ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ, ನೀವು Snap Inc. ನೊಂದಿಗೆ ಕಮ್ಯುನಿಟಿ ಜಿಯೋಫಿಲ್ಟರ್ ಷರತ್ತುಗಳು ಮತ್ತು ನಿಬಂಧನೆಗಳು ಅನ್ನು ಒಪ್ಪುತ್ತೀರಿ.

ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್ ಹೊರಗೆ ವಾಸಿಸುತ್ತಿದ್ದರೆ, Snap Group Limited ನೊಂದಿಗೆ ನೀವು ಸಮುದಾಯ ಜಿಯೋಫಿಲ್ಟರ್ ಷರತ್ತುಗಳು ಮತ್ತು ನಿಬಂಧನೆಗಳು ಅನ್ನು ಒಪ್ಪುತ್ತೀರಿ.

Snap Inc. ಕಮ್ಯುನಿಟಿ ಜಿಯೋಫಿಲ್ಟರ್ ಷರತ್ತುಗಳು ಮತ್ತು ನಿಬಂಧನೆಗಳು

ಜಾರಿ: ಜನವರಿ 10, 2017

ದಯವಿಟ್ಟು ಗಮನಿಸಿ: ಈ ನಿಯಮಗಳು ಸ್ವಲ್ಪ ನಂತರ ಮಧ್ಯಸ್ಥಿಕೆಯ ವಿಧಿಯನ್ನು ಒಳಗೊಳ್ಳುತ್ತವೆ. ಆ ಮಧ್ಯಸ್ಥಿಕೆ ಷರತ್ತುಗಳಲ್ಲಿ ಉಲ್ಲೇಖಿಸಲಾದ ಕೆಲವು ರೀತಿಯ ವಿವಾದಗಳನ್ನು ಹೊರತುಪಡಿಸಿ, ನೀವು ಮತ್ತು Snap Inc. ನಮ್ಮ ನಡುವಿನ ವಿವಾದಗಳನ್ನು ಕಡ್ಡಾಯವಾಗಿ ಬಂಧಿಸುವ ಮಧ್ಯಸ್ಥಿಕೆಯಿಂದ ಪರಿಹರಿಸಲಾಗುವುದು ಎಂದು ಒಪ್ಪಿಕೊಳ್ಳುತ್ತೀರಿ, ಮತ್ತು ನೀವು ಮತ್ತು Snap Inc. ಸಾಮೂಹಿಕ ದಾವೆ ಅಥವಾ ಸಾಮೂಹಿಕ ರಾಜಿ ಸಂಧಾನದಲ್ಲಿ ಭಾಗವಹಿಸಲು ಯಾವುದೇ ಹಕ್ಕನ್ನು ತ್ಯಜಿಸಿ.

ಪರಿಚಯ

ದಯವಿಟ್ಟು ಈ ಕಮ್ಯುನಿಟಿ ಜಿಯೋಫಿಲ್ಟರ್ ಷರತ್ತುಗಳು ಮತ್ತು ನಿಬಂಧನೆಗಳನ್ನು ("ನಿಯಮಗಳು") ಗಮನವಿಟ್ಟು ಓದಿ. ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ, ಕಮ್ಯುನಿಟಿ ಜಿಯೋಫಿಲ್ಟರ್ ("ಜಿಯೋಫಿಲ್ಟರ್") ಆಗಿ ಬಳಸುವುದಕ್ಕಾಗಿ Snap Inc. ಗೆ ಒಂದು ಇಮೇಜ್ ಫೈಲ್‌ನ ("ಸ್ವತ್ತು") ನಿಮ್ಮ ಸಲ್ಲಿಕೆಯನ್ನು ಈ ನಿಯಮಗಳು ನಿಯಂತ್ರಿಸುತ್ತವೆ. ಈ ನಿಯಮಗಳು ನಿಮ್ಮ ಮತ್ತು Snap Inc. ನಡುವೆ ಕಾನೂನು ಬಾಧ್ಯತೆಯ ಒಪ್ಪಂದವನ್ನು ನಿರ್ಮಿಸುತ್ತವೆ. ಸ್ವತ್ತನ್ನು ಸಲ್ಲಿಸುವ ಮೂಲಕ, ಈ ನಿಯಮಗಳಿಗೆ ಬದ್ಧರಾಗಿರಲು ನೀವು ಒಪ್ಪುತ್ತೀರಿ. ಒಂದು ವೇಳೆ ನೀವು ಈ ನಿಯಮಗಳನ್ನು ಒಪ್ಪದಿದ್ದರೆ, ಸ್ವತ್ತನ್ನು ಸಲ್ಲಿಸಬೇಡಿ.

ಈ ನಿಯಮಗಳು ಉಲ್ಲೇಖದ ಮೂಲಕ ನಮ್ಮ ಸೇವೆಯ ನಿಯಮಗಳುಕಮ್ಯುನಿಟಿ ಮಾರ್ಗಸೂಚಿಗಳುಗೌಪ್ಯತಾ ನೀತಿ, and ಸಲ್ಲಿಕೆ ಮಾರ್ಗಸೂಚಿಗಳನ್ನು ಒಳಗೊಳ್ಳುತ್ತವೆ, ಆದ್ದರಿಂದ ಪ್ರತಿಯೊಂದನ್ನೂ ಗಮನವಿಟ್ಟು ಓದಿ. ಇತರ ವಿಷಯಗಳೊಂದಿಗೆ, ಒಂದು ಸ್ವತ್ತಿನ ನಿಮ್ಮ ಸಲ್ಲಿಕೆಯು ಸೇವೆಯ ನಿಯಮಗಳಲ್ಲಿನ ಹಕ್ಕುನಿರಾಕರಣೆಗಳು ಮತ್ತು ಬಾಧ್ಯತೆಯ ಮಿತಿಗಳಿಗೆ ಒಳಪಟ್ಟಿರುತ್ತದೆ, ಮತ್ತು ಸಲ್ಲಿಕೆಯ ಸಂದರ್ಭ ನಾವು ನಿಮ್ಮಿಂದ ಸಂಗ್ರಹಿಸುವ ಮಾಹಿತಿ ನಮ್ಮ ಗೌಪ್ಯತಾ ನೀತಿಗೆ ಒಳಪಟ್ಟಿರುತ್ತದೆ. ಈ ನಿಯಮಗಳು ಸೇವೆಯ ನಿಯಮಗಳುಕಮ್ಯುನಿಟಿ ಮಾರ್ಗಸೂಚಿಗಳುಗೌಪ್ಯತಾ ನೀತಿ, ಅಥವಾ ಸಲ್ಲಿಕೆ ಮಾರ್ಗಸೂಚಿಗಳ ಜೊತೆ ಸಂಘರ್ಷ ಹೊಂದಿರುವ ಮಟ್ಟಿಗೆ, ಈ ನಿಯಮಗಳೇ ನಿಯಂತ್ರಣ ಹೊಂದಿರುತ್ತವೆ.

ನೀವು ಕನಿಷ್ಟ 18 ವರ್ಷ ವಯಸ್ಸಿನವರಾಗಿದ್ದೀರಿ (ಅಥವಾ ನೀವು ವಾಸಿಸುವಲ್ಲಿ ಪ್ರಾಪ್ತ ವಯಸ್ಕರಾಗಿದ್ದೀರಿ) ಮತ್ತು ಈ ನಿಯಮಗಳನ್ನು ಒಪ್ಪಲು ಮತ್ತು ಇವುಗಳಿಗೆ ಬದ್ಧರಾಗಿ ಇರಲು ಸಮರ್ಥರಾಗಿದ್ದೀರಿ ಮತ್ತು ಅಧಿಕಾರ ಹೊಂದಿದ್ದೀರಿ ಎನ್ನುವುದನ್ನು ನೀವು ದೃಢೀಕರಿಸುತ್ತೀರಿ. ಒಂದು ವೇಳೆ ನೀವು ಒಂದು ಸ್ವತ್ತನ್ನು ಸಲ್ಲಿಸಲು ಬಯಸಿದರೆ ಮತ್ತು ಅಪ್ರಾಪ್ತ ವಯಸ್ಕರಾಗಿದ್ದರೆ, ನೀವು ನಿಮ್ಮ ಪೋಷಕರ ಸ್ಪಷ್ಟ ಸಮ್ಮತಿಯನ್ನು ಹೊಂದಿರಬೇಕು.

ನೀವು ಒಂದು ಸ್ವತ್ತನ್ನು ಸಲ್ಲಿಸಿದಾಗ, Snapchat ಅಪ್ಲಿಕೇಶನ್‌ನ ಬಳಕೆದಾರರು ತಮ್ಮ Snap ಗಳ ಒಂದು ನಿರ್ದಿಷ್ಟ ಸ್ಥಳದಲ್ಲಿ (ಜಿಯೋಫೆನ್ಸ್) ಸ್ವತ್ತನ್ನು ಇರಿಸಲು ಅವರಿಗೆ ಅವಕಾಶ ನೀಡುವಂತೆ ನೀವು Snap Inc. ಅನ್ನು ಕೇಳುತ್ತೀರಿ. ಸ್ವತ್ತುಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಅನುಸರಣೆ ಮಾಡಬೇಕು ಮತ್ತು ನಮ್ಮ ಸಲ್ಲಿಕೆ ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಒಂದು ಸ್ವತ್ತನ್ನು ಜಿಯೋಫಿಲ್ಟರ್ ಆಗಿ ಲಭ್ಯವಾಗಿಸಲಾಗುತ್ತದೆಯೇ, ಒಂದು ವೇಳೆ ಹೌದಾದರೆ ಯಾವಾಗ ಎನ್ನುವುದನ್ನು ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುವ ಅನಿರ್ಬಂಧಿತ ಹಕ್ಕನ್ನು Snap Inc. ಹೊಂದಿದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ನಮ್ಮ ಸ್ವಂತ ವಿವೇಚನೆಯ ಮೇರೆಗೆ ನಾವು ಜಿಯೋಫೆನ್ಸ್ ಹೊಂದಿಸಬಹುದು.

1. ನಮಗೆ ನಿಮ್ಮ ಪರವಾನಗಿ

ಈಗ ತಿಳಿದಿರುವ ಅಥವಾ ಇನ್ನುಮುಂದೆ ಅಭಿವೃದ್ಧಿಪಡಿಸಬಹುದಾದ ಯಾವುದೇ ವಿಧಾನಗಳು ಅಥವಾ ಮಾಧ್ಯಮದಲ್ಲಿ ಅಥವಾ ಅವುಗಳ ಮೂಲಕ, ಮತ್ತು ಈಗ ತಿಳಿದಿರುವ ಅಥವಾ ಇನ್ನುಮುಂದೆ ಅಭಿವೃದ್ಧಿಪಡಿಸಬಹುದಾದ ಯಾವುದೇ ತಂತ್ರಜ್ಞಾನದೊಂದಿಗೆ ಎಲ್ಲ ಸ್ವರೂಪಗಳಲ್ಲಿ, ಸ್ವತ್ತನ್ನು ಆರ್ಕೈವ್, ನಕಲು, ಕ್ಯಾಶೆ, ಎನ್‌ಕೋಡ್, ಸಂಗ್ರಹಣೆ, ಮರುಉತ್ಪಾದನೆ, ರೆಕಾರ್ಡ್, ಮಾರಾಟ ಮಾಡಲು, ಉಪಪರವಾನಗಿ ನೀಡಲು, ವಿತರಣೆ, ಪ್ರಸರಣ, ಪ್ರಸಾರ, ಸಿಂಕ್ರೊನೈಸ್, ಅಳವಡಿಕೆ, ತಿದ್ದುವಿಕೆ, ಮಾರ್ಪಾಡು, ಸಾರ್ವಜನಿಕವಾಗಿ ಪ್ರದರ್ಶಿಸುವಿಕೆ, ಸಾರ್ವಜನಿಕವಾಗಿ ತೋರಿಸುವಿಕೆ, ಪ್ರಕಟಣೆ, ಮರುಪ್ರಕಟಣೆ, ಪ್ರಚಾರ, ಪ್ರದರ್ಶನ ಮಾಡಲು, ಅದನ್ನು ಆಧರಿಸಿ ವ್ಯುತ್ಪನ್ನ ಕಾರ್ಯಗಳನ್ನು ರಚಿಸಲು ಮತ್ತು ಇಲ್ಲದಿದ್ದಲ್ಲಿ ಸೇವೆಗಳಿಗೆ ಸಂಬಂಧಿಸಿ ಮತ್ತು ಆ ಮೂಲಕ ಜಾಹೀರಾತು, ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕಾಗಿ ಸ್ವತ್ತನ್ನು ಬಳಸಲು (ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಿರುವಂತೆ), ನೀವು Snap Inc. ಮತ್ತು ಅದರ ಅಂಗಸಂಸ್ಥೆಗಳಿಗೆ ಅನನ್ಯ, ಶಾಶ್ವತ, ಅನಿರ್ಬಂಧಿತ, ಷರತ್ತುರಹಿತ, ಅನಿಯಮಿತ, ವರ್ಗಾಯಿಸಬಹುದಾದ, ಉಪಪರವಾನಗಿ ನೀಡಬಹುದಾದ, ಹಿಂಪಡೆಯಲಾಗದ ರಾಯಧನ-ಮುಕ್ತ, ವಿಶ್ವಾದ್ಯಂತದ ಪರವಾನಗಿಯನ್ನು ನೀಡುತ್ತೀರಿ. ಈ ಪರವಾನಗಿಯು Snapchat ಬಳಕೆದಾರರ ನಡುವೆ ಹಂಚಿಕೊಳ್ಳಲು ಮತ್ತು ತಮ್ಮ ಸಾಧನಗಳಿಗೆ ಅದನ್ನು ಉಳಿಸಲು ಸ್ವತ್ತನ್ನು Snapchat ಬಳಕೆದಾರರಿಗೆ ಲಭ್ಯವಾಗಿಸುವ Snap Inc. ಮತ್ತು ಅದರ ಅಂಗಸಂಸ್ಥೆಗಳ ಹಕ್ಕನ್ನು ಒಳಗೊಂಡಿದೆ.

ಜಿಯೋಫಿಲ್ಟರ್‌ ರನ್ ಆಗುವ ಸಮಯದಲ್ಲಿ ಮತ್ತು ಅದರಾಚೆಗೆ Snapchat ಬಳಕೆದಾರರಿಗೆ Geofilter ಒಳಗೊಂಡ Snap ಗಳನ್ನು ಉಳಿಸಲು, ಹಂಚಿಕೊಳ್ಳಲು ಮತ್ತು ನೋಡಲು ಸಾಧ್ಯವಾಗಬಹುದು ಎನ್ನುವುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ನೀವು ನಿರೀಕ್ಷಿಸಿದ್ದಕ್ಕಿಂತ ಭಿನ್ನವಾದ ಉದ್ದೇಶಗಳಿಗಾಗಿ ಅಥವಾ ವಿಧಾನಗಳಲ್ಲಿ Snapchat ಬಳಕೆದಾರರು ಸ್ವತ್ತನ್ನು ಬಳಸಬಹುದು ಎನ್ನುವುದನ್ನು ನೀವು ಅಂಗೀಕರಿಸುತ್ತೀರಿ. ಅಂತಹ ಬಳಕೆಗಳು ಬಳಕೆದಾರರು ಜನರೇಟ್ ಮಾಡಿದ ಕಂಟೆಂಟ್ ಅನ್ನು ಒಳಗೊಂಡಿದ್ದು ಅದಕ್ಕಾಗಿ Snap Inc. ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ ಎಂದು ನೀವು ಒಪ್ಪುತ್ತೀರಿ. ಸೇವೆಗಳ ಒಳಗೆ ಅಥವಾ ಅದರಾಚೆಗೆ, ಸ್ವತ್ತುಗಳ ಬಳಕೆಯನ್ನು ಮಾಡುವ ಬಳಕೆದಾರ ಕಂಟೆಂಟ್ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಯಾವುದೇ ಬಳಕೆದಾರ ಜನರೇಟ್ ಮಾಡಿದ ಕಂಟೆಂಟ್‌ ಆಧರಿಸಿದ ಅಥವಾ ಅದರಿಂದ ಉದ್ಭವಿಸುವ ಯಾವುದೇ ಕ್ಲೈಮ್‌ಗಳು ಅಥವಾ ನಷ್ಟಗಳಿಗೆ Snap Inc. ಹೊಣೆಗಾರವಾಗಿರುವುದಿಲ್ಲ ಎಂದು ನೀವು ಒಪ್ಪುತ್ತೀರಿ.

ಸ್ವತ್ತಿಗಾಗಿ ಅಥವಾ ಸ್ವತ್ತಿನ ಯಾವುದೇ ಬಳಕೆಗಾಗಿ ನಿಮಗೆ ಅಥವಾ ಯಾವುದೇ ತೃತೀಯ ಪಕ್ಷಕ್ಕೆ ಯಾವುದೇ ಪರಿಗಣನೆ ಅಥವಾ ಪರಿಹಾರವನ್ನು ಪಾವತಿಸುವ ಯಾವುದೇ ಬಾಧ್ಯತೆಯನ್ನು Snap Inc. ಆಗಲೀ ಅಥವಾ ಅದರ ಅಂಗಸಂಸ್ಥೆಗಳಾಗಲೀ ಹೊಂದಿರುವುದಿಲ್ಲ ಎಂದು ನೀವು ಒಪ್ಪುತ್ತೀರಿ. ಕಾನೂನಿನಿಂದ ಅನುಮತಿಸಿರುವ ಮಟ್ಟಿಗೆ, ವಿಶ್ವಾದ್ಯಂತ ಸ್ವತ್ತಿನಲ್ಲಿ ನೀವು ಹೊಂದಿರಬಹುದಾದ ಯಾವುದೇ ನೈತಿಕ ಹಕ್ಕುಗಳು ಅಥವಾ ಅದಕ್ಕೆ ಸಮನಾದ ಹಕ್ಕುಗಳನ್ನು ನೀವು ಹಿಂಪಡೆಯಲಾಗದಂತೆ ವರ್ಜಿಸುತ್ತಿರಿ—ವರ್ಜನೆಗೆ ಅನುಮತಿಯಿಲ್ಲದಿರುವ ಮಟ್ಟಿಗೆ Snap Inc. ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಪ್ರತಿವಾದಿಸದೆ ಇರಲು—ಒಪ್ಪುತ್ತೀರಿ. ತನ್ನ ಸ್ವಂತ ವಿವೇಚನೆ ಮೇರೆಗೆ Snap Inc. ಸ್ವತ್ತನ್ನು ಮರುಗಾತ್ರಗೊಳಿಸಬಹುದು, ಪಾರದರ್ಶಕತೆಯನ್ನು ಹೊಂದಿಸಬಹುದು ಮತ್ತು ಇತರ ಮಾರ್ಪಾಡುಗಳನ್ನು ಮಾಡಬಹುದು ಎಂದು ನೀವು ಒಪ್ಪುತ್ತೀರಿ.

ಒಂದು ವೇಳೆ Snap Inc. ಸೇವೆಗಳಲ್ಲಿ ಸ್ವತ್ತನ್ನು ಲಭ್ಯವಾಗಿಸಿದರೆ, ನೀವು ಸಲ್ಲಿಸಿರುವಂತೆ ಅಥವಾ ನಿಮ್ಮ Snapchat ಅಕೌಂಟ್‌ಗೆ ಜೋಡಣೆ ಮಾಡಿರುವಂತೆ ನಿಮ್ಮ ಹೆಸರು, ನಗರ, ರಾಜ್ಯ ಮತ್ತು ದೇಶವನ್ನು ಪ್ರಕಟಿಸುವುದು ಸೇರಿದಂತೆ, ಸ್ವತ್ತನ್ನು ಸಾರ್ವಜನಿಕವಾಗಿ ಗುಣಲಕ್ಷಣಗೊಳಿಸುವ ಹಕ್ಕನ್ನು Snap Inc. ಹೊಂದಿದೆ (ಆದರೆ ಬಾಧ್ಯತೆಯನ್ನಲ್ಲ) ಎನ್ನುವುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.

2. ನಮ್ಮಿಂದ ಸಂವಹನಗಳು

ನೀವು ಒಂದು ಸ್ವತ್ತನ್ನು ಸಲ್ಲಿಸಿದಾಗ, ನಿಮ್ಮ Snapchat ಅಕೌಂಟ್‌ಗೆ ಜೋಡಣೆ ಮಾಡಿರುವ ಇಮೇಲ್ ವಿಳಾಸಕ್ಕೆ ನಾವು ಸಲ್ಲಿಕೆ ದೃಢೀಕರಣ ಇಮೇಲ್ ಅನ್ನು ಕಳುಹಿಸುತ್ತೇವೆ. ಸಲ್ಲಿಕೆ ದೃಢೀಕರಣವು ನಾವು ನಿಮ್ಮ ಸಲ್ಲಿಕೆಯನ್ನು ಅನುಮೋದಿಸಿದ್ದೇವೆ ಎನ್ನುವ ಅರ್ಥವಾಗಿರುವುದಿಲ್ಲ. ಜಿಯೋಫಿಲ್ಟರ್ ರನ್ ಆಗಲು ಶುರುವಾದ ಬಳಿಕ ಸೇರಿದಂತೆ, ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕಾಗಿ ನಿಮ್ಮ ಸಲ್ಲಿಕೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಯಾವುದೇ ಸಲ್ಲಿಕೆಯನ್ನು ಸ್ವೀಕರಿಸುವುದಕ್ಕೆ ಮೊದಲು ಹೆಚ್ಚುವರಿ ಪರಿಶೀಲನೆಗಳು ಅಥವಾ ಮಾಹಿತಿ ನಮಗೆ ಬೇಕಾಗಬಹುದು.

ಜಿಯೋಫಿಲ್ಟರ್‌ಗೆ ಸ್ಟೇಟಸ್, ಬದಲಾವಣೆಗಳು, ಅಪ್‌ಡೇಟ್‌ಗಳು ಅಥವಾ ರದ್ದತಿಗಳು ಸೇರಿದಂತೆ, ನಿಮ್ಮ ಸಲ್ಲಿಕೆ ಅಥವಾ ಜಿಯೋಫಿಲ್ಟರ್ ಕುರಿತು ನಾವು ನಿಮಗೆ ಇತರ ಇಮೇಲ್‌ಗಳನ್ನು ಕಳುಹಿಸಬಹುದು. ಜಿಯೋಫಿಲ್ಟರ್‌ನೊಂದಿಗಿನ ನಿಮ್ಮ ಅನುಭವದ ಕುರಿತು ಇಮೇಲ್‌ಗಳನ್ನು ಅಥವಾ ನಿಮ್ಮ ಸಲ್ಲಿಕೆಗೆ ಸಂಬಂಧಿಸಿ ಇತರ ಸಂವಹನಗಳನ್ನು ಕೂಡ ನಾವು ಕಳುಹಿಸಬಹುದು. ಒಂದು ಸ್ವತ್ತನ್ನು ಸಲ್ಲಿಸುವ ಮೂಲಕ, ಈ ನಿಯಮಗಳಲ್ಲಿ ವಿವರಿಸಿರುವ ಇಮೇಲ್ ಸಂವಹನಗಳನ್ನು Snap Inc. ಮತ್ತು ನಮ್ಮ ಅಂಗಸಂಸ್ಥೆಗಳಿಂದ ಸ್ವೀಕರಿಸಲು ನೀವು ಸಮ್ಮತಿಸುತ್ತಿರಿ.

ನಾವು ನಿಮಗೆ ವಿದ್ಯುನ್ಮಾನವಾಗಿ ಒದಗಿಸುವ ಎಲ್ಲಾ ಒಪ್ಪಂದಗಳು, ಸೂಚನೆಗಳು, ಬಹಿರಂಗಪಡಿಸುವಿಕೆಗಳು ಮತ್ತು ಇತರ ಸಂವಹನಗಳು ಅಂತಹ ಸಂವಹನಗಳು ಲಿಖಿತವಾಗಿರಬೇಕಾದ ಯಾವುದೇ ಕಾನೂನು ಅವಶ್ಯಕತೆಗಳನ್ನು ಪೂರೈಸುತ್ತವೆ ಎಂದು ನೀವು ಒಪ್ಪುತ್ತೀರಿ.

3. ಜಿಯೋಫಿಲ್ಟರ್ ತಲುಪಿಸುವಿಕೆ

ಸೇವೆಗಳಲ್ಲಿ ಜಿಯೋಫಿಲ್ಟರ್ ಅನ್ನು ಲಭ್ಯವಾಗಿಸಿದ್ದರೆ, ಜಿಯೋಫೆನ್ಸ್ ಒಳಗೆ ಇರುವ Snapchat ಬಳಕೆದಾರರಿಗೆ ಅದನ್ನು ತಲುಪಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಪರಿಪೂರ್ಣ ಡೆಲಿವರಿಯನ್ನು ಖಾತರಿಪಡಿಸುವುದಿಲ್ಲ ಮತ್ತು ಯಾವುದೇ Snapchat ಬಳಕೆದಾರರು ಕ್ರಿಯೇಟಿವ್ ಜಿಯೋಫಿಲ್ಟರ್ ಟೂಲ್ ಬಳಸಲು ಆಯ್ಕೆ ಮಾಡುತ್ತಾರೆ ಎಂದು ಖಾತರಿ ನೀಡುವುದಿಲ್ಲ. ಜಿಯೋಫೆನ್ಸ್ ಒಳಗಿನ ಕೆಲವು Snapchat ಬಳಕೆದಾರರಿಗೆ ಜಿಯೋಫಿಲ್ಟರ್ ಕಾಣಿಸದೆ ಇರಬಹುದು ಮತ್ತು ಜಿಯೋಫೆನ್ಸ್ ಹೊರಗೆ ಇರುವ ಕೆಲವರಿಗೆ ಅದು ಕಾಣಿಸಬಹುದು. ಡೆಲಿವರಿಯ ನಿಖರತೆಯು Snapchat ಬಳಕೆದಾರರ GPS ಅಥವಾ Wi-Fi ಸಿಗ್ನಲ್‌ನ ಸಾಮರ್ಥ್ಯದ ಮೇಲೆ ಭಾಗಶಃ ಅವಲಂಬಿಸಿರುತ್ತದೆ. ಸ್ಥಳ ಸೇವೆಗಳು ಅಥವಾ ಫಿಲ್ಟರ್‌ಗಳನ್ನು ನಿಷ್ಕ್ರಿಯಗೊಳಿಸಿದ Snapchat ಬಳಕೆದಾರರಿಗೆ ಜಿಯೋಫಿಲ್ಟರ್‌ಗಳು ಕಾಣಿಸುವುದಿಲ್ಲ.

ನಾವು ನಮ್ಮ ಸ್ವಂತ ವಿವೇಚನೆ ಮೇರೆಗೆ, ಜಿಯೋಫಿಲ್ಟರ್ ಬಳಕೆಯ ಕುರಿತು ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುವುದನ್ನು ಆಯ್ಕೆ ಮಾಡಬಹುದು. ನಾವು ಲಿಖಿತ ರೂಪದಲ್ಲಿ ನಿಮಗೆ ಸ್ಪಷ್ಟ ಅನುಮತಿಯನ್ನು ನೀಡದ ಹೊರತು, ವಾಣಿಜ್ಯ ಉದ್ದೇಶಗಳಿಗಾಗಿ ಆ ಮಾಹಿತಿಯನ್ನು ನೀವು ಬಳಸುವಂತಿಲ್ಲ.

4. ಪ್ರಚಾರಗಳು

ಒಂದು ವೇಳೆ ನೀವು ಜಿಯೋಫಿಲ್ಟರ್ ಅಥವಾ ಸೇವೆಯ ಯಾವುದೇ ಭಾಗವನ್ನು ಸ್ವೀಪ್‌ಸ್ಟೇಕ್ಸ್, ಸ್ಪರ್ಧೆ, ಆಫರ್ ಅಥವಾ ಇತರ ಪ್ರಚಾರದ ಭಾಗವಾಗಿ ಬಳಸಿದರೆ (ಪ್ರತಿಯೊಂದೂ, a “ಪ್ರಚಾರ”), ಅದನ್ನು ಒದಗಿಸುವ ಯಾವುದೇ ಸ್ಥಳದಲ್ಲಿ ನಿಮ್ಮ ಪ್ರಚಾರಕ್ಕೆ ಅನ್ವಯಿಸುವ ಎಲ್ಲ ಕಾನೂನುಗಳ, ಹಾಗೂ ನಮ್ಮ ಪ್ರಚಾರ ನಿಯಮಗಳ ಅನುಸರಣೆ ಮಾಡಲು ನೀವೇ ಹೊಣೆಗಾರರಾಗಿರುತ್ತೀರಿ. ನಾವು ಲಿಖಿತ ರೂಪದಲ್ಲಿ ಬೇರೆ ರೀತಿ ಸ್ಪಷ್ಟವಾಗಿ ಒಪ್ಪದ ಹೊರತು, ನಿಮ್ಮ ಪ್ರಚಾರಕ್ಕೆ Snap Inc. ಪ್ರಾಯೋಜಕ ಅಥವಾ ಅಡ್ಮಿನಿಸ್ಟ್ರೇಟರ್ ಆಗಿರುವುದಿಲ್ಲ.

5. ನಿಮ್ಮ ಪ್ರತಿನಿಧಿತ್ವಗಳು ಮತ್ತು ವಾರಂಟಿಗಳು

ನೀವು ಇವುಗಳನ್ನು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ (a) ಸ್ವತ್ತು ನಿಮ್ಮ ಮೂಲರಚನೆಯಾಗಿದೆ ಮತ್ತು ಯಾವುದೇ ತೃತೀಯ ಪಕ್ಷದ ಹೆಸರು, ಲೋಗೋ, ಟ್ರೇಡ್‌ಮಾರ್ಕ್, ಸೇವಾ ಗುರುತು, ಚಿತ್ರ ಅಥವಾ ಸಾಮ್ಯತೆಯನ್ನು ಹೊಂದಿಲ್ಲ ಮತ್ತು Snap Inc. ಹಾಗೂ ನಮ್ಮ ಅಂಗಸಂಸ್ಥೆಗಳಿಗೆ ಸ್ವತ್ತುಗಳ ಪರವಾನಗಿ ನೀಡಲು ನೀವು ಎಲ್ಲ ಹಕ್ಕುಗಳನ್ನು ಹೊಂದಿದ್ದೀರಿ; (b) ಸ್ವತ್ತು ಈ ನಿಯಮಗಳನ್ನು, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ನಮ್ಮ ಸಲ್ಲಿಕೆ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದಿಲ್ಲ; (c) ಸ್ವತ್ತು ಅಥವಾ ಸೇವೆಗಳಿಗೆ ಸಂಬಂಧಿಸಿ ಅದರ ಬಳಕೆಯು ಯಾವುದೇ ಪೇಟೆಂಟ್, ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್, ಗೌಪ್ಯತೆ ಅಥವಾ ಪ್ರಚಾರ ಹಕ್ಕುಗಳು ಅಥವಾ ಇತರ ಯಾವುದೇ ವ್ಯಕ್ತಿ ಅಥವಾ ಘಟಕದ ಇತರ ಯಾವುದೇ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ, ದುರ್ಬಳಕೆ ಮಾಡುವುದಿಲ್ಲ ಅಥವಾ ಅತಿಕ್ರಮಿಸುವುದಿಲ್ಲ; (d) ಸ್ವತ್ತನ್ನು ಯಾವುದೇ ಇತರ ವ್ಯಕ್ತಿ ಅಥವಾ ಘಟಕಕ್ಕೆ ನೀವು ನಿಯೋಜಿಸಿಲ್ಲ, ಪರವಾನಗಿ ನೀಡಿಲ್ಲ ಅಥವಾ ಇಲ್ಲದಿದ್ದಲ್ಲಿ ಪ್ರತಿಬಂಧಿಸಿಲ್ಲ; (e) ಸ್ವತ್ತು ಕಾನೂನುಗಳ ಅನುಸರಣೆ ಹೊಂದಿದೆ ಮತ್ತು 13 ವರ್ಷ ಮತ್ತು ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತವಾಗಿದೆ; (f) ಸ್ವತ್ತು ಯಾವುದೇ ತೃತೀಯ ಪಕ್ಷದ ಮಾನಹಾನಿ, ನಿಂದನೆ ಮಾಡುವುದಿಲ್ಲ, ಅವರಿಗೆ ಬಾಧೆ ಅಥವಾ ಹಾನಿಯುಂಟುಮಾಡುವುದಿಲ್ಲ ಅಥವಾ ಭಾವನಾತ್ಮಕ ಯಾತನೆ ನೀಡುವುದಿಲ್ಲ; ಮತ್ತು (g) ಸ್ವತ್ತು ಮತ್ತು ನಿಮ್ಮ ಸಲ್ಲಿಕೆಗೆ ಸಂಬಂಧಿಸಿ Snap Inc. ಗೆ ನೀವು ಒದಗಿಸಿದ ಯಾವುದೇ ಮತ್ತು ಎಲ್ಲ ಮಾಹಿತಿ ನಿಖರ ಮತ್ತು ಸರಿಯಾಗಿದೆ; ಸ್ವತ್ತನ್ನು Snap Inc. ಅನುಮೋದಿಸಿ ಬಳಕೆ ಮಾಡಿದ ಸಂದರ್ಭದಲ್ಲಿ, ಈ ನಿಯಮಗಳಲ್ಲಿ ಇರುವ ನಿಮ್ಮ ಪ್ರತಿನಿಧಿತ್ವಗಳು ಮತ್ತು ವಾರಂಟಿಗಳನ್ನು ಅಂತಹ ಅನುಮೋದನೆಯು ತಗ್ಗಿಸುವುದಿಲ್ಲ ಅಥವಾ ವರ್ಜಿಸುವುದಿಲ್ಲ.

ಮುಂದುವರಿದು ನೀವು ಇವುಗಳನ್ನು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ (a) U.S. ಡಿಪಾರ್ಟ್‌ಮೆಂಟ್ ಆಫ್ ಟ್ರೆಷರೀಸ್ ಆಫೀಸ್ ಆಫ್ ಫಾರೆನ್ ಆ್ಯಸೆಟ್ ಕಂಟ್ರೋಲ್ ("OFAC") ನಿಂದ ನಿಯಂತ್ರಿಸಲ್ಪಡುವ ವಿಶೇಷವಾಗಿ ನಿಯೋಜಿತ ರಾಷ್ಟ್ರೀಯರ ಪಟ್ಟಿ ಮತ್ತು ವಿದೇಶಿ ನಿರ್ಬಂಧಗಳನ್ನು ತಪ್ಪಿಸಿಕೊಂಡವರ ಪಟ್ಟಿ ಮತ್ತು U.S. ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್‌ ಬ್ಯೂರೋ ಆಫ್ ಇಂಡಸ್ಟ್ರಿ ಆ್ಯಂಡ್ ಸೆಕ್ಯುರಿಟಿಯಿಂದ ನಿರ್ವಹಿಸಲಾಗುವ ನಿರಾಕರಿಸಿದ ಪಕ್ಷಗಳ ಪಟ್ಟಿ, ಪರಿಶೀಲಿಸದ ಪಟ್ಟಿ, ಮತ್ತು ಘಟಕಗಳ ಪಟ್ಟಿ ಸೇರಿದಂತೆ, U.S. ಸರ್ಕಾರ ನಿರ್ವಹಿಸುವ ಯಾವುದೇ ನಿರ್ಬಂಧಿತ ಪಟ್ಟಿಯಲ್ಲಿ ನಿಮ್ಮನ್ನು ಸೇರಿಸಲಾಗಿಲ್ಲ; ಮತ್ತು (b) OFAC ಅಥವಾ ಇತರ ಅನ್ವಯಿಸುವ ನಿರ್ಬಂಧಗಳಿಂದ ವ್ಯಾಪಾರವನ್ನು ನಿಷೇಧಿಸಲಾಗಿರುವ ಯಾವುದೇ ದೇಶದಲ್ಲಿ ನೀವು ನಿವಾಸಿಯಾಗಿಲ್ಲ ಅಥವಾ ನೆಲೆಸಿಲ್ಲ.

6. ನಮಗೆ ನಿಮ್ಮಿಂದ ನಷ್ಟಭರ್ತಿ

ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ಈ ಮುಂದಿನವುಗಳ ಕಾರಣದಿಂದ, ಅವುಗಳಿಂದ ಉದ್ಭವಿಸಬಹುದಾದ ಅಥವಾ ಅವುಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿದ ಯಾವುದೇ ಮತ್ತು ಎಲ್ಲ ದೂರುಗಳು, ಆರೋಪಗಳು, ಕ್ಲೇಮ್‌ಗಳು, ಹಾನಿಗಳು, ನಷ್ಟಗಳು, ವೆಚ್ಚಗಳು, ಬಾಧ್ಯತೆಗಳು ಮತ್ತು ಖರ್ಚುಗಳಿಂದ (ವಕೀಲರ ಶುಲ್ಕ ಸೇರಿದಂತೆ) Snap Inc. ಮತ್ತು ನಮ್ಮ ಅಂಗಸಂಸ್ಥೆಗಳು, ನಿರ್ದೇಶಕರು, ಅಧಿಕಾರಿಗಳು, ಪಾಲುದಾರರು, ಉದ್ಯೋಗಿಗಳು, ಪರವಾನಗಿದಾರರು ಮತ್ತು ಏಜೆಂಟರನ್ನು ನಷ್ಟಭರ್ತಿಯಿಂದ ರಕ್ಷಿಸಲು, ಸಮರ್ಥಿಸಿಕೊಳ್ಳಲು ಮತ್ತು ಹಾನಿಯಾಗದಂತೆ ಇರಿಸಲು ನೀವು ಒಪ್ಪುತ್ತೀರಿ (a) ಸೇವೆಗಳಿಗೆ ಸಂಬಂಧಿಸಿ ಸ್ವತ್ತಿನ ನಮ್ಮ ಬಳಕೆ; (b) ಸೇವೆಗಳ ನಿಮ್ಮ ಬಳಕೆ ಮತ್ತು ಸೇವೆಗಳೊಂದಿಗೆ ಸಂಬಂಧಿಸಿ ನಿಮ್ಮ ಚಟುವಟಿಕೆಗಳು; (c) ಸೇವೆಗಳ ನಿಮ್ಮ ಬಳಕೆ ಅತವಾ ಸೇವೆಗಳೊಂದಿಗೆ ಸಂಬಂಧಿಸಿದ ನಿಮ್ಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಯಾವುದೇ ಕಾನೂನುಗಳ ಉಲ್ಲಂಘನೆ ಅಥವಾ ಆರೋಪಿತ ಉಲ್ಲಂಘನೆ; (d) ಯಾವುದೇ ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್, ವ್ಯಾಪಾರ ರಹಸ್ಯ, ವಿನ್ಯಾಸದ ಹಕ್ಕು, ವ್ಯಾಪಾರದ ಗುಣಲಕ್ಷಣ, ಪೇಟೆಂಟ್, ಪ್ರಚಾರ, ಗೌಪ್ಯತೆ ಅಥವಾ ಯಾವುದೇ ವ್ಯಕ್ತಿ ಅಥವಾ ಘಟಕದ ಇತರ ಹಕ್ಕುಗಳನ್ನು ಸ್ವತ್ತು ಅತಿಕ್ರಮಿಸುತ್ತದೆ, ಉಲ್ಲಂಘಿಸುತ್ತದೆ ಅಥವಾ ದುರ್ಬಳಕೆ ಂಆಡುತ್ತದೆ ಎನ್ನುವ ಯಾವುದೇ ಕ್ಲೈಮ್; (e) ನಿಮ್ಮಿಂದ ಯಾವುದೇ ವಂಚನೆ ಅಥವಾ ತಪ್ಪಾಗಿ ಪ್ರತಿನಿಧಿಸುವಿಕೆ; ಅಥವಾ (f) ನಿಮ್ಮ ಪ್ರತಿನಿಧಿತ್ವಗಳು, ವಾರಂಟಿಗಳು ಮತ್ತು ಬಾಧ್ಯತೆಗಳ ಯಾವುದೇ ನೈಜ ಅಥವಾ ಆರೋಪಿತ ಉಲ್ಲಂಘನೆ ಸೇರಿದಂತೆ, ನಿಮ್ಮಿಂದ ಈ ನಿಯಮಗಳ ಯಾವುದೇ ಉಲ್ಲಂಘನೆ ಅಥವಾ ಆರೋಪಿತ ಉಲ್ಲಂಘನೆ.

7. ಸ್ವತಂತ್ರ ಗುತ್ತಿಗೆದಾರರಾಗಿ ನಿಮ್ಮ ಕಾರ್ಯ

ಸ್ವತ್ತಿಗೆ ಸಂಬಂಧಿಸಿ ನೀವು ಮಾಡುವ ಎಲ್ಲ ಕೆಲಸಗಳನ್ನು ಸ್ವತಂತ್ರ ಗುತ್ತಿಗೆದಾರರಾಗಿ ಮಾಡುತ್ತೀರಿ ಎಂದು ನೀವು ಅಂಗೀಕರಿಸುತ್ತೀರಿ. ಈ ನಿಯಮಗಳಲ್ಲಿ ಇರುವ ಯಾವುದನ್ನೂ ಕೂಡ ನಿಮ್ಮ ಮತ್ತು Snap Inc. ನಡುವೆ ಜಂಟಿ ಉದ್ಯಮ, ಪ್ರಧಾನ-ಏಜೆಂಟ್ ಅಥವಾ ಉದ್ಯೋಗದ ಸಂಬಂಧವನ್ನು ಸೂಚಿಸಲು ಅರ್ಥೈಸಲಾಗದು.

8. You ಮತ್ತು Snap Inc. ನಡುವಿನ ಆಡಳಿತ ಕಾನೂನು ಮತ್ತು ವಿವಾದಗಳು.

ಈ ನಿಯಮಗಳು ನಮ್ಮ ಸೇವೆಯ ನಿಯಮಗಳ ಕಾನೂನಿನ ಆಯ್ಕೆ ನಿಬಂಧನೆಯಿಂದ ನಿಯಂತ್ರಿಸಲ್ಪಡುತ್ತವೆ.

ಮಧ್ಯಸ್ಥಿಕೆ ಸೂಚನೆ: ಈ ನಿಯಮಗಳು ಅಥವಾ ಸೇವೆಗಳಿಂದ ಉದ್ಭವಿಸುವ ಅಥವಾ ಇವುಗಳಿಗೆ ಸಂಬಂಧಿಸಿದ ಶಾಸನಾತ್ಮಕ ಕ್ಲೈಮ್‌ಗಳು ಮತ್ತು ವಿವಾದಗಳು ಸೇರಿದಂತೆ, ಕ್ಲೈಮ್‌ಗಳು ಮತ್ತು ವಿವಾದಗಳನ್ನು (ಕರಾರು, ಖಾಸಗಿ ತಕ್ಸೀರು ಅಥವಾ ಬೇರೆಯದಾಗಿರಬಹುದು) ವ್ಯಕ್ತಿಗತ ಆಧಾರದಲ್ಲಿ ಬಾಧ್ಯತೆಯುಳ್ಳ ಮಧ್ಯಸ್ಥಿಕೆಯಿಂದ ಬಗೆಹರಿಸಲಾಗುತ್ತದೆ ಎಂದು ನೀವು ಮತ್ತು SNAP INC. ಒಪ್ಪುತ್ತೀರಿ ಮತ್ತು ಸಮೂಹದ ಪರ ದಾವೆ ಅಥವಾ ಸಾಮೂಹಿಕ ದಾವೆಯನ್ನು ಹೂಡುವ ಅಥವಾ ಇಲ್ಲದಿದ್ದಲ್ಲಿ ಅದರಲ್ಲಿ ಭಾಗವಹಿಸುವ ಯಾವುದೇ ಹಕ್ಕನ್ನು ವರ್ಜಿಸಲು ನೀವು ಒಪ್ಪುತ್ತೀರಿ.

ಈ ಮಧ್ಯಸ್ಥಿಕೆಯ ಕರಾರಿಗೆ ಸಂಬಂಧಿಸಿ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಮ್ಮ ಸೇವೆಯ ನಿಯಮಗಳಲ್ಲಿ ಇರುವ ಮಧ್ಯಸ್ಥಿಕೆಯ ವಿಧಿ ಪರಿಶೀಲಿಸಿ, ಇದಕ್ಕೆ ನಮ್ಮ ನಡುವಿನ ಎಲ್ಲ ವಿವಾದಗಳನ್ನು ಬಾಧ್ಯತೆಯುಳ್ಳ ವೈಯಕ್ತಿಕ ಮಧ್ಯಸ್ಥಿಕೆಯ ಮೂಲಕ ಬಗೆಹರಿಸುವುದಕ್ಕೆ ನೀವು ಮತ್ತು SNAP INC. ಒಪ್ಪುವುದು ಅಗತ್ಯವಾಗಿದೆ ಮತ್ತು ಇದು ಯಾವುದೇ ಸಲ್ಲಿಕೆಗೆ ಅನ್ವಯಿಸುತ್ತದೆ.

9. ಈ ನಿಯಮಗಳಿಗೆ ಬದಲಾವಣೆಗಳು

ಕಾಲಕಾಲಕ್ಕೆ, ನಾವು ಈ ನಿಯಮಗಳನ್ನು ಪರಿಷ್ಕರಿಸಬಹುದು. ಮೇಲ್ಭಾಗದಲ್ಲಿ "ಜಾರಿಗೊಳಿಸಿದ್ದು" ದಿನಾಂಕವನ್ನು ಪರಿಶೀಲಿಸುವ ಮೂಲಕ ಈ ನಿಯಮಗಳನ್ನು ಯಾವಾಗ ಕೊನೆಯದಾಗಿ ಪರಿಷ್ಕರಿಸಲಾಗಿದೆ ಎನ್ನುವುದನ್ನು ನೀವು ನಿರ್ಧರಿಸಬಹುದು. ನಮ್ಮ ವೆಬ್‌ಸೈಟ್‌ನಲ್ಲಿ ನಾವು ಅಪ್‌ಡೇಟ್ ಮಾಡಿದ ನಿಯಮಗಳನ್ನು ನಾವು ಪೋಸ್ಟ್ ಮಾಡಿದಾಗ ಈ ನಿಯಮಗಳಿಗೆ ಯಾವುದೇ ಬದಲಾವಣೆಗಳು ಜಾರಿಗೆ ಬರುತ್ತವೆ ಮತ್ತು ಆನಂತರ ನೀವು ಸಲ್ಲಿಸುವ ಯಾವುದೇ ಸ್ವತ್ತುಗಳಿಗೆ ಅನ್ವಯಿಸುತ್ತವೆ. ಈ ನಿಯಮಗಳನ್ನು ಪರಿಷ್ಕರಿಸಿದ ಬಳಿಕ ಒಂದು ಸ್ವತ್ತನ್ನು ಸಲ್ಲಿಸುವ ಮೂಲಕ ಅಪ್‌ಡೇಟ್ ಮಾಡಿದ ನಿಯಮಗಳಿಗೆ ನೀವು ಒಪ್ಪಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಸಮಯದಲ್ಲಿ ನೀವು ಈ ನಿಯಮಗಳ ಯಾವುದೇ ಭಾಗಕ್ಕೆ ಒಪ್ಪದಿದ್ದರೆ, ಒಂದು ಸ್ವತ್ತನ್ನು ಸಲ್ಲಿಸಬೇಡಿ.

10. ಅಂತಿಮ ನಿಯಮಗಳು

ಈ ನಿಯಮಗಳು ಯಾವುದೇ ಮೂರನೇ-ವ್ಯಕ್ತಿ ಫಲಾನುಭವಿ ಹಕ್ಕುಗಳನ್ನು ರಚಿಸುವುದಿಲ್ಲ ಅಥವಾ ನೀಡುವುದಿಲ್ಲ. ಈ ನಿಯಮಗಳಲ್ಲಿ ನಾವು ನಿಬಂಧನೆಯನ್ನು ಜಾರಿಗೊಳಿಸದಿದ್ದರೆ, ಅದನ್ನು ಮನ್ನಾ ಎಂದು ಪರಿಗಣಿಸಲಾಗುವುದಿಲ್ಲ. ನಿಮಗೆ ನಾವು ವ್ಯಕ್ತವಾಗಿ ನೀಡದ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿದ್ದೇವೆ. ಒಂದು ವೇಳೆ ಈ ನಿಯಮಗಳ ಯಾವುದೇ ನಿಬಂಧನೆಯನ್ನು ಯಾವುದೇ ಕಾರಣಕ್ಕಾಗಿ ಅಮಾನ್ಯ, ಕಾನೂನುಬಾಹಿರ, ಅನೂರ್ಜಿತ ಅಥವಾ ಜಾರಿ ಮಾಡಲಾಗದ್ದು ಎಂದು ನ್ಯಾಯಾಲಯ ಅಥವಾ ಸಮರ್ಥ ಅಧಿಕಾರ ವ್ಯಾಪ್ತಿಯ ತೀರ್ಪುಗಾರ ನಿರ್ಧರಿಸಿದರೆ, ಆ ನಿಬಂಧನೆಯನ್ನು ಈ ನಿಯಮಗಳಿಗೆ ಪ್ರತ್ಯೇಕಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ನಿಬಂಧನೆಯ ಅಮಾನ್ಯತೆಯು ನಿಯಮಗಳ ಉಳಿದ ಭಾಗದ ಮಾನ್ಯತೆ ಅಥವಾ ಜಾರಿಯ ಅರ್ಹತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ (ಅದು ಪೂರ್ಣರೂಪದಲ್ಲಿ ಮತ್ತು ಪರಿಣಾಮದಲ್ಲಿ ಜಾರಿಯಲ್ಲಿರುತ್ತದೆ). ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ಒಂದು ಕರಾರನ್ನು ಅದನ್ನು ರಚಿಸಿದವರ ವಿರುದ್ಧ ಅರ್ಥೈಸಲು ಅನುಮತಿಸಬಹುದಾದ ಯಾವುದೇ ಅನ್ವಯಿಸುವ ಶಾಸನಾತ್ಮಕ ಅಥವಾ ಸಾಮಾನ್ಯ-ಕಾನೂನು ಹಕ್ಕನ್ನು ನೀವು ಬಿಟ್ಟುಕೊಡುತ್ತೀರಿ. ಈ ನಿಯಮಗಳಡಿ ಇರುವ ತನ್ನ ಹಕ್ಕುಗಳು ಮತ್ತು ಬಾಧ್ಯತೆಗಳನ್ನು Snap Inc. ಯಾವುದೇ ಸೂಚನೆ ನೀಡದೆ ಯಾವುದೇ ಸಮಯಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣತಃ ಅಥವಾ ಭಾಗಶಃ ನಿಯೋಜಿಸಬಹುದು. ಈ ನಿಯಮಗಳನ್ನು ನೀವು ನಿಯೋಜಿಸುವಂತಿಲ್ಲ ಮತ್ತು ಅವುಗಳಡಿಯ ನಿಮ್ಮ ಕರ್ತವ್ಯಗಳನ್ನು, Snap Inc. ನ ಪೂರ್ವ ಲಿಖಿತ ಸಮ್ಮತಿಯಿಲ್ಲದೆ ನೀವು ನಿಯೋಜಿಸುವಂತಿಲ್ಲ.

Snap Group Limited ಸಮುದಾಯ ಜಿಯೋಫಿಲ್ಟರ್ ಷರತ್ತುಗಳು ಮತ್ತು ನಿಬಂಧನೆಗಳು

ಜಾರಿ: ಜನವರಿ 10, 2017

ಪರಿಚಯ

ದಯವಿಟ್ಟು ಈ ಕಮ್ಯುನಿಟಿ ಜಿಯೋಫಿಲ್ಟರ್‌ನ ನಿಯಮಗಳು ಮತ್ತು ಷರತ್ತುಗಳನ್ನು ("ನಿಯಮಗಳು") ಗಮನವಿಟ್ಟು ಓದಿ. ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್ ಹೊರಗೆ ವಾಸಿಸುತ್ತಿದ್ದರೆ, ಕಮ್ಯುನಿಟಿ ಜಿಯೋಫಿಲ್ಟರ್ ("ಜಿಯೋಫಿಲ್ಟರ್") ಆಗಿ ಬಳಸಲು Snap Group Limited ಗೆ ಒಂದು ಇಮೇಜ್ ಫೈಲ್‌ನ ("ಸ್ವತ್ತು") ನಿಮ್ಮ ಸಲ್ಲಿಕೆಯನ್ನು ಈ ನಿಯಮಗಳು ನಿಯಂತ್ರಿಸುತ್ತವೆ. ಈ ನಿಯಮಗಳು ನಿಮ್ಮ ಮತ್ತು Snap Group Limited ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ; ಸ್ವತ್ತನ್ನು ಸಲ್ಲಿಸುವ ಮೂಲಕ, ಈ ನಿಯಮಗಳಿಗೆ ಬದ್ಧವಾಗಿರಲು ನೀವು ಒಪ್ಪುತ್ತೀರಿ. ಒಂದು ವೇಳೆ ನೀವು ಈ ನಿಯಮಗಳನ್ನು ಒಪ್ಪದಿದ್ದರೆ, ಸ್ವತ್ತನ್ನು ಸಲ್ಲಿಸಬೇಡಿ.

ಈ ನಿಯಮಗಳು ಉಲ್ಲೇಖದ ಮೂಲಕ ನಮ್ಮ ಸೇವೆಯ ನಿಯಮಗಳುಕಮ್ಯುನಿಟಿ ಮಾರ್ಗಸೂಚಿಗಳುಗೌಪ್ಯತಾ ನೀತಿ, ಮತ್ತು ಸಲ್ಲಿಕೆ ಮಾರ್ಗಸೂಚಿಗಳನ್ನು ಒಳಗೊಳ್ಳುತ್ತವೆ, ಆದ್ದರಿಂದ ಪ್ರತಿಯೊಂದನ್ನೂ ಗಮನವಿಟ್ಟು ಓದಿ. ಇತರ ವಿಷಯಗಳೊಂದಿಗೆ, ಒಂದು ಸ್ವತ್ತಿನ ನಿಮ್ಮ ಸಲ್ಲಿಕೆಯು ಸೇವೆಯ ನಿಯಮಗಳಲ್ಲಿನ ಹಕ್ಕುನಿರಾಕರಣೆಗಳು ಮತ್ತು ಬಾಧ್ಯತೆಯ ಮಿತಿಗಳಿಗೆ ಒಳಪಟ್ಟಿರುತ್ತದೆ, ಮತ್ತು ಸಲ್ಲಿಕೆಯ ಸಂದರ್ಭ ನಾವು ನಿಮ್ಮಿಂದ ಸಂಗ್ರಹಿಸುವ ಮಾಹಿತಿ ನಮ್ಮ ಗೌಪ್ಯತಾ ನೀತಿಗೆ ಒಳಪಟ್ಟಿರುತ್ತದೆ. ಈ ನಿಯಮಗಳು ಸೇವೆಯ ನಿಯಮಗಳುಕಮ್ಯುನಿಟಿ ಮಾರ್ಗಸೂಚಿಗಳುಗೌಪ್ಯತಾ ನೀತಿ, ಅಥವಾ ಸಲ್ಲಿಕೆ ಮಾರ್ಗಸೂಚಿಗಳ ಜೊತೆ ಸಂಘರ್ಷ ಹೊಂದಿರುವ ಮಟ್ಟಿಗೆ, ಈ ನಿಯಮಗಳೇ ನಿಯಂತ್ರಣ ಹೊಂದಿರುತ್ತವೆ.

ನೀವು ಕನಿಷ್ಟ 18 ವರ್ಷ ವಯಸ್ಸಿನವರಾಗಿದ್ದೀರಿ (ಅಥವಾ ನೀವು ವಾಸಿಸುವಲ್ಲಿ ಪ್ರಾಪ್ತ ವಯಸ್ಕರಾಗಿದ್ದೀರಿ) ಮತ್ತು ಈ ನಿಯಮಗಳನ್ನು ಒಪ್ಪಲು ಮತ್ತು ಇವುಗಳಿಗೆ ಬದ್ಧರಾಗಿ ಇರಲು ಸಮರ್ಥರಾಗಿದ್ದೀರಿ ಮತ್ತು ಅಧಿಕಾರ ಹೊಂದಿದ್ದೀರಿ ಎನ್ನುವುದನ್ನು ನೀವು ದೃಢೀಕರಿಸುತ್ತೀರಿ. ಒಂದು ವೇಳೆ ನೀವು ಒಂದು ಸ್ವತ್ತನ್ನು ಸಲ್ಲಿಸಲು ಬಯಸಿದರೆ ಮತ್ತು ಅಪ್ರಾಪ್ತ ವಯಸ್ಕರಾಗಿದ್ದರೆ, ನೀವು ನಿಮ್ಮ ಪೋಷಕರ ಸ್ಪಷ್ಟ ಸಮ್ಮತಿಯನ್ನು ಹೊಂದಿರಬೇಕು.

ನೀವು ಒಂದು ಸ್ವತ್ತನ್ನು ಸಲ್ಲಿಸಿದಾಗ, ಒಂದು ನಿರ್ದಿಷ್ಟ ಸ್ಥಳದಲ್ಲಿನ (ಒಂದು "ಜಿಯೋಫೆನ್ಸ್") ತಮ್ಮ Snap ಗಳಲ್ಲಿ ಸ್ವತ್ತುಗಳನ್ನು ಇರಿಸಲು Snapchat ಅಪ್ಲಿಕೇಶನ್‌ನ ಬಳಕೆದಾರರಿಗೆ ಅವಕಾಶ ಕಲ್ಪಿಸುವಂತೆ ನೀವು Snap Group Limited ಅನ್ನು ಕೇಳುತ್ತೀರಿ. ಸ್ವತ್ತುಗಳು ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳನ್ನು ಅನುಸರಣೆ ಮಾಡಬೇಕು ಮತ್ತು ನಮ್ಮ ಸಲ್ಲಿಕೆ ಮಾರ್ಗಸೂಚಿಗಳನ್ನು ಅನುಸರಿಸಬೇಕು.

Snap Group Limited ತನ್ನ ಸ್ವಂತ ವಿವೇಚನೆ ಮೇರೆಗೆ, ಒಂದು ಸ್ವತ್ತನ್ನು ಜಿಯೋಫಿಲ್ಟರ್ ಆಗಿ ಲಭ್ಯವಾಗಿಸಲಾಗುತ್ತದೆಯೇ ಮತ್ತು ಹೌದಾದರೆ ಯಾವಾಗ ಎನ್ನುವುದನ್ನು ನಿರ್ಧರಿಸುವ ಅನಿರ್ಬಂಧಿತ ಹಕ್ಕನ್ನು ಹೊಂದಿದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ನಮ್ಮ ಸ್ವಂತ ವಿವೇಚನೆಯ ಮೇರೆಗೆ ನಾವು ಜಿಯೋಫೆನ್ಸ್ ಹೊಂದಿಸಬಹುದು.

1. ನಮಗೆ ನಿಮ್ಮ ಪರವಾನಗಿ

ಸ್ವತ್ತನ್ನು ಸಾರ್ವಜನಿಕರಿಗೆ ಸಂವಹನ, ಆರ್ಕೈವ್, ನಕಲು, ಕ್ಯಾಶೆ, ಎನ್‌ಕೋಡ್, ಸಂಗ್ರಹಣೆ, ಮರುಸೃಷ್ಟಿ, ದಾಖಲೀಕರಣ, ಮಾರಾಟ, ಉಪಪರವಾನಗಿ ನೀಡುವಿಕೆ, ವಿತರಣೆ, ಪ್ರಸರಣ, ಪ್ರಸಾರ, ಸಿಂಕ್ರೊನೈಸ್, ಅಳವಡಿಕೆ, ಎಡಿಟ್, ಮಾರ್ಪಾಡು, ಸಾರ್ವಜನಿಕವಾಗಿ ತೋರಿಸುವಿಕೆ, ಸಾರ್ವನಿಜಕವಾಗಿ ಪ್ರದರ್ಶಿಸುವಿಕೆ, ಪ್ರಕಟಣೆ, ಮರುಪ್ರಕಟಣೆ, ಪ್ರಚಾರ, ಪ್ರದರ್ಶನ ಮಾಡಲು, ಅದನ್ನು ಆಧರಿಸಿ ವ್ಯುತ್ಪನ್ನ ಕಾರ್ಯಗಳನ್ನು ಸೃಷ್ಟಿಸಲು ಮತ್ತು ಇಲ್ಲದಿದ್ದಲ್ಲಿ, ಈಗ ತಿಳಿದಿರುವ ಅಥವಾ ಇನ್ನುಮುಂದೆ ಅಭಿವೃದ್ಧಿಪಡಿಸಬಹುದಾದ ಯಾವುದೇ ವಿಧಾನ ಅಥವಾ ಮಾಧ್ಯಮದಲ್ಲಿ ಅಥವಾ ಅದರ ಮೂಲಕ ಅಥವಾ ತಿಳಿದಿಲ್ಲದ ಅಥವಾ ಇನ್ನುಮುಂದೆ ಅಭಿವೃದ್ಧಿಪಡಿಸಬಹುದಾದ ಯಾವುದೇ ತಂತ್ರಜ್ಞಾನ ಅಥವಾ ಸಾಧನಗಳ ಮೂಲಕ, ಸೇವೆಗಳಲ್ಲಿ ಅಥವಾ ಸೇವೆಗಳಿಗೆ ಸಂಬಂಧಿಸಿ (ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಿರುವಂತೆ) ಸ್ವತ್ತನ್ನು ಜಾಹೀರಾತು, ಮಾರ್ಕೆಟಿಂಗ್ ಮತ್ತು ಅದಕ್ಕೆ ಸಂಬಂಧಿಸಿದ ಪ್ರಚಾರಕ್ಕಾಗಿ, ಎಲ್ಲ ಸ್ವರೂಪಗಳಲ್ಲಿ ಬಳಸಲು ಅನನ್ಯ, ನಿರ್ಬಂಧವಿಲ್ಲದ, ಷರತ್ತುರಹಿತ, ಅನಿಯಮಿತ, ವರ್ಗಾಯಿಸಬಹುದಾದ, ಉಪಪರವಾನಗಿ ನೀಡಬಹುದಾದ, ಹಿಂಪಡೆಯಲಾದಗ, ರಾಯಧನ-ಮುಕ್ತ, ಜಾಗತಿಕ ಪರವಾನಗಿಯನ್ನು ನೀವು Snap, Snap Inc. ಮತ್ತು ಅವರ ಅಂಗಸಂಸ್ಥೆಗಳಿಗೆ ನೀಡುತ್ತೀರಿ. Snapchat ಬಳಕೆದಾರರ ನಡುವೆ ಹಂಚಿಕೊಳ್ಳಲು ಮತ್ತು ತಮ್ಮ ಸಾಧನಗಳಿಗೆ ಉಳಿಸಲು, Snapchat ಬಳಕೆದಾರರಿಗೆ ಸ್ವತ್ತನ್ನು ಲಭ್ಯವಾಗಿಸಲು Snap Group Limited, Snap Inc. ಮತ್ತು ಅವರ ಅಂಗಸಂಸ್ಥೆಗಳಿಗೆ ಹಕ್ಕನ್ನು ಈ ಪರವಾನಗಿಯು ಒಳಗೊಂಡಿದೆ.

ಜಿಯೋಫಿಲ್ಟರ್‌ ರನ್ ಆಗುವ ಸಮಯದಲ್ಲಿ ಮತ್ತು ಅದರಾಚೆಗೆ Snapchat ಬಳಕೆದಾರರಿಗೆ ಜಿಯೋಫಿಲ್ಟರ್‌ ಒಳಗೊಂಡ Snap ಗಳನ್ನು ಉಳಿಸಲು, ಹಂಚಿಕೊಳ್ಳಲು ಮತ್ತು ನೋಡಲು ಸಾಧ್ಯವಾಗಬಹುದು ಎನ್ನುವುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ನೀವು ನಿರೀಕ್ಷಿಸಿದ್ದಕ್ಕಿಂತ ಭಿನ್ನವಾದ ಉದ್ದೇಶಗಳಿಗಾಗಿ ಅಥವಾ ವಿಧಾನಗಳಲ್ಲಿ Snapchat ಬಳಕೆದಾರರು ಸ್ವತ್ತನ್ನು ಬಳಸಬಹುದು ಎನ್ನುವುದನ್ನು ನೀವು ಅಂಗೀಕರಿಸುತ್ತೀರಿ. ಅಂತಹ ಬಳಕೆಯು ಬಳಕೆದಾರ-ಜನರೇಟ್ ಮಾಡಿದ ಕಂಟೆಂಟ್ ಅನ್ನು ಒಳಗೊಳ್ಳುತ್ತದೆ, ಅದಕ್ಕಾಗಿ Snap Group Limited ಆಗಲೀ ಅಥವಾ Snap Inc. ಆಗಲೀ ಯಾವುದೇ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವುದಿಲ್ಲ ಎಂದು ನೀವು ಒಪ್ಪುತ್ತೀರಿ. ಸೇವೆಯೊಳಗೆ ಅಥವಾ ಅದರಾಚೆಗೆ, ಒಂದು ಸ್ವತ್ತಿನ ಬಳಕೆ ಮಾಡುವ ಬಳಕೆದಾರ ಕಂಟೆಂಟ್ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಯಾವುದೇ ಬಳಕೆದಾರ ಜನರೇಟ್ ಮಾಡಿದ ಕಂಟೆಂಟ್‌ ಆಧರಿಸಿದ ಅಥವಾ ಅದರಿಂದ ಉದ್ಭವಿಸುವ ಯಾವುದೇ ಕ್ಲೈಮ್‌ಗಳಿಗೆ ಅಥವಾ ನಷ್ಟಗಳಿಗೆ Snap Group Limited ಆಗಲೀ ಅಥವಾ Snap Inc. ಆಗಲೀ ಹೊಣೆಗಾರವಾಗಿರುವುದಿಲ್ಲ ಎಂದು ನೀವು ಒಪ್ಪುತ್ತೀರಿ.

ಸ್ವತ್ತಿಗಾಗಿ ಅಥವಾ ಸ್ವತ್ತಿನ ಯಾವುದೇ ಬಳಕೆಗಾಗಿ ನಿಮಗೆ ಅಥವಾ ಯಾವುದೇ ತೃತೀಯ ಪಕ್ಷಕ್ಕೆ ಯಾವುದೇ ಪರಿಗಣನೆ ಅಥವಾ ಪರಿಹಾರವನ್ನು ಪಾವತಿಸಲು ಯಾವುದೇ ಬಾಧ್ಯತೆಯನ್ನು Snap Group Limited, Snap Inc. ಆಗಲೀ ಅಥವಾ ಅವರ ಅಂಗಸಂಸ್ಥೆಗಳಾಗಲೀ ಹೊಂದಿರುವುದಿಲ್ಲ ಎನ್ನುವುದಕ್ಕೆ ನೀವು ಒಪ್ಪುತ್ತೀರಿ. ಜಗತ್ತಿನಾದ್ಯಂತ ಸ್ವತ್ತಿನಲ್ಲಿ ನೀವು ಹೊಂದಿರಬಹುದಾದ ಯಾವುದೇ ನೈತಿಕ ಹಕ್ಕುಗಳು ಅಥವಾ ಅದಕ್ಕೆ ಸಮನಾದ ಹಕ್ಕುಗಳನ್ನು, ಕಾನೂನಿನಿಂದ ಅನುಮತಿಸಿದ ಮಟ್ಟಿಗೆ ನೀವು ಹಿಂಪಡೆಯಲಾಗದಂತೆ ಬಿಟ್ಟುಕೊಡುತ್ತೀರಿ—ಅಥವಾ ವರ್ಜನೆಗೆ ಅನುಮತಿಯಿಲ್ಲದಿರುವ ಮಟ್ಟಿಗೆ Snap Group Limited, Snap Inc. ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಯಾವುದೇ ಪ್ರತಿಪಾದನೆ ಮಾಡದೆ ಇರಲು—ಒಪ್ಪುತ್ತೀರಿ. ತನ್ನ ವಿವೇಚನೆ ಮೇರೆಗೆ Snap Group Limited ಸ್ವತ್ತನ್ನು ಮರುಗಾತ್ರಗೊಳಿಸಬಹುದು, ಪಾರದರ್ಶಕತೆಯನ್ನು ನಿಗದಿಪಡಿಸಬಹುದು ಮತ್ತು ಇತರ ಮಾರ್ಪಾಡುಗಳನ್ನು ಮಾಡಬಹುದು ಎನ್ನುವುದನ್ನು ನೀವು ಒಪ್ಪುತ್ತೀರಿ.

ಒಂದು ವೇಳೆ Snap Group Limited ಸೇವೆಗಳಲ್ಲಿ ಸ್ವತ್ತುಗಳನ್ನು ಲಭ್ಯವಾಗಿಸಿದ್ದರೆ, ನೀವು ಸಲ್ಲಿಸಿರುವಂತೆ ಅಥವಾ ನಿಮ್ಮ Snapchat ಅಕೌಂಟ್‌ಗೆ ಜೋಡಣೆ ಮಾಡಿರುವಂತೆ ನಿಮ್ಮ ಹೆಸರು, ನಗರ, ರಾಜ್ಯ ಮತ್ತು ದೇಶವನ್ನು ಪೋಸ್ಟ್ ಮಾಡುವುದು ಸೇರಿದಂತೆ, ಸ್ವತ್ತನ್ನು ನಿಮಗೆ ಸಾರ್ವಜನಿಕವಾಗಿ ಗುಣಲಕ್ಷಣಗೊಳಿಸುವ ಹಕ್ಕನ್ನು Snap Group Limited ಹೊಂದಿದೆ (ಆದರೆ ಬಾಧ್ಯತೆಯನ್ನು ಹೊಂದಿಲ್ಲ) ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ.

2. ನಮ್ಮಿಂದ ಸಂವಹನಗಳು

ನೀವು ಒಂದು ಸ್ವತ್ತನ್ನು ಸಲ್ಲಿಸಿದಾಗ, ನಿಮ್ಮ Snapchat ಅಕೌಂಟ್‌ಗೆ ಜೋಡಣೆ ಮಾಡಿರುವ ಇ-ಮೇಲ್ ವಿಳಾಸಕ್ಕೆ ನಾವು ಸಲ್ಲಿಕೆ ದೃಢೀಕರಣ ಇ-ಮೇಲ್ ಅನ್ನು ಕಳುಹಿಸುತ್ತೇವೆ. ಸಲ್ಲಿಕೆ ದೃಢೀಕರಣವು ನಾವು ನಿಮ್ಮ ಸಲ್ಲಿಕೆಯನ್ನು ಅನುಮೋದಿಸಿದ್ದೇವೆ ಎನ್ನುವ ಅರ್ಥವಾಗಿರುವುದಿಲ್ಲ. ಜಿಯೋಫಿಲ್ಟರ್ ರನ್ ಆಗಲು ಶುರುವಾದ ಬಳಿಕ ಸೇರಿದಂತೆ, ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕಾಗಿ ನಿಮ್ಮ ಸಲ್ಲಿಕೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಯಾವುದೇ ಸಲ್ಲಿಕೆಯನ್ನು ಸ್ವೀಕರಿಸುವುದಕ್ಕೆ ಮೊದಲು ಹೆಚ್ಚುವರಿ ಪರಿಶೀಲನೆಗಳು ಅಥವಾ ಮಾಹಿತಿ ನಮಗೆ ಬೇಕಾಗಬಹುದು.

ಜಿಯೋಫಿಲ್ಟರ್‌ಗೆ ಸ್ಟೇಟಸ್, ಬದಲಾವಣೆಗಳು, ಅಪ್‌ಡೇಟ್‌ಗಳು ಅಥವಾ ರದ್ದತಿಗಳು ಸೇರಿದಂತೆ, ನಿಮ್ಮ ಸಲ್ಲಿಕೆ ಅಥವಾ ಜಿಯೋಫಿಲ್ಟರ್ ಕುರಿತು ನಾವು ನಿಮಗೆ ಇತರ ಇ-ಮೇಲ್‌ಗಳನ್ನು ಕಳುಹಿಸಬಹುದು. ಜಿಯೋಫಿಲ್ಟರ್‌ನೊಂದಿಗಿನ ನಿಮ್ಮ ಅನುಭವದ ಕುರಿತು ಇ-ಮೇಲ್‌ಗಳನ್ನು ಅಥವಾ ನಿಮ್ಮ ಸಲ್ಲಿಕೆಗೆ ಸಂಬಂಧಿಸಿ ಇತರ ಸಂವಹನಗಳನ್ನು ಕೂಡ ನಾವು ಕಳುಹಿಸಬಹುದು. ಸ್ವತ್ತನ್ನು ಸಲ್ಲಿಸುವ ಮೂಲಕ, ಈ ನಿಯಮಗಳಲ್ಲಿ ವಿವರಿಸಿರುವ ಇ-ಮೇಲ್ ಸಂವಹನಗಳನ್ನು Snap Group Limited, Snap Inc ಮತ್ತು ನಮ್ಮ ಅಂಗಸಂಸ್ಥೆಗಳಿಂದ ಸ್ವಿಕರಿಸಲು ನೀವು ಸಮ್ಮತಿಸುತ್ತೀರಿ.

ಇಂತಹ ಸಂವಹನಗಳು ಲಿಖಿತವಾಗಿರಬೇಕೆನ್ನುವ ಯಾವುದೇ ಕಾನೂನು ಅವಶ್ಯಕತೆಗಳನ್ನು ನಾವು ನಿಮಗೆ ವಿದ್ಯುನ್ಮಾನವಾಗಿ ಒದಗಿಸುವ ಎಲ್ಲಾ ಒಪ್ಪಂದಗಳು, ಸೂಚನೆಗಳು, ಬಹಿರಂಗಪಡಿಸುವಿಕೆಗಳು ಮತ್ತು ಇತರ ಸಂವಹನಗಳು ಪೂರೈಸುತ್ತವೆ ಎಂದು ನೀವು ಒಪ್ಪುತ್ತೀರಿ.

3. ಜಿಯೋಫಿಲ್ಟರ್ ತಲುಪಿಸುವಿಕೆ

ಸೇವೆಗಳಲ್ಲಿ ಜಿಯೋಫಿಲ್ಟರ್ ಅನ್ನು ಲಭ್ಯವಾಗಿಸಿದ್ದರೆ, ಜಿಯೋಫೆನ್ಸ್ ಒಳಗೆ ಇರುವ Snapchat ಬಳಕೆದಾರರಿಗೆ ಅದನ್ನು ತಲುಪಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಪರಿಪೂರ್ಣ ಡೆಲಿವರಿಯನ್ನು ಖಾತರಿಪಡಿಸುವುದಿಲ್ಲ ಮತ್ತು ಯಾವುದೇ Snapchat ಬಳಕೆದಾರರು ಜಿಯೋಫಿಲ್ಟರ್ ಬಳಸಲು ಆಯ್ಕೆ ಮಾಡುತ್ತಾರೆ ಎಂದು ಖಾತರಿ ನೀಡುವುದಿಲ್ಲ. ಜಿಯೋಫೆನ್ಸ್ ಒಳಗಿನ ಕೆಲವು Snapchat ಬಳಕೆದಾರರಿಗೆ ಜಿಯೋಫಿಲ್ಟರ್ ಕಾಣಿಸದೆ ಇರಬಹುದು ಮತ್ತು ಜಿಯೋಫೆನ್ಸ್ ಹೊರಗೆ ಇರುವ ಕೆಲವರಿಗೆ ಅದು ಕಾಣಿಸಬಹುದು. ಡೆಲಿವರಿಯ ನಿಖರತೆಯು Snapchat ಬಳಕೆದಾರರ GPS ಅಥವಾ Wi-Fi ಸಿಗ್ನಲ್‌ನ ಸಾಮರ್ಥ್ಯದ ಮೇಲೆ ಭಾಗಶಃ ಅವಲಂಬಿಸಿರುತ್ತದೆ. ಸ್ಥಳ ಸೇವೆಗಳು ಅಥವಾ ಫಿಲ್ಟರ್‌ಗಳನ್ನು ನಿಷ್ಕ್ರಿಯಗೊಳಿಸಿದ Snapchat ಬಳಕೆದಾರರಿಗೆ ಜಿಯೋಫಿಲ್ಟರ್‌ಗಳು ಕಾಣಿಸುವುದಿಲ್ಲ.

ನಮ್ಮ ಸ್ವಂತ ವಿವೇಚನೆ ಮೇರೆಗೆ ನಾವು, ನೀವು ಸಲ್ಲಿಸಿದ ಜಿಯೋಫಿಲ್ಟರ್ ಬಳಕೆಯ ಕುರಿತ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಆಯ್ಕೆ ಮಾಡಬಹುದು. ನಾವು ಲಿಖಿತ ರೂಪದಲ್ಲಿ ನಿಮಗೆ ಸ್ಪಷ್ಟ ಅನುಮತಿಯನ್ನು ನೀಡದ ಹೊರತು, ವಾಣಿಜ್ಯ ಉದ್ದೇಶಗಳಿಗಾಗಿ ಆ ಮಾಹಿತಿಯನ್ನು ನೀವು ಬಳಸುವಂತಿಲ್ಲ.

4. ಪ್ರಚಾರಗಳು

ಒಂದು ವೇಳೆ ನೀವು ಜಿಯೋಫಿಲ್ಟರ್ ಅಥವಾ ಸೇವೆಯ ಯಾವುದೇ ಭಾಗವನ್ನು ಸ್ವೀಪ್‌ಸ್ಟೇಕ್ಸ್, ಸ್ಪರ್ಧೆ, ಆಫರ್ ಅಥವಾ ಇತರ ಪ್ರಚಾರದ ಭಾಗವಾಗಿ ಬಳಸಿದರೆ (ಪ್ರತಿಯೊಂದೂ, “ಪ್ರಚಾರ”), ಅದನ್ನು ಒದಗಿಸುವ ಯಾವುದೇ ಸ್ಥಳದಲ್ಲಿ ನಿಮ್ಮ ಪ್ರಚಾರಕ್ಕೆ ಅನ್ವಯಿಸುವ ಎಲ್ಲ ಕಾನೂನುಗಳ, ಹಾಗೂ ನಮ್ಮ ಪ್ರಚಾರ ನಿಯಮಗಳ ಅನುಸರಣೆ ಮಾಡಲು ನೀವೇ ಹೊಣೆಗಾರರಾಗಿರುತ್ತೀರಿ. ನಾವು ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ಬೇರೆ ರೀತಿ ಒಪ್ಪದ ಹೊರತು, Snap Group Limited ನಿಮ್ಮ ಪ್ರಚಾರದ ಪ್ರಾಯೋಜಕ ಅಥವಾ ನಿರ್ವಾಹಕ ಆಗಿರುವುದಿಲ್ಲ.


5. ನಿಮ್ಮ ಪ್ರತಿನಿಧಿತ್ವಗಳು ಮತ್ತು ವಾರಂಟಿಗಳು

ನೀವು ಇವುಗಳನ್ನು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ (a) ಸ್ವತ್ತು ನಿಮ್ಮ ಮೂಲರಚನೆಯಾಗಿದೆ ಮತ್ತು ಯಾವುದೇ ತೃತೀಯ ಪಕ್ಷದ ಹೆಸರು, ಲೋಗೋ, ಟ್ರೇಡ್‌ಮಾರ್ಕ್, ಸೇವಾ ಗುರುತು, ಚಿತ್ರ ಅಥವಾ ಸಾಮ್ಯತೆಯನ್ನು ಹೊಂದಿಲ್ಲ ಮತ್ತು Snap Group Limited, Snap Inc. ಮತ್ತು ಅದರ ಅಂಗಸಂಸ್ಥೆಗಳಿಗೆ ಸ್ವತ್ತಿನ ಪರವಾನಗಿ ನೀಡುವ ಎಲ್ಲ ಹಕ್ಕುಗಳನ್ನು ನೀವು ಹೊಂದಿದ್ದೀರಿ; (b) ಸ್ವತ್ತು ಈ ನಿಯಮಗಳನ್ನು ಉಲ್ಲಂಘಿಸುವುದಿಲ್ಲ, ನಮ್ಮ ಕಮ್ಯುನಿಟಿ ಮಾರ್ಗಸೂಚಿಗಳು ಅಥವಾ ನಮ್ಮಸಲ್ಲಿಕೆ ಮಾರ್ಗಸೂಚಿಗಳು; (c) ಸ್ವತ್ತು ಅಥವಾ ಸೇವೆಗಳಿಗೆ ಸಂಬಂಧಿಸಿ ಅದರ ಬಳಕೆಯು ಯಾವುದೇ ಪೇಟೆಂಟ್, ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್, ಗೌಪ್ಯತೆ ಅಥವಾ ಪ್ರಚಾರ ಹಕ್ಕುಗಳು ಅಥವಾ ಇತರ ಯಾವುದೇ ವ್ಯಕ್ತಿ ಅಥವಾ ಘಟಕದ ಇತರ ಯಾವುದೇ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ, ದುರ್ಬಳಕೆ ಮಾಡುವುದಿಲ್ಲ ಅಥವಾ ಅತಿಕ್ರಮಿಸುವುದಿಲ್ಲ; (d) ಸ್ವತ್ತನ್ನು ಯಾವುದೇ ಇತರ ವ್ಯಕ್ತಿ ಅಥವಾ ಘಟಕಕ್ಕೆ ನೀವು ನಿಯೋಜಿಸಿಲ್ಲ, ಪರವಾನಗಿ ನೀಡಿಲ್ಲ ಅಥವಾ ಇಲ್ಲದಿದ್ದಲ್ಲಿ ಪ್ರತಿಬಂಧಿಸಿಲ್ಲ; (e) ಸ್ವತ್ತು ಕಾನೂನುಗಳ ಅನುಸರಣೆ ಹೊಂದಿದೆ ಮತ್ತು 13 ವರ್ಷ ಮತ್ತು ಮೇಲ್ಪಟ್ಟ ಪ್ರೇಕ್ಷಕರಿಗೆ ಸೂಕ್ತವಾಗಿದೆ; (f) ಸ್ವತ್ತು ಯಾವುದೇ ತೃತೀಯ ಪಕ್ಷದ ಮಾನಹಾನಿ, ನಿಂದನೆ ಮಾಡುವುದಿಲ್ಲ, ಅವರಿಗೆ ಬಾಧೆ ಅಥವಾ ಹಾನಿಯುಂಟುಮಾಡುವುದಿಲ್ಲ ಅಥವಾ ಭಾವನಾತ್ಮಕ ಯಾತನೆ ನೀಡುವುದಿಲ್ಲ; ಮತ್ತು (g) ಸ್ವತ್ತು ಮತ್ತು ನಿಮ್ಮ ಸಲ್ಲಿಕೆಗೆ ಸಂಬಂಧಿಸಿ Snap Group Limited ಗೆ ನೀವು ಒದಗಿಸಿದ ಯಾವುದೇ ಮತ್ತು ಎಲ್ಲ ಮಾಹಿತಿ ನಿಖರ ಮತ್ತು ಸರಿಯಾಗಿದೆ; Snap Group Limited ಸ್ವತ್ತನ್ನು ಅನುಮೋದಿಸಿ ಬಳಸಿದ ಸಂದರ್ಭ, ಅಂತಹ ಅನುಮೋದನೆಯು ಈ ನಿಯಮಗಳಲ್ಲಿ ಒಳಗೊಂಡಿರುವ ನಿಮ್ಮ ಪ್ರತಿನಿಧಿತ್ವಗಳು ಅಥವಾ ವಾರಂಟಿಗಳನ್ನು ಕುಗ್ಗಿಸುವುದಿಲ್ಲ ಅಥವಾ ವರ್ಜಿಸುವುದಿಲ್ಲ.

ಮುಂದುವರಿದು ನೀವು ಇವುಗಳನ್ನು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ (a) U.S. ಡಿಪಾರ್ಟ್‌ಮೆಂಟ್ ಆಫ್ ಟ್ರೆಷರಿಯ ಆಫೀಸ್ ಆಫ್ ಫಾರೆನ್ ಆ್ಯಸೆಟ್ ಕಂಟ್ರೋಲ್ ("OFAC") ನಿಂದ ನಿಯಂತ್ರಿಸಲ್ಪಡುವ ವಿಶೇಷವಾಗಿ ನಿಯೋಜಿತ ರಾಷ್ಟ್ರೀಯರ ಪಟ್ಟಿ ಮತ್ತು ವಿದೇಶಿ ನಿರ್ಬಂಧಗಳನ್ನು ತಪ್ಪಿಸಿಕೊಂಡವರ ಪಟ್ಟಿ ಮತ್ತು U.S. ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್‌ ಬ್ಯೂರೋ ಆಫ್ ಇಂಡಸ್ಟ್ರಿ ಆ್ಯಂಡ್ ಸೆಕ್ಯುರಿಟಿಯಿಂದ ನಿರ್ವಹಿಸಲಾಗುವ ನಿರಾಕರಿಸಿದ ಪಕ್ಷಗಳ ಪಟ್ಟಿ, ಪರಿಶೀಲಿಸದ ಪಟ್ಟಿ, ಮತ್ತು ಘಟಕಗಳ ಪಟ್ಟಿ ಸೇರಿದಂತೆ, U.S. ಸರ್ಕಾರ ನಿರ್ವಹಿಸುವ ಯಾವುದೇ ನಿರ್ಬಂಧಿತ ಪಟ್ಟಿಯಲ್ಲಿ ನಿಮ್ಮನ್ನು ಸೇರಿಸಲಾಗಿಲ್ಲ; ಮತ್ತು (b) OFAC ಅಥವಾ ಇತರ ಅನ್ವಯಿಸುವ ನಿರ್ಬಂಧಗಳಿಂದ ವ್ಯಾಪಾರವನ್ನು ನಿಷೇಧಿಸಲಾಗಿರುವ ಯಾವುದೇ ದೇಶದಲ್ಲಿ ನೀವು ನಿವಾಸಿಯಾಗಿಲ್ಲ ಅಥವಾ ನೆಲೆಸಿಲ್ಲ.

6. ನಮಗೆ ನಿಮ್ಮಿಂದ ನಷ್ಟಭರ್ತಿ

ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ಈ ಮುಂದಿನವುಗಳ ಕಾರಣದಿಂದ, ಅವುಗಳಿಂದ ಉದ್ಭವಿಸಬಹುದಾದ ಅಥವಾ ಅವುಗಳಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿದ ಯಾವುದೇ ಮತ್ತು ಎಲ್ಲ ದೂರುಗಳು, ಆರೋಪಗಳು, ಕ್ಲೇಮ್‌ಗಳು, ಹಾನಿಗಳು, ನಷ್ಟಗಳು, ವೆಚ್ಚಗಳು, ಬಾಧ್ಯತೆಗಳು ಮತ್ತು ಖರ್ಚುಗಳಿಂದ (ವಕೀಲರ ಶುಲ್ಕ ಸೇರಿದಂತೆ) Snap Group Limited, Snap Inc. ಮತ್ತು ನಮ್ಮ ಅಂಗಸಂಸ್ಥೆಗಳು, ನಿರ್ದೇಶಕರು, ಅಧಿಕಾರಿಗಳು, ಪಾಲುದಾರರು, ಉದ್ಯೋಗಿಗಳು, ಪರವಾನಗಿದಾರರು ಮತ್ತು ಏಜೆಂಟರನ್ನು ನಷ್ಟಭರ್ತಿಯಿಂದ ರಕ್ಷಿಸಲು, ಸಮರ್ಥಿಸಿಕೊಳ್ಳಲು ಮತ್ತು ಹಾನಿಯಾಗದಂತೆ ಇರಿಸಲು ನೀವು ಒಪ್ಪುತ್ತೀರಿ (a) ಸೇವೆಗಳಿಗೆ ಸಂಬಂಧಿಸಿ ಸ್ವತ್ತಿನ ನಮ್ಮ ಬಳಕೆ; (b) ಸೇವೆಗಳ ನಿಮ್ಮ ಬಳಕೆ ಮತ್ತು ಸೇವೆಗಳೊಂದಿಗೆ ಸಂಬಂಧಿಸಿ ನಿಮ್ಮ ಚಟುವಟಿಕೆಗಳು; (c) ಸೇವೆಗಳ ನಿಮ್ಮ ಬಳಕೆ ಅಥವಾ ಸೇವೆಗಳೊಂದಿಗೆ ಸಂಬಂಧಿಸಿದ ನಿಮ್ಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಯಾವುದೇ ಕಾನೂನುಗಳ ಉಲ್ಲಂಘನೆ ಅಥವಾ ಆರೋಪಿತ ಉಲ್ಲಂಘನೆ; (d) ಯಾವುದೇ ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್, ವ್ಯಾಪಾರ ರಹಸ್ಯ, ವಿನ್ಯಾಸದ ಹಕ್ಕು, ವ್ಯಾಪಾರದ ಗುಣಲಕ್ಷಣ, ಪೇಟೆಂಟ್, ಪ್ರಚಾರ, ಗೌಪ್ಯತೆ ಅಥವಾ ಯಾವುದೇ ವ್ಯಕ್ತಿ ಅಥವಾ ಘಟಕದ ಇತರ ಹಕ್ಕುಗಳನ್ನು ಸ್ವತ್ತು ಅತಿಕ್ರಮಿಸುತ್ತದೆ, ಉಲ್ಲಂಘಿಸುತ್ತದೆ ಅಥವಾ ದುರ್ಬಳಕೆ ಆಗುತ್ತಿದೆ ಎನ್ನುವ ಯಾವುದೇ ಕ್ಲೈಮ್; (e) ನಿಮ್ಮಿಂದ ಯಾವುದೇ ವಂಚನೆ ಅಥವಾ ತಪ್ಪಾಗಿ ಪ್ರತಿನಿಧಿಸುವಿಕೆ; ಅಥವಾ (f) ನಿಮ್ಮ ಪ್ರತಿನಿಧಿತ್ವಗಳು, ವಾರಂಟಿಗಳು ಮತ್ತು ಬಾಧ್ಯತೆಗಳ ಯಾವುದೇ ನೈಜ ಅಥವಾ ಆರೋಪಿತ ಉಲ್ಲಂಘನೆ ಸೇರಿದಂತೆ, ನಿಮ್ಮಿಂದ ಈ ನಿಯಮಗಳ ಯಾವುದೇ ಉಲ್ಲಂಘನೆ ಅಥವಾ ಆರೋಪಿತ ಉಲ್ಲಂಘನೆ.

7. ಸ್ವತಂತ್ರ ಗುತ್ತಿಗೆದಾರರಾಗಿ ನಿಮ್ಮ ಕಾರ್ಯ

ಸ್ವತ್ತಿಗೆ ಸಂಬಂಧಿಸಿ ನೀವು ಮಾಡುವ ಎಲ್ಲ ಕೆಲಸಗಳನ್ನು ಸ್ವತಂತ್ರ ಗುತ್ತಿಗೆದಾರರಾಗಿ ಮಾಡುತ್ತೀರಿ ಎಂದು ನೀವು ಅಂಗೀಕರಿಸುತ್ತೀರಿ. ಈ ನಿಯಮಗಳಲ್ಲಿ ಇರುವ ಯಾವುದೂ ಕೂಡ ನಿಮ್ಮ ಮತ್ತು Snap Group Limited ನಡುವೆ ಜಂಟಿ ಉದ್ಯಮ, ಪ್ರಧಾನ-ಏಜೆಂಟ್ ಅಥವಾ ಉದ್ಯೋಗದ ಸಂಬಂಧವನ್ನು ಸೂಚಿಸಲು ವ್ಯಾಖ್ಯಾನ ರಚಿಸುವುದಿಲ್ಲ.

8. ನಿಯಂತ್ರಿಸುವ ಕಾನೂನು ಮತ್ತು ನಿಮ್ಮ ಹಾಗೂ Snap Group Limited ನಡುವಿನ ವಿವಾದಗಳು

ಈ ನಿಯಮಗಳು ನಮ್ಮ ಸೇವೆಯ ನಿಯಮಗಳು ಕಾನೂನಿನ ಆಯ್ಕೆ ನಿಬಂಧನೆಯಿಂದ ಮತ್ತು ನಮ್ಮ ಸೇವೆಯ ನಿಯಮಗಳ ವಿವಾದ ಪರಿಹಾರ ನಿಬಂಧನೆಯಿಂದ ನಿಯಂತ್ರಿಸಲ್ಪಡುತ್ತವೆ.

9. ಈ ನಿಯಮಗಳಿಗೆ ಬದಲಾವಣೆಗಳು

ಕಾಲಕಾಲಕ್ಕೆ, ನಾವು ಈ ನಿಯಮಗಳನ್ನು ಪರಿಷ್ಕರಿಸಬಹುದು. ಮೇಲ್ಭಾಗದಲ್ಲಿ "ಜಾರಿಗೊಳಿಸಿದ್ದು" ದಿನಾಂಕವನ್ನು ಪರಿಶೀಲಿಸುವ ಮೂಲಕ ಈ ನಿಯಮಗಳನ್ನು ಯಾವಾಗ ಕೊನೆಯದಾಗಿ ಪರಿಷ್ಕರಿಸಲಾಗಿದೆ ಎನ್ನುವುದನ್ನು ನೀವು ನಿರ್ಧರಿಸಬಹುದು. ಈ ನಿಯಮಗಳಿಗೆ ಯಾವುದೇ ಬದಲಾವಣೆಗಳು ನಮ್ಮ ವೆಬ್‌ಸೈಟ್‌ನಲ್ಲಿ ನಾವು ಅಪ್‌ಡೇಟ್ ಮಾಡಿದ ನಿಯಮಗಳನ್ನು ನಾವು ಪೋಸ್ಟ್ ಮಾಡಿದಾಗ ಜಾರಿಗೆ ಬರುತ್ತವೆ ಮತ್ತು ಆನಂತರ ನೀವು ಸಲ್ಲಿಸುವ ಯಾವುದೇ ಸ್ವತ್ತುಗಳಿಗೆ ಅನ್ವಯಿಸುತ್ತವೆ. ಈ ನಿಯಮಗಳನ್ನು ಪರಿಷ್ಕರಿಸಿದ ಬಳಿಕ ಒಂದು ಸ್ವತ್ತನ್ನು ಸಲ್ಲಿಸುವ ಮೂಲಕ ಅಪ್‌ಡೇಟ್ ಮಾಡಿದ ನಿಯಮಗಳಿಗೆ ನೀವು ಒಪ್ಪಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಸಮಯದಲ್ಲಿ ನೀವು ಈ ನಿಯಮಗಳ ಯಾವುದೇ ಭಾಗಕ್ಕೆ ಒಪ್ಪದಿದ್ದರೆ, ಸ್ವತ್ತನ್ನು ಸಲ್ಲಿಸಬೇಡಿ.

1೦. ಅಂತಿಮ ನಿಯಮಗಳು

ಈ ನಿಯಮಗಳು ಯಾವುದೇ ಮೂರನೇ-ವ್ಯಕ್ತಿ ಫಲಾನುಭವಿ ಹಕ್ಕುಗಳನ್ನು ರಚಿಸುವುದಿಲ್ಲ ಅಥವಾ ನೀಡುವುದಿಲ್ಲ. ಈ ನಿಯಮಗಳಲ್ಲಿ ನಾವು ನಿಬಂಧನೆಯನ್ನು ಜಾರಿಗೊಳಿಸದಿದ್ದರೆ, ಅದನ್ನು ಮನ್ನಾ ಎಂದು ಪರಿಗಣಿಸಲಾಗುವುದಿಲ್ಲ. ನಿಮಗೆ ನಾವು ವ್ಯಕ್ತವಾಗಿ ನೀಡದ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿದ್ದೇವೆ. ಒಂದು ವೇಳೆ ಈ ನಿಯಮಗಳ ಯಾವುದೇ ನಿಬಂಧನೆಯನ್ನು ಯಾವುದೇ ಕಾರಣಕ್ಕಾಗಿ ಅಮಾನ್ಯ, ಕಾನೂನುಬಾಹಿರ, ಅನೂರ್ಜಿತ ಅಥವಾ ಜಾರಿ ಮಾಡಲಾಗದ್ದು ಎಂದು ನ್ಯಾಯಾಲಯ ಅಥವಾ ಸಮರ್ಥ ಅಧಿಕಾರ ವ್ಯಾಪ್ತಿಯ ತೀರ್ಪುಗಾರ ನಿರ್ಧರಿಸಿದರೆ, ಆ ನಿಬಂಧನೆಯನ್ನು ಈ ನಿಯಮಗಳಿಗೆ ಪ್ರತ್ಯೇಕಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ನಿಬಂಧನೆಯ ಅಮಾನ್ಯತೆಯು ನಿಯಮಗಳ ಉಳಿದ ಭಾಗದ ಮಾನ್ಯತೆ ಅಥವಾ ಜಾರಿಯ ಅರ್ಹತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ (ಅದು ಪೂರ್ಣರೂಪದಲ್ಲಿ ಮತ್ತು ಪರಿಣಾಮದಲ್ಲಿ ಜಾರಿಯಲ್ಲಿರುತ್ತದೆ). ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ಒಂದು ಕರಾರನ್ನು ಅದನ್ನು ರಚಿಸಿದವರ ವಿರುದ್ಧ ಅರ್ಥೈಸಲು ಅನುಮತಿಸಬಹುದಾದ ಯಾವುದೇ ಅನ್ವಯಿಸುವ ಶಾಸನಾತ್ಮಕ ಅಥವಾ ಸಾಮಾನ್ಯ-ಕಾನೂನು ಹಕ್ಕನ್ನು ನೀವು ಬಿಟ್ಟುಕೊಡುತ್ತೀರಿ. ಈ ನಿಯಮಗಳ ಅಡಿಯಲ್ಲಿ ತನ್ನ ಹಕ್ಕುಗಳು ಮತ್ತು ಬಾಧ್ಯತೆಗಳನ್ನು Snap Group Limited ಯಾವುದೇ ಸೂಚನೆ ನೀಡದೆ ಯಾವುದೇ ಸಮಯದಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಅಥವಾ ಭಾಗಶಃ ರೂಪದಲ್ಲಿ ನಿಯೋಜಿಸಬಹುದು. ಈ ನಿಯಮಗಳು ನಿಮ್ಮಿಂದ ನಿಯೋಜಿಸಲ್ಪಟ್ಟಿಲ್ಲದಿರಬಹುದು ಮತ್ತು Snap Group Limited ನ ಪೂರ್ವ ಲಿಖಿತ ಸಮ್ಮತಿಯಿಲ್ಲದೆ ಇವುಗಳ ಅಡಿಯಲ್ಲಿನ ನಿಮ್ಮ ಕರ್ತವ್ಯಗಳನ್ನು ನಿಯೋಜಿಸುವಂತಿಲ್ಲ.