Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳ ಅಪ್‌ಡೇಟ್‌ಗಳು

Snap ಸ್ಪಾಟ್‌ಲೈಟ್‌ ಸಲ್ಲಿಕೆ ಮತ್ತು ಆದಾಯ ನಿಯಮಗಳಿಗೆ ನವೀಕರಣಗಳು


ಜಾರಿ ದಿನಾಂಕ: ಜನವರಿ 1, 2024

ನಾವು Snap ಸ್ಪಾಟ್‌ಲೈಟ್ ಸಲ್ಲಿಕೆ ಮತ್ತು ಆದಾಯ ನಿಯಮಗಳಿಗೆ ("ನಿಯಮಗಳು") ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದು, ಅದು ಮೇಲೆ ಸೂಚಿಸಿರುವ "ಜಾರಿ" ದಿನಾಂಕದಿಂದ ಜಾರಿಗೆ ಬರುತ್ತದೆ. ಜಾರಿ ದಿನಾಂಕದವರೆಗೆ ಜಾರಿಯಲ್ಲಿರುವ ನಿಯಮಗಳ ಹಿಂದಿನ ಆವೃತ್ತಿಯುಇಲ್ಲಿ ಲಭ್ಯವಿರುತ್ತದೆ. ದಯವಿಟ್ಟು ನವೀಕರಿಸಿದ ನಿಯಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಬದಲಾವಣೆಗಳೊಂದಿಗೆ ನೀವೇ ಪರಿಚಿತರಾಗಿರಿ. ನಿಮ್ಮ ಅನುಕೂಲಕ್ಕಾಗಿ, ನಿಮಗೆ ಅತ್ಯಂತ ಮುಖ್ಯವಾಗಿರಬಹುದಾದ ಬದಲಾವಣೆಗಳನ್ನು ನಾವು ಕೆಳಗೆ ಹೈಲೈಟ್ ಮಾಡಿದ್ದೇವೆ:    

  • ಅರ್ಹತೆ ಪಡೆಯುವ Snap ಗಾಗಿ ನಾವು ಅರ್ಹತಾ ಮಾನದಂಡವನ್ನು ಮಾರ್ಪಡಿಸುತ್ತಿದ್ದೇವೆ. ನಾವು (i) ವೀಕ್ಷಣೆಯ ಮೇಲ್ಮಿತಿಯನ್ನು 10,000 ಒಟ್ಟು ವಿಶಿಷ್ಟ ವೀಡಿಯೊ ವೀಕ್ಷಣೆಗಳಿಗೆ ಏರಿಕೆ ಮಾಡಿದ್ದೇವೆ ಮತ್ತು (ii) ಕನಿಷ್ಟ 10 ವಿಶಿಷ್ಟ Snap ಗಳನ್ನು ಸಲ್ಲಿಸಬೇಕಾದ ದಿನಗಳ ಸಂಖ್ಯೆಯನ್ನು 5 ದಿನಗಳಿಗೆ ಇಳಿಕೆ ಮಾಡಿದ್ದೇವೆ. ಈ ಬದಲಾವಣೆಗಳು ಪಾವತಿಗಾಗಿ ನಿಮ್ಮ ಅರ್ಹತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ನೀವು ಸ್ವೀಕರಿಸಲು ಅರ್ಹರಾಗಿರಬಹುದಾದ ಆವರ್ತನ ಮತ್ತು ಮೊತ್ತ ಎರಡರ ಮೇಲೂ ಪ್ರಭಾವ ಬೀರಬಹುದು.  ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನವೀಕರಿಸಿದ “ಸ್ಪಾಟ್‌ಲೈಟ್ ಪಾವತಿ ಅರ್ಹತೆ” ವಿಭಾಗವನ್ನು ಪರಿಶೀಲಿಸಿ.

ನೀವು ಬದಲಾವಣೆಗಳಿಗೆ ಒಪ್ಪಿಕೊಳ್ಳಲು ಬಯಸಿದರೆ, ನವೀಕರಣ ಮಾಡಿದ ನಿಯಮಗಳನ್ನು ಅಂಗೀಕರಿಸಲು Snapchat ಅಪ್ಲಿಕೇಶನ್ ಅಥವಾ ವೆಬ್‌ನಲ್ಲಿ (ಅನ್ವಯಿಸುವಂತೆ) ಸೂಚಿಸಿದಾಗ "ಓಕೆ" ಅನ್ನು ಒತ್ತಿ. ನವೀಕರಿಸಿದ ನಿಯಮಗಳಲ್ಲಿನ ಯಾವುದೇ ಬದಲಾವಣೆಗಳಿಗೆ ನೀವು ಒಪ್ಪಿಕೊಳ್ಳಲು ಬಯಸದಿದ್ದರೆ, ಮೇಲೆ ಸೂಚಿಸಲಾದ "ಜಾರಿ" ದಿನಾಂಕದ ಮೊದಲು ನೀವು ಸ್ಪಾಟ್‌ಲೈಟ್ ಬಳಸುವುದನ್ನು ನಿಲ್ಲಿಸಬೇಕು.

ಎಂದಿನಂತೆ, ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದರೆ ನಮ್ಮನ್ನು ಸಂಪರ್ಕಿಸಿ.

ಧನ್ಯವಾದಗಳು!

Team Snapchat