ದಯವಿಟ್ಟು ಗಮನಿಸಿ: ಲೆನ್ಸ್‌ಗಳಿಗಾಗಿ ಡಿಜಿಟಲ್ ಪ್ರೋಗ್ರಾಂ ಫೆಬ್ರವರಿ 10, 2025 ರಂದು ಕೊನೆಗೊಳ್ಳಲಿದೆ. ಆ ದಿನಾಂಕಗಳ ನಂತರ, ಈ SNAP ಡಿಜಿಟಲ್ ಗೂಡ್ಸ್ ಫಾರ್ ಲೆನ್ಸಸ್ ನಿಯಮಗಳ ವಿಭಾಗ 2 ರಲ್ಲಿ ವಿವರಿಸಿದಂತೆ, ಟೋಕನ್-ಬೆಂಬಲಿತ ಡಿಜಿಟಲ್ ಸರಕುಗಳನ್ನು ಒಳಗೊಂಡಿರುವ ಲೆನ್ಸ್‌ಗಳನ್ನು ಪ್ರಕಟಿಸುವುದು ಡೆವಲಪರ್‌ಗಳಿಗೆ ಸಾಧ್ಯವಾಗದು. ಫೆಬ್ರವರಿ 10, 2025 ರವರೆಗಿನ ಯಾವುದೇ ಅರ್ಹತಾ ಚಟುವಟಿಕೆಯ ಪಾವತಿಯೂ ಸೇರಿದಂತೆ, ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ SNAPCHAT ಸಪೋರ್ಟ್.
ಲೆನ್ಸ್‌ಗಳಿಗಾಗಿ Snap ಡಿಜಿಟಲ್ ಸರಕುಗಳ ನಿಯಮಗಳು
ಜಾರಿ: ಏಪ್ರಿಲ್ 1, 2024
ಮಧ್ಯಸ್ಥಿಕೆ ಸೂಚನೆ: ಈ ನಿಯಮಗಳು ಸ್ವಲ್ಪ ಮುಂದಕ್ಕೆ ಮಧ್ಯಸ್ಥಿಕೆ ವಿಧಿ ಅನ್ನು ಹೊಂದಿವೆ.
ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವ್ಯವಹಾರದ ಪ್ರಧಾನ ಸ್ಥಳವನ್ನು ಹೊಂದಿರುವ ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ, SNAP INC.ನ ಮಧ್ಯಸ್ಥಿಕೆಯ ವಿಧಿಯಲ್ಲಿ ಉಲ್ಲೇಖಿಸಿರುವ ವಿವಾದಗಳನ್ನು ಹೊರತುಪಡಿಸಿ. ಸೇವಾ ನಿಯಮಗಳು, ನೀವು ಮತ್ತು SNAP INC. ನಮ್ಮ ನಡುವಿನ ವಿವಾದಗಳನ್ನು THE SNAP INC. ನಲ್ಲಿನ ಕಡ್ಡಾಯ ಮಧ್ಯಸ್ಥಿಕೆಯ ವಿಧಿಯಿಂದ ಪರಿಹರಿಸಲಾಗುತ್ತದೆ ಎಂದು ಒಪ್ಪುತ್ತೀರಿ. ಸೇವಾ ನಿಯಮಗಳು, ಮತ್ತು ನೀವು ಮತ್ತು Snap Inc., ವರ್ಗ-ಕ್ರಿಯೆಯ ಮೊಕದ್ದಮೆ ಅಥವಾ ವರ್ಗ-ವ್ಯಾಪ್ತಿಯ ಮಧ್ಯಸ್ಥಿಕೆಯಲ್ಲಿ ಭಾಗವಹಿಸುವ ಯಾವುದೇ ಹಕ್ಕನ್ನು ತ್ಯಜಿಸಿರುತ್ತೀರಾ . ಆ ವಿಧಿಯಲ್ಲಿ ವಿವರಿಸಿರುವಂತೆ ಮಧ್ಯಸ್ಥಿಕೆಯಿಂದ ಹೊರಗುಳಿಯುವ ಹಕ್ಕನ್ನು ನೀವು ಹೊಂದಿದ್ದೀರಿ.
ಒಂದು ವೇಳೆ ಯುನೈಟೆಡ್ ಸ್ಟೇಟ್ಸ್ ಹೊರಗಿನ ಸ್ಥಳದಲ್ಲಿ ತನ್ನ ವ್ಯವಹಾರದ ಪ್ರಧಾನ ಕಚೇರಿಯನ್ನು ಹೊಂದಿರುವ ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, ಆಗ ನಮ್ಮ ನಡುವಿನ ವಿವಾದಗಳನ್ನು THE SNAP GROUP LIMITED ಸೇವೆಯ ನಿಯಮಗಳಲ್ಲಿನಮಧ್ಯಸ್ಥಿಕೆಯವಿಧಿಯಿಂದ ಬಗೆಹರಿಸಲಾಗುತ್ತದೆ ಎಂದು ನೀವು ಮತ್ತು SNAP (ಕೆಳಗೆ ವ್ಯಾಖ್ಯಾನಿಸಲಾಗಿದೆ) ಒಪ್ಪುತ್ತೀರಿ.
ಈ ಲೆನ್ಸ್‌ಗಳಿಗಾಗಿ ಡಿಜಿಟಲ್ ಸರಕುಗಳು ನಿಯಮಗಳು ("ನಿಯಮಗಳು) ಈ ಮುಂದಿನವುಗಳನ್ನು ನಿಯಂತ್ರಿಸುತ್ತವೆ (i) ನೀವು ಅಭಿವೃದ್ಧಿಪಡಿಸಿದ ಲೆನ್ಸ್‌ಗಳ ಒಳಗೆ ಡಿಜಿಟಲ್ ಸರಕುಗಳಿಗಾಗಿ ಟೋಕನ್‌ಗಳನ್ನು ರಿಡೀಮ್ ಮಾಡಲು ಬಳಕೆದಾರರಿಗೆ ಅವಕಾಶ ಕಲ್ಪಿಸುವ ಕಾರ್ಯವೈಶಿಷ್ಟ್ಯದ ನಿಮ್ಮ ಅನುಷ್ಠಾನ ("ಡಿಜಿಟಲ್ ಸರಕುಗಳು ಲೆನ್ಸ್‌ಗಳು") ಮತ್ತು (ii) ಈ ನಿಯಮಗಳಲ್ಲಿ ಹೇಳಿರುವಂತೆ ಅರ್ಹರಾಗಿದ್ದರೆ, ಲೆನ್ಸ್‌ಗಳಿಗಾಗಿ ಡಿಜಿಟಲ್ ಸರಕುಗಳು ಪ್ರೊಗ್ರಾಂನಲ್ಲಿ ("ಪ್ರೊಗ್ರಾಂ") ಡೆವಲಪರ್ ಆಗಿ ನಿಮ್ಮ ಭಾಗವಹಿಸುವಿಕೆ. ಡಿಜಿಟಲ್ ಸರಕುಗಳು ಲೆನ್ಸ್‌ಗಳ ಅಭಿವೃದ್ಧಿಯ ಅವರ ಸೇವೆಗಳಿಗೆ ಸಂಬಂಧಿಸಿ ಅರ್ಹ ಡೆವಲಪರ್‌ಗಳಿಗೆ Snap ನಿಂದ ಪಾವತಿಯನ್ನು ಸ್ವೀಕರಿಸುವ ಅವಕಾಶವನ್ನು ಈ ಪ್ರೊಗ್ರಾಂ ಒದಗಿಸುತ್ತದೆ. ಈ ನಿಯಮಗಳಲ್ಲಿ ವಿವರಿಸಿರುವ ಡಿಜಿಟಲ್ ಸರಕುಗಳು ಲೆನ್ಸ್‌ಗಳು ಮತ್ತು ಪ್ರತಿ ಉತ್ಪನ್ನ ಹಾಗೂ ಸೇವೆ, Snap ಸೇವೆಯ ನಿಯಮಗಳಲ್ಲಿ ವ್ಯಾಖ್ಯಾನಿಸಿರುವಂತೆ "ಸೇವೆಗಳು" ಆಗಿವೆ. ಈ ನಿಯಮಗಳು ಉಲ್ಲೇಖದ ಮೂಲಕ Snap ಸೇವೆಯ ನಿಯಮಗಳು, ಕಮ್ಯುನಿಟಿ ಮಾರ್ಗಸೂಚಿಗಳು, Lens Studio ನಿಯಮಗಳು, ಲೆನ್ಸ್ ಸ್ಟುಡಿಯೊ ಪರವಾನಗಿ ಕರಾರು, Snap ಟೋಕನ್‌ಗಳ ಮಾರಾಟ ಮತ್ತು ಬಳಕೆಯ ನಿಯಮಗಳು, Snapchat ಬ್ರಾಂಡ್ ಮಾರ್ಗಸೂಚಿಗಳು, Snapcode ಬಳಕೆಯ ಮಾರ್ಗಸೂಚಿಗಳು, ಲೆನ್ಸ್‌ಗಳ ಡೆವಲಪರ್ ಮಾರ್ಗದರ್ಶಿಗಾಗಿ ಡಿಜಿಟಲ್ ಸರಕುಗಳು, Lens Studio ಸಲ್ಲಿಕೆಯ ಮಾರ್ಗಸೂಚಿಗಳು, ಮತ್ತು ಸೇವೆಗಳನ್ನು ನಿಯಂತ್ರಿಸುವ ಯಾವುದೇ ಇತರ ನಿಯಮಗಳು, ನೀತಿಗಳು ಅಥವಾ ಮಾರ್ಗಸೂಚಿಗಳನ್ನು ಒಳಗೊಳ್ಳುತ್ತವೆ. ನೀವು ಸೇವೆಗಳನ್ನು ಬಳಸಿದಾಗ ನಾವು ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮ ಗೌಪ್ಯತೆ ನೀತಿ ಯನ್ನು ಸಹ ಪರಿಶೀಲಿಸಿ. ದಯವಿಟ್ಟು ಈ ನಿಯಮಗಳನ್ನು ಗಮನವಿಟ್ಟು ಓದಿ.
ಈ ನಿಯಮಗಳು ನಿಮ್ಮ (ಅಥವಾ ನಿಮ್ಮ ಸಂಸ್ಥೆ) ಮತ್ತು Snap (ಕೆಳಗೆ ವ್ಯಾಖ್ಯಾನಿಸಲಾಗಿದೆ) ನಡುವೆ ಕಾನೂನುಬದ್ಧವಾದ ಒಪ್ಪಂದವನ್ನು ರೂಪಿಸುತ್ತವೆ. ಈ ನಿಯಮಗಳ ಉದ್ದೇಶಗಳಿಗಾಗಿ, "Snap" ಎಂದರೆ:
Snap Inc. (ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅದರ ಪ್ರಮುಖ ವ್ಯವಹಾರ ಸ್ಥಳವಿರುವ ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ);
Snap Camera ಇಂಡಿಯಾ ಪ್ರೈವೇಟ್ ಲಿಮಿಟೆಡ್ (ನೀವು ಭಾರತದಲ್ಲಿ ವಾಸಿಸುತ್ತಿದ್ದರೆ ಅಥವಾ ಭಾರತದಲ್ಲಿ ಅದರ ಪ್ರಮುಖ ವ್ಯವಹಾರ ಸ್ಥಳವಿರುವ ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ); ಅಥವಾ
Snap Group Limited (ನೀವು ಪ್ರಪಂಚದ ಬೇರೆಲ್ಲಿಯಾದರೂ ವಾಸಿಸುತ್ತಿದ್ದರೆ ಅಥವಾ ಪ್ರಮುಖ ವ್ಯವಹಾರ ಸ್ಥಳವು ಪ್ರಪಂಚದ ಬೇರೆಲ್ಲಿಯಾದರೂ ಇರುವ ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ).
ಸೇವೆಯನ್ನು ನಿಯಂತ್ರಿಸುವ ಇತರ ನಿಯಮಗಳೊಂದಿಗೆ ಈ ನಿಯಮಗಳು ಸಂಘರ್ಷ ಹೊಂದಿರುವ ಮಟ್ಟಿಗೆ, ಡಿಜಿಟಲ್ ಸರಕುಗಳು ಲೆನ್ಸ್‌ಗಳು ಮತ್ತು ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಈ ನಿಯಮಗಳು ಏಕೈಕ ನಿಯಂತ್ರಣ ಹೊಂದಿರುತ್ತವೆ. ಈ ನಿಯಮಗಳಲ್ಲಿ ಬಳಸಿರುವ ಆದರೆ ವ್ಯಾಖ್ಯಾನಿಸದೆ ಇರುವ ಎಲ್ಲ ಕ್ಯಾಪಿಟಲ್ ಅಕ್ಷರದ ಪದಗಳು ಸೇವೆಯನ್ನು ನಿಯಂತ್ರಿಸುವ ಅನ್ವಯಿಸುವ ನಿಯಮಗಳಲ್ಲಿ ಹೇಳಲಾಗಿರುವ ಅವುಗಳ ಸಂಬಂಧಿತ ಅರ್ಥವನ್ನು ಹೊಂದಿರುತ್ತವೆ. ದಯವಿಟ್ಟು ಈ ನಿಯಮಗಳ ಒಂದು ಪ್ರತಿಯನ್ನು ಮುದ್ರಿಸಿ ಮತ್ತು ನಿಮ್ಮ ಉಲ್ಲೇಖಕ್ಕಾಗಿ ಇರಿಸಿಕೊಳ್ಳಿ.
ನೀವು ಪ್ರೊಗ್ರಾಂಗೆ ಸೇರಲು ಬಯಸಿದರೆ ಮತ್ತು ಕೆಳಗಿನ ಅರ್ಹತೆ ಮಾನದಂಡವನ್ನು ನೀವು ಪೂರೈಸಿದರೆ, ನೀವು ಲೆನ್ಸ್‌ಗಳಿಗಾಗಿ ಡಿಜಿಟಲ್ ಸರಕುಗಳು ಡೆವಲಪರ್ ಮಾರ್ಗದರ್ಶಿ, Snap ಟೋಕನ್‌ಗಳ ಮಾರಾಟ ಮತ್ತು ಬಳಕೆಯ ನಿಯಮಗಳು, Lens Studio ನಿಯಮಗಳು, ಮತ್ತು ಕಮ್ಯುನಿಟಿ ಮಾರ್ಗಸೂಚಿಗಳು. ಅನುಸಾರವಾಗಿ ಡಿಜಿಟಲ್ ಸರಕುಗಳು ಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಲಭ್ಯವಾಗಿಸಲು ನೀವು ಒಪ್ಪುತ್ತೀರಿ. Snap ನ ಮಾಡರೇಷನ್ ಆಲ್ಗಾರಿದಂಗಳು ಮತ್ತು ವಿಮರ್ಶೆ ಕಾರ್ಯವಿಧಾನಗಳು, ಹಾಗೂ ಲೆನ್ಸ್‌ಗಳಿಗಾಗಿ ಡಿಜಿಟಲ್ ಸರಕುಗಳು ಡೆವಲಪರ್ ಮಾರ್ಗದರ್ಶಿಯಲ್ಲಿ ಹೇಳಲಾಗಿರುವ ಯಾವುದೇ ಮಾರ್ಗಸೂಚಿಗಳು ಅಥವಾ ನಿರ್ಬಂಧಗಳಿಗೆ ಅನುಸಾರವಾಗಿ ಈ ನಿಯಮಗಳೊಂದಿಗೆ ಅನುಸರಣೆಗಾಗಿ ಪ್ರೊಗ್ರಾಂಗೆ ಸಲ್ಲಿಸಿದ ಲೆನ್ಸ್‌ಗಳನ್ನು ವಿಮರ್ಶೆಗೆ ಒಳಪಡಿಸಲಾಗುತ್ತದೆ. ಅನುಸರಣೆ ಮಾಡದಿರುವ ಲೆನ್ಸ್‌ಗಳು ಪ್ರೊಗ್ರಾಂಗೆ ಅರ್ಹವಲ್ಲದಿರಬಹುದು.
ಪ್ರೊಗ್ರಾಂಗೆ ಅರ್ಹರಾಗುವ ಸಲುವಾಗಿ, ನೀವು ಮುಂದುವರಿದು ಕೆಳಗೆ ವಿವರಿಸಿರುವಂತೆ (i) ಖಾತೆ ಅಗತ್ಯಗಳು ಮತ್ತು (ii) ಪಾವತಿ ಖಾತೆ ಅಗತ್ಯಗಳು ಎರಡನ್ನೂ ಪೂರೈಸಬೇಕು.
ಖಾತೆ ಅಗತ್ಯಗಳು. ನೀವು ಈ ಕೆಳಗಿನ ಎಲ್ಲ ಮಾನದಂಡಗಳನ್ನು ಪೂರೈಸಬೇಕು: (i) ನೀವು ಅರ್ಹದೇಶದ ಕಾನೂನುಬದ್ಧ ನಿವಾಸಿಯಾಗಿರಬೇಕು, (ii) Lens Studio ದಲ್ಲಿ ನೀವು ನಿಮ್ಮ ಪ್ರೊಫೈಲ್ ಅನ್ನು ಸಾರ್ವಜನಿಕಕ್ಕೆ ಹೊಂದಿಸಿರಬೇಕು, (iii) ನಿಮ್ಮ Snapchat ಖಾತೆ ಕನಿಷ್ಟ ಒಂದು ತಿಂಗಳು ಹಳೆಯದಾಗಿರಬೇಕು ಮತ್ತು (iv) Snap ಕಾಲಕಾಲಕ್ಕೆ ಪರಿಷ್ಕರಿಸಬಹುದಾದ ಲೆನ್ಸ್‌ಗಳಿಗಾಗಿ ಡಿಜಿಟಲ್ ಸರಕುಗಳು ಡೆವಲಪರ್ ಮಾರ್ಗದರ್ಶಿ, ಯಲ್ಲಿ ಪಟ್ಟಿ ಮಾಡಲಾಗಿರುವ ಯಾವುದೇ ಕನಿಷ್ಟ ಖಾತೆ ಅರ್ಹತೆಗಳನ್ನು ಪೂರೈಸಬೇಕು (“ಖಾತೆ ಅಗತ್ಯಗಳು”).
ಪಾವತಿ ಖಾತೆ ಅಗತ್ಯಗಳು. ಪ್ರೊಗ್ರಾಂಗೆ ಸಂಬಂಧಿಸಿ ಪಾವತಿಗಳನ್ನು ಸ್ವೀಕರಿಸಲು ಅರ್ಹರಾಗುವ ಸಲುವಾಗಿ, ಎಲ್ಲ ಪಾವತಿ ಖಾತೆ ಅಗತ್ಯಗಳನ್ನು ಕೂಡ ನೀವು ಪೂರೈಸಬೇಕು (ಕೆಳಗೆ ವಿಭಾಗ 4 ರಲ್ಲಿ ವಿವರಿಸಲಾಗಿದೆ).
Snap ಟೋಕನ್‌ಗಳ ಮಾರಾಟ ಮತ್ತು ಬಳಕೆಯ ನಿಯಮಗಳಿಗೆ ಅನುಸಾರವಾಗಿ, ಬಳಕೆದಾರರು ಟೋಕನ್‌ಗಳನ್ನು ಖರೀದಿಸಬಹುದು ಮತ್ತು ಡಿಜಿಟಲ್ ಸರಕುಗಳಿಗಾಗಿ Snapchat ನಲ್ಲಿ ಅವುಗಳನ್ನು ರಿಡೀಮ್ ಮಾಡಬಹುದು.
ಒಂದು ವೇಳೆ ಒಬ್ಬ ಬಳಕೆದಾರ ನಿಮ್ಮ ಡಿಜಿಟಲ್ ಸರಕುಗಳ ಲೆನ್ಸ್(ಗಳ) ಒಳಗೆ ಡಿಜಿಟಲ್ ಸರಕು(ಗಳನ್ನು) ಅನ್‌ಲಾಕ್ ಮಾಡಲು ಟೋಕನ್‌ಗಳನ್ನು ರಿಡೀಮ್ ಮಾಡಿದರೆ ("ರಿಡಿಂಪ್ಶನ್"), ಆಗ ಈ ನಿಯಮಗಳ ನಿಮ್ಮ ಅನುಸರಣೆಗೆ ಒಳಪಟ್ಟು, ನಿವ್ವಳ ಆದಾಯದ ಪಾಲು ಆಧರಿಸಿ ಒಂದು ಮೊತ್ತದಲ್ಲಿ ಪಾವತಿ ("ಪಾವತಿ") ಸ್ವೀಕರಿಸಲು ನೀವು ಅರ್ಹರಾಗಿರಬಹುದು. ಪಾವತಿ ಮೊತ್ತಗಳನ್ನು Snap ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುತ್ತದೆ. ಯಾವುದೇ ಸಂದೇಹದ ನಿವಾರಣೆಗಾಗಿ, ನಿವ್ವಳ ಆದಾಯವನ್ನು ನಿರ್ಧರಿಸುವಾಗ ನಿಮ್ಮ ಲೆನ್ಸ್(ಗಳ) ಒಳಗೆ ರಿಡೀಮ್ ಮಾಡಿದ ಯಾವುದೇ ಉಚಿತ ಅಥವಾ ಪ್ರಮೋಷನಲ್ ಟೋಕನ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಮತ್ತು ಯಾವುದೇ ವಿಧದಲ್ಲಿ ನಿಮ್ಮನ್ನು ಪಾವತಿಗೆ ಅರ್ಹರಾಗಿಸುವುದಿಲ್ಲ. ಯಾವುದೇ ಸಮಯದಲ್ಲಿ ಉಚಿತ ಮತ್ತು ಪ್ರಮೋಷನಲ್ ಟೋಕನ್‌ಗಳನ್ನು ವಿತರಿಸುವ ಹಕ್ಕನ್ನು Snap ಕಾಯ್ದಿರಿಸಿದೆ.
ಡಿಜಿಟಲ್ ಸರಕುಗಳಿಗಾಗಿ ಆನಂತರ ರಿಡೀಮ್ ಮಾಡಲಾಗುವ ಟೋಕನ್‌ಗಳಿಗೆ ಪಾವತಿಯಾಗಿ ಒಬ್ಬ ಬಳಕೆದಾರನಿಂದ ಫಂಡ್‌ಗಳ ಸ್ವೀಕೃತಿಯ ಬಳಿಕವಷ್ಟೇ Snap ನಿಮಗೆ ಪಾವತಿಯನ್ನು (ತೃತೀಯ-ಪಕ್ಷದ ಆ್ಯಪ್ ಸ್ಟೋರ್‌ನಿಂದ ವಿಧಿಸಲಾದ ಯಾವುದೇ ವಹಿವಾಟು ಶುಲ್ಕಗಳನ್ನು ಕಡಿತ ಮಾಡಿ) ಮಾಡುತ್ತದೆ.
Lens Studio ನಿಯಮಗಳಲ್ಲಿ ವ್ಯತಿರಿಕ್ತವಾಗಿರುವ ಯಾವುದನ್ನೂ ಪರಿಗಣಿಸದೆ, ಈ ನಿಯಮಗಳ ಅನುಸರಣೆಗಾಗಿ ತೆಗೆದುಹಾಕುವಿಕೆ ಅಗತ್ಯವಿರುವ ಹೊರತು Snapchat ಅಪ್ಲಿಕೇಶನ್‌ನಲ್ಲಿ ಡಿಜಿಟಲ್ ಸರಕುಗಳು ಲೆನ್ಸ್‌ಗಳನ್ನು ಲಭ್ಯವಾಗಿ ಇರಿಸಲು ನೀವು ಒಪ್ಪುತ್ತೀರಿ. ತೆಗೆದುಹಾಕುವಿಕೆ ಅಗತ್ಯವಾದ ಸಂದರ್ಭದಲ್ಲಿ, ಅದರ ಕುರಿತು ನೀವು Snap ಗೆ ಸೂಚನೆ ನೀಡಬೇಕು ಮತ್ತು ಅನ್ವಯಿಸುವ ಡಿಜಿಟಲ್ ಸರಕುಗಳ ಲೆನ್ಸ್ ಅನ್ನು ಅಳಿಸಬೇಕು. Snap ಸೇವೆಯ ನಿಯಮಗಳ ಅನುಸಾರವಾಗಿ, ನಿಮ್ಮ Snapchat ಅಕೌಂಟ್ ಅನ್ನುನೀವು ಅಳಿಸಿದ ಸಂದರ್ಭದಲ್ಲಿ, ಡಿಜಿಟಲ್ ಸರಕುಗಳ ಲೆನ್ಸ್‌ಗಳಲ್ಲಿನ ಸ್ವತ್ತುಗಳಲ್ಲಿ ಮತ್ತು ಸ್ವತ್ತುಗಳಿಗೆ Snap ನ ಹಕ್ಕುಗಳನ್ನು ಶಾಶ್ವತವಾಗಿ ನೀಡಲಾಗುತ್ತದೆ ಮತ್ತು ನಿಮ್ಮ ಖಾತೆಯ ಸಮಾಪ್ತಿಯ ಬಳಿಕವೂ ಮುಂದುವರಿಯುತ್ತದೆ ಎಂಬುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ, ಇದರಿಂದ ಬಳಕೆದಾರರು ಡಿಜಿಟಲ್ ಸರಕುಗಳ ಲೆನ್ಸ್‌ಗಳು ಮತ್ತು ಅದರಲ್ಲಿ ಅನ್‌ಲಾಕ್ ಮಾಡಲಾದ ಯಾವುದೇ ಡಿಜಿಟಲ್ ಸರಕುಗಳನ್ನು ಬಳಸುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಅದಾಗ್ಯೂ, ಅಂತಹ ಡಿಜಿಟಲ್ ಸರಕುಗಳ ಲೆನ್ಸ್‌ಗಳ ಒಳಗೆ ಟೋಕನ್‌ಗಳನ್ನು ರಿಡೀಮ್ ಮಾಡಲು ಅಂತಹ ಬಳಕೆದಾರರಿಗೆ ಆನಂತರ ಸಾಧ್ಯವಾಗುವುದಿಲ್ಲ ಮತ್ತು ಅಳಿಸಲಾದ ಒಂದು Snapchat ಅಕೌಂಟ್‌ನಿಂದ ತೆಗೆದುಹಾಕಲಾದ ಅಥವಾ ಪ್ರಕಟಿಸಿದ ಯಾವುದೇ ಡಿಜಿಟಲ್ ಸರಕುಗಳ ಲೆನ್ಸ್‌ಗಳಿಗೆ ಸಂಬಂಧಿಸಿದಂತೆ ಪಾವತಿಗಳನ್ನು ಸ್ವೀಕರಿಸಲು ನೀವು ಅರ್ಹರಾಗಿರುವುದಿಲ್ಲ.
Snap ನಿಂದ ಪಾವತಿಗಳನ್ನು ಸ್ವೀಕರಿಸಲು ಅರ್ಹರಾಗುವ ಸಲುವಾಗಿ ನೀವು ಈ ಕೆಳಗಿನ ಎಲ್ಲ ಅಗತ್ಯಗಳನ್ನು ಕೂಡ ("ಪಾವತಿ ಖಾತೆ ಅಗತ್ಯಗಳು") ಪೂರೈಸಬೇಕು.
ನೀವು ವ್ಯಕ್ತಿಯಾಗಿದ್ದರೆ, ನೀವು ಅರ್ಹ ದೇಶದ ಕಾನೂನುಬದ್ಧ ನಿವಾಸಿಯಾಗಿರಬೇಕು ಮತ್ತು ಅಂತಹ ಅರ್ಹ ದೇಶದಲ್ಲಿ ಇರುವಾಗ ನಿಮ್ಮ ಡಿಜಿಟಲ್ ಸರಕುಗಳ ಲೆನ್ಸ್ ಅನ್ನು ತಲುಪಿಸಿರಬೇಕು.
ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನೀವು ಕಾನೂನುಬದ್ಧ ಪ್ರಾಪ್ತ ವಯಸ್ಕರಾಗಿರಬೇಕು ಅಥವಾ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ನಮ್ಮ ಕಾರ್ಯವಿಧಾನಗಳಿಗೆ ಅನುಸಾರವಾಗಿ ಅಗತ್ಯ ಪೋಷಕರ ಅಥವಾ ಕಾನೂನುಬದ್ಧ ಪಾಲಕರ ಸಮ್ಮತಿಯ(ಗಳ)ನ್ನು ಪಡೆದಿರಬೇಕು.
ನಿಮ್ಮ ಕಾನೂನುಬದ್ಧ ಮೊದಲ ಹೆಸರು ಮತ್ತು ಕೊನೆಯ ಹೆಸರು, ಇಮೇಲ್, ಫೋನ್ ಸಂಖ್ಯೆ, ರಾಜ್ಯ ಮತ್ತು ವಾಸವಿರುವ ದೇಶ ಮತ್ತು ಜನ್ಮದಿನಾಂಕ ಸೇರಿದಂತೆ ನೀವು ನಮಗೆ ಸಂಪೂರ್ಣ ಮತ್ತು ನಿಖರ ಸಂಪರ್ಕ ಮಾಹಿತಿಯನ್ನು ಒದಗಿಸಬೇಕು ("ಸಂಪರ್ಕ ಮಾಹಿತಿ").
ನೀವು (ಅಥವಾ ಅನ್ವಯಿಸುವಂತೆ, ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕ) Snap ನ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರೊಂದಿಗೆ ಪಾವತಿ ಖಾತೆಯನ್ನು ರಚಿಸಬೇಕು ಮತ್ತು ಎಲ್ಲ ಅವಶ್ಯಕ ಅಗತ್ಯಗಳನ್ನು ಪೂರ್ಣಗೊಳಿಸಬೇಕು ("ಪಾವತಿ ಖಾತೆ"). ನಿಮ್ಮ ಪಾವತಿ ಖಾತೆಯು ನಿಮ್ಮ ಅರ್ಹ ದೇಶಕ್ಕೆ ಹೋಲಿಕೆಯಾಗಬೇಕು.
ಈ ನಿಯಮಗಳ ಅಡಿಯಲ್ಲಿ ಪಾವತಿಯ ಷರತ್ತಾಗಿ, ನೀವು ಒದಗಿಸಿದ ಸಂಪರ್ಕ ಮಾಹಿತಿ, ಹಾಗೆಯೇ ಪೋಷಕರ / ಕಾನೂನುಬದ್ಧ ಪಾಲಕರ ಗುರುತು ಮತ್ತು ಅಪ್ರಾಪ್ತ ವಯಸ್ಕರಿಗೆ ಒಪ್ಪಿಗೆಯ ಅಗತ್ಯದ ಪರಿಶೀಲನೆಯನ್ನು ಕೋರುವ ನಮ್ಮ ಹಕ್ಕನ್ನು ನಾವು ನಮ್ಮ, ನಮ್ಮ ಅಂಗಸಂಸ್ಥೆಗಳ ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಪರವಾಗಿ ಕಾಯ್ದಿರಿಸಿದ್ದೇವೆ.
ನಮ್ಮ ಮತ್ತು ನಮ್ಮ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳಿಗೆ ಅನುಸಾರವಾಗಿ ನಿಮ್ಮ ವ್ಯವಹಾರ ಘಟಕಕ್ಕೆ ನಿಮ್ಮ ಪಾವತಿಗಳನ್ನು ವರ್ಗಾಯಿಸಲು ನೀವು ನಮಗೆ ಅಧಿಕಾರ ನೀಡಿದ್ದರೆ, ಅಂತಹ ಘಟಕವು ನಿಮ್ಮ ಅರ್ಹ ದೇಶದೊಳಗೆ ಸ್ಥಾಪನೆಯಾಗಿರಬೇಕು, ಪ್ರಧಾನ ಕಚೇರಿ ಹೊಂದಿರಬೇಕು ಅಥವಾ ಒಂದು ಕಚೇರಿ ಹೊಂದಿರಬೇಕು.
ನೀವು Snap ಮತ್ತು ಅದರ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರಿಗೆ ಅಗತ್ಯವಿರುವಂತೆ ನಿಖರವಾದ ಸಂಪರ್ಕ ಮತ್ತು ಇತರ ಮಾಹಿತಿಯನ್ನು ಒದಗಿಸಿದ್ದೀರಿ, ಇದರಿಂದಾಗಿ Snap ಅಥವಾ ಅದರ ತೃತೀಯ-ಪಕ್ಷದ ಪಾವತಿ ಪೂರೈಕೆದಾರರು, ನೀವು ಪಾವತಿಗೆ ಅರ್ಹತೆ ಹೊಂದಿದ್ದರೆ, ನಿಮ್ಮನ್ನು ಸಂಪರ್ಕಿಸಬಹುದು ಮತ್ತು ನಿಮಗೆ (ಅಥವಾ ನಿಮ್ಮ ಪೋಷಕರಿಗೆ / ಕಾನೂನುಬದ್ಧ ಪಾಲಕರಿಗೆ ಅಥವಾ ಅನ್ವಯಿಸಿದರೆ, ವ್ಯವಹಾರ ಘಟಕಕ್ಕೆ) ಪಾವತಿ ಮಾಡಬಹುದು ಅಥವಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ನಿಮ್ಮ Snapchat ಖಾತೆ ಮತ್ತು ಪಾವತಿ ಖಾತೆ ಸಕ್ರಿಯವಾಗಿವೆ, ಉತ್ತಮ ಸ್ಥಿತಿಯಲ್ಲಿವೆ (ನಮ್ಮಿಂದ ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರಿಂದ ನಿರ್ಧರಿಸಲ್ಪಟ್ಟಂತೆ), ಮತ್ತು ಈ ನಿಯಮಗಳ ಅನುಸರಣೆಯಲ್ಲಿದೆ.
ಒಂದು ವೇಳೆ ನೀವು (ಅಥವಾ ನಿಮ್ಮ ಪೋಷಕರು/ಕಾನೂನುಬದ್ಧ ಪೋಷಕ(ರು) ಅಥವಾ ಅನ್ವಯಿಸುತ್ತಿದ್ದಲ್ಲಿ, ವ್ಯವಹಾರ ಘಟಕ) ನಮ್ಮ ಅಥವಾ ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಅನುಸರಣಾ ಪರಿಶೀಲನೆಯಲ್ಲಿ ಉತ್ತೀರ್ಣರಾಗದಿದ್ದರೆ ಯಾವುದೇ ಪಾವತಿಯನ್ನು ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ, ಮತ್ತು ನಾವು ನಿಮಗೆ ಪಾವತಿಸುವುದಿಲ್ಲ. ಅಂಥ ವಿಮರ್ಶೆಗಳನ್ನು ನಿಯತಕಾಲಿಕವಾಗಿ ನಡೆಸಲಾಗುತ್ತದೆ ಮತ್ತು US ವಿಶೇಷವಾಗಿ ನಿಯೋಜಿತರಾದ ರಾಷ್ಟ್ರೀಯರ ಪಟ್ಟಿ ಮತ್ತು ವಿದೇಶಿ ನಿರ್ಬಂಧಗಳನ್ನು ತಪ್ಪಿಸಿಕೊಂಡವರ ಪಟ್ಟಿ ಸೇರಿದಂತೆ, ಯಾವುದೇ ಸಂಬಂಧಿತ ಸರ್ಕಾರಿ ಪ್ರಾಧಿಕಾರ ನಿರ್ವಹಿಸುವ ನಿರ್ಬಂಧಿತ ಪಕ್ಷಗಳ ಒಟ್ಟಿಯಲ್ಲಿ ಒಂದು ವೇಳೆ ನೀವು ಕಾಣಿಸಿಕೊಂಡಿದ್ದೀರೇ ಎನ್ನುವುದನ್ನು ನಿರ್ಧರಿಸಲು ತಪಾಸಣೆ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಪರಿಶೀಲನೆಗಳು ಅದರಲ್ಲಿ ಸೇರಿರಬಹುದು. ಈ ನಿಯಮಗಳಲ್ಲಿ ವಿವರಿಸಲಾಗಿರುವ ಯಾವುದೇ ಇತರ ಬಳಕೆಗಳಿಗೆ ಹೆಚ್ಚುವರಿಯಾಗಿ, ನಿಮ್ಮ ಗುರುತನ್ನು ಪರಿಶೀಲಿಸಲು, ಅನುಸರಣಾ ವಿಮರ್ಶೆಗಳನ್ನು ನಡೆಸಲು, ಮತ್ತು ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಮಗೆ ಒದಗಿಸುವ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು.
ಒಂದು ವೇಳೆ ನೀವು (i) Snap ಅಥವಾ ಅದರ ಪ್ರಧಾನ ಸಂಸ್ಥೆ, ಉಪಸಂಸ್ಥೆಗಳು, ಅಥವಾ ಅಂಗಸಂಸ್ಥೆಗಳ ಉದ್ಯೋಗಿ, ಅಧಿಕಾರಿ ಅಥವಾ ನಿರ್ದೇಶಕರಾಗಿದ್ದರೆ, (ii) ಒಂದು ಸರ್ಕಾರಿ ಘಟಕ, ಸರ್ಕಾರಿ ಘಟಕದ ಉಪಸಂಸ್ಥೆ ಅಥವಾ ಅಂಗಸಂಸ್ಥೆ ಅಥವಾ ರಾಜ ಕುಟುಂಬದ ಸದಸ್ಯರಾಗಿದ್ದರೆ, ಅಥವಾ (iii) ಒಂದು ವ್ಯವಹಾರ ಖಾತೆಯಿಂದ ಪ್ರೊಗ್ರಾಂಗೆ ಲೆನ್ಸ್‌ಗಳನ್ನು ಸಲ್ಲಿಸಿದ್ದರೆ, ನೀವು ಪಾವತಿಗಳಿಗೆ ಅರ್ಹರಾಗಿರುವುದಿಲ್ಲ.
ಒಬ್ಬ ಬಳಕೆದಾರ ರಿಡಿಂಪ್ಶನ್ ಮಾಡಿದರೆ, Snapchat ಅಪ್ಲಿಕೇಶನ್ ಮೂಲಕ ನಿಮಗೆ ಒಂದು ಅಧಿಸೂಚನೆಯನ್ನು ಕಳುಹಿಸುವ ಮೂಲಕ ನಾವು ನಿಮಗೆ ಸೂಚನೆ ನೀಡುತ್ತೇವೆ.
ಈ ನಿಯಮಗಳಿಗೆ ನಿಮ್ಮ ಅನುಸರಣೆಗೆ ಒಳಪಟ್ಟು, ನಂತರ, ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ನಿಮ್ಮ ಪ್ರೊಫೈಲ್‌ನಲ್ಲಿ ಸಂಬಂಧಿತ ಆಯ್ಕೆಯನ್ನು ಆರಿಸುವ ಮೂಲಕ ಪಾವತಿಯನ್ನು ಕೋರಲು ನಿಮಗೆ (ಅಥವಾ ಅನ್ವಯಿಸುವಂತೆ ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕಕ್ಕೆ) ಸಾಧ್ಯವಾಗುತ್ತದೆ. ಮಾನ್ಯವಾಗಿ ಪಾವತಿಯನ್ನು ನೀವು ವಿನಂತಿಸುವ ಸಲುವಾಗಿ, $100USD ಯ ಕನಿಷ್ಟ ಪಾವತಿ ಮೇಲ್ಮಿತಿಯನ್ನು ("ಪಾವತಿ ಮೇಲ್ಮಿತಿ") ಪೂರೈಸಲು ಕನಿಷ್ಟ ಸಾಕಷ್ಟು ಕ್ರಿಸ್ಟಲ್‌ಗಳನ್ನು ನಿಮಗಾಗಿ ನಾವು ಮೊದಲು ದಾಖಲಿಸಿರಬೇಕು ಮತ್ತು ನಿಯೋಜಿಸಿರಬೇಕು.
ದಯವಿಟ್ಟು ಗಮನಿಸಿ: ಒಂದು ವೇಳೆ (A) ಒಂದು ವರ್ಷದ ಅವಧಿಗಾಗಿ ರಿಡೆಂಪ್ಶನ್‌ಗಾಗಿ ನಾವು ನಿಮಗೆ ಯಾವುದೇ ಕ್ರಿಸ್ಟಲ್‌ಗಳನ್ನು ದಾಖಲಿಸಿಲ್ಲದಿದ್ದರೆ ಮತ್ತು ನಿಯೋಜಿಸಿಲ್ಲದಿದ್ದರೆ ಅಥವಾ (B) ತಕ್ಷಣದ ಹಿಂದಿನ ಪ್ಯಾರಾಗ್ರಾಫ್‌ಗೆ ಅನುಸಾರವಾಗಿ ಎರಡು ವರ್ಷಗಳ ಕಾಲ ಒಂದು ಪಾವತಿಯನ್ನು ನೀವು ಮಾನ್ಯವಾಗಿ ವಿನಂತಿಸಿಲ್ಲದಿದ್ದರೆ, ಪ್ರತಿ ಪ್ರಕರಣದಲ್ಲಿ ಈ ಕೆಳಗಿನವುಗಳಿಗೆ ಒಳಪಟ್ಟು, ಅಂತಹ ಅವಧಿಯ ಕೊನೆಗೆ ಯಾವುದೇ ರಿಡೆಂಪ್ಶನ್‌ಗಳಿಗಾಗಿ ನಾವು ದಾಖಲಿಸಿರುವ ಮತ್ತು ನಿಮಗೆ ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳನ್ನು ಆಧರಿಸಿ ಮೊತ್ತವನ್ನು ನಿಮ್ಮ ಪಾವತಿ ಖಾತೆಗೆ ನಾವು ವಿತರಣೆ ಮಾಡುತ್ತೇವೆ:
(I) ನೀವು ಪಾವತಿ ಮಿತಿಯನ್ನು ತಲುಪಿದ್ದೀರಿ, (II) ನೀವು ಪಾವತಿ ಖಾತೆಯನ್ನು ಸೃಷ್ಟಿಸಿದ್ದೀರಿ, (III) ನೀವು ಎಲ್ಲ ಅಗತ್ಯ ಮಾಹಿತಿಯನ್ನು ಮತ್ತು ನಿಮಗೆ ಪಾವತಿಯನ್ನು ಮಾಡಲು ಅಗತ್ಯವಿರುವ ಇತರ ಯಾವುದೇ ಮಾಹಿತಿಯನ್ನು ಪೂರೈಸಿದ್ದೀರಿ, (IV) ರಿಡಿಂಪ್ಶನ್‌ಗಾಗಿ ನಿಮಗೆ ನಾವು ದಾಖಲಿಸಿರುವ ಮತ್ತು ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳಿಗೆ ಸಂಬಂಧಿಸಿದಂತೆ ನಾವು ನಿಮಗೆ ಇನ್ನೂ ಪಾವತಿಯನ್ನು ಮಾಡಿಲ್ಲ, (V) ನಿಮ್ಮ SNAPCHAT ಖಾತೆ ಮತ್ತು ಪಾವತಿ ಖಾತೆ ಉತ್ತಮ ಸ್ಥಿತಿಯಲ್ಲಿವೆ, ಹಾಗೂ (VI) ಇಲ್ಲವಾದಲ್ಲಿ ನೀವು ಈ ನಿಯಮಗಳು ಮತ್ತು ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳು ಹಾಗೂ ನಿಯಮಗಳ ಅನುಸರಣೆ ಮಾಡುತ್ತಿದ್ದೀರಿ. ಅದಾಗ್ಯೂ, ಒಂದು ವೇಳೆ ನೀವು ಮೇಲೆ ಹೇಳಿದ ಎಲ್ಲ ಅಗತ್ಯಗಳನ್ನು ಪೂರ್ಣರೂಪದಲ್ಲಿ ಪೂರೈಸದಿದ್ದರೆ, ಆಗ ಅಂತಹ ರಿಡಿಂಪ್ಶನ್‌ಗಳಿಗೆ ಸಂಬಂಧಿಸಿ ಯಾವುದೇ ಪಾವತಿಯನ್ನು ಸ್ವೀಕರಿಸಲು ನೀವು ಆನಂತರ ಅರ್ಹರಾಗಿರುವುದಿಲ್ಲ.
Snap ಪರವಾಗಿ, ಉಪಸಂಸ್ಥೆ ಅಥವಾ ಅಂಗಸಂಸ್ಥೆ ಘಟಕಗಳು ಅಥವಾ ಈ ನಿಯಮಗಳ ಅಡಿಯಲ್ಲಿ ಪಾವತಿದಾರನಾಗಿ ಕಾರ್ಯನಿರ್ವಹಿಸಬಹುದಾದ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರು ನಿಮಗೆ ಪಾವತಿ ಮಾಡಬಹುದು. ಈ ನಿಯಮಗಳು ಅಥವಾ ಅನ್ವಯಿಸುವ ಪಾವತಿ ಖಾತೆಯ ನಿಯಮಗಳ ಅನುಸರಣೆ ಮಾಡುವಲ್ಲಿ ನಿಮ್ಮ ವೈಫಲ್ಯ ಸೇರಿದಂತೆ, Snap ನ ನಿಯಂತ್ರಣದಲ್ಲಿ ಇಲ್ಲದ ಯಾವುದೇ ಕಾರಣದಿಂದಾಗಿ ನಿಮ್ಮ ಪಾವತಿ ಖಾತೆಗೆ ಪಾವತಿಗಳನ್ನು ವರ್ಗಾಯಿಸುವಲ್ಲಿನ ಯಾವುದೇ ವಿಳಂಬ, ವೈಫಲ್ಯ ಅಥವಾ ಅಸಾಮರ್ಥ್ಯಕ್ಕೆ Snap ಜವಾಬ್ದಾರವಾಗಿರುವುದಿಲ್ಲ. ರಿಡೆಂಪ್ಶನ್‌ಗಾಗಿ ನಾವು ನಿಮಗೆ ದಾಖಲಿಸಿರುವ ಮತ್ತು ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳನ್ನು ಆಧರಿಸಿ, Snap ನ ನಿಯಂತ್ರಣದಲ್ಲಿ ಇಲ್ಲದ ಯಾವುದೇ ಕಾರಣದಿಂದ, ನಿಮ್ಮನ್ನು ಹೊರತುಪಡಿಸಿ (ಅಥವಾ ಅನ್ವಯಿಸುವಂತೆ ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕವನ್ನು ಹೊರತುಪಡಿಸಿ) ಬೇರೆ ಯಾರಾದರೂ ನಿಮ್ಮ Snapchat ಖಾತೆ ಬಳಸಿಕೊಂಡು ಪಾವತಿಯನ್ನು ವಿನಂತಿಸಿದರೆ ಅಥವಾ ನಿಮ್ಮ ಪಾವತಿ ಖಾತೆಯ ಮಾಹಿತಿ ಬಳಸಿಕೊಂಡು ಪಾವತಿಗಳನ್ನು ವರ್ಗಾಯಿಸಿದರೆ ಅದಕ್ಕೆ Snap ಜವಾಬ್ದಾರವಾಗಿರುವುದಿಲ್ಲ. ನಮ್ಮ ಮತ್ತು ನಮ್ಮ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ಕಾರ್ಯವಿಧಾನಗಳಿಗೆ ಅನುಸಾರವಾಗಿ ಒಂದು ವ್ಯವಹಾರ ಘಟಕಕ್ಕೆ ಪಾವತಿಗಳನ್ನು ವರ್ಗಾಯಿಸಲು ನೀವು Snap ಗೆ ಅಧಿಕಾರ ನೀಡಿದರೆ, ಈ ನಿಯಮಗಳ ಅಡಿಯಲ್ಲಿ ನಿಮಗೆ ಪಾವತಿಸಬೇಕಾದ ಯಾವುದೇ ಮತ್ತು ಎಲ್ಲ ಮೊತ್ತಗಳನ್ನು, ಈ ನಿಯಮಗಳ ಅನುಸರಣೆಗೆ ಒಳಪಟ್ಟು Snap ವರ್ಗಾಯಿಸಬಹುದು ಎನ್ನುವುದನ್ನು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ಪಾವತಿಯನ್ನು ಯುನೈಟೆಡ್ ಸ್ಟೇಟ್ಸ್ ಡಾಲರ್‌ನಲ್ಲಿ ಮಾಡಲಾಗುತ್ತದೆ, ಆದರೆ ಪ್ರೊಗ್ರಾಂ ಮಾರ್ಗಸೂಚಿಗಳು ಮತ್ತು FAQ ಗಳು ಎಂಬಲ್ಲಿ ಮುಂದುವರಿದು ವಿವರಿಸಿದಂತೆ ಬಳಕೆ, ವಿನಿಮಯ ಮತ್ತು ವಹಿವಾಟು ಶುಲ್ಕಗಳಿಗೆ ಒಳಪಟ್ಟು ಹಾಗೂ ನಮ್ಮ ತೃತೀಯ-ಪಕ್ಷದ ಪಾವತಿ ಪೂರೈಕೆದಾರರ ನಿಯಮಗಳಿಗೆ ಒಳಪಟ್ಟು ಸ್ಥಳೀಯ ಕರೆನ್ಸಿಯಲ್ಲಿ ನಿಮ್ಮ ಪಾವತಿ ಖಾತೆಯಿಂದ ಫಂಡ್‌ಗಳನ್ನು ವಿದ್‌ಡ್ರಾ ಮಾಡಲು ನೀವು ಆಯ್ಕೆ ಮಾಡಬಹುದು. Snapchat ಅಪ್ಲಿಕೇಶನ್‌ನಲ್ಲಿ ತೋರಿಸಿರುವ ಯಾವುದೇ ಪಾವತಿ ಮೊತ್ತಗಳು ಅಂದಾಜು ಮೌಲ್ಯಗಳಾಗಿವೆ ಮತ್ತು ಬದಲಾವಣೆಗೆ ಒಳಪಟ್ಟಿರಬಹುದು. ಯಾವುದೇ ಪಾವತಿಗಳ ಅಂತಿಮ ಮೊತ್ತಗಳು ನಿಮ್ಮ ಪಾವತಿ ಖಾತೆಯಲ್ಲಿ ಬಿಂಬಿತವಾಗುತ್ತವೆ.
ನಮ್ಮ ಇತರ ಹಕ್ಕುಗಳು ಮತ್ತು ಪರಿಹಾರಗಳಿಗೆ ಹೆಚ್ಚುವರಿಯಾಗಿ, ಕಾನೂನಿನಿಂದ ಅನುಮತಿಸಿದ ಮಟ್ಟಿಗೆ, ಶಂಕಿತ "ಅಮಾನ್ಯ ಚಟುವಟಿಕೆ" (ಲೆನ್ಸ್‌ಗಳ ಡೆವಲಪರ್‌ಗಾಗಿ ಡಿಜಿಟಲ್ ಸರಕುಗಳು ಮಾರ್ಗದರ್ಶಿಯಲ್ಲಿ ವ್ಯಾಖ್ಯಾನಿಸಿರುವಂತೆ), ಈ ನಿಯಮಗಳನ್ನು ಅನುಸರಿಸುವಲ್ಲಿನ ವೈಫಲ್ಯ, ತಪ್ಪಾಗಿ ನಿಮಗೆ ಮಾಡಿದ ಯಾವುದೇ ಹೆಚ್ಚುವರಿ ಪಾವತಿ, ಹಿಂದಿನ ತಿಂಗಳುಗಳಲ್ಲಿ ನಿಮಗೆ ಪಾವತಿಸಿದ ಟೋಕನ್‌ಗಳಿಗಾಗಿ ನಿಮಗೆ ಮರುಪಾವತಿಸಿದ ಅಥವಾ ಸೇವೆಗಳ ಬಳಕೆದಾರರಿಂದ ಚಾರ್ಜ್ ಬ್ಯಾಕ್ ಮಾಡಲಾದ ಯಾವುದೇ ಮೊತ್ತಗಳಿಗಾಗಿ ಅಥವಾ ಯಾವುದೇ ಇತರ ಕರಾರುಗಳ ಅಡಿಯಲ್ಲಿ ನೀವು ನಮಗೆ ಪಾವತಿಸಬೇಕಿರುವ ಯಾವುದೇ ಶುಲ್ಕಗಳಿಗೆ ಪ್ರತಿಯಾಗಿ ಅಂತಹ ಮೊತ್ತಗಳನ್ನು ಚುಕ್ತಾ ಮಾಡಲು, ಈ ನಿಯಮಗಳ ಅಡಿಯಲ್ಲಿ ನಿಮಗೆ ಮಾಡಿದ ಯಾವುದೇ ಪಾವತಿಗಳನ್ನು ಎಚ್ಚರಿಕೆ ಅಥವಾ ಮುಂಚಿತ ಸೂಚನೆ ನೀಡದೆ, ನಾವು ತಡೆಹಿಡಿಯುವಿಕೆ, ಚುಕ್ತಾ, ಹೊಂದಾಣಿಕೆ ಅಥವಾ ಹೊರತುಪಡಿಸುವಿಕೆ ಮಾಡಬಹುದು.
ನಮಗೆ ಅಥವಾ ನಮ್ಮ ಸಹಾಯಕಸಂಸ್ಥೆಗಳು, ಅಂಗಸಂಸ್ಥೆಗಳು ಅಥವಾ ಅಧಿಕೃತ ಪಾವತಿ ಪೂರೈಕೆದಾರರಿಗೆ ನೀವು ಒದಗಿಸಿದ ಎಲ್ಲ ಮಾಹಿತಿ ಸತ್ಯ ಮತ್ತು ನಿಖರವಾಗಿದೆ ಹಾಗೂ ಎಲ್ಲ ಸಮಯದಲ್ಲೂ ಅಂತಹ ಮಾಹಿತಿಯ ನಿಖರತೆಯನ್ನು ನೀವು ನಿರ್ವಹಿಸುತ್ತೀರಿ ಎಂದು ನೀವು ಪ್ರತಿನಿಧಿಸುತ್ತೀರಿ.
ಸೇವೆಗೆ ಸಂಬಂಧಿಸಿ ನೀವು ಸ್ವೀಕರಿಸಬಹುದಾದ ಯಾವುದೇ ಪಾವತಿಗಳಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲ ತೆರಿಗೆಗಳು, ಕರಗಳು ಅಥವಾ ಶುಲ್ಕಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ ಮತ್ತು ಹೊಣೆಗಾರಿಕೆ ಹೊಂದಿರುತ್ತೀರಿ ಎನ್ನುವುದನ್ನು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಪಾವತಿಗಳು ಯಾವುದೇ ಅನ್ವಯವಾಗುವ ಮಾರಾಟ, ಬಳಕೆ, ಅಬಕಾರಿ, ಮೌಲ್ಯ ವರ್ಧಿತ, ಸರಕು ಮತ್ತು ಸೇವೆಗಳು ಅಥವಾ ನಿಮಗೆ ಪಾವತಿಸಬೇಕಿರುವ ಅದೇ ರೀತಿಯ ತೆರಿಗೆಗಳನ್ನು ಒಳಗೊಂಡಿರುತ್ತವೆ. ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಒಂದು ವೇಳೆ ನಿಮಗೆ ಮಾಡಿದ ಯಾವುದೇ ಪಾವತಿಗಳಿಂದ ತೆರಿಗೆಗಳನ್ನು ಕಡಿತ ಮಾಡಬೇಕಿದ್ದರೆ ಅಥವಾ ತಡೆಹಿಡಿಯಬೇಕಿದ್ದರೆ, ಆಗ Snap, ಅದರ ಅಂಗಸಂಸ್ಥೆಗಳು ಅಥವಾ ಅದರ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರು ನಿಮಗೆ ಪಾವತಿಸಬೇಕಿರುವ ಮೊತ್ತದಿಂದ ಅಂತಹ ತೆರಿಗೆಗಳನ್ನು ಕಡಿತ ಮಾಡುತ್ತಾರೆ ಮತ್ತು ಅನ್ವಯಿಸುವ ಕಾನೂನಿನಿಂದ ಅಗತ್ಯಪಡಿಸಿರುವಂತೆ ಸೂಕ್ತ ತೆರಿಗೆ ಪ್ರಾಧಿಕಾರಕ್ಕೆ ಅಂತಹ ತೆರಿಗೆಯನ್ನು ಪಾವತಿಸುತ್ತಾರೆ. ಅಂತಹ ಕಡಿತಗಳು ಅಥವಾ ತಡೆಹಿಡಿಯುವಿಕೆಗಳಿಂದ ಕಡಿಮೆ ಮಾಡಿದ ಪಾವತಿಗಳು ಈ ನಿಯಮಗಳ ಅಡಿಯಲ್ಲಿ ನಿಮಗೆ ಪಾವತಿಸಬೇಕಾದ ಮೊತ್ತಗಳ ಪೂರ್ಣ ಪಾವತಿ ಮತ್ತು ಇತ್ಯರ್ಥಗಳನ್ನು ರೂಪಿಸುತ್ತವೆ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಈ ನಿಯಮಗಳ ಅಡಿಯಲ್ಲಿ ಯಾವುದೇ ಪಾವತಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ವರದಿ ಮಾಡುವಿಕೆ ಅಥವಾ ತಡೆಹಿಡಿಯುವಿಕೆ ತೆರಿಗೆ ಬಾಧ್ಯತೆಗಳನ್ನು ಪೂರೈಸಲು ಅಗತ್ಯವಿರಬಹುದಾದಂತೆ ಯಾವುದೇ ನಮೂನೆಗಳು, ದಾಖಲೆಗಳು ಅಥವಾ ಇತರ ಪ್ರಮಾಣಪತ್ರಗಳನ್ನು ನೀವು Snap, ಅದರ ಉಪಸಂಸ್ಥೆಗಳು, ಅಂಗಸಂಸ್ಥೆಗಳು ಮತ್ತು ಯಾವುದೇ ಅಧಿಕೃತ ಪಾವತಿ ಪೂರೈಕೆದಾರರಿಗೆ ಒದಗಿಸುತ್ತೀರಿ.
ನೀವು ಈ ಮುಂದಿನವುಗಳನ್ನು ಪ್ರತಿನಿಧಿಸುತ್ತೀರಿ ಮತ್ತು ಖಾತರಿಪಡಿಸುತ್ತೀರಿ: (a) ಪ್ರತಿ ಡಿಜಿಟಲ್ ಸರಕುಗಳಲ್ಲಿ ಬಳಕೆದಾರರಿಗೆ ಟೋಕನ್‌ಗಳಿಗೆ ಪ್ರವೇಶ ಹಾಗೂ ಅದನ್ನು ರಿಡೀಮ್ ಮಾಡುವ ಸಾಮರ್ಥ್ಯ ಒದಗಿಸಲು ಮತ್ತು ಅನ್ವಯಿಸುವ ಕಾನೂನಿನೊಂದಿಗೆ ಅನುಸರಣೆ ಮಾಡಲು ಅವಶ್ಯಕವಿರುವ ಮಟ್ಟಿಗೆ ಮಾತ್ರ ಹೊರತುಪಡಿಸಿ ಡಿಜಿಟಲ್ ಸರಕುಗಳು ಲೆನ್ಸ್‌ನಲ್ಲಿ ರಿಡೀಮ್ ಮಾಡಿದ ಯಾವುದೇ ಟೋಕನ್‌ಗಳಿಂದ ನೀವು ಡೇಟಾವನ್ನು ಸಂಗ್ರಹಿಸುವುದಿಲ್ಲ, ಸ್ವೀಕರಿಸುವುದಿಲ್ಲ ಅಥವಾ ವ್ಯುತ್ಪನ್ನ ಮಾಡುವುದಿಲ್ಲ; (b) ನೀವು ಎಲ್ಲ ಸಮಯದಲ್ಲೂ ಲೆನ್ಸ್‌ಗಳ ಡವಲಪರ್ ಮಾರ್ಗದರ್ಶಿಗಾಗಿ ಡಿಜಿಟಲ್ ಸರಕುಗಳು ಅನ್ನು ಅನುಸರಣೆ ಮಾಡುತ್ತೀರಿ, ಹಾಗೂ (c) ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್ ಹೊರತಾದ ದೇಶದ ಕಾನೂನುಬದ್ಧ ನಿವಾಸಿಯಾಗಿದ್ದರೆ, ನಿಮ್ಮ ಲೆನ್ಸ್(ಗಳನ್ನು) ಡೆವಲಪ್ ಮಾಡುವ ಸೇವೆಗಳನ್ನು ನೀವು ಮಾಡಿದಾಗ ನೀವು ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ಭೌತಿಕವಾಗಿ ನೆಲೆಸಿದ್ದಿರಿ. ಈ ನಿಯಮಗಳ ಅನುಸರಣೆ ಮಾಡುವಲ್ಲಿ ನೀವು ವಿಫಲರಾದರೆ, ಈ ನಿಯಮಗಳ ಅಡಿಯಲ್ಲಿನ ನಿಮ್ಮ ಹಕ್ಕುಗಳು Snap ನಿಂದ ನಿಮಗೆ ಯಾವುದೇ ಸೂಚನೆಯಿಲ್ಲದೆ ಸ್ವಯಂಚಾಲಿತವಾಗಿ ಸಮಾಪ್ತಿಯಾಗುತ್ತವೆ. ಸೇವೆಗಳಿಗೆ ಅನ್ವಯಿಸುವ ಇತರ ನಿಯಮಗಳಲ್ಲಿ ಹೇಳಿರುವ ಯಾವುದೇ ಇತರ ಪ್ರತಿನಿಧಿತ್ವಗಳು ಮತ್ತು ವಾರಂಟಿಗಳನ್ನು ಮೇಲೆ ಹೇಳಿರುವ ವಿಷಯ ಮಿತಿಗೊಳಿಸುವುದಿಲ್ಲ.
Snap ನಿಂದ ಒದಗಿಸಿರಬಹುದಾದ ಯಾವುದೇ ಸಾರ್ವಜನಿಕವಲ್ಲದ ಮಾಹಿತಿ ಗೌಪ್ಯವಾದುದು ಮತ್ತು Snap ನ ಸ್ಪಷ್ಟ, ಪೂರ್ವ ಲಿಖಿತ ಅನುಮತಿಯಿಲ್ಲದೆ ನೀವು ಅದನ್ನು ಯಾವುದೇ ತೃತೀಯ ಪಕ್ಷಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಒಪ್ಪುತ್ತೀರಿ.
ನಿಮ್ಮ ಗೌಪ್ಯತೆ ನಮಗೆ ಮುಖ್ಯವಾಗಿದೆ. ನಮ್ಮ ಗೌಪ್ಯತೆ ನೀತಿಯನ್ನು ಓದುವ ಮೂಲಕ ನೀವು ನಮ್ಮ ಸೇವೆಗಳನ್ನು ಬಳಸುವಾಗ ನಿಮ್ಮ ಮಾಹಿತಿಯನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ನೀವು ಕಲಿಯಬಹುದು.
ನಾವು ಹೊಂದಿರಬಹುದಾದ ಇತರ ಯಾವುದೇ ಹಕ್ಕುಗಳು ಅಥವಾ ಪರಿಹಾರಗಳ ಜೊತೆಗೆ ಹೆಚ್ಚುವರಿಯಾಗಿ, ನಿಮ್ಮ ಡಿಜಿಟಲ್ ಸರಕುಗಳ ಲೆನ್ಸ್‌ಗಳು, ಪ್ರೊಗ್ರಾಂ ಅಥವಾ ಇತರ ಯಾವುದೇ ಸೇವೆಗಳ ವಿತರಣೆಯನ್ನು ಅಥವಾ ಮೇಲೆ ಹೇಳಿದ ಯಾವುದಕ್ಕಾದರೂ ನಿಮ್ಮ ಪ್ರವೇಶವನ್ನು ಅಮಾನತು ಅಥವಾ ಸಮಾಪ್ತಿಗೊಳಿಸುವ ಹಕ್ಕನ್ನು ನಾವು ಹೊಂದಿದ್ದೇವೆ. ಈ ನಿಯಮಗಳೊಂದಿಗೆ ನೀವು ಅನುಸರಣೆ ಮಾಡದಿರುವ ಸಂದರ್ಭದಲ್ಲಿ, ಸಂಚಯಗೊಂಡಿರಬಹುದಾದ ಆದರೆ ನಿಮ್ಮ ಪಾವತಿ ಖಾತೆಗೆ ಇನ್ನೂ ವರ್ಗಾಯಿಸದೆ ಇರುವ ಯಾವುದೇ ಪಾವತಿಸದೆ ಇರುವ ಮೊತ್ತಗಳನ್ನು ಸ್ವೀಕರಿಸುವುದರಿಂದ ನಿಮ್ಮನ್ನು ಅನರ್ಹಗೊಳಿಸಬಹುದು. ಒಂದು ವೇಳೆ ಯಾವುದೇ ಸಮಯದಲ್ಲಿ ಈ ನಿಯಮಗಳ ಯಾವುದೇ ಭಾಗಕ್ಕೆ ನೀವು ಒಪ್ಪದಿದ್ದರೆ, ನೀವು ಪ್ರೊಗ್ರಾಂನಲ್ಲಿ ಭಾಗವಹಿಸುವಿಕೆಯನ್ನು ಮತ್ತು ಯಾವುದೇ ಅನ್ವಯಿಸುವ ಸೇವೆಗಳ ನಿಮ್ಮ ಬಳಕೆಯನ್ನು ನಿಲ್ಲಿಸಬೇಕು.
ಅನ್ವಯಿಸುವ ಕಾನೂನುಗಳಿಂದ ಅನುಮತಿಸಿರುವ ಗರಿಷ್ಠ ಮಿತಿಯ ಮಟ್ಟಿಗೆ, ನಿಮಗೆ ಪೂರ್ವ ಸೂಚನೆ ನೀಡದೆ ಮತ್ತು ಬಾಧ್ಯತೆಯಿಲ್ಲದೆ, ನಮ್ಮ ಸ್ವಂತ ವಿವೇಚನೆಯ ಮೇರೆಗೆ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ಪ್ರೊಗ್ರಾಂ ಅಥವಾ ಯಾವುದೇ ಸೇವೆಗಳನ್ನು ನಿಲ್ಲಿಸುವ, ಮಾರ್ಪಡಿಸುವ, ಒದಗಿಸದೆ ಇರುವ ಅಥವಾ ಒದಗಿಸುವುದನ್ನು ಅಥವಾ ಬೆಂಬಲಿಸುವುದನ್ನು ನಿಲ್ಲಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಪ್ರೊಗ್ರಾಂ ಅಥವಾ ಯಾವುದೇ ಸೇವೆಗಳು ಎಲ್ಲ ಸಮಯದಲ್ಲಿ ಅಥವಾ ಯಾವುದೇ ನಿರ್ದಿಷ್ಟ ಸಮಯದಲ್ಲಿ ಲಭ್ಯ ಇರುತ್ತವೆ ಎಂದಾಗಲೀ ಅಥವಾ ಮೇಲೆ ಹೇಳಿದ ಯಾವುದನ್ನಾದರೂ ನಾವು ನಿರ್ದಿಷ್ಟ ಅವಧಿಯವರೆಗೆ ಆಫರ್ ಮಾಡುವುದನ್ನು ಮುಂದುವರಿಸುತ್ತೇವೆ ಎಂದಾಗಲೀ ನಾವು ಖಾತರಿ ನೀಡುವುದಿಲ್ಲ. ಯಾವುದೇ ಕಾರಣಕ್ಕಾಗಿ ಕಾರ್ಯಕ್ರಮ ಅಥವಾ ಸೇವೆಗಳ ಮುಂದುವರಿದ ಲಭ್ಯತೆಯ ಮೇಲೆ ನೀವು ಅವಲಂಬಿತರಾಗಬಾರದು.
ಈ ನಿಯಮಗಳಲ್ಲಿ ಇರುವ ಯಾವುದೂ ಕೂಡ ನಿಮ್ಮ ಮತ್ತು Snap ನಡುವೆ ಜಂಟಿ ಉದ್ಯಮ, ಪ್ರಧಾನ-ಏಜೆಂಟ್, ಅಥವಾ ಉದ್ಯೋಗ ಸಂಬಂಧವನ್ನು ಸೂಚಿಸಲು ವ್ಯಾಖ್ಯಾನ ರಚಿಸುವುದಿಲ್ಲ.
ಜ್ಞಾಪನೆಯಾಗಿ, ಈ ನಿಯಮಗಳು Snap Inc. ಸೇವೆಯ ನಿಯಮಗಳು ಅಥವಾ Snap Group Limited ಸೇವೆಯ ನಿಯಮಗಳು ಅನ್ನು ಒಳಗೊಳ್ಳುತ್ತವೆ (ನೀವು ಎಲ್ಲಿ ನೆಲೆಸಿದ್ದೀರಿ ಅಥವಾ ಒಂದು ವೇಳೆ ನೀವು ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ, ವ್ಯವಹಾರ ಪ್ರಧಾನ ಸ್ಥಳ ಎಲ್ಲಿದೆ ಎಂಬುದನ್ನು ಆಧರಿಸಿ ನಿಮಗೆ ಯಾವುದು ಅನ್ವಯಿಸುತ್ತದೋ ಅದು). ಎಲ್ಲ Snap Inc. ಸೇವೆಯ ನಿಯಮಗಳು ಅಥವಾ Snap Group Limited ಸೇವೆಯ ನಿಯಮಗಳು (ಯಾವುದು ಅನ್ವಯಿಸುತ್ತದೋ ಅದು) ನಿಮಗೆ ಅನ್ವಯಿಸುತ್ತದಾದರೂ, ಈ ನಿಯಮಗಳು ಮಧ್ಯಸ್ಥಿಕೆ, ಸಮೂಹ-ಕ್ರಮ ವರ್ಜನೆ ಮತ್ತು ತೀರ್ಪುಗಾರರ ಮನ್ನಾ ವಿಧಿ, ಕಾನೂನಿನ ಆಯ್ಕೆ ವಿಧಿ ಮತ್ತು Snap Inc. ನ ಅನನ್ಯ ಸ್ಥಳ ವಿಧಿಯಿಂದ ನಿಯಂತ್ರಿಸಲ್ಪಡುತ್ತವೆ ಎಂದು ನಿರ್ದಿಷ್ಟವಾಗಿ ನಿಮ್ಮ ಗಮನ ಸೆಳೆಯಲು ನಾವು ಬಯಸುತ್ತೇವೆ. ಸೇವೆಯ ನಿಯಮಗಳು (ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ, ಅಥವಾ ಒಂದು ವ್ಯವಹಾರದ ಪರವಾಗಿ ನೀವು ಕಾರ್ಯನಿರ್ವಹಿಸುತ್ತಿದ್ದರೆ ಆ ವ್ಯವಹಾರದ ಪ್ರಧಾನ ಕಚೇರಿಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದರೆ) ಅಥವಾ ವಿವಾದ ಪರಿಹಾರ, ಮಧ್ಯಸ್ಥಿಕೆಯ ವಿಧಿ, ಕಾನೂನಿನ ಆಯ್ಕೆ ವಿಧಿ, ಮತ್ತು Snap Group Limited ಸೇವೆಯ ನಿಯಮಗಳ ಅನನ್ಯ ಸ್ಥಳ ವಿಧಿ (ನೀವು ಅಥವಾ ನೀವು ಕಾರ್ಯನಿರ್ವಹಿಸುತ್ತಿರುವ ವ್ಯವಹಾರದ ಪ್ರಧಾನ ಕಚೇರಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಇದ್ದರೆ).
ಮಧ್ಯಸ್ಥಿಕೆಯ ಅಧಿಸೂಚನೆ: ಒಂದು ವೇಳೆ ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಒಂದು ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, SNAP INC. ಸೇವೆಯ ನಿಯಮಗಳ ಮಧ್ಯಸ್ಥಿಕೆಯ ವಿಧಿಯಲ್ಲಿ ಉಲ್ಲೇಖಿಸಿರುವ ವಿವಾದಗಳ ಕೆಲವು ವಿಧಗಳಿಗೆ ಹೊರತುಪಡಿಸಿ, ನಮ್ಮ ನಡುವೆ ಉದ್ಭವಿಸುವ ಶಾಸನಾತ್ಮಕ ಕ್ಲೈಮ್‌ಗಳು ಮತ್ತು ವಿವಾದಗಳು ಸೇರಿದಂತೆ, ಕ್ಲೈಮ್‌ಗಳು ಮತ್ತು ವಿವಾದಗಳನ್ನು THE SNAP INC. ಸೇವೆಯ ನಿಯಮಗಳಲ್ಲಿನ ಕಡ್ಡಾಯ ಬಾಧ್ಯತೆಯ ಮಧ್ಯಸ್ಥಿಕೆಯ ವಿಧಿಯಿಂದ ಪರಿಹರಿಸಲಾಗುತ್ತದೆ ಎಂದು ನೀವು ಮತ್ತು SNAP ಒಪ್ಪುತ್ತೀರಿ ಮತ್ತು ನೀವು ಮತ್ತು SNAP INC. ಸಾಮೂಹಿಕ ದಾವೆ ಅಥವಾ ಸಾಮೂಹಿಕ ಮಧ್ಯಸ್ಥಿಕೆಯಲ್ಲಿ ಭಾಗವಹಿಸಲು ಯಾವುದೇ ಹಕ್ಕನ್ನು ತ್ಯಜಿಸಿ. ಒಂದು ವೇಳೆ ಯುನೈಟೆಡ್ ಸ್ಟೇಟ್ಸ್ ಹೊರಗೆ ತನ್ನ ಪ್ರಧಾನ ವ್ಯವಹಾರ ಸ್ಥಳ ಹೊಂದಿರುವ ವ್ಯವಹಾರದ ಪರವಾಗಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, ಆಗ ನಮ್ಮ ನಡುವಿನ ವಿವಾದಗಳನ್ನು SNAP GROUP LIMITED TERMS OF SERVICE ನಲ್ಲಿನ ಬಾಧ್ಯತೆಯ ಮಧ್ಯಸ್ಥಿಕೆಯ ವಿಧಿಯಿಂದ ಬಗೆಹರಿಸಲಾಗುತ್ತದೆ ಎಂದು ನೀವು ಮತ್ತು SNAP GROUP LIMITED ಒಪ್ಪುತ್ತೀರಿ.
ಕಾಲಕಾಲಕ್ಕೆ, ನಾವು ಈ ನಿಯಮಗಳನ್ನು ಪರಿಷ್ಕರಿಸಬಹುದು. ಮೇಲ್ಭಾಗದಲ್ಲಿ "ಜಾರಿಗೊಳಿಸಿದ್ದು" ದಿನಾಂಕವನ್ನು ಪರಿಶೀಲಿಸುವ ಮೂಲಕ ಈ ನಿಯಮಗಳನ್ನು ಯಾವಾಗ ಕೊನೆಯದಾಗಿ ಪರಿಷ್ಕರಿಸಲಾಗಿದೆ ಎನ್ನುವುದನ್ನು ನೀವು ನಿರ್ಧರಿಸಬಹುದು. ಈ ನಿಯಮಗಳಿಗೆ ಯಾವುದೇ ಬದಲಾವಣೆಗಳು ಮೇಲಿನ "ಜಾರಿ" ದಿನಾಂಕದಿಂದ ಜಾರಿಗೆ ಬರುತ್ತವೆ ಮತ್ತು ಆ ಸಮಯದ ಬಳಿಕ ಸೇವೆಗಳ ನಿಮ್ಮ ಬಳಕೆಗೆ ಅನ್ವಯಿಸುತ್ತವೆ. ಅಂತಹ ನಿಯಮಗಳ ಅತ್ಯಂತ ಇತ್ತೀಚಿನ ಆವೃತ್ತಿಯ ಕುರಿತು ನೀವು ತಿಳಿದಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಅಪ್‌ಡೇಟ್‌ಗಳು ಸೇರಿದಂತೆ, ಈ ನಿಯಮಗಳನ್ನು ನಿಯಮಿತವಾಗಿ ಪರಿಶೀಲಿಸಲು ನೀವು ಒಪ್ಪುತ್ತೀರಿ. ಪರಿಷ್ಕೃತ ನಿಯಮಗಳ ಸಾರ್ವಜನಿಕ ಪ್ರಕಟಣೆಯ ಬಳಿಕ ಸೇವೆಗಳನ್ನು ಬಳಸುವ ಮೂಲಕ, ಪರಿಷ್ಕರಿಸಿದ ನಿಯಮಗಳಿಗೆ ನೀವು ಒಪ್ಪಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಮಾರ್ಪಾಡುಗಳಿಗೆ ನೀವು ಒಪ್ಪದಿದ್ದರೆ, ನೀವು ಸೇವೆಗಳ ಬಳಕೆಯನ್ನು ನಿಲ್ಲಿಸಬೇಕು. ಒಂದು ವೇಳೆ ಈ ನಿಯಮಗಳ ಯಾವುದೇ ನಿಬಂಧನೆ ಜಾರಿಮಾಡಲಾಗದ್ದು ಎಂದು ಕಂಡುಬಂದರೆ, ಆಗ ಈ ನಿಬಂಧನೆಯನ್ನು ಪ್ರತ್ಯೇಕಿಸಲಾಗುತ್ತದೆ ಮತ್ತು ಉಳಿದ ಯಾವುದೇ ನಿಬಂಧನೆಗಳ ಮಾನ್ಯತೆ ಮತ್ತು ಜಾರಿಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ.
ಈ ನಿಯಮಗಳು ಪ್ರೊಗ್ರಾಂಗೆ ಸಂಬಂಧಿಸಿ ನಿಮ್ಮ ಮತ್ತು Snap ನಡುವೆ ಸಮಗ್ರ ಕರಾರನ್ನು ರೂಪಿಸುತ್ತವೆ ಮತ್ತು ನೀವು ಮತ್ತು Snap ಒಪ್ಪಿಕೊಂಡ ಯಾವುದೇ ಇತರ ಕರಾರುಗಳು ಸೇರಿದಂತೆ, ಪ್ರೊಗ್ರಾಂಗೆ ಸಂಬಂಧಿಸಿ ನಿಮ್ಮ ಮತ್ತು Snap ನಡುವಿನ ಎಲ್ಲ ಹಿಂದಿನ ಅಥವಾ ಸಮಕಾಲೀನ ಪ್ರತಿನಿಧಿತ್ವಗಳು, ತಿಳುವಳಿಕೆಗಳು, ಕರಾರುಗಳು ಅಥವಾ ಸಂವಹನಗಳನ್ನು ಸೂಪರ್‌ಸೀಡ್ ಮಾಡುತ್ತದೆ (ನಾವು ಲಿಖಿತರೂಪದಲ್ಲಿ ಬೇರೆ ರೀತಿ ಒಪ್ಪಿಕೊಳ್ಳದ ಹೊರತು). ವಿಭಾಗ ಶೀರ್ಷಿಕೆಗಳನ್ನು ಪಕ್ಷಗಳ ಅನುಕೂಲಕ್ಕಾಗಿ ಮಾತ್ರ ಒದಗಿಸಲಾಗಿದೆ ಮತ್ತು ಈ ನಿಯಮಗಳನ್ನು ಅರ್ಥೈಸಿಕೊಳ್ಳುವಾಗ ನಿರ್ಲಕ್ಷಿಸಬೇಕು.