಸಲ್ಲಿಸಿದ Snap ಗಳು ಈ ಸ್ಪಾಟ್‌ಲೈಟ್ ನಿಯಮಗಳ ಅನುಸರಣೆ ಮಾಡಬೇಕು. Snapನ ಮಾಡರೇಷನ್ ಆಲ್ಗಾರಿದಂಗಳು ಮತ್ತು ವಿಮರ್ಶೆ ಕಾರ್ಯವಿಧಾನಗಳಿಗೆ ಅನುಸಾರವಾಗಿ, ಈ ಸ್ಪಾಟ್‌ಲೈಟ್‌ ನಿಯಮಗಳೊಂದಿಗೆ ಅನುಸರಣೆಗಾಗಿ ಕ್ರಿಯೇಟರ್‌ಗಳು ಮತ್ತು Snap ಗಳು ವಿಮರ್ಶೆಗೆ ಒಳಪಡುತ್ತವೆ. ಅನುಸರಣೆ ಮಾಡದಿರುವ ಕ್ರಿಯೇಟರ್‌ಗಳು ಮತ್ತು Snap ಗಳನ್ನು ವಿತರಣೆ ಮಾಡಲಾಗದು ಅಥವಾ ಪಾವತಿಗಳನ್ನು ಸ್ವೀಕರಿಸಲು ಅನರ್ಹ ಎಂದು ಪರಿಗಣಿಸಬಹುದು.

ಸ್ಪಾಟ್‌ಲೈಟ್‌ನಲ್ಲಿರುವ Snap ಗಳನ್ನು Snap ನ ಸ್ವಾಮ್ಯದ ಕಂಟೆಂಟ್ ವಿತರಣೆ ಆಲ್ಗಾರಿದಂ ಮತ್ತು ಕಾರ್ಯವಿಧಾನಗಳ ಮೂಲಕ ವಿತರಣೆ ಮಾಡಲಾಗುತ್ತದೆ. ಸ್ಪಾಟ್‌ಲೈಟ್‌ನ ಗುಣಮಟ್ಟವನ್ನು ಕಾಯ್ದುಕೊಳ್ಳುವ ಸಲುವಾಗಿ, Snapchat ಅಪ್ಲಿಕೇಶನ್‌ನಲ್ಲಿ ಕಂಟೆಂಟ್‌ನ ಕಾರ್ಯನಿರ್ವಹಣೆಗಾಗಿ Snap ನ ಮಾನದಂಡ ಆಧರಿಸಿ, ಒಂದಿಷ್ಟು ಸಮಯದವರೆಗೆ ಕ್ರಿಯೇಟರ್‌ ಸಲ್ಲಿಸಬಹುದಾದ Snap ಗಳ ಸಂಖ್ಯೆಯನ್ನು ಕೂಡ ನಾವು ಮಿತಿಗೊಳಿಸಬಹುದು, ಒಂದು ವೇಳೆ ನೀವು ಮಿತಿಯನ್ನು ಮೀರಿದರೆ, ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸಿದಾಗ ನಿಮಗೆ ಸೂಚನೆ ನೀಡಲಾಗುತ್ತದೆ.

3. ಸ್ಪಾಟ್‌ಲೈಟ್ ಪಾವತಿ ಅರ್ಹತೆ

ಸ್ಪಾಟ್‌ಲೈಟ್‌ಗೆ ನಿಮ್ಮ Snap ಗಳನ್ನು ಸೃಷ್ಟಿಸುವ ಮತ್ತು ಪೋಸ್ಟ್ ಮಾಡುವ ಸೇವೆಗಳನ್ನು ನಿರ್ವಹಿಸುವುದಕ್ಕೆ ನಿಮಗೆ ಉತ್ತೇಜನ ಮತ್ತು ಪ್ರೋತ್ಸಾಹಧನ ನೀಡಲು, ಈ ಸ್ಪಾಟ್‌ಲೈಟ್ ನಿಯಮಗಳಲ್ಲಿ ವಿವರಿಸಿರುವಂತೆ ಒಂದು ವೇಳೆ ನೀವು ಅರ್ಹರಾದರೆ ನಿಮ್ಮ ಸೇವೆಗಳಿಗೆ ಪಾವತಿಸಲು ನಾವು ಬಯಸುತ್ತೇವೆ. ಸ್ಪಾಟ್‌ಲೈಟ್‌ಗೆ Snap ಗಳನ್ನು ಸಲ್ಲಿಸುವವರಲ್ಲಿ ಕೇವಲ ಅಲ್ಪ ಪ್ರಮಾಣದ ಸೃಷ್ಟಿಕರ್ತರು ಮಾತ್ರ ಪಾವತಿಗಳ ಸ್ವೀಕೃತರಾಗುತ್ತಾರೆ. ಈ ಸ್ಪಾಟ್‌ಲೈಟ್ ನಿಯಮಗಳಿಗೆ ನಿಮ್ಮ ಕರಾರಿಗೆ ಮುಂಚೆ ಸ್ಪಾಟ್‌ಲೈಟ್‌ಗೆ ಸಲ್ಲಿಸಿರುವ Snap ಗಳು ಪಾವತಿಗಳಿಗೆ ಅರ್ಹವಾಗಿರುವುದಿಲ್ಲ. ಪಾವತಿಗಳನ್ನು ಸ್ವೀಕರಿಸುವ ಸಾಮರ್ಥ್ಯ ಸೀಮಿತ ಸಂಖ್ಯೆಯ ದೇಶಗಳಲ್ಲಿ ಮಾತ್ರ ಲಭ್ಯವಿದೆ, ಅವುಗಳನ್ನು ಸ್ಪಾಟ್‌ಲೈಟ್ ಮಾರ್ಗಸೂಚಿಗಳು ಮತ್ತು ಎಫ್‌ಎಕ್ಯೂ ನಲ್ಲಿ ಪಟ್ಟಿ ಮಾಡಲಾಗಿದೆ (“ಅರ್ಹ ದೇಶಗಳು”). ಯಾವುದೇ ಸಮಯದಲ್ಲಿ, ಅರ್ಹ ದೇಶಗಳ ಪಟ್ಟಿಗೆ Snap ದೇಶಗಳನ್ನು ಸೇರಿಸಬಹುದು ಅಥವಾ ಅದರಿಂದ ತೆಗೆದುಹಾಕಬಹುದು. ಪಾವತಿಯನ್ನು ಒಂದೋ Snap ನಿಂದ ಅಥವಾ ಆ ದಿನದಂದು ಸ್ಪಾಟ್‌ಲೈಟ್‌ನಲ್ಲಿ ವಿತರಿಸಿದ ಜಾಹೀರಾತುಗಳಿಂದ ಸ್ವೀಕರಿಸಿದ ಆದಾಯದ(ಯಾವುದಾದರೂ ಇದ್ದಲ್ಲಿ) ಒಂದು ಭಾಗದಿಂದ ವಿತರಣೆ ಮಾಡಬಹುದು, (ಕೆಳಗೆ ಸಂಭಾವ್ಯವಾಗಿ ಮಾರ್ಪಡಿಸಿರುವಂತೆ, ನಿಮಗೆ ನಮ್ಮ ಪಾವತಿಗಳು, “ಸೇವಾ ಪಾವತಿ” ಅಥವಾ ಕೇವಲ “ಪಾವತಿ ಆಗಿರುತ್ತದೆ).

ಪಾವತಿಗೆ ಅರ್ಹರಾಗಲು, ನೀವು (i) ಅರ್ಹತಾ Snap ಗಳನ್ನು ಸಲ್ಲಿಸಬೇಕು, (ii) ಅರ್ಹತೆ ಇರುವಂತಹ ಸೃಷ್ಟಿಕರ್ತರಾಗಿರಬೇಕು ಮತ್ತು (iii) ಕೆಳಗೆ ವಿವರಿಸಿರುವಂತೆ, ಎಲ್ಲ ಪಾವತಿ ಖಾತೆ ಅರ್ಹತಾ ಅಗತ್ಯಗಳನ್ನು ಪೂರೈಸಬೇಕು.

  • ಅರ್ಹತಾ Snap ಗಳು. “ಅರ್ಹತೆ ಪಡೆಯುವ Snap ಗಳು” ಎಂದು ಪರಿಗಣಿಸಲು, ಅರ್ಹತಾ ಅವಧಿಯಲ್ಲಿ ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸಿದ Snap ಗಳು ಈ ರೀತಿ ಇರಬೇಕು: (i) ಅರ್ಹತೆಯ ಅವಧಿಯಲ್ಲಿ ನಮ್ಮ ಸ್ವಾಮ್ಯದ ಸೂತ್ರ ಆಧರಿಸಿ ಲೆಕ್ಕಾಚಾರ ಮಾಡಲಾಗುವ, ಕನಿಷ್ಟ 10,000 ಒಟ್ಟು ವಿಶಿಷ್ಟ ವೀಡಿಯೊ ವೀಕ್ಷಣೆಗಳನ್ನು ("ವೀಕ್ಷಣೆಯ ಮೇಲ್ಮಿತಿ") ಪಡೆಯುವಷ್ಟು ಉತ್ತಮವಾಗಿ ಸ್ಪಾಟ್‌ಲೈಟ್‌ನಲ್ಲಿ ಕಾರ್ಯನಿರ್ವಹಿಸಿರಬೇಕು, (ii) ಕನಿಷ್ಟ 5 ಭಿನ್ನ ದಿನಗಳಂದು ಸಲ್ಲಿಸಿದ 10 ವಿಶಿಷ್ಟ Snap ಗಳನ್ನು ಒಳಗೊಂಡಿರಬೇಕು ಮತ್ತು (iii) Snapchat ಕ್ರಿಯೇಟಿವ್ ಟೂಲ್ಸ್ (ಉದಾ., ಲೆನ್ಸ್‌ಗಳು, ಫಿಲ್ಟರ್‌ಗಳು, ಧ್ವನಿಗಳು) ಬಳಸಿಕೊಂಡಿರುವ ಕನಿಷ್ಟ 5 Snap ಗಳನ್ನು ಒಳಗೊಂಡಿರಬೇಕು. "ಅರ್ಹತಾ ಅವಧಿ" ಅಂದರೆ ಪೆಸಿಫಿಕ್ ಜಾಗದ ಸಮಯ ಬಳಸಿಕೊಂಡು ಲೆಕ್ಕಾಚಾರ ಮಾಡಿದ ಹಿಂದಿನ ಕ್ಯಾಲೆಂಡರ್ ತಿಂಗಳು.

  • ಅರ್ಹತಾ ಸೃಷ್ಟಿಕರ್ತರು. “ಅರ್ಹತಾ ಸೃಷ್ಟಿಕರ್ತರು” ಎಂದು ಪರಿಗಣಿಸಲ್ಪಡಲು, ಅರ್ಹತಾ ಅವಧಿಯಲ್ಲಿ ನೀವು ಈ ಮುಂದಿನ ಎಲ್ಲ ಮಾನದಂಡಗಳನ್ನು ಪೂರೈಸಬೇಕು: (i) ನೀವು ಅರ್ಹ ದೇಶದ ಕಾನೂನುಬದ್ಧ ನಿವಾಸಿಯಾಗಿರಬೇಕು, (ii) ನೀವು ಸಾರ್ವಜನಿಕವಾಗಿ ಪ್ರೊಫೈಲ್ ಅನ್ನು ಹೊಂದಿರಬೇಕು, (iii) ನಿಮ್ಮ Snapchat ಖಾತೆ ಕನಿಷ್ಟ ಒಂದು ತಿಂಗಳು ಹಳತಾಗಿರಬೇಕು ಮತ್ತು (iv) ನೀವು ಕನಿಷ್ಟ 1,000 ಫಾಲೋವರ್‌ಗಳನ್ನು ಹೊಂದಿರಬೇಕು.

  • ಪಾವತಿ ಖಾತೆ ಅರ್ಹತೆ. ಪಾವತಿಗಳಿಗೆ ಅರ್ಹರಾಗಲು, ನೀವು ಎಲ್ಲ ಪಾವತಿ ಖಾತೆ ಅರ್ಹತಾ ಅಗತ್ಯಗಳನ್ನು ಕೂಡ ಪೂರೈಸಬೇಕು (ಕೆಳಗೆ ವ್ಯಾಖ್ಯಾನಿಸಲಾಗಿದೆ).

ಒಂದು ವೇಳೆ, ಅನ್ವಯಿಸುವ ಅರ್ಹತಾ ಅವಧಿಯಲ್ಲಿ, ನೀವು ಅರ್ಹತೆ ಪಡೆಯುವ Snap ಗಳನ್ನು ಸಲ್ಲಿಸಿದರೆ ಮತ್ತು ಅರ್ಹತಾ ಸೃಷ್ಟಿಕರ್ತರಾಗುವುದಕ್ಕೆ ಮಾನದಂಡವನ್ನು ಪೂರೈಸಿದರೆ, ಆಗ ಪಾವತಿ ಖಾತೆ ಅರ್ಹತಾ ಅಗತ್ಯಗಳನ್ನು (ಕೆಳಗೆ ವ್ಯಾಖ್ಯಾನಿಸಲಾಗಿದೆ) ನೀವು ಪೂರೈಸುವುದು ಮತ್ತು ಈ ಸ್ಪಾಟ್‌ಲೈಟ್ ನಿಯಮಗಳ ಅನುಸರಣೆ ಮಾಡುವುದು ಒಳಪಟ್ಟು, ನಿಮ್ಮ ಅರ್ಹತೆ ಪಡೆದ Snap ಗಳಿಗೆ ಸಂಬಂಧಿಸಿ ನಿಮ್ಮ ಸೇವೆಗಳಿಗಾಗಿ ಪಾವತಿ ಸ್ವೀಕರಿಸಲು ನೀವು ಅರ್ಹರಾಗುತ್ತೀರಿ ("ಅರ್ಹತಾ ಚಟುವಟಿಕೆ").

  • ಕಾಲಕಾಲಕ್ಕೆ ನಮ್ಮಿಂದ ಹೊಂದಾಣಿಕೆ ಮಾಡಲ್ಪಡುವ ಮತ್ತು ನಿಮ್ಮ ಅರ್ಹತೆ ಪಡೆಯುವ Snap ಗಳಿಗೆ ಅನ್ವಯಿಸಬಹುದಾದ ವಿಶಿಷ್ಟ ವೀಡಿಯೊ ವೀಕ್ಷಣೆಗಳ ಒಟ್ಟು ಸಂಖ್ಯೆ, ಸ್ಪಾಟ್‌ಲೈಟ್‌ನಲ್ಲಿ ಇತರ Snap ಗಳ ಹೋಲಿಕೆಯಲ್ಲಿ ನಿಮ್ಮ ಅರ್ಹತೆ ಪಡೆಯುವ Snap ಗಳು ಉತ್ಪಾದಿಸುವ ಸಾಪೇಕ್ಷ ಕಾರ್ಯಕ್ಷಮತೆ ಮತ್ತು ತೊಡಗಿಕೊಳ್ಳುವಿಕೆ ಹಾಗೂ ನಿಮ್ಮ ಅರ್ಹತೆ ಪಡೆಯುವ Snap ಗಳ ಭೌಗೋಳಿಕ ಸ್ಥಳ ಅಥವಾ ಅರ್ಹತಾ ಅವಧಿಯಲ್ಲಿ ನಿಮ್ಮ ಅರ್ಹತೆ ಪಡೆಯುವ Snap ಗಳನ್ನು ವೀಕ್ಷಿಸುವ ಬಳಕೆದಾರರು ಮುಂತಾದವುಗಳನ್ನು ಒಳಗೊಂಡಿರಬಹುದಾದ ಕೆಲವು ಅಂಶಗಳನ್ನು ಆಧರಿಸಿರುವ, ನಮ್ಮ ಸ್ವಾಮ್ಯದ ಪಾವತಿ ಸೂತ್ರಕ್ಕೆ ಅನುಸಾರವಾಗಿ ಪಾವತಿಗಳನ್ನು ಹಂಚಿಕೆ ಮಾಡಲಾಗುತ್ತದೆ.

  • ನೀವು ವೀಕ್ಷಣೆಯ ಮೇಲ್ಮಿತಿಯನ್ನು ತಲುಪುತ್ತೀರಾ ಎನ್ನುವುದು ಮತ್ತು ನೀವು ಸ್ವೀಕರಿಸಲು ಅರ್ಹರಾಗಿರಬಹುದಾದ ಪಾವತಿಯ ಮೊತ್ತವು ನಮ್ಮ ಮಿತಗೊಳಿಸುವಿಕೆ ಮತ್ತು ವಿಷಯ ಸಲಹೆ ಆಲ್ಗಾರಿದಂಗಳು ಮತ್ತು ಕಾರ್ಯವಿಧಾನಗಳಿಂದಲೂ ಪ್ರಭಾವಿತವಾಗಬಹುದಾಗಿದ್ದು, ಇದು ವಿಶಿಷ್ಟ ವೀಡಿಯೊ ವೀಕ್ಷಣೆಗಳು ಮತ್ತು ಒಂದು Snap ಗೆ ಅನ್ವಯಿಸಬಹುದಾದ ಮೆಚ್ಚಿನವುಗಳ ಒಟ್ಟು ಸಂಖ್ಯೆ, ನಿಮ್ಮ ವಿಷಯವನ್ನು ವೀಕ್ಷಿಸುವ ದೈನಂದಿನ ಬಳಕೆದಾರರ ಸಂಖ್ಯೆ, ನಿಮ್ಮ ವಿಷಯ ವೀಕ್ಷಿಸಲು ಬಳಕೆದಾರರು ವ್ಯಯಿಸುವ ಸಮಯ, ನಿಮ್ಮ ಭೌಗೋಳಿಕ ಸ್ಥಳ ಮತ್ತು ಖಾತೆ ಸ್ಥಿತಿ, ನಿಮ್ಮ ವಿಷಯದ ಹಿಂದಿನ ಕಾರ್ಯಕ್ಷಮತೆ, ನಿಮ್ಮ ವಿಷಯ Snap ತಂತ್ರಜ್ಞಾನವನ್ನು ಬಳಸುತ್ತದೆಯೇ (ಉದಾ., Snapchat ಕ್ಯಾಮೆರಾ, ಲೆನ್ಸ್‌ಗಳು, ಫಿಲ್ಟರ್‌ಗಳು, ಧ್ವನಿಗಳು ಇತ್ಯಾದಿ), Snapchat ಅಪ್ಲಿಕೇಶನ್‌ನಲ್ಲಿನ ಟ್ರೆಂಡಿಂಗ್ ಪುಟದ ಮೂಲಕ ಅಥವಾ ಸ್ಪಾಟ್‌ಲೈಟ್ ಸಲಹೆಗಳು ಮತ್ತು ತಂತ್ರಗಳು ಪುಟದಲ್ಲಿ ಕಾಲಕಾಲಕ್ಕೆ ನಾವು ಪ್ರಕಟಿಸಬಹುದಾದ, ಪ್ರಸ್ತುತ ಟ್ರೆಂಡ್‌ಗಳು ಮತ್ತು ವಿಷಯಗಳಿಗೆ ನಿಮ್ಮ ವಿಷಯ ಸಂಬಂಧಿಸಿದೆಯೇ ಮತ್ತು ನಿಮ್ಮ ವಿಷಯ ಮತ್ತು ಖಾತೆ ಈ ಸ್ಪಾಟ್‌ಲೈಟ್ ಮಾರ್ಗಸೂಚಿಗಳಿಗೆ (ಉಲ್ಲೇಖದ ಮೂಲಕ ಒಳಗೊಂಡಿರುವ ಎಲ್ಲ ಮಾರ್ಗಸೂಚಿಗಳು ಸೇರಿದಂತೆ) ಅನುಸರಣೆ ಹೊಂದಿದೆಯೇ ಎನ್ನುವುದು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ವಿಷಯವನ್ನು ಆದ್ಯತೆಗೊಳಿಸಬಹುದು.

ಒಂದು ನಿಗದಿತ ಅವಧಿಯಲ್ಲಿ ನಿಮ್ಮ ಅರ್ಹತಾ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಮತ್ತು ದಾಖಲಿಸಲು ನಾವು ಬಳಸುವ ಮಾಪನದ ಘಟಕವಾದ "ಕ್ರಿಸ್ಟಲ್‌ಗಳನ್ನು" ಬಳಸಿ ನಮ್ಮ ಆಂತರಿಕ ವ್ಯವಸ್ಥೆಗಳಿಗಾಗಿ ಅರ್ಹತಾ ಚಟುವಟಿಕೆಯನ್ನು ಪರಿಗಣಿಸಲಾಗುತ್ತದೆ.

  • ಅರ್ಹತಾ ಚಟುವಟಿಕೆಗಾಗಿ ನಾವು ದಾಖಲಿಸುವ ಕ್ರಿಸ್ಟಲ್‌ಗಳ ಸಂಖ್ಯೆಯು ನಮ್ಮ ಸ್ವಂತ ವಿವೇಚನೆ ಮೇರೆಗೆ ನಾವು ಕಾಲಕಾಲಕ್ಕೆ ಮಾರ್ಪಾಡು ಮಾಡಬಹುದಾದ ನಮ್ಮ ಆಂತರಿಕ ಮಾನದಂಡ ಮತ್ತು ಸೂತ್ರಗಳನ್ನು ಆಧರಿಸಿ ವ್ಯತ್ಯಾಸವಾಗಬಹುದು. ನಿಮ್ಮ ಪ್ರೊಫೈಲ್‌ಗೆ ("ಪ್ರೊಫೈಲ್") ಹೋಗುವ ಮೂಲಕ ನಿಮ್ಮ ಅರ್ಹತಾ ಚಟುವಟಿಕೆಗೆ ನಾವು ದಾಖಲಿಸಿರುವ ಅಂದಾಜು ಕ್ರಿಸ್ಟಲ್‌ಗಳ ಸಂಖ್ಯೆಯನ್ನು ನೀವು ನೋಡಬಹುದು. ನಿಮ್ಮ ಪ್ರೊಫೈಲ್ ಮೂಲಕ ವೀಕ್ಷಿಸಬಹುದಾದ ಅಂಥ ಯಾವುದೇ ಸಂಖ್ಯೆಗಳು ನಮ್ಮ ಆಂತರಿಕ ಲೆಕ್ಕಾಚಾರದ ಉದ್ದೇಶಕ್ಕಾಗಿ ಮಾಡಲಾದ ಪೂರ್ವಭಾವಿ ಅಂದಾಜುಗಳಾಗಿರುತ್ತವೆ ಎನ್ನುವುದನ್ನು ದಯವಿಟ್ಟು ಗಮನಿಸಿ. ಕ್ರಿಸ್ಟಲ್‌ಗಳು ಕೇವಲ ಒಂದು ಆಂತರಿಕ ಮಾಪನ ಸಾಧನವಾಗಿದ್ದು ಅರ್ಹತಾ ಚಟುವಟಿಕೆಯನ್ನು ಟ್ರ್ಯಾಕ್‌ ಮಾಡಲು ಮತ್ತು ನಿಮ್ಮ ವಿಷಯದ ಜನಪ್ರಿಯತೆಯನ್ನು ಅಳೆಯಲು ನಮ್ಮಿಂದ ಬಳಕೆಯಾಗುತ್ತವೆ. ಸ್ಪಷ್ಟತೆಗಾಗಿ, ಕ್ರಿಸ್ಟಲ್‌ಗಳು ಯಾವುದೇ ಹಕ್ಕುಗಳನ್ನು ನೀಡುವ ಅಥವಾ ಸೂಚಿಸುವ ಉದ್ದೇಶವನ್ನು ಹೊಂದಿಲ್ಲ ಅಥವಾ ಯಾವುದೇ ಬಾಧ್ಯತೆಗಳನ್ನು ಪ್ರತಿನಿಧಿಸುವುದಿಲ್ಲ, ಸ್ವತ್ತನ್ನು ರಚಿಸುವುದಿಲ್ಲ, ಅವುಗಳನ್ನು ವರ್ಗಾವಣೆ ಮಾಡಲು ಅಥವಾ ನಿಯೋಜಿಸಲು ಸಾಧ್ಯವಿಲ್ಲ ಮತ್ತು ಖರೀದಿ ಮಾಡಲು ಸಾಧ್ಯವಿಲ್ಲ ಅಥವಾ ಮಾರಾಟ, ವಸ್ತುವಿನಿಮಯ ಅಥವಾ ವಿನಿಮಯದ ಭಾಗವಾಗಿಸುವಂತಿಲ್ಲ.

  • ಕಾಲಕಾಲಕ್ಕೆ ನಮ್ಮಿಂದ ಹೊಂದಾಣಿಕೆ ಮಾಡಲ್ಪಡಬಹುದಾದ, ನಮ್ಮ ಸ್ವಾಮ್ಯದ ಪಾವತಿ ಸೂತ್ರಕ್ಕೆ ಅನುಸಾರವಾಗಿ ನಿರ್ದಿಷ್ಟ ಅವಧಿಯಲ್ಲಿ ಸೃಷ್ಟಿಕರ್ತರ ಅರ್ಹತಾ ಚಟುವಟಿಕೆಗಾಗಿ ನಾವು ದಾಖಲಿಸಿರುವ ಕ್ರಿಸ್ಟಲ್‌ಗಳ ಅಂತಿಮ ಸಂಖ್ಯೆಯನ್ನು ಆಧರಿಸಿ ಅರ್ಹ ಸೃಷ್ಟಿಕರ್ತರ ಪಾವತಿ ಮೊತ್ತಗಳನ್ನು ನಿರ್ಧರಿಸಲಾಗುತ್ತದೆ.

  • ಒಂದು ಚಟುವಟಿಕೆಯು ಅರ್ಹತಾ ಚಟುವಟಿಕೆಯಾಗುತ್ತದೆಯೇ ಎಂದು ನಿರ್ಧರಿಸಲು, ನಾವು "ಅಮಾನ್ಯ ಚಟುವಟಿಕೆ" ಎಂದು ಕರೆಯುವ, ಅಂದರೆ, ನಿಮ್ಮ Snap ಗಳ ಅಥವಾ ಖಾತೆಯ ನೋಟಗಳು, ಫಾಲೋವರ್‌ಗಳ ಸಂಖ್ಯೆಯನ್ನು ಅಥವಾ ಇತರ ಕಾರ್ಯಕ್ಷಮತೆ, ವೀಕ್ಷಕರು ಅಥವಾ ತೊಡಗಿಕೊಳ್ಳುವಿಕೆಯ ಮೆಟ್ರಿಕ್‌ಗಳನ್ನು ಕೃತಕವಾಗಿ ಹೆಚ್ಚಿಸುವ ಚಟುವಟಿಕೆಯನ್ನು ನಾವು ಹೊರತುಪಡಿಸಬಹುದು. ಅಮಾನ್ಯ ಚಟುವಟಿಕೆಯನ್ನು Snap ಎಲ್ಲಾ ಸಮಯದಲ್ಲೂ ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುತ್ತದೆ ಮತ್ತು ಈ ಮುಂದಿನವುಗಳನ್ನು ಒಳಗೊಂಡಿರುತ್ತದೆ, ಆದರೆ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ, (i) ಸ್ಪ್ಯಾಮ್, ಅಮಾನ್ಯ ಪ್ರಶ್ನೆಗಳು ಅಥವಾ ಅಮಾನ್ಯ ಅನಿಸಿಕೆಗಳು, ಮೆಚ್ಚಿನವುಗಳು ಅಥವಾ ಯಾವುದೇ ವ್ಯಕ್ತಿ, ಬಾಟ್, ಸ್ವಯಂಚಾಲಿತ ಪ್ರೊಗ್ರಾಂ ಅಥವಾ ಅದೇ ರೀತಿಯ ಸಾಧನಗಳಿಂದ ಮಾಡಲ್ಪಟ್ಟ ಫಾಲೋಗಳು, ನಿಮ್ಮ ಮೊಬೈಲ್ ಸಾಧನ, ನಿಮ್ಮ ನಿಯಂತ್ರಣದಲ್ಲಿರುವ ಮೊಬೈಲ್ ಸಾಧನಗಳು ಅಥವಾ ಹೊಸ ಅಥವಾ ಅನುಮಾನಾಸ್ಪದ ಖಾತೆಗಳನ್ನು ಹೊಂದಿರುವ ಮೊಬೈಲ್ ಸಾಧನಗಳಿಂದ ಉಂಟಾಗುವ ಯಾವುದೇ ಕ್ಲಿಕ್‌ಗಳು ಅಥವಾ ಅನಿಸಿಕೆಗಳು ಸೇರಿದಂತೆ; (ii) ತೃತೀಯ ಪಕ್ಷಗಳಿಗೆ ಪಾವತಿ ಅಥವಾ ಇತರ ಪ್ರಚೋದನೆಗಳನ್ನು ನೀಡುವ ಮೂಲಕ, ತಪ್ಪು ಪ್ರತಿನಿಧಿಸುವಿಕೆ ಅಥವಾ ಹಣ ಅಥವಾ ಇತರ ಪ್ರೇರಕಗಳ ಪಾವತಿಯಿಂದಾಗಿ ಸೃಷ್ಟಿಸಲ್ಪಟ್ಟ ಅನಿಸಿಕೆಗಳು, ಮೆಚ್ಚಿನವುಗಳು ಅಥವಾ ಫಾಲೋಗಳು; (iii) ಸೇವೆಯನ್ನು ನಿಯಂತ್ರಿಸುವ ನಿಯಮಗಳ ಉಲ್ಲಂಘನೆ ಮಾಡುವ ಚಟುವಟಿಕೆಯ ಮೂಲಕ ರಚಿಸಲ್ಪಟ್ಟ ಅನಿಸಿಕೆಗಳು, ಮೆಚ್ಚಿನವುಗಳು ಅಥವಾ ಫಾಲೋಗಳು, ಮತ್ತು (iv) ಮೇಲಿನ (i), (ii), (iii) ಮತ್ತು (iv) ರಲ್ಲಿ ವಿವರಿಸಿರುವ ಯಾವುದೇ ಚಟುವಟಿಕೆಯೊಂದಿಗೆ ಸಹ-ಮಿಶ್ರಿತವಾಗಿರುವ ಕ್ಲಿಕ್‌ಗಳು, ಅನಿಸಿಕೆಗಳು, ಮೆಚ್ಚಿನವುಗಳು ಅಥವಾ ಫಾಲೋಗಳು. ನೀವು ಅಮಾನ್ಯ ಚಟುವಟಿಕೆಯಲ್ಲಿ ತೊಡಗಿದ್ದೀರಿ ಎಂದು ನಾವು ನಿರ್ಧರಿಸಿದರೆ, ಸ್ಪಾಟ್‌ಲೈಟ್‌ನಲ್ಲಿ ನಿಮ್ಮ Snap ಗಳ ವಿತರಣೆಯನ್ನು ನಾವು ಮಿತಿಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು ಹಾಗೂ ಪಾವತಿಗಳಿಗೆ ನೀವು ಅನರ್ಹರು ಎಂದು ಪರಿಗಣಿಸಬಹುದು.

4. ಪಾವತಿ ಖಾತೆ ಅರ್ಹತೆ

Snap ನಿಂದ ಪಾವತಿಗಳನ್ನು ಸ್ವೀಕರಿಸುವುದಕ್ಕೆ ಅರ್ಹತೆ ಪಡೆಯಲು ನೀವು ಈ ಕೆಳಗಿನ ಎಲ್ಲ ಅಗತ್ಯಗಳನ್ನು ("ಪಾವತಿ ಖಾತೆ ಅರ್ಹತಾ ಅಗತ್ಯಗಳು) ಕೂಡ ಪೂರೈಸಬೇಕು:

  • ಒಂದು ವೇಳೆ ನೀವು ವ್ಯಕ್ತಿಯಾಗಿದ್ದಲ್ಲಿ, ನೀವು ಅರ್ಹ ದೇಶದ ಕಾನೂನುಬದ್ಧ ನಿವಾಸಿಯಾಗಿರಬೇಕು ಮತ್ತು ಅಂತಹ ಅರ್ಹ ದೇಶದಲ್ಲಿ ಇರುವಾಗ ಅರ್ಹತಾ Snap ಗಳನ್ನು ಸಲ್ಲಿಸಿರಬೇಕು.

  • ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನೀವು ಕಾನೂನುಬದ್ಧ ಪ್ರಾಪ್ತ ವಯಸ್ಕರಾಗಿರಬೇಕು ಅಥವಾ 16 ವರ್ಷ ವಯಸ್ಸಿನವರಾಗಿರಬೇಕು ಮತ್ತು ನಮ್ಮ ಕಾರ್ಯವಿಧಾನಗಳಿಗೆ ಅನುಸಾರವಾಗಿ ಅಗತ್ಯ ಪೋಷಕರ ಅಥವಾ ಕಾನೂನುಬದ್ಧ ಪಾಲಕರ ಸಮ್ಮತಿಯ(ಗಳ)ನ್ನು ಪಡೆದಿರಬೇಕು.

  • ನಿಮ್ಮ ಕಾನೂನುಬದ್ಧ ಮೊದಲ ಹೆಸರು ಮತ್ತು ಕೊನೆಯ ಹೆಸರು, ಇಮೇಲ್, ಫೋನ್ ಸಂಖ್ಯೆ, ರಾಜ್ಯ ಮತ್ತು ವಾಸವಿರುವ ದೇಶ ಮತ್ತು ಜನ್ಮದಿನಾಂಕ ಸೇರಿದಂತೆ ನೀವು ನಮಗೆ ಸಂಪೂರ್ಣ ಮತ್ತು ನಿಖರ ಸಂಪರ್ಕ ಮಾಹಿತಿಯನ್ನು ಒದಗಿಸಬೇಕು ("ಸಂಪರ್ಕ ಮಾಹಿತಿ").

  • ನೀವು (ಅಥವಾ ಅನ್ವಯಿಸುವಂತೆ, ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕ) Snap ನ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರೊಂದಿಗೆ ಪಾವತಿ ಖಾತೆಯನ್ನು ರಚಿಸಬೇಕು ಮತ್ತು ಎಲ್ಲ ಅವಶ್ಯಕ ಅಗತ್ಯಗಳನ್ನು ಪೂರ್ಣಗೊಳಿಸಬೇಕು ("ಪಾವತಿ ಖಾತೆ"). ನಿಮ್ಮ ಪಾವತಿ ಖಾತೆಯು ನಿಮ್ಮ ಅರ್ಹ ದೇಶಕ್ಕೆ ಹೋಲಿಕೆಯಾಗಬೇಕು.

  • ಈ ಸ್ಪಾಟ್‌ಲೈಟ್ ನಿಯಮಗಳ ಅಡಿಯಲ್ಲಿ ಪಾವತಿಯ ಷರತ್ತಾಗಿ, ನೀವು ಒದಗಿಸಿದ ಸಂಪರ್ಕ ಮಾಹಿತಿ (ಕೆಳಗೆ ವ್ಯಾಖ್ಯಾನಿಸಲಾಗಿದೆ), ಹಾಗೆಯೇ ಪೋಷಕರ / ಕಾನೂನುಬದ್ಧ ಪಾಲಕರ ಗುರುತು ಮತ್ತು ಅಪ್ರಾಪ್ತ ವಯಸ್ಕರಿಗೆ ಒಪ್ಪಿಗೆಯ ಅಗತ್ಯದ ಪರಿಶೀಲನೆಯನ್ನು ಕೋರುವ ನಮ್ಮ ಹಕ್ಕನ್ನು ನಾವು ನಮ್ಮ, ನಮ್ಮ ಅಂಗಸಂಸ್ಥೆಗಳ ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಪರವಾಗಿ ಕಾಯ್ದಿರಿಸಿದ್ದೇವೆ.

  • ನಮ್ಮ ಮತ್ತು ನಮ್ಮ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳಿಗೆ ಅನುಸಾರವಾಗಿ ನಿಮ್ಮ ವ್ಯವಹಾರ ಘಟಕಕ್ಕೆ ನಿಮ್ಮ ಪಾವತಿಗಳನ್ನು ವರ್ಗಾಯಿಸಲು ನೀವು ನಮಗೆ ಅಧಿಕಾರ ನೀಡಿದ್ದರೆ, ಅಂತಹ ಘಟಕವು ನಿಮ್ಮ ಅರ್ಹ ದೇಶದೊಳಗೆ ಸ್ಥಾಪನೆಯಾಗಿರಬೇಕು, ಪ್ರಧಾನ ಕಚೇರಿ ಹೊಂದಿರಬೇಕು ಅಥವಾ ಒಂದು ಕಚೇರಿ ಹೊಂದಿರಬೇಕು.

  • ನೀವು Snap ಮತ್ತು ಅದರ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರಿಗೆ ಅಗತ್ಯವಿರುವಂತೆ ನಿಖರವಾದ ಸಂಪರ್ಕ ಮತ್ತು ಇತರ ಮಾಹಿತಿಯನ್ನು ಒದಗಿಸಿದ್ದೀರಿ, ಇದರಿಂದಾಗಿ Snap ಅಥವಾ ಅದರ ತೃತೀಯ-ಪಕ್ಷದ ಪಾವತಿ ಪೂರೈಕೆದಾರರು, ನೀವು ಪಾವತಿಗೆ ಅರ್ಹತೆ ಹೊಂದಿದ್ದರೆ, ನಿಮ್ಮನ್ನು ಸಂಪರ್ಕಿಸಬಹುದು ಮತ್ತು ನಿಮಗೆ (ಅಥವಾ ನಿಮ್ಮ ಪೋಷಕರಿಗೆ / ಕಾನೂನುಬದ್ಧ ಪಾಲಕರಿಗೆ ಅಥವಾ ಅನ್ವಯಿಸಿದರೆ, ವ್ಯವಹಾರ ಘಟಕಕ್ಕೆ) ಪಾವತಿ ಮಾಡಬಹುದು ಅಥವಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

  • ನಿಮ್ಮ Snapchat ಖಾತೆ ಮತ್ತು ಪಾವತಿ ಖಾತೆ ಸಕ್ರಿಯವಾಗಿವೆ, ಉತ್ತಮ ಸ್ಥಿತಿಯಲ್ಲಿವೆ (ನಮ್ಮಿಂದ ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರಿಂದ ನಿರ್ಧರಿಸಲ್ಪಟ್ಟಂತೆ), ಮತ್ತು ಈ ಸ್ಪಾಟ್‌ಲೈಟ್ ನಿಯಮಗಳ ಅನುಸರಣೆಯಲ್ಲಿದೆ.

  • ಒಂದು ವೇಳೆ ನೀವು (ಅಥವಾ ನಿಮ್ಮ ಪೋಷಕರು/ಕಾನೂನುಬದ್ಧ ಪೋಷಕ(ರು) ಅಥವಾ ಅನ್ವಯಿಸುತ್ತಿದ್ದಲ್ಲಿ, ವ್ಯವಹಾರ ಘಟಕ) ನಮ್ಮ ಅಥವಾ ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಅನುಸರಣಾ ಪರಿಶೀಲನೆಯಲ್ಲಿ ಉತ್ತೀರ್ಣರಾಗದಿದ್ದರೆ ಯಾವುದೇ ಪಾವತಿಯನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ, ಮತ್ತು ನಾವು ನಿಮಗೆ ಪಾವತಿಸುವುದಿಲ್ಲ. ಅಂಥ ವಿಮರ್ಶೆಗಳನ್ನು ನಿಯತಕಾಲಿಕವಾಗಿ ನಡೆಸಲಾಗುತ್ತದೆ ಮತ್ತು U.S. ವಿಶೇಷವಾಗಿ ನಿಯೋಜಿತರಾದ ರಾಷ್ಟ್ರೀಯರ ಪಟ್ಟಿ ಮತ್ತು ವಿದೇಶಿ ನಿರ್ಬಂಧಗಳನ್ನು ತಪ್ಪಿಸಿಕೊಂಡವರ ಪಟ್ಟಿ ಸೇರಿದಂತೆ, ಯಾವುದೇ ಸಂಬಂಧಿತ ಸರ್ಕಾರಿ ಪ್ರಾಧಿಕಾರ ನಿರ್ವಹಿಸುವ ನಿರ್ಬಂಧಿತ ಪಕ್ಷಗಳ ಒಟ್ಟಿಯಲ್ಲಿ ಒಂದು ವೇಳೆ ನೀವು ಕಾಣಿಸಿಕೊಂಡಿದ್ದೀರೇ ಎನ್ನುವುದನ್ನು ನಿರ್ಧರಿಸಲು ತಪಾಸಣೆ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಪರಿಶೀಲನೆಗಳು ಅದರಲ್ಲಿ ಸೇರಿರಬಹುದು. ಈ ಸ್ಪಾಟ್‌ಲೈಟ್ ನಿಯಮಗಳಲ್ಲಿ ವಿವರಿಸಲಾಗಿರುವ ಯಾವುದೇ ಇತರ ಬಳಕೆಗಳಿಗೆ ಹೆಚ್ಚುವರಿಯಾಗಿ, ನಿಮ್ಮ ಗುರುತನ್ನು ಪರಿಶೀಲಿಸಲು, ಅನುಸರಣಾ ವಿಮರ್ಶೆಗಳನ್ನು ನಡೆಸಲು, ಮತ್ತು ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಮಗೆ ಒದಗಿಸುವ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು.

  • ಒಂದು ವೇಳೆ ನೀವು (i) Snap ಅಥವಾ ಅದರ ಪ್ರಧಾನ ಸಂಸ್ಥೆ, ಉಪಸಂಸ್ಥೆಗಳು, ಅಥವಾ ಅಂಗಸಂಸ್ಥೆಗಳ ಉದ್ಯೋಗಿ, ಅಧಿಕಾರಿ ಅಥವಾ ನಿರ್ದೇಶಕರಾಗಿದ್ದರೆ, (ii) ಒಂದು ಸರ್ಕಾರಿ ಘಟಕ, ಸರ್ಕಾರಿ ಘಟಕದ ಉಪಸಂಸ್ಥೆ ಅಥವಾ ಅಂಗಸಂಸ್ಥೆ ಅಥವಾ ರಾಜ ಕುಟುಂಬದ ಸದಸ್ಯರಾಗಿದ್ದರೆ, ಅಥವಾ (iii) ಒಂದು ವ್ಯವಹಾರ ಖಾತೆಯಿಂದ ಸ್ಪಾಟ್‌ಲೈಟ್‌ಗೆ Snap ಗಳನ್ನು ಸಲ್ಲಿಸಿದ್ದರೆ, ನೀವು ಪಾವತಿಗಳಿಗೆ ಅರ್ಹರಾಗಿರುವುದಿಲ್ಲ.

  • ಸ್ಪಾಟ್‌ಲೈಟ್‌ಗೆ ನಿರ್ದಿಷ್ಟವಾಗಿ ಕಂಟೆಂಟ್ ಅನ್ನು ಪರೀಕ್ಷಿಸಲು ಅಥವಾ ಒದಗಿಸಲು ಈ ಸ್ಪಾಟ್‌ಲೈಟ್ ನಿಯಮಗಳ ಹೊರಗೆ Snap ಪರವಾಗಿ ನೀವು ತೊಡಗಿಕೊಂಡಿದ್ದರೆ, ಆ ತೊಡಗಿಕೊಳ್ಳುವಿಕೆಯ ಅವಧಿಯಲ್ಲಿ ನೀವು ರಚಿಸಿದ ಕಂಟೆಂಟ್‌ಗಾಗಿ ಪಾವತಿಗಳಿಗೆ ನೀವು ಅರ್ಹರಾಗಿರುವುದಿಲ್ಲ.

5. ಪಾವತಿ ಅಧಿಸೂಚನೆ ಮತ್ತು ಪ್ರಕ್ರಿಯೆ

ನೀವು ಅರ್ಹತೆ ಪಡೆಯುವ ಚಟುವಟಿಕೆಯಲ್ಲಿ ತೊಡಗಿದ್ದೀರಿ ಎಂದು ನಾವು ನಿರ್ಧರಿಸಿದರೆ, ಆಗ Snapchat ಅಪ್ಲಿಕೇಶನ್ ಮೂಲಕ ನಿಮಗೆ ಒಂದು ಅಧಿಸೂಚನೆ ಕಳುಹಿಸುವ ಮೂಲಕ ನಿಮ್ಮ ಅರ್ಹತೆಯ ಕುರಿತು ನಾವು ಸೂಚನೆ ನೀಡುತ್ತೇವೆ.

ಈ ಸ್ಪಾಟ್‌ಲೈಟ್‌ ನಿಯಮಗಳಿಗೆ ನಿಮ್ಮ ಅನುಸರಣೆಗೆ ಒಳಪಟ್ಟು, ಆಮೇಲೆ, ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ನಿಮ್ಮ ಪ್ರೊಫೈಲ್‌ನಲ್ಲಿ ಸಂಬಂಧಿತ ಆಯ್ಕೆಯನ್ನು ಆರಿಸುವ ಮೂಲಕ ಪಾವತಿಯನ್ನು ಕೋರಲು ನಿಮಗೆ (ಅಥವಾ ಅನ್ವಯಿಸುವಂತೆ ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕಕ್ಕೆ) ಸಾಧ್ಯವಾಗುತ್ತದೆ. ನೀವು ಮಾನ್ಯವಾಗಿ ಒಂದು ಪಾವತಿಯನ್ನು ವಿನಂತಿಸುವ ಸಲುವಾಗಿ, $100 USD ಕನಿಷ್ಟ ಪಾವತಿ ಮಿತಿಯನ್ನು ("ಪಾವತಿ ಕನಿಷ್ಟಮಿತಿ") ಪೂರೈಸಲು ಸಾಕಷ್ಟು ಕ್ರಿಸ್ಟಲ್‌ಗಳನ್ನು ನಾವು ಮೊದಲು ದಾಖಲಿಸಿರಬೇಕು ಮತ್ತು ನಿಮಗೆ ನಿಯೋಜಿಸರಬೇಕು.

ದಯವಿಟ್ಟು ಗಮನಿಸಿ: ಒಂದು ವೇಳೆ ನೀವು ಅರ್ಹತೆ ಪಡೆಯುವ ಕ್ರಿಯೇಟರ್ ಆಗಿದ್ದರೆ ಮತ್ತು (A) ಒಂದು ವರ್ಷದ ಅವಧಿಗೆ ನಿಮ್ಮಿಂದ ಯಾವುದೇ ಅರ್ಹತೆ ಪಡೆಯುವ ಚಟುವಟಿಕೆಗೆ ಯಾವುದೇ ಕ್ರಿಸ್ಟಲ್‌ಗಳನ್ನು ನಾವು ರೆಕಾರ್ಡ್ ಮಾಡಿಲ್ಲದಿದ್ದರೆ ಮತ್ತು ನಿಯೋಜಿಸಿಲ್ಲದಿದ್ದರೆ ಅಥವಾ (B) ಎರಡು ವರ್ಷಗಳ ಅವಧಿಗೆ ತಕ್ಷಣದ ಹಿಂದಿನ ಪ್ಯಾರಾಗ್ರಾಫ್‌ಗೆ ಅನುಸಾರವಾಗಿ ನೀವು ಒಂದು ಪಾವತಿಯನ್ನು ಮಾನ್ಯವಾಗಿ ವಿನಂತಿಸಿಲ್ಲದಿದ್ದರೆ, ಆಗ — ಅನ್ವಯಿಸುವ ಅವಧಿಯ ಕೊನೆಯಲ್ಲಿ — ಅಂಥ ಅವಧಿಯ ಕೊನೆಗೆ ನಿಮ್ಮ ಅರ್ಹ ಚಟುವಟಿಕೆಗೆ ನಾವು ದಾಖಲಿಸಿರುವ ಮತ್ತು ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳನ್ನು ಆಧರಿಸಿದ ಮೊತ್ತದಲ್ಲಿ ನಿಮ್ಮ ಪಾವತಿ ಖಾತೆಗೆ ನಾವು ಪಾವತಿಯನ್ನು ವಿತರಿಸುತ್ತೇವೆ, ಆದರೆ ಪ್ರತಿ ಪ್ರಕರಣದಲ್ಲೂ ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು: (I) ನೀವು ಪಾವತಿ ಮಿತಿಯನ್ನು ತಲುಪಿದ್ದೀರಿ, (II) ನೀವು ಪಾವತಿ ಖಾತೆಯನ್ನು ಸೃಷ್ಟಿಸಿದ್ದೀರಿ, (III) ನೀವು ಎಲ್ಲ ಅಗತ್ಯ ಮಾಹಿತಿಯನ್ನು ಮತ್ತು ನಿಮಗೆ ಪಾವತಿಯನ್ನು ಮಾಡಲು ಅಗತ್ಯವಿರುವ ಇತರ ಯಾವುದೇ ಮಾಹಿತಿಯನ್ನು ಪೂರೈಸಿದ್ದೀರಿ, (IV) ಅಂತಹ ಅರ್ಹತೆ ಪಡೆಯುವ ಚಟುವಟಿಕೆಗೆ ನಾವು ದಾಖಲಿಸಿದ ಮತ್ತು ನಿಯೋಜಿಸಿದ ಯಾವುದೇ ಕ್ರಿಸ್ಟಲ್‌ಗಳಿಗೆ ಸಂಬಂಧಿಸಿ ನಾವು ನಿಮಗೆ ಇನ್ನೂ ಪಾವತಿಯನ್ನು ಮಾಡಿಲ್ಲ, (V) ನಿಮ್ಮ SNAPCHAT ಅಕೌಂಟ್ ಮತ್ತು ಪಾವತಿ ಖಾತೆಗಳು ಉತ್ತಮ ಸ್ಥಿತಿಯಲ್ಲಿವೆ ಮತ್ತು (VI) ಇಲ್ಲದಿದ್ದಲ್ಲಿ ನೀವು ಈ ಸ್ಪಾಟ್‌ಲೈಟ್ ನಿಯಮಗಳು ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳು ಮತ್ತು ನಿಯಮಗಳ ಅನುಸರಣೆಯಲ್ಲಿದ್ದೀರಿ. ಅದಾಗ್ಯೂ, ಒಂದು ವೇಳೆ ಅನ್ವಯಿಸುವ ಅವಧಿಯ ಕೊನೆಯಲ್ಲಿ ಮೇಲೆ ಹೇಳಿದ ಎಲ್ಲ ಅಗತ್ಯಗಳನ್ನು ನೀವು ಪೂರ್ಣವಾಗಿ ಪೂರೈಸದಿದ್ದರೆ, ಅಂಥ ಅರ್ಹ ಚಟುವಟಿಕೆಗೆ ಸಂಬಂಧಿಸಿ ಯಾವುದೇ ಪಾವತಿಗಳನ್ನು ಸ್ವೀಕರಿಸಲು ನೀವು ಆನಂತರ ಅರ್ಹರಾಗಿರುವುದಿಲ್ಲ.

Snap ಪರವಾಗಿ ಉಪಸಂಸ್ಥೆ ಅಥವಾ ಅಂಗಸಂಸ್ಥೆಗಳು ಅಥವಾ ಈ ಸ್ಪಾಟ್‌ಲೈಟ್ ನಿಯಮಗಳ ಅಡಿಯಲ್ಲಿ ಪಾವತಿದಾರರಂತೆ ವರ್ತಿಸಬಹುದಾದ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರು ನಿಮಗೆ ಪಾವತಿಗಳನ್ನು ಮಾಡಬಹುದು. ಈ ಸ್ಪಾಟ್‌ಲೈಟ್ ನಿಯಮಗಳು ಅಥವಾ ಅನ್ವಯವಾಗುವ ಪಾವತಿ ಖಾತೆಯ ನಿಯಮಗಳನ್ನು ಅನುಸರಿಸಲು ನಿಮ್ಮ ವೈಫಲ್ಯ ಸೇರಿದಂತೆ Snap ನ ನಿಯಂತ್ರಣದಲ್ಲಿ ಇಲ್ಲದ ಯಾವುದೇ ಕಾರಣಗಳಿಂದಾಗಿ ನಿಮ್ಮ ಪಾವತಿ ಖಾತೆಗೆ ಪಾವತಿಗಳನ್ನು ವರ್ಗಾಯಿಸಲು ಉಂಟಾಗುವ ಯಾವುದೇ ವಿಳಂಬ, ವೈಫಲ್ಯ ಅಥವಾ ಅಸಾಮರ್ಥ್ಯಕ್ಕೆ Snap ಜವಾಬ್ದಾರನಾಗಿರುವುದಿಲ್ಲ. ನಿಮ್ಮ Snapchat ಅಕೌಂಟ್ ಬಳಸಿಕೊಂಡು ನಿಮ್ಮ ಅರ್ಹ ಚಟುವಟಿಕೆಗೆ ನಾವು ದಾಖಲಿಸಿರುವ ಮತ್ತು ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳನ್ನು ಆಧರಿಸಿದ ಪಾವತಿಗಾಗಿ ಅಥವಾ ನಿಮ್ಮ ಪಾವತಿ ಖಾತೆ ಮಾಹಿತಿ ಬಳಸಿಕೊಂಡು ಪಾವತಿಗಳ ವರ್ಗಾವಣೆಗಾಗಿ, Snap ನ ನಿಯಂತ್ರಣದಲ್ಲಿ ಇಲ್ಲದ ಯಾವುದೇ ಕಾರಣದಿಂದ, ನಿಮ್ಮನ್ನು (ಅಥವಾ ಅನ್ವಯಿಸುವಂತೆ ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕವನ್ನು) ಹೊರತುಪಡಿಸಿ ಬೇರೊಬ್ಬರು ಮಾಡುವ ವಿನಂತಿಗಳಿಗೆ Snap ಜವಾಬ್ದಾರನಾಗಿರುವುದಿಲ್ಲ. ನಮ್ಮ ಮತ್ತು ನಮ್ಮ ಅಧಿಕೃತ ಮೂರನೇ ವ್ಯಕ್ತಿ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳಿಗೆ ಅನುಗುಣವಾಗಿ ಪಾವತಿಗಳನ್ನು ವ್ಯವಹಾರ ಘಟಕಕ್ಕೆ ವರ್ಗಾಯಿಸಲು ನೀವು ಸ್ನ್ಯಾಪ್‌ಗೆ ಅಧಿಕಾರ ನೀಡಿದರೆ, ಈ ಸ್ಪಾಟ್‌ಲೈಟ್ ನಿಯಮಗಳ ಅಡಿಯಲ್ಲಿ ನಿಮಗೆ ಪಾವತಿಸಬೇಕಾದ ಯಾವುದೇ ಮತ್ತು ಎಲ್ಲಾ ಮೊತ್ತವನ್ನುಸ್ನ್ಯಾಪ್ ಅಂತಹ ವ್ಯವಹಾರ ಘಟಕಕ್ಕೆ, ಈ ಸ್ಪಾಟ್‌ಲೈಟ್ ನಿಯಮಗಳಿಗೆ ಅನುಸಾರವಾಗಿ ವರ್ಗಾಯಿಸಬಹುದು ಎಂದು ನೀವು ಅಂಗೀಕರಿಸಿದ್ದೀರಿ ಮತ್ತು ಒಪ್ಪುತ್ತೀರಿ. ಪಾವತಿಯನ್ನು ಯುನೈಟೆಡ್ ಸ್ಟೇಟ್ಸ್ ಡಾಲರ್‌ಗಳಲ್ಲಿ ಮಾಡಲಾಗುತ್ತದೆ, ಆದರೆ ಸ್ಪಾಟ್‌ಲೈಟ್ ಮಾರ್ಗಸೂಚಿಗಳು ಮತ್ತು FAQ ನಲ್ಲಿ ಮುಂದುವರಿದು ವಿವರಿಸಿರುವಂತೆ ಬಳಕೆ, ವಿನಿಮಯ ಮತ್ತು ವಹಿವಾಟು ಶುಲ್ಕಗಳಿಗೆ ಒಳಪಟ್ಟು ಮತ್ತು ನಮ್ಮ ತೃತೀಯ ಪಕ್ಷದ ಪಾವತಿ ಪೂರೈಕೆದಾರರ ನಿಯಮಗಳಿಗೆ ಒಳಪಟ್ಟು ನಿಮ್ಮ ಸ್ಥಳೀಯ ಕರೆನ್ಸಿಯಲ್ಲಿ ನಿಮ್ಮ ಪಾವತಿ ಖಾತೆಯಿಂದ ಫಂಡ್‌ಗಳನ್ನು ಹಿಂಪಡೆಯಲು ನೀವು ಆಯ್ಕೆ ಮಾಡಬಹುದು. Snapchat ಅಪ್ಲಿಕೇಶನ್‌ನಲ್ಲಿ ತೋರಿಸಿರುವ ಯಾವುದೇ ಪಾವತಿ ಮೊತ್ತವು ಅಂದಾಜು ಮೌಲ್ಯಗಳು ಮತ್ತು ಬದಲಾವಣೆಗೆ ಒಳಪಟ್ಟಿರುತ್ತದೆ. ಯಾವುದೇ ಪಾವತಿಗಳ ಅಂತಿಮ ಮೊತ್ತಗಳು ನಿಮ್ಮ ಪಾವತಿ ಖಾತೆಯಲ್ಲಿ ಬಿಂಬಿತವಾಗುತ್ತವೆ.

ನಮ್ಮ ಇತರ ಹಕ್ಕುಗಳು ಮತ್ತು ಪರಿಹಾರಗಳ ಜೊತೆಗೆ, ಸಂದೇಹಾಸ್ಪದ ಅಮಾನ್ಯ ಚಟುವಟಿಕೆ, ಈ ಸ್ಪಾಟ್‌ಲೈಟ್ ನಿಯಮಗಳೊಂದಿಗೆ ಅನುಸರಣೆ ಮಾಡಲು ವಿಫಲರಾಗುವುದು, ದೋಷದಿಂದ ನಿಮಗೆ ಮಾಡಲಾದ ಯಾವುದೇ ಹೆಚ್ಚುವರಿ ಪಾವತಿ ಅಥವಾ ಇತರ ಯಾವುದೇ ಒಪ್ಪಂದಗಳಡಿ ನೀವು ನಮಗೆ ಪಾವತಿಸಬೇಕಿರುವ ಶುಲ್ಕಗಳಿಗೆ ಪ್ರತಿಯಾಗಿ ಅಂಥ ಮೊತ್ತಗಳನ್ನು ವಜಾ ಮಾಡಿಕೊಳ್ಳುವುದಕ್ಕಾಗಿ ಈ ಸ್ಪಾಟ್‌ಲೈಟ್ ನಿಯಮಗಳ ಅಡಿಯಲ್ಲಿ, ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ಯಾವುದೇ ಎಚ್ಚರಿಕೆ ಅಥವಾ ಮುಂಚಿತ ಸೂಚನೆಯನ್ನು ನೀಡದೆ, ನಾವು ನಿಮಗೆ ಮಾಡಬೇಕಿರುವ ಯಾವುದೇ ಪಾವತಿಯನ್ನು ತಡೆಹಿಡಿಯುವಿಕೆ, ಆಫ್‌ಸೆಟ್, ಹೊಂದಾಣಿಕೆ ಅಥವಾ ವಿನಾಯಿತಿ ಮಾಡಬಹುದು.

ನೀವು ನಮಗೆ ಅಥವಾ ನಮ್ಮ ಅಂಗಸಂಸ್ಥೆಗಳು, ಸಹಾಯಕ ಸಂಸ್ಥೆಗಳು ಅಥವಾ ಅಧಿಕೃತ ಪಾವತಿ ಪೂರೈಕೆದಾರರಿಗೆ ಒದಗಿಸುವ ಎಲ್ಲಾ ಮಾಹಿತಿಯು ಸತ್ಯ ಮತ್ತು ನಿಖರವಾಗಿದೆ ಮತ್ತು ಅಂತಹ ಮಾಹಿತಿಯ ನಿಖರತೆಯನ್ನು ನೀವು ಎಲ್ಲಾ ಸಮಯದಲ್ಲೂ ನಿರ್ವಹಿಸುತ್ತೀರಿ ಎಂದು ನೀವು ಪ್ರತಿನಿಧಿಸುತ್ತೀರಿ.

6. ತೆರಿಗೆಗಳು

ಸೇವೆಗೆ ಸಂಬಂಧಿಸಿ ನೀವು ಸ್ವೀಕರಿಸಬಹುದಾದ ಯಾವುದೇ ಪಾವತಿಗಳಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲ ತೆರಿಗೆಗಳು, ಕರಗಳು, ಅಥವಾ ಶುಲ್ಕಗಳಿಗೆ ನೀವು ಏಕಮಾತ್ರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೊಂದಿರುತ್ತೀರಿ ಎನ್ನುವುದನ್ನು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಪಾವತಿಗಳು ಯಾವುದೇ ಅನ್ವಯವಾಗುವ ಮಾರಾಟ, ಬಳಕೆ, ಅಬಕಾರಿ, ಮೌಲ್ಯ ವರ್ಧಿತ, ಸರಕು ಮತ್ತು ಸೇವೆಗಳು ಅಥವಾ ನಿಮಗೆ ಪಾವತಿಸಬೇಕಿರುವ ಅದೇ ರೀತಿಯ ತೆರಿಗೆಗಳನ್ನು ಒಳಗೊಂಡಿರುತ್ತವೆ. ಅನ್ವಯವಾಗುವ ಕಾನೂನಿನಡಿಯಲ್ಲಿ, ನಿಮಗೆ ಯಾವುದೇ ಪಾವತಿಗಳಿಂದ ತೆರಿಗೆಗಳನ್ನು ಕಡಿತಗೊಳಿಸುವುದು ಅಥವಾ ತಡೆಹಿಡಿಯುವುದು ಅಗತ್ಯವಿದ್ದರೆ, Snap, ಅದರ ಅಂಗಸಂಸ್ಥೆ ಅಥವಾ ಅದರ ಅಧಿಕೃತ ಮೂರನೇ ವ್ಯಕ್ತಿ ಪಾವತಿ ಒದಗಿಸುವವರು ಅನ್ವಯವಾಗುವ ಕಾನೂನಿನ ಪ್ರಕಾರ ಅಂತಹ ತೆರಿಗೆಗಳನ್ನು ನಿಮಗೆ ಪಾವತಿಸಬೇಕಾದ ಮೊತ್ತದಿಂದ ಕಡಿತಗೊಳಿಸಬಹುದು ಮತ್ತು ಅಂತಹ ತೆರಿಗೆಗಳನ್ನು ಸೂಕ್ತವಾದ ತೆರಿಗೆ ಪ್ರಾಧಿಕಾರಕ್ಕೆ ಪಾವತಿಸಬಹುದು. ಅಂಥ ಕಡಿತಗಳು ಅಥವಾ ತಡೆಹಿಡಿಯುವಿಕೆಗಳಿಂದ ಕಡಿಮೆಯಾದ ಪಾವತಿಗಳು ಈ ಸ್ಪಾಟ್‌ಲೈಟ್ ನಿಯಮಗಳಡಿ ಪಾವತಿಸಬೇಕಿರುವ ಮೊತ್ತಗಳ ಪೂರ್ಣ ಪಾವತಿ ಮತ್ತು ಇತ್ಯರ್ಥವಾಗಿರುತ್ತವೆ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಈ ಸ್ಪಾಟ್‌ಲೈಟ್ ನಿಯಮಗಳಡಿ ಯಾವುದೇ ಪಾವತಿಗಳಿಗೆ ಸಂಬಂಧಿಸಿದ ತೆರಿಗೆ ಬಾಧ್ಯತೆಗಳ ಯಾವುದೇ ಮಾಹಿತಿ ವರದಿಗಾರಿಕೆ ಅಥವಾ ತಡೆಹಿಡಿಯುವಿಕೆಯನ್ನು ಪೂರೈಸಲು ಅಗತ್ಯವಿರಬಹುದಾದ ಯಾವುದೇ ನಮೂನೆಗಳು, ದಾಖಲೆಗಳು ಅಥವಾ ಇತರ ಪ್ರಮಾಣಪತ್ರಗಳನ್ನು Snap, ಅದರ ಉಪಸಂಸ್ಥೆಗಳು, ಅಂಗಸಂಸ್ಥೆಗಳು, ಮತ್ತು ಯಾವುದೇ ಅಧಿಕೃತ ಪಾವತಿ ಪೂರೈಕೆದಾರರಿಗೆ ನೀವು ಒದಗಿಸುತ್ತೀರಿ.

7. ಸ್ಪಾಟ್‌ಲೈಟ್‌ನಲ್ಲಿ ಜಾಹೀರಾತು ನೀಡುವಿಕೆ

ಸ್ಪಾಟ್‌ಲೈಟ್ ಜಾಹೀರಾತುಗಳನ್ನು ಒಳಗೊಂಡಿರಬಹುದು. ನಿಮ್ಮಿಂದ ಯಾವುದೇ ಪಾವತಿಯನ್ನು ಪಡೆಯದೆ, ನಮ್ಮ ಸ್ವಂತ ವಿವೇಚನೆ ಮೇರೆಗೆ, ಸ್ಪಾಟ್‌ಲೈಟ್‌ನಲ್ಲಿ ಜಾಹೀರಾತನ್ನು ವಿತರಿಸಲು ನಮ್ಮನ್ನು, ನಮ್ಮ ಅಂಗಸಂಸ್ಥೆಗಳು ಮತ್ತು ನಮ್ಮ ತೃತೀಯ ಪಕ್ಷದ ಪಾಲುದಾರರನ್ನು ತೊಡಗಿಸಿಕೊಳ್ಳುತ್ತೀರಿ ಎಂದು ಸಮ್ಮತಿಸುತ್ತೀರಿ. ಈ ಸ್ಪಾಟ್‌ಲೈಟ್ ನಿಯಮಗಳಿಗೆ ಒಪ್ಪುವ ಮೂಲಕ, ಸ್ಪಾಟ್‌ಲೈಟ್ ಮಾರ್ಗಸೂಚಿಗಳು ಮತ್ತು FAQಯ ಮಾರ್ಗಸೂಚಿಗಳಿಗೆ ಬದ್ಧರಾಗಿರುವ ಮೂಲಕ, ಮತ್ತು ಈ ಸ್ಪಾಟ್‌ಲೈಟ್ ನಿಯಮಗಳಿಗೆ ಒಳಪಟ್ಟು ಸ್ಪಾಟ್‌ಲೈಟ್‌ಗೆ ನೀವು ಸಲ್ಲಿಸುವ ಯಾವುದೇ Snap ಗಳಿಗೆ Snap ಗೆ ಪ್ರವೇಶ ಒದಗಿಸುವ ಮೂಲಕ ಅಂಥ ಜಾಹೀರಾತುಗಳ ವಿತರಣೆಯ ಸೌಕರ್ಯ ಕಲ್ಪಿಸಲು ನೀವು ಒಪ್ಪುತ್ತೀರಿ. ಸ್ಪಾಟ್‌ಲೈಟ್‌ಗೆ ಸಲ್ಲಿಸಿದ ನಿಮ್ಮ Snap ಗಳಿಗೆ ಸಂಬಂಧಿಸಿ ವಿತರಣೆ ಮಾಡಿದ ಜಾಹೀರಾತುಗಳ ವಿಧ, ಮಾದರಿ, ಮತ್ತು ಆವರ್ತನ ಸೇರಿದಂತೆ, ಯಾವುದಾದರೂ ಇದ್ದಲ್ಲಿ, ಜಾಹೀರಾತು ವಿತರಣೆಯ ಎಲ್ಲ ಆಯಾಮಗಳನ್ನು ನಮ್ಮ ಸ್ವಂತ ವಿವೇಚನೆ ಮೇರೆಗೆ, ನಾವು ನಿರ್ಧರಿಸುತ್ತೇವೆ. ಯಾವುದೇ ಕಾರಣಕ್ಕಾಗಿ, ನಮ್ಮ ಸ್ವಂತ ವಿವೇಚನೆ ಮೇರೆಗೆ, ಸ್ಪಾಟ್‌ಲೈಟ್‌ನಲ್ಲಿನ ನಿಮ್ಮ Snap ಗಳ ಮೇಲೆ, ನಲ್ಲಿ, ಅಥವಾ ಪಕ್ಕದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸದಿರಲು ಕೂಡ ನಾವು ಹಕ್ಕು ಕಾಯ್ದಿರಿಸಿದ್ದೇವೆ.

8. ನಿಮ್ಮ ಪ್ರತಿನಿಧಿತ್ವಗಳು ಮತ್ತು ವಾರಂಟಿಗಳು

ನೀವು ಈ ಮುಂದಿನವುಗಳನ್ನು ಪ್ರತಿನಿಧಿಸುತ್ತಿರಿ ಮತ್ತು ವಾರಂಟಿ ನೀಡುತ್ತೀರಿ: (i) ನಿಮ್ಮ ಕಾನೂನುಬದ್ಧ ವಾಸ್ತವ್ಯದ ಸ್ಥಳದಲ್ಲಿ (ಒಂದು ವೇಳೆ ವ್ಯಕ್ತಿಯಾಗಿದ್ದಲ್ಲಿ) ನೀವು ಕಾನೂನುಬದ್ಧ ಪ್ರಾಪ್ತ ವಯಸ್ಕರಾಗಿದ್ದೀರಿ, ಮತ್ತು ಇಲ್ಲದಿದ್ದಲ್ಲಿ ನೀವು ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಯ ಪರವಾಗಿ ಈ ಸ್ಪಾಟ್‌ಲೈಟ್ ನಿಯಮಗಳಿಗೆ ಪ್ರವೇಶಿಸಲು ನೀವು ಪೂರ್ಣ ಹಕ್ಕು, ಅಧಿಕಾರ, ಮತ್ತು ದೃಢೀಕರಣವನ್ನು ಹೊಂದಿದ್ದೀರಿ, ಅಥವಾ ಈ ಸ್ಪಾಟ್‌ಲೈಟ್ ನಿಯಮಗಳಿಗೆ ಒಪ್ಪಿಗೆ ಸೂಚಿಸಲು, ನಿಮ್ಮ ವಾಸ್ತವ್ಯದ ದೇಶದಲ್ಲಿ ಅಗತ್ಯವಿರುವ ಪೋಷಕರ/ಕಾನೂನುಬದ್ಧ ಪಾಲಕರ ಸಮ್ಮತಿಯನ್ನು ನೀವು ಪಡೆದಿದ್ದೀರಿ; (ii) ಪ್ರಚಾರ ಮತ್ತು ಗೌಪ್ಯತೆಯ ಹಕ್ಕು ಹಾಗೂ ನಿಮ್ಮSnap ಗಳಲ್ಲಿ ಕಾಣಿಸಿಕೊಳ್ಳುವ ಯಾವುದೇ ವ್ಯಕ್ತಿಯ ಹೆಸರು, ಸಾಮ್ಯತೆ, ಧ್ವನಿಗೆ ಸಂಬಂಧಿಸಿದ ಇತರ ಯಾವುದೇ ಹಕ್ಕುಗಳು ಸೇರಿದಂತೆ ಎಲ್ಲ ಅಗತ್ಯವಿರುವ ತೃತೀಯ ಪಕ್ಷದ ಹಕ್ಕುಗಳು, ಮತ್ತು ಹದಿನೆಂಟು (18) ವರ್ಷಗಳಿಗಿಂತ ಕಡಿಮೆ ವಯಸ್ಸಿನ ಅಥವಾ ಇತರ ಯಾವುದೇ ಅನ್ವಯವಾಗುವ ಪ್ರಾಪ್ತ ವಯಸ್ಸಿಗಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿ ನಿಮ್ಮ Snap ಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಅಗತ್ಯವಿರುವ ಪೋಷಕರ ಅಥವಾ ಕಾನೂನುಬದ್ಧ ಪಾಲಕ(ರ)ಸಮ್ಮತಿಯನ್ನು ನೀವು ಪಡೆದಿದ್ದೀರಿ, (iii) ನೀವು ಈ ಎಲ್ಲ ಸ್ಪಾಟ್‌ಲೈಟ್ ನಿಯಮಗಳನ್ನು ಓದಿದ್ದೀರಿ, ಅರ್ಥ ಮಾಡಿಕೊಂಡಿದ್ದೀರಿ ಮತ್ತು ಅನುಸರಣೆ ಮಾಡುತ್ತೀರಿ. ನಮ್ಮ ಸೇವೆಯ ನಿಯಮಗಳು, ಗೌಪ್ಯತಾ ನೀತಿ, ಕಮ್ಯುನಿಟಿ ಮಾರ್ಗಸೂಚಿಗಳು, Snapchat ನಲ್ಲಿ ಸಂಗೀತ ಮಾರ್ಗಸೂಚಿಗಳು ಮತ್ತು Spotlight ಮಾರ್ಗಸೂಚಿಗಳು ಮತ್ತು FAQ ಮಾರ್ಗಸೂಚಿಗಳ ಭಾಗ ಸೇರಿದಂತೆ ಆದರೆ ಅಷ್ಟಕ್ಕೆ ಸೀಮಿತವಲ್ಲದಂತೆ; (iv) ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸುವ Snap ಗಳನ್ನು ನೀವೊಬ್ಬರೇ ಸೃಷ್ಟಿಸಿದ್ದೀರಿ, ಕೃತಿಸ್ವಾಮ್ಯ (ಮಾಸ್ಟರ್, ಸಿಂಕ್, ಮತ್ತು ಸಾರ್ವಜನಿಕ ಪ್ರದರ್ಶನ ಸಂಗೀತ ಕೃತಿಸ್ವಾಮ್ಯ ಹಕ್ಕುಗಳು ಸೇರಿದಂತೆ), ಟ್ರೇಡ್‌ಮಾರ್ಕ್, ಪ್ರಚಾರ, ಗೌಪ್ಯತೆ, ಮತ್ತು ಇತರ ಯಾವುದೇ ಅನ್ವಯವಾಗುವ ಹಕ್ಕು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಯಾವುದೇ ತೃತೀಯ-ಪಕ್ಷದ ಹಕ್ಕುಗಳ ಅತಿಕ್ರಮಿಸುವಿಕೆ, ಉಲ್ಲಂಘನೆ, ಅಥವಾ ತಪ್ಪಾಗಿ ಪ್ರತಿನಿಧಿಸುವಿಕೆಯನ್ನು ಮಾಡುವುದಿಲ್ಲ, ಮತ್ತು ಅನ್ವಯವಾಗುವ ಕಾನೂನುಗಳ ಅನುಸರಣೆ ಮಾಡುತ್ತವೆ;(v) ನಿಮ್ಮ Snap ಗಳಿಗೆ ಸಂಬಂಧಿಸಿ ಯಾವುದೇ ತೃತೀಯ ಪಕ್ಷಗಳಿಗೆ ಅಗತ್ಯ ಪಾವತಿಗಳನ್ನು ನೀವು ಮಾಡುತ್ತೀರಿ ಮತ್ತು ನಿಮ್ಮ ಕಂಟೆಂಟ್ ವಿತರಣೆಯ ಪರಿಣಾಮವಾಗಿ ಯಾವುದೇ ತೃತೀಯ ಪಕ್ಷಕ್ಕೆ Snap ಗೆ ಯಾವುದೇ ಹೊಣೆಗಾರಿಕೆಯನ್ನು ಉಂಟುಮಾಡುವುದಿಲ್ಲ; ಮತ್ತು (vi) ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್ ಹೊರತಾದ ದೇಶದ ಕಾನೂನುಬದ್ಧ ನಿವಾಸಿಯಾಗಿದ್ದರೆ, ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸಿದ Snap ಗಳ ಸೃಷ್ಟಿ ಮತ್ತು ಪೋಸ್ಟಿಂಗ್ ಮಾಡುವ ಸೇವೆಗಳನ್ನು ನಿರ್ವಹಿಸಿದಾಗ ಮತ್ತು ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸಿದ Snap ಗಳಿಗೆ ಸಂಬಂಧಿಸಿ ಜಾಹೀರಾತುಗಳ ವಿತರಣೆಯ ಸೌಕರ್ಯ ಕಲ್ಪಿಸಿದಾಗ ನೀವು ದೈಹಿಕವಾಗಿ ಯುನೈಟೆಡ್ ಸ್ಟೇಟ್ಸ್‌ ಹೊರಗೆ ಇದ್ದಿರಿ.

9. ಗೌಪ್ಯತೆ

Snap ನಿಂದ ಒದಗಿಸಿರಬಹುದಾದ ಯಾವುದೇ ಸಾರ್ವಜನಿಕವಲ್ಲದ ಮಾಹಿತಿ ಗೌಪ್ಯವಾದುದು ಮತ್ತು Snap ನ ಸ್ಪಷ್ಟ, ಪೂರ್ವ ಲಿಖಿತ ಅನುಮತಿಯಿಲ್ಲದೆ ನೀವು ಅದನ್ನು ಯಾವುದೇ ತೃತೀಯ ಪಕ್ಷಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಒಪ್ಪುತ್ತೀರಿ.

10. ಗೌಪ್ಯತೆ

ಈ ವಿಭಾಗವು ನಮ್ಮ ಗೌಪ್ಯತಾ ನೀತಿ ಮತ್ತು ಗೌಪ್ಯತೆ ಕೇಂದ್ರದಲ್ಲಿ ನಾವು ಒದಗಿಸಿರುವ ಮಾಹಿತಿಗೆ ಪೂರಕವಾಗಿದೆ.

  • ಸ್ಪಾಟ್‌ಲೈಟ್ Snap ಗಳು ಸಾರ್ವಜನಿಕವಾಗಿವೆ. ಸ್ಪಾಟ್‌ಲೈಟ್‌ಗೆ ನೀವು ಸಲ್ಲಿಸುವ Snap ಗಳು ಸಾರ್ವಜನಿಕ ವಿಷಯವಾಗಿರುತ್ತವೆ ಹಾಗೂ ಎಲ್ಲ Snapchat ಬಳಕೆದಾರರಿಗೆ ಹಾಗೂ ಇತರ ಸೇವೆಗಳು ಮತ್ತು ವೆಬ್‌ಸೈಟ್‌ಗಳಲ್ಲಿ Snapchat ಅಲ್ಲದ ಬಳಕೆದಾರರಿಗೆ ಕಾಣಿಸುತ್ತವೆ ಎನ್ನುವುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ.

  • ಸ್ಪಾಟ್‌ಲೈಟ್ Snap ಗಳನ್ನು ರೀಮಿಕ್ಸ್ ಮಾಡಬಹುದು. ಅಂದರೆ, ಇತರ Snapchat ಬಳಕೆದಾರರು ಹೊಸ Snap ಗಳು ಅಥವಾ ಇತರ ಸಾರ್ವಜನಿಕ ವಿಷಯವನ್ನು ರಚಿಸಲು ನಿಮ್ಮ ಸ್ಪಾಟ್‌ಲೈಟ್ Snap ಗಳನ್ನು (ಆಡಿಯೊ ಮತ್ತು ವೀಡಿಯೊ ಸೇರಿದಂತೆ) ಬಳಸಬಹುದು. ನೀವು ಸೆಟ್ಟಿಂಗ್‌ಗಳಲ್ಲಿ ನಿಮ್ಮ Snap ಗಳನ್ನು ಯಾವಾಗಲೂ ಅಳಿಸಬಹುದು ಆದರೆ ಅವುಗಳ ರೀಮಿಕ್ಸ್‌ಗಳನ್ನು ಅಳಿಸಲಾಗದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

  • ನಾವು ಸಂಗ್ರಹಿಸುವ ಮಾಹಿತಿ. ನೀವು ಸ್ಪಾಟ್‌ಲೈಟ್‌ಗೆ Snap ಗಳನ್ನು ಸಲ್ಲಿಸಿದಾಗ, ವೀಕ್ಷಣೆಗಳ ಸಂಖ್ಯೆ, ವೀಕ್ಷಣೆಯ ಸಮಯ, ಮೆಚ್ಚುಗೆಗಳು, ಸ್ಕ್ರೀನ್‌ಶಾಟ್ ಕ್ಯಾಪ್ಚರ್‌ಗಳು, Snapchat ನಲ್ಲಿ ಅಥವಾ ನಿಂದ ಅದು ಪಡೆಯುವ ಕಳುಹಿಸುವಿಕೆಗಳ ಸಂಖ್ಯೆಯಂಥ ಅದರ ಬಳಕೆ ಮತ್ತು ಸಂವಹನಗಳ ಕುರಿತ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ನಾವು ಸಂಗ್ರಹಿಸುವ ಮಾಹಿತಿಯ ವಿವರವಾದ ಅವಲೋಕನಕ್ಕಾಗಿ, ನಮ್ಮ ಗೌಪ್ಯತಾ ನೀತಿ ನೋಡಿ.

  • ನಾವು ಸ್ಪಾಟ್‌ಲೈಟ್‌ Snap ಗಳನ್ನು ಹೇಗೆ ಬಳಸಬಹುದು. ನಿಮಗೆ ಸ್ಪಾಟ್‌ಲೈಟ್ ಸೇವೆಯನ್ನು ಒದಗಿಸುವುದು ಸ್ಪಾಟ್‌ಲೈಟ್ Snap ಗಳಿಂದ ನಾವು ಮಾಹಿತಿ ಕಲೆಹಾಕುವ ಮುಖ್ಯ ಕಾರಣವಾಗಿದೆ. ಈ ಸ್ಪಾಟ್‌ಲೈಟ್ ನಿಯಮಗಳ ವಿಭಾಗ 2 ಮತ್ತು ನಮ್ಮ ಗೌಪ್ಯತಾ ನೀತಿಯಲ್ಲಿ ನಾವು ಬಹಿರಂಗಪಡಿಸಿದ ಉದ್ದೇಶಗಳಿಗೆ ಹೆಚ್ಚುವರಿಯಾಗಿ, ನಾವು ಮತ್ತು ಇತರರು ನಿಮ್ಮ ಸ್ಪಾಟ್‌ಲೈಟ್‌ Snap ಗಳನ್ನು ಈ ಕೆಳಗಿನ ವಿಧಾನಗಳಲ್ಲಿ ಬಳಸಬಹುದು:

    • ಕ್ಯೂರೇಟ್ ಮಾಡಿದ ಕಥೆ, ಪ್ರಕಾಶಕರ ಆವೃತ್ತಿ ಅಥವಾ ಶೋನ ಭಾಗವಾಗಿ ಚಾಟ್‌ ಅಥವಾ Discover ಸೇರಿದಂತೆ, ಸ್ಪಾಟ್‌ಲೈಟ್ Snap ಗಳನ್ನು Snapchat ನಲ್ಲಿ ನಾವು ಪ್ರದರ್ಶಿಸಬಹುದು.

    • ಇತರ ಬಳಕೆದಾರರು ನಿಮ್ಮ ಸ್ಪಾಟ್‌ಲೈಟ್ Snap ಗಳನ್ನು ಎಡಿಟ್ ಅಥವಾ ಬಳಕೆ ಮಾಡಬಹುದು, ಅವರ ಸ್ನೇಹಿತರೊಂದಿಗೆ ನಿಮ್ಮ ಸ್ಪಾಟ್‌ಲೈಟ್ Snap ಗಳನ್ನು ಹಂಚಿಕೊಳ್ಳಬಹುದು, ಇತರ Snapchat ಅಲ್ಲದ ಸೇವೆಗಳ ಮೂಲಕ (ಉದಾಹರಣೆಗೆ ಮೆಸೇಜಿಂಗ್ ಸೇವೆಗಳು) ನಿಮ್ಮ ಸ್ಪಾಟ್‌ಲೈಟ್ Snap ಗಳಿಗೆ ಲಿಂಕ್ ಹಂಚಿಕೊಳ್ಳಬಹುದು, ಮತ್ತು ತೃತೀಯ-ಪಕ್ಷದ ವೆಬ್‌ಸೈಟ್‌ಗಳಲ್ಲಿ ನಿಮ್ಮ ಸ್ಪಾಟ್‌ಲೈಟ್ Snap ಗೆ ಲಿಂಕ್ ಹಂಚಿಕೊಳ್ಳಬಹುದು.

    • ಉತ್ತಮ ಕಾರ್ಯಕ್ಷಮತೆ ತೋರುವ ಅಥವಾ ರಿವಾರ್ಡ್‌ಗೆ ಅರ್ಹತೆ ಪಡೆಯುವ Snap ಗಳನ್ನು ನೀವು ಸಲ್ಲಿಸಿದರೆ, Snapchat ಅಪ್ಲಿಕೇಶನ್‌ನಲ್ಲಿ ನಾವು ನಿಮ್ಮ ಖಾತೆ ಅಥವಾ ನಿಮ್ಮ Snap ಗಳನ್ನು ಹೈಲೈಟ್ ಮಾಡಬಹುದು, ಉದಾಹರಣೆಗೆ, ನಿಮ್ಮ ಸ್ಪಾಟ್‌ಲೈಟ್ Snap ಗಳ ಮೇಲೆ ಒಂದು ಬ್ಯಾಡ್ಜ್ ಇರಿಸುವ ಮೂಲಕ.

    • ಒಂದು ವೇಳೆ ನೀವು ನಿಮ್ಮ ಸ್ಪಾಟ್‌ಲೈಟ್ Snap ಗೆ ಸ್ಥಳದ ಟ್ಯಾಗ್ ಸೇರಿಸಲು ನಿರ್ಧರಿಸಿದರೆ, ನಿಮ್ಮ ಸ್ಪಾಟ್‌ಲೈಟ್ Snap ಒಂದು ಸ್ಥಳದೊಂದಿಗೆ ಕೂಡ ಜೋಡಣೆಯಾಗಬಹುದು ಮತ್ತು Snap ಮ್ಯಾಪ್‌ನಲ್ಲಿ ಕಾಣಿಸಬಹುದು.

    • ನಾವು ನಿಮ್ಮ ಸ್ಪಾಟ್‌ಲೈಟ್ Snap ಗಳನ್ನು ಹುಡುಕಾಟದಲ್ಲಿ ಪ್ರದರ್ಶಿಸಬಹುದು ಮತ್ತು ಅವುಗಳನ್ನು ಪುಟಗಳೊಂದಿಗೆ ಸಂಬಂಧಪಡಿಸಬಹುದು, ಉದಾಹರಣೆಗೆ, ಒಂದು ವೇಳೆ ನಿಮ್ಮ Snap ನಿರ್ದಿಷ್ಟ ಲೆನ್ಸ್, ಧ್ವನಿ ಅಥವಾ ಇತರ ವಿಶಿಷ್ಟ ಎಲಿಮೆಂಟ್ ಅನ್ನು ಬಳಸಿದರೆ.

    • ಒಂದು ವೇಳೆ ನೀವು ಸ್ಪಾಟ್‌ಲೈಟ್‌ಗೆ Snap ಸಲ್ಲಿಸಿದರೆ, ಇತರ ಬಳಕೆದಾರರು Snap ಅನ್ನು ಮೆಚ್ಚಬಹುದು, ಮತ್ತು ಆ ಮೆಚ್ಚಿನ ಸ್ಪಾಟ್‌ಲೈಟ್ Snap ಬಳಕೆದಾರರ ಖಾಸಗಿ ಮೆಚ್ಚಿನವುಗಳ ಪಟ್ಟಿಯಲ್ಲಿ ಕಾಣಿಸುತ್ತದೆ.

    • ಟ್ರೆಂಡ್‌ಗಳು, ವಿಶ್ಲೇಷಣೆಗಳು, ಸಂಶೋಧನೆ ಮತ್ತು ಅಭಿವೃದ್ಧಿ, ವೈಯಕ್ತಿಕಗೊಳಿಸುವಿಕೆ, [1] ಆಪ್ಟಿಮೈಸೇಷನ್ ಮತ್ತು ಮೆಷಿನ್ ಲರ್ನಿಂಗ್‌ಗಾಗಿ ನಾವು ಸ್ಪಾಟ್‌ಲೈಟ್ Snap ಗಳನ್ನು ವಿಶ್ಲೇಷಿಸಬಹುದು.

    • ಪಾವತಿ ಖಾತೆ ಅರ್ಹತೆಯ ಕುರಿತು ನಿಮ್ಮನ್ನು ಸಂಪರ್ಕಿಸಲು ಮತ್ತು ನಿಮ್ಮ ಸ್ಪಾಟ್‌ಲೈಟ್ Snap ಗಳು ಅಥವಾ ನಿಮ್ಮ ಸ್ಪಾಟ್‌ಲೈಟ್ Snap ಗಳ ನಮ್ಮ ಬಳಕೆಯ ಕುರಿತ ಇತರ ಪ್ರಶ್ನೆಗಳಿಗಾಗಿ ನಿಮ್ಮನ್ನು ಸಂಪರ್ಕಿಸಲು.

  • ಸ್ಪಾಟ್‌ಲೈಟ್ Snap ಗಳ ಉಳಿಸಿಕೊಳ್ಳುವಿಕೆ. ಸ್ಪಾಟ್‌ಲೈಟ್ Snap ಗಳ ಸಲ್ಲಿಕೆಯನ್ನು ಅನಿರ್ದಿಷ್ಟ ಕಾಲ ದಾಸ್ತಾನು ಮಾಡಬಹುದು ಮತ್ತು ದೀರ್ಘ ಕಾಲದ ಅವಧಿಗೆ Snapchat ನಲ್ಲಿ ಕಾಣಿಸಬಹುದು — ಕೆಲವೊಮ್ಮೆ ತಿಂಗಳುಗಳು ಅಥವಾ ಹೆಚ್ಚು ಸಮಯ.

  • ನಿಮ್ಮ ಸ್ಪಾಟ್‌ಲೈಟ್ Snap ಗಳ ಮೇಲಿನ ನಿಯಂತ್ರಣ. ನಿಮ್ಮ ಪ್ರೊಫೈಲ್‌ನಲ್ಲಿ ನೀವು ಸ್ಪಾಟ್‌ಲೈಟ್‌ಗೆ ಸಲ್ಲಿಸಿದ Snap ಗಳ ನಿರ್ವಹಣೆ ಮಾಡಬಹುದು. ಮಾಹಿತಿಯ ಪ್ರತಿಯನ್ನು ಪಡೆಯಲು ನೀವು ನನ್ನ ಡೇಟಾ ಡೌನ್‌ಲೋಡ್ ಮಾಡಿ ಅನ್ನು ಕೂಡ ಬಳಸಬಹುದು, ಇದರಿಂದಾಗಿ ನೀವು ಬಯಸಿದ ಸ್ಥಳಕ್ಕೆ ಅದನ್ನು ಸರಿಸಬಹುದು ಅಥವಾ ಶೇಖರಣೆ ಮಾಡಬಹುದು. ನಿಮ್ಮ ಮಾಹಿತಿಯ ಪ್ರತಿ ಕೋರುವ ಹಕ್ಕು ಸೇರಿದಂತೆ, ನೀವು ಹೊಂದಿರುವ ನಿಯಂತ್ರಣಗಳ ಕುರಿತು ಇನ್ನಷ್ಟು ಮಾಹಿತಿಗಾಗಿ ನಿಮ್ಮ ಮಾಹಿತಿಯ ಮೇಲೆ ನಿಯಂತ್ರಣ ವಿಭಾಗವನ್ನು ನೋಡಿ.

  • ತೃತೀಯ ಪಕ್ಷಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದು. ಈ ಸ್ಪಾಟ್‌ಲೈಟ್ ನಿಯಮಗಳ ವಿಭಾಗ 4 ರಲ್ಲಿ ವಿವರಿಸಿರುವಂತೆ, ತೃತೀಯ-ಪಕ್ಷದ ಪಾವತಿ ಪೂರೈಕೆದಾರರಂತಹ ನಮ್ಮ ಪರವಾಗಿ ಸೇವೆಗಳನ್ನು ಒದಗಿಸುವ ಸೇವಾ ಪೂರೈಕೆದಾರರೊಂದಿಗೆ ನಿಮ್ಮ ಕುರಿತ ಮಾಹಿತಿಯನ್ನು ನಾವು ಹಂಚಿಕೊಳ್ಳಬಹುದು.

ಖಂಡಿತವಾಗಿ, ನಿಮ್ಮ ಡೇಟಾವನ್ನು ಹೇಗೆ ನಿರ್ವಹಿಸಲಾಗುತ್ತದೆ ಎನ್ನುವ ಕುರಿತು ಈಗಲೂ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ನಮ್ಮನ್ನು ಸಂಪರ್ಕಿಸಿ ಅಷ್ಟೇ.

11. ಸಮಾಪ್ತಿ; ಅಮಾನತು

ನಮ್ಮಲ್ಲಿರುವ ಇತರ ಯಾವುದೇ ಹಕ್ಕುಗಳು ಅಥವಾ ಪರಿಹಾರಗಳ ಜೊತೆಗೆ, ಸ್ಪಾಟ್‌ಲೈಟ್‌ನಲ್ಲಿ ನಿಮ್ಮ Snap‌ಗಳ ವಿತರಣೆ, ಸ್ಪಾಟ್‌ಲೈಟ್‌ಗೆ ಸಂಬಂಧಿಸಿದ ಆದಾಯ ಕಾರ್ಯಕ್ರಮ, ಸ್ಪಾಟ್‌ಲೈಟ್ ಸೇವೆ, ಅಥವಾ ಮೇಲಿನ ಯಾವುದಕ್ಕೂ ನಿಮ್ಮ ಪ್ರವೇಶವನ್ನು ಅಮಾನತುಗೊಳಿಸುವ ಅಥವಾ ಅಂತ್ಯಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಈ ಸ್ಪಾಟ್‌ಲೈಟ್ ನಿಯಮಗಳನ್ನು ನೀವು ಅನುಸರಿಸದಿದ್ದಲ್ಲಿ, ಗಳಿಸಿದ ಆದರೆ ಇನ್ನೂ ನಿಮ್ಮ ಪಾವತಿ ಖಾತೆಗೆ ವರ್ಗಾಯಿಸದ ಯಾವುದೇ ಪಾವತಿಸದ ಮೊತ್ತವನ್ನು ಪಡೆಯಲು ನಿಮ್ಮನ್ನು ಅರ್ಹತೆಯಿಂದ ಅನರ್ಹಗೊಳಿಸಬಹುದು. ಒಂದು ವೇಳೆ ಯಾವುದೇ ಸಮಯದಲ್ಲಿ ನೀವು ಈ ಸ್ಪಾಟ್‌ಲೈಟ್‌ ನಿಯಮಗಳ ಯಾವುದೇ ಭಾಗಕ್ಕೆ ಒಪ್ಪಿಕೊಳ್ಳದಿದ್ದಲ್ಲಿ, ನೀವು ಸ್ಪಾಟ್‌ಲೈಟ್ ಅಥವಾ ಸೇವೆಯ ಅನ್ವಯವಾಗುವ ಭಾಗಗಳ ಬಳಕೆಯನ್ನು ನಿಲ್ಲಿಸಬೇಕು.

12. ಯಾವುದೇ ಏಜೆನ್ಸಿ ಸಂಬಂಧವಿಲ್ಲ

ಈ ನಿಯಮಗಳಲ್ಲಿ ಇರುವ ಯಾವುದೂ ಕೂಡ ನಿಮ್ಮ ಮತ್ತು Snap ನಡುವೆ ಜಂಟಿ ಉದ್ಯಮ, ಪ್ರಧಾನ-ಏಜೆಂಟ್, ಅಥವಾ ಉದ್ಯೋಗ ಸಂಬಂಧವನ್ನು ಸೂಚಿಸಲು ವ್ಯಾಖ್ಯಾನ ರಚಿಸುವುದಿಲ್ಲ.

13. ಅಧಿಸೂಚನೆ

ಮೇಲೆ ತಿಳಿಸಿದಂತೆ, ನೀವು ಪಾವತಿ ಸ್ವೀಕರಿಸಲು ಅರ್ಹರಾಗಬಹುದು ಎಂದು Snap ನಿರ್ಧರಿಸಿದರೆ, Snap ಅಥವಾ ನಮ್ಮ ಮೂರನೇ ವ್ಯಕ್ತಿಯ ಪಾವತಿ ಒದಗಿಸುವವರು Snapchat ಅಪ್ಲಿಕೇಶನ್, ಇಮೇಲ್ ವಿಳಾಸವನ್ನು ಒಳಗೊಂಡಂತೆ ನಿಮ್ಮ ಬಳಕೆದಾರರ ಪ್ರೊಫೈಲ್‌ನಲ್ಲಿ ನೀವು ಒದಗಿಸಿದ ಸಂಪರ್ಕ ಮಾಹಿತಿ ಮೂಲಕ ಅಥವಾ ನಮ್ಮ ಅಧಿಕೃತ Snapchat ಖಾತೆ ಟೀಮ್ Snapchat ಮೂಲಕ ನಿಮಗೆ ತಿಳಿಸುತ್ತಾರೆ. ಪಾವತಿಗಳನ್ನು ಸ್ವೀಕರಿಸಲು ಅರ್ಹವಾಗಿಲ್ಲದ ನಿಮ್ಮ Snap ಗಳಿಗೆ ಸಂಬಂಧಿಸಿ ಮತ್ತು ಇತರ ಕಾರಣಗಳಿಗಾಗಿಯೂ ಕೂಡ Snap ನಿಮ್ಮನ್ನು ಸಂಪರ್ಕಿಸಬಹುದು. ದಯವಿಟ್ಟು ನಿಮ್ಮ Snapchat ಅಧಿಸೂಚನೆಗಳನ್ನು ಆಗಾಗ್ಗೆ ಪರಿಶೀಲಿಸಿ, ನಿಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ನವೀಕೃತವಾಗಿರಿಸಿ ಮತ್ತು ನಿಮ್ಮ ಇಮೇಲ್ ಅನ್ನು ಪರಿಶೀಲಿಸಿ. ಒಂದು ವೇಳೆ ನೀವು ಈ ಹಿಂದೆ Snapchat ತಂಡವನ್ನು ನಿರ್ಬಂಧಿಸಿದ್ದರೆ ಅಥವಾ ನಿಮ್ಮ ಸ್ನೇಹಿತರಿಂದ ತೆಗೆದುಹಾಕಿದ್ದರೆ, ನೀವು ನಮ್ಮಿಂದ Snapchat ನಲ್ಲಿ ಅಧಿಕೃತ ಸಂದೇಶಗಳನ್ನು ಸ್ವೀಕರಿಸುವ ಸಲುವಾಗಿ ನಾವು Snapchat ತಂಡವನ್ನು ಮರುಸ್ಥಾಪನೆ ಮಾಡಬಹುದು ಎನ್ನುವುದಕ್ಕೆ ನೀವು ಒಪ್ಪುತ್ತೀರಿ.

14. ಮಧ್ಯಸ್ಥಿಕೆ ಮತ್ತು ನಿಯಂತ್ರಿಸುವ ಕಾನೂನು

ಜ್ಞಾಪನೆಯಂತೆ, ಈ ನಿಯಮಗಳು Snap Inc. ಸೇವಾ ನಿಯಮಗಳು ಅಥವಾ Snap Group Limited ಸೇವಾ ನಿಯಮಗಳನ್ನು (ನೀವು ವಾಸಿಸುವ ಸ್ಥಳವನ್ನು ಆಧರಿಸಿ ಯಾವುದು ನಿಮಗೆ ಅನ್ವಯಿಸುತ್ತದೆಯೋ ಅಥವಾ, ನೀವು ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ, ಆ ವ್ಯವಹಾರದ ಪ್ರಮುಖ ವ್ಯವಹಾರ ಸ್ಥಳ ಎಲ್ಲಿದೆಯೋ ಅಲ್ಲಿ) ಸಂಯೋಜಿಸುತ್ತವೆ. ಎಲ್ಲ Snap Inc. ಸೇವೆಯ ನಿಯಮಗಳು ಅಥವಾ Snap Group Limited ಸೇವೆಯ ನಿಯಮಗಳು (ಯಾವುದು ಅನ್ವಯಿಸುತ್ತದೋ ಅದು) ನಿಮಗೆ ಅನ್ವಯಿಸುತ್ತದಾದರೂ, ಈ ನಿಯಮಗಳು ಮಧ್ಯಸ್ಥಿಕೆ, ಸಮೂಹ ಕ್ರಮ ವರ್ಜನೆ ಮತ್ತು ತೀರ್ಪುಗಾರರ ಮನ್ನಾ ವಿಧಿ, ಕಾನೂನಿನ ಆಯ್ಕೆ ವಿಧಿ ಮತ್ತು Snap Inc. ನ ಅನನ್ಯ ಸ್ಥಳ ವಿಧಿಯಿಂದ ನಿಯಂತ್ರಿಸಲ್ಪಡುತ್ತವೆ ಎಂದು ನಿರ್ದಿಷ್ಟವಾಗಿ ನಿಮ್ಮ ಗಮನ ಸೆಳೆಯಲು ನಾವು ಬಯಸುತ್ತೇವೆ. ಸೇವೆಯ ನಿಯಮಗಳು (ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ, ಅಥವಾ ಒಂದು ವ್ಯವಹಾರದ ಪ್ರಧಾನ ಕಚೇರಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದು ಆ ವ್ಯವಹಾರದ ಪರವಾಗಿ ನೀವು ಕಾರ್ಯನಿರ್ವಹಿಸುತ್ತಿದ್ದರೆ ) ಅಥವಾ ವಿವಾದ ಪರಿಹಾರ, ಮಧ್ಯಸ್ಥಿಕೆಯ ವಿಧಿ, ಕಾನೂನಿನ ಆಯ್ಕೆ ವಿಧಿ, ಮತ್ತು Snap Group Limited ಸೇವೆಯ ನಿಯಮಗಳ ಅನನ್ಯ ಸ್ಥಳ ವಿಧಿ (ನೀವು ಅಥವಾ ನೀವು ಕಾರ್ಯನಿರ್ವಹಿಸುತ್ತಿರುವ ವ್ಯವಹಾರದ ಪ್ರಧಾನ ಕಚೇರಿ ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ಇದ್ದರೆ).

ಮಧ್ಯಸ್ಥಿಕೆ ಅಧಿಸೂಚನೆ: Snap Inc. ನ ಮಧ್ಯಸ್ಥಿಕೆ ನಿಬಂಧನೆಯಲ್ಲಿ ಉಲ್ಲೇಖಿಸಲಾದ ಕೆಲವು ರೀತಿಯ ವಿವಾದಗಳನ್ನು ಹೊರತುಪಡಿಸಿ. ಸೇವಾ ನಿಯಮಗಳು, ನಮ್ಮ ನಡುವೆ ಉದ್ಭವಿಸುವ ಶಾಸನಬದ್ಧ ಹಕ್ಕುಗಳು ಮತ್ತು ವಿವಾದಗಳು ಸೇರಿದಂತೆ ಹಕ್ಕುಗಳು ಮತ್ತು ವಿವಾದಗಳನ್ನು Snap Inc. ನ ಕಡ್ಡಾಯ ಹಾಗು ಬದ್ಧವಾದಮಧ್ಯಸ್ಥಿಕೆ ವಿಧಿಯಿಂದ ಪರಿಹರಿಸಲಾಗುವುದು ಎಂದು ನೀವು ಮತ್ತು Snap ಒಪ್ಪುತ್ತೀರಿ. ಸೇವಾ ನಿಯಮಗಳು ನೀವು ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಸಿಸುತ್ತಿದ್ದರೆ ಅಥವಾ ಯುನೈಟೆಡ್ ಸ್ಟೇಟ್ಸ್ನಲ್ಲಿ ಸ್ಥಾಪಿಸಲಾದ ವ್ಯಾಪಾರದ ಪ್ರಮುಖ ಸ್ಥಳದೊಂದಿಗೆ ವ್ಯವಹಾರದ ವರ್ತನೆಯ ಮೇಲೆ ನೀವು ಸೇವೆಗಳನ್ನು ಬಳಸುತ್ತಿದ್ದರೆ, ಮತ್ತು ನೀವು ಮತ್ತು SNAP INC. ಸಾಮೂಹಿಕ ದಾವೆ ಅಥವಾ ಸಾಮೂಹಿಕ ಮಧ್ಯಸ್ಥಿಕೆಯಲ್ಲಿ ಭಾಗವಹಿಸಲು ಯಾವುದೇ ಹಕ್ಕನ್ನು ತ್ಯಜಿಸಿ. ಒಂದು ವೇಳೆ ಯುನೈಟೆಡ್ ಸ್ಟೇಟ್ಸ್ ಹೊರಗೆ ತನ್ನ ಪ್ರಧಾನ ವ್ಯವಹಾರ ಸ್ಥಳವನ್ನು ಹೊಂದಿರುವ ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, ಆಗ ನಮ್ಮ ನಡುವಿನ ವಿವಾದಗಳನ್ನು SNAP GROUP LIMITED TERMS OF SERVICE ನ ಬಾಧ್ಯತೆಯ ಮಧ್ಯಸ್ಥಿಕೆ ವಿಧಿಯಿಂದ ಪರಿಹರಿಸಲಾಗುತ್ತದೆ ಎಂದು ನೀವು ಮತ್ತು SNAP GROUP LIMITED ಒಪ್ಪುತ್ತೀರಿ.

15. ಇತರೇ

ಕಾಲಕಾಲಕ್ಕೆ, ನಾವು ಈ Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳನ್ನು ಪರಿಷ್ಕರಿಸಬಹುದು. ಮೇಲ್ಭಾಗದಲ್ಲಿರುವ “ಜಾರಿಗೊಳಿಸುವ” ದಿನಾಂಕವನ್ನು ಉಲ್ಲೇಖಿಸುವ ಮೂಲಕ ಈ Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳನ್ನು ಕೊನೆಯದಾಗಿ ಪರಿಷ್ಕರಿಸಿದಾಗ ನೀವು ನಿರ್ಧರಿಸಬಹುದು. ಈ ಸ್ಪಾಟ್‌ಲೈಟ್ ನಿಯಮಗಳಲ್ಲಿನ ಯಾವುದೇ ಬದಲಾವಣೆಗಳು ಮೇಲಿನ "ಜಾರಿಗೊಳಿಸುವ" ದಿನಾಂಕದಂದು ಪರಿಣಾಮಕಾರಿಯಾಗುತ್ತವೆ ಮತ್ತು ಆ ಸಮಯದ ನಂತರ ನಿಮ್ಮ ಸೇವೆಗಳ ಬಳಕೆಗೆ ಇದು ಅನ್ವಯಿಸುತ್ತದೆ. ಅಂಥ ನಿಯಮಗಳ ಇತ್ತೀಚಿನ ಆವೃತ್ತಿಯ ಕುರಿತು ತಿಳಿದುಕೊಂಡಿರುವುದನ್ನು ಖಚಿತಪಡಿಸಲು, ಯಾವುದೇ ಅಪ್‌ಡೇಟ್‌ಗಳು ಸೇರಿದಂತೆ, ಈ ಸ್ಪಾಟ್‌ಲೈಟ್‌ ನಿಯಮಗಳನ್ನು ನಿಯಮಿತವಾಗಿ ಪರಿಶೀಲಿಸುವುದಕ್ಕೆ ನೀವು ಒಪ್ಪುತ್ತೀರಿ. ಅಪ್‌ಡೇಟ್ ಮಾಡಿದ ಸ್ಪಾಟ್‌ಲೈಟ್ ನಿಯಮಗಳ ಸಾರ್ವಜನಿಕ ಪೋಸ್ಟಿಂಗ್ ನಂತರ ಸೇವೆಗಳನ್ನು ಬಳಸುವ ಮೂಲಕ, ನೀವು ಅಪ್‌ಡೇಟ್ ಆದ ಸ್ಪಾಟ್‌ಲೈಟ್ ನಿಯಮಗಳಿಗೆ ಒಪ್ಪಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ನೀವು ಬದಲಾವಣೆಗಳಿಗೆ ಒಪ್ಪದಿದ್ದಲ್ಲಿ ನೀವು ಸೇವೆಗಳ ಬಳಕೆಯನ್ನು ನಿಲ್ಲಿಸಬೇಕು. ಈ Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳ ಯಾವುದೇ ನಿಬಂಧನೆಯನ್ನು ಜಾರಿಗೊಳಿಸಲಾಗದಿದ್ದಲ್ಲಿ, ಆ ನಿಬಂಧನೆಯನ್ನು ಕಡಿತಗೊಳಿಸಲಾಗುತ್ತದೆ ಮತ್ತು ಉಳಿದ ಯಾವುದೇ ನಿಬಂಧನೆಗಳ ಸಿಂಧುತ್ವ ಮತ್ತು ಜಾರಿಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.