ಈ Snap ಹಣಗಳಿಕೆ ನಿಯಮಗಳು ನೀವು ಈ ಹಿಂದೆ ಸ್ವೀಕರಿಸಿದ್ದರೆ ಕ್ರಿಯೇಟರ್ ಕಥೆಗಳ ನಿಯಮಗಳು ಮತ್ತು Snap Inc. ಕಂಟೆಂಟ್ ಪಾಲುದಾರರ ನಿಯಮಗಳನ್ನು, ಜನವರಿ 1, 2025 ರಿಂದ ಜಾರಿಗೆ ಬರುವಂತೆ ಬದಲಿಸುತ್ತವೆ ಮತ್ತು ಸೂಪರ್ಸೀಡ್ ಮಾಡುತ್ತವೆ.
Snap ಹಣಗಳಿಕೆ ನಿಯಮಗಳು
Effective Date: February 1, 2025
ಮಧ್ಯಸ್ಥಿಕೆಯ ಸೂಚನೆ: ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದರೆ ನೀವು SNAP INC. ಸೇವೆಯ ನಿಯಮಗಳಲ್ಲಿ ಹೇಳಲಾಗಿರುವ ಮಧ್ಯಸ್ಥಿಕೆಯ ನಿಬಂಧನೆಗಳಿಗೆ ಬಾಧ್ಯರಾಗಿರುತ್ತೀರಿ: ಆ ಮಧ್ಯಸ್ಥಿಕೆಯ ವಿಧಿಯಲ್ಲಿ ಉಲ್ಲೇಖಿಸಲಾಗಿರುವ ಕೆಲವು ವಿಧಗಳ ವಿವಾದಗಳನ್ನು ಹೊರತುಪಡಿಸಿ, ನಮ್ಮ ನಡುವಿನ ವಿವಾದಗಳನ್ನು SNAP INC. ಸೇವೆಯ ನಿಯಮಗಳಲ್ಲಿ ಹೇಳಲಾಗಿರುವ ಕಡ್ಡಾಯ ಬಾಧ್ಯತೆಯ ಮಧ್ಯಸ್ಥಿಕೆಯಿಂದ ಪರಿಹರಿಸಲಾಗುತ್ತದೆ ಎಂದು ನೀವು ಮತ್ತು SNAP INC. ಒಪ್ಪುತ್ತೀರಿ, ಸಮೂಹ ಕ್ರಮ ದಾವೆ ಅಥವಾ ಸಮೂಹದಾದ್ಯಂತದ ಮಧ್ಯಸ್ಥಿಕೆಯಲ್ಲಿ ಭಾಗವಹಿಸುವ ಯಾವುದೇ ಹಕ್ಕನ್ನು ನೀವು ಮತ್ತು SNAP INC. ಬಿಟ್ಟುಕೊಡುತ್ತೀರಿ. ಆ ಮಧ್ಯಸ್ಥಿಕೆಯ ನಿಬಂಧನೆಯಲ್ಲಿ ವಿವರಿಸಿರುವಂತೆ ಮಧ್ಯಸ್ಥಿಕೆಯಿಂದ ಹೊರಗುಳಿಯುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.
ನೀವು ಒಂದು ವ್ಯವಹಾರದ ಪರವಾಗಿ ಸೇವೆಗಳನ್ನು ಬಳಸುತ್ತಿದ್ದರೆ ಮತ್ತು ನಿಮ್ಮ ವ್ಯವಹಾರದ ಪ್ರಧಾನ ಸ್ಥಳವು ಯುನೈಟೆಡ್ ಸ್ಟೇಟ್ಸ್ ಹೊರಗಿದ್ದರೆ, ಆಗ ನಿಮ್ಮ ವ್ಯವಹಾರವು ARBITRATION SNAP GROUP LIMITED ಸೇವೆಯ ನಿಯಮಗಳಲ್ಲಿ ಇರುವ ಮಧ್ಯಸ್ಥಿಕೆಯ ನಿಯಮಕ್ಕೆ ಬಾಧ್ಯತೆ ಹೊಂದಿರುತ್ತದೆ.
ಸ್ವಾಗತ! Snap ನ ಹಣಗಳಿಕೆ ಪ್ರೊಗ್ರಾಂನಲ್ಲಿ ("ಪ್ರೊಗ್ರಾಂ") ನೀವು ಆಸಕ್ತರಾಗಿರುವ ಕುರಿತು ನಾವು ಹರ್ಷಿತರಾಗಿದ್ದೇವೆ, ಇದು ನಾವು "ಅರ್ಹತೆ ಪಡೆಯುವ ಚಟುವಟಿಕೆ" ಎಂದು ವ್ಯಾಖ್ಯಾನಿಸಿರುವ ಮತ್ತು ಮುಂದುವರಿದು ಕೆಳಗೆ ವಿವರಿಸಿರುವ ಈ ಹಣಗಳಿಕೆ ನಿಯಮಗಳಿಂದ ಒಳಗೊಳ್ಳಲ್ಪಡುವ ಕೆಲವು ಸೇವೆಗಳನ್ನು ಮಾಡುವುದಕ್ಕಾಗಿ ಹಣದ ರೂಪದಲ್ಲಿ ಪ್ರೋತ್ಸಾಹವನ್ನು ಸ್ವೀಕರಿಸಲು ಪ್ರೊಗ್ರಾಂಗೆ ಸೇರಿಸಿಕೊಳ್ಳಲಾಗಿರುವ ಅರ್ಹ ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಅನ್ವಯಿಸುವ ಮತ್ತು ನಿಯಂತ್ರಿಸುವ ನಿಯಮಗಳನ್ನು ನೀವು ತಿಳಿದುಕೊಳ್ಳುವ ಸಲುವಾಗಿ ನಾವು ಈ ಹಣಗಳಿಕೆ ನಿಯಮಗಳನ್ನು ರೂಪಿಸಿದ್ದೇವೆ. ಈ ಹಣಗಳಿಕೆ ನಿಯಮಗಳು ನಿಮ್ಮ ಮತ್ತು ಕೆಳಗೆ ಪಟ್ಟಿ ಮಾಡಿರುವ Snap ಘಟಕದ (“Snap”) ನಡುವೆ ಕಾನೂನು ಬಾಧ್ಯತೆಯ ಕರಾರನ್ನು ರೂಪಿಸುತ್ತವೆ, ಹಾಗಾಗಿ ಇವುಗಳನ್ನು ಗಮನವಿಟ್ಟು ಓದಿ. ಈ ಹಣಗಳಿಕೆ ನಿಯಮಗಳನ್ನು ಸ್ವೀಕರಿಸುವ ಮತ್ತು ಅನುಸರಣೆ ಮಾಡುವ ಬಳಕೆದಾರರು ಮಾತ್ರ ಪ್ರೊಗ್ರಾಂನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಈ ಹಣಗಳಿಕೆ ನಿಯಮಗಳ ಉದ್ದೇಶಗಳಿಗಾಗಿ, “Snap” ಅಂದರೆ:
ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೀವು ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಇದ್ದರೆ, Snap Inc. ಆಗಿರುತ್ತದೆ;
ಭಾರತದಲ್ಲಿ ನೀವು ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಇದ್ದರೆ, Snap India Camera Private Limited ಆಗಿರುತ್ತದೆ;
ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ (ಭಾರತ ಹೊರತುಪಡಿಸಿ) ನೀವು ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಇದ್ದರೆ Snap Group Limited ಸಿಂಗಾಪುರ ಶಾಖೆ ಆಗಿರುತ್ತದೆ; ಅಥವಾ
ಜಗತ್ತಿನ ಬೇರೆ ಯಾವುದೇ ಪ್ರದೇಶದಲ್ಲಿ ನೀವು ವಾಸಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳ ಇದ್ದರೆ Snap Group Limited ಆಗಿರುತ್ತದೆ.
ಈ ಹಣಗಳಿಕೆಯ ನಿಯಮಗಳು ಉಲ್ಲೇಖದ ಮೂಲಕ Snap ಸೇವೆಯ ನಿಯಮಗಳು, ಕಮ್ಯುನಿಟಿ ಮಾರ್ಗಸೂಚಿಗಳು, ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ಕಂಟೆಂಟ್ ಮಾರ್ಗಸೂಚಿಗಳು, Snapchat ನಲ್ಲಿ ಸಂಗೀತ ಮಾರ್ಗಸೂಚಿಗಳು, ಕ್ರಿಯೇಟರ್ ಹಣಗಳಿಕೆ ನೀತಿ, ವಾಣಿಜ್ಯ ಕಂಟೆಂಟ್ ನೀತಿ, ಪ್ರಚಾರ ನಿಯಮಗಳು ಮತ್ತು ಯಾವುದೇ ಇತರ ಅನ್ವಯಿಸುವ ನಿಯಮಗಳು, ಮಾರ್ಗಸೂಚಿಗಳು ಮತ್ತು ನೀತಿಗಳನ್ನು ಒಳಗೊಳ್ಳುತ್ತವೆ. ಈ ಹಣಗಳಿಕೆ ನಿಯಮಗಳು ಇತರ ನಿಯಮಗಳೊಂದಿಗೆ ಸಂಘರ್ಷ ಹೊಂದಿರುವ ಮಟ್ಟಿಗೆ, ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿ ಈ ಹಣಗಳಿಕೆ ನಿಯಮಗಳು ನಿಯಂತ್ರಿಸುತ್ತವೆ. Snap ಸೇವೆಯ ನಿಯಮಗಳಲ್ಲಿ ವಿವರಿಸಿರುವಂತೆ ಪ್ರೊಗ್ರಾಂ Snap ನ "ಸೇವೆಗಳ" ಭಾಗವಾಗಿದೆ. ಈ ಹಣಗಳಿಕೆ ನಿಯಮಗಳಲ್ಲಿ ಬಳಸಲಾಗಿರುವ ಆದರೆ ವ್ಯಾಖ್ಯಾನಿಸಿಲ್ಲದ ಕ್ಯಾಪಿಟಲ್ ಅಕ್ಷರಗಳಲ್ಲಿರುವ ಎಲ್ಲ ನಿಯಮಗಳು Snap ಸೇವೆಯ ನಿಯಮಗಳಲ್ಲಿ ಅಥವಾ ಸೇವೆಗಳನ್ನು ನಿಯಂತ್ರಿಸುವ ಅನ್ವಯಿಸುವ ನಿಯಮಗಳಲ್ಲಿ ಹೇಳಲಾಗಿರುವ ಸಂಬಂಧಿತ ಅರ್ಥವನ್ನು ಹೊಂದಿರಲಿವೆ. ಈ ಹಣಗಳಿಕೆ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಖಾತೆ ಅಥವಾ ವಿಷಯವು ಹಣಗಳಿಕೆಗೆ ಅರ್ಹವಾಗಿರುವುದಿಲ್ಲ.
ಈ ಹಣಗಳಿಕೆ ನಿಯಮಗಳಲ್ಲಿ ನಾವು ಸಾರಾಂಶವನ್ನು ಒದಗಿಸಿರುವಲ್ಲಿ, ನಿಮ್ಮ ಅನುಕೂಲಕ್ಕಾಗಿ ಮಾತ್ರ ನಾವು ಹಾಗೆ ಮಾಡಿದ್ದೇವೆ. ನಿಮ್ಮ ಕಾನೂನು ಹಕ್ಕುಗಳು ಮತ್ತು ಬಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಈ ಹಣಗಳಿಕೆ ನಿಯಮಗಳನ್ನು ನೀವು ಪೂರ್ಣವಾಗಿ ಓದಬೇಕು.
ಪ್ರೊಗ್ರಾಂ ಕೇವಲ ಆಹ್ವಾನದ ಮೂಲಕ ಮಾತ್ರ ತೆರೆದಿದೆ. ಆಹ್ವಾನಕ್ಕಾಗಿ ಅರ್ಹತೆ ಪಡೆಯುವ ಸಲುವಾಗಿ, ನೀವು ಈ ಕೆಳಗಿನ ಕನಿಷ್ಠ ಅರ್ಹತಾ ಅಗತ್ಯಗಳನ್ನು ಪೂರೈಸಬೇಕು ("ಕನಿಷ್ಠ ಅರ್ಹತೆ"):
ಅರ್ಹವಾದ ಪ್ರದೇಶದಲ್ಲಿ ನೀವು (ವ್ಯಕ್ತಿಯಾಗಿದ್ದರೆ) ನೆಲೆಸಿರಬೇಕು ಅಥವಾ ನಿಮ್ಮ ವ್ಯವಹಾರದ ಪ್ರಧಾನ ಸ್ಥಳವನ್ನು (ನೀವು ಉದ್ಯಮ ಘಟಕವಾಗಿದ್ದರೆ) ಹೊಂದಿರಬೇಕು. ಪೇಔಟ್‌ಗಳು ಸಾಮಾನ್ಯವಾಗಿ ಕ್ರಿಸ್ಟಲ್‌ಗಳ ಪೇಔಟ್ ಮಾರ್ಗಸೂಚಿಗಳಲ್ಲಿ ಪಟ್ಟಿ ಮಾಡಲಾಗಿರುವ ಸೀಮಿತ ಪ್ರದೇಶಗಳಲ್ಲಿ (“ಅರ್ಹ ಪ್ರದೇಶಗಳು”) ಮಾತ್ರ ಲಭ್ಯ ಇವೆ. ನಮ್ಮ ವಿವೇಚನೆ ಮೇರೆಗೆ ನಾವು ಅರ್ಹ ಪ್ರದೇಶಗಳ ಪಟ್ಟಿಯನ್ನು ಮಾರ್ಪಡಿಸಬಹುದು.
ನೀವು ವ್ಯಕ್ತಿಯಾಗಿದ್ದಲ್ಲಿ, ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನೀವು ಕನಿಷ್ಠ ಕಾನೂನುಬದ್ಧ ಪ್ರಾಪ್ತವಯಸ್ಸಿನ ವಯಸ್ಸಿನವರಾಗಿರಬೇಕು (ಅಥವಾ, ಅನ್ವಯಿಸಿದಲ್ಲಿ, ಪೋಷಕರ ಸಮ್ಮತಿಯೊಂದಿಗೆ ಕನಿಷ್ಠ 16 ವರ್ಷ ವಯಸ್ಸಿನವರಾಗಿರಬೇಕು). ಅನ್ವಯಿಸುವ ಕಾನೂನಿನ ಅಡಿಯಲ್ಲಿ ಪೋಷಕರ ಅಥವಾ ಕಾನೂನುಬದ್ಧ ಪಾಲಕರ ಸಮ್ಮತಿ(ಗಳು) ಅಗತ್ಯವಿದ್ದರೆ, ಆಗ ನೀವು ನಿಮ್ಮ ಪೋಷಕ(ರ)/ಕಾನೂನುಬದ್ಧ ಪಾಲಕ(ರ) ಮೇಲ್ವಿಚಾರಣೆಯಡಿ ಮಾತ್ರ ಪ್ರೊಗ್ರಾಂನಲ್ಲಿ ಭಾಗವಹಿಸಬಹುದಾಗಿದ್ದು, ಅವರು ಕೂಡ ಈ ಹಣಗಳಿಕೆ ನಿಯಮಗಳಿಗೆ ಬದ್ಧರಾಗಿರುವುದಕ್ಕೆ ಒಪ್ಪಬೇಕು. ಅಂತಹ ಎಲ್ಲ ಸಮ್ಮತಿಯ(ಗಳ)ನ್ನು (ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯವಿದ್ದರೆ, ಇಬ್ಬರು ಪೋಷಕರ ಸಮ್ಮತಿ ಸೇರಿದಂತೆ) ನೀವು ಪಡೆದುಕೊಂಡಿದ್ದೀರಿ ಎಂದು ನೀವು ಪ್ರತಿನಿಧಿಸುತ್ತೀರಿ ಮತ್ತು ವಾರಂಟಿ ನೀಡುತ್ತೀರಿ.
ನೀವು ಒಂದು ಘಟಕದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ನೀವು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು (ಅಥವಾ ನಿಮ್ಮ ರಾಜ್ಯ, ಪ್ರಾಂತ್ಯ ಅಥವಾ ದೇಶದಲ್ಲಿ ಕಾನೂನುಬದ್ಧ ಪ್ರಾಪ್ತ ವಯಸ್ಕರಾಗಿರಬೇಕು) ಮತ್ತು ಅಂತಹ ಘಟಕವನ್ನು ಜೋಡಣೆ ಮಾಡುವ ಅಧಿಕಾರವನ್ನು ಹೊಂದಿರಬೇಕು. ಈ ಹಣಗಳಿಕೆ ನಿಯಮಗಳಲ್ಲಿನ "ನೀವು" ಮತ್ತು "ನಿಮ್ಮ" ಎಂಬ ಎಲ್ಲ ಉಲ್ಲೇಖಗಳು ಅಂತಿಮ ಬಳಕೆದಾರನಾಗಿ ಮತ್ತು ಆ ಘಟಕವಾಗಿ ನೀವು ಎನ್ನುವ ಎರಡೂ ಅರ್ಥವನ್ನು ಹೊಂದಿರುತ್ತವೆ.
ನಿಮಗೆ ಪಾವತಿಯನ್ನು ಮಾಡಲು ಅಗತ್ಯವಿರಬಹುದಾದ ಇತರ ಯಾವುದೇ ಮಾಹಿತಿಯ ಜೊತೆಗೆ, ನೀವು Snap ಮತ್ತು ಅದರ ಅಧಿಕೃತ ತೃತೀಯ-ಪಕ್ಷದ ಪಾವತಿ ಪೂರೈಕೆದಾರರಿಗೆ ("ಪಾವತಿ ಪೂರೈಕೆದಾರರು") ನೀವು ನಿಖರವಾದ ಮತ್ತು ಅಪ್-ಟು-ಡೇಟ್ ಆಗಿರುವ ಸಂಪರ್ಕ ಮಾಹಿತಿಯನ್ನು (ಕೆಳಗೆ ವ್ಯಾಖ್ಯಾನಿಸಲಾಗಿದೆ) ಒದಗಿಸಬೇಕು.
ನಮ್ಮ ಪಾವತಿ ಪೂರೈಕೆದಾರರೊಂದಿಗೆ ಮಾನ್ಯವಾದ ಪಾವತಿ ಖಾತೆ ("ಪಾವತಿ ಖಾತೆ") ಸೆಟ್ ಅಪ್ ಮಾಡಲು ಅವಶ್ಯಕವಾಗಿರುವ ಎಲ್ಲ ಅಗತ್ಯಗಳನ್ನು ನೀವು ಪೂರ್ಣಗೊಳಿಸಬೇಕು.
ನಿಮ್ಮ Snapchat ಅಕೌಂಟ್ ಮತ್ತು ಪಾವತಿ ಖಾತೆ ಸಕ್ರಿಯವಾಗಿರಬೇಕು, ಉತ್ತಮ ಸ್ಥಿತಿಯಲ್ಲಿರಬೇಕು (ನಾವು ನಿರ್ಧರಿಸುವಂತೆ) ಮತ್ತು ಎಲ್ಲ ಸಮಯದಲ್ಲೂ ಈ ಹಣಗಳಿಕೆ ನಿಯಮಗಳೊಂದಿಗೆ ಅನುಸರಣೆ ಹೊಂದಿರಬೇಕು.
ನೀವು (ಅಥವಾ ಅನ್ವಯಿಸುವಂತೆ, ನಿಮ್ಮ ಪೋಷಕರು/ಪಾಲಕ(ರು)) Snap ನ ಮತ್ತು ನಮ್ಮ ಪಾವತಿ ಪೂರೈಕೆದಾರರ ಅನುಸರಣೆ ವಿಮರ್ಶೆಯಲ್ಲಿ ತೇರ್ಗಡೆಯಾಗಬೇಕು.
ನೀವು (i) Snap ಅಥವಾ ಅದರ ಪ್ರಧಾನ ಸಂಸ್ಥೆ, ಉಪಸಂಸ್ಥೆಗಳು ಅಥವಾ ಸಂಬಂಧಿಸಿದ ಕಂಪನಿಗಳ ಉದ್ಯೋಗಿ, ಅಧಿಕಾರಿ ಅಥವಾ ನಿರ್ದೇಶಕ ಆಗಿರಬಾರದು; ಮತ್ತು (ii) ಸರ್ಕಾರಿ ಘಟಕ, ಉಪಸಂಸ್ಥೆ ಅಥವಾ ಸರ್ಕಾರಿ ಘಟಕದ ಅಂಗಸಂಸ್ಥೆ ಅಥವಾ ರಾಜಮನೆತನದ ಸದಸ್ಯ ಆಗಿರಬಾರದು.
ನೀವು ಕನಿಷ್ಠ ಅರ್ಹತೆಯ ಅಗತ್ಯಗಳನ್ನು ಪೂರೈಸುತ್ತೀರಿ ಎಂದು ವೆರಿಫೈ ಮಾಡಲು ಅವಶ್ಯಕವಾಗಿರುವ ಯಾವುದೇ ಮಾಹಿತಿಯನ್ನು ವಿನಂತಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಕನಿಷ್ಠ ಅರ್ಹತೆಯ ಅಗತ್ಯಗಳನ್ನು ಪೂರೈಸುವುದು ಪ್ರೊಗ್ರಾಂಗೆ ನಿಮಗೆ ಆಹ್ವಾನವನ್ನಾಗಲೀ ಅಥವಾ ನಿಮ್ಮ ಮುಂದುವರಿದ ತೊಡಗಿಸಿಕೊಳ್ಳುವಿಕೆಯನ್ನಾಗಲಿ ಖಾತರಿಪಡಿಸುವುದಿಲ್ಲ. ಯಾವುದೇ ಕಾರಣಕ್ಕಾಗಿ ಯಾವುದೇ ಸಮಯದಲ್ಲಿ ಹಣಗಳಿಕೆ ಪ್ರೊಗ್ರಾಂನಿಂದ ಯಾವುದೇ ಬಳಕೆದಾರನನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.
ಸಾರಾಂಶದಲ್ಲಿ: ಪ್ರೊಗ್ರಾಂಗೆ ಕೇವಲ ಆಹ್ವಾನದ ಮೂಲಕ ಸೇರಬಹುದು. ಪ್ರೊಗ್ರಾಂಗೆ ಆಹ್ವಾನ ಪಡೆಯುವುದಕ್ಕೆ ಅರ್ಹರಾಗಲು ನೀವು ಕೆಲವು ಕನಿಷ್ಠ ಅಗತ್ಯಗಳನ್ನು ಪೂರೈಸಬೇಕು. ಇವುಗಳಲ್ಲಿ ವಯಸ್ಸು, ಸ್ಥಳ, ಪೋಷಕರ ಸಮ್ಮತಿ ಮತ್ತು ಕೆಲವು ಖಾತೆ ಅಗತ್ಯಗಳು ಸೇರಿವೆ. ಈ ಅಗತ್ಯಗಳನ್ನು ಪೂರೈಸುವುದರಿಂದ ಪ್ರೊಗ್ರಾಂಗೆ ನಿಮಗೆ ಆಹ್ವಾನ ಸಿಗುತ್ತದೆ ಎಂಬ ಖಾತರಿ ನೀಡುವುದಿಲ್ಲ. ನೀವು ನಮಗೆ ವಿಶ್ವಾಸಪೂರ್ಣವಾದ ಮತ್ತು ಅಪ್-ಟು-ಡೇಟ್ ಆಗಿರುವ ಮಾಹಿತಿಯನ್ನು ಒದಗಿಸಬೇಕು, ಹಾಗೂ ಈ ಹಣಗಳಿಕೆ ನಿಯಮಗಳನ್ನು ಎಲ್ಲ ಸಮಯದಲ್ಲೂ ಅನುಸರಣೆ ಮಾಡಬೇಕು.
ನೀವು ಕನಿಷ್ಠ ಅರ್ಹತಾ ಅಗತ್ಯಗಳನ್ನು ಪೂರೈಸಿದರೆ ಮತ್ತು ಪ್ರೊಗ್ರಾಂಗೆ ನಿಮ್ಮನ್ನು ಆಹ್ವಾನಿಸಲಾಗಿದ್ದರೆ, ಆಗ ಇಲ್ಲಿ ವಿವರಿಸಿರುವ (“ಅರ್ಹತೆ ಪಡೆಯುವ ಚಟುವಟಿಕೆ”) ಸೇವೆಗಳನ್ನು ಮಾಡುವುದಕ್ಕಾಗಿ ಪಾವತಿಸುವ ಮೂಲಕ Snap ನಿಮಗೆ ರಿವಾರ್ಡ್ ನೀಡಬಹುದು. ಅಂತಹ ಯಾವುದೇ ಪಾವತಿಯನ್ನು (“ಪಾವತಿ”) ಒಂದೋ Snap ನಿಂದ ಅಥವಾ ಸೇವೆಗಳಿಗೆ ಸಂಬಂಧಿಸಿ ವಿತರಿಸಿದ ಜಾಹೀರಾತುಗಳಿಂದ ನಾವು ಸ್ವೀಕರಿಸಿದ ಗಳಿಕೆಗಳಲ್ಲಿ ಒಂದು ಭಾಗದಿಂದ ಫಂಡ್ ಮಾಡಲಾಗುತ್ತದೆ.
ಅರ್ಹತೆ ಪಡೆಯುವ ಚಟುವಟಿಕೆಗಳಲ್ಲಿ ಇವು ಸೇರಿರಬಹುದು:
ನಾವು ಜಾಹೀರಾತುಗಳನ್ನು ವಿತರಣೆ ಮಾಡುವ ಸಾರ್ವಜನಿಕ ವಿಷಯಗಳನ್ನು ಪೋಸ್ಟ್ ಮಾಡುವುದು; ಅಥವಾ
ನಾವು ಅಗತ್ಯಪಡಿಸಬಹುದಾದ ಯಾವುದೇ ಹೆಚ್ಚುವರಿ ನಿಯಮಗಳನ್ನು (ಅವುಗಳನ್ನು ಈ ಹಣಗಳಿಕೆ ನಿಯಮಗಳಲ್ಲಿ ಅಳವಡಿಸಿಕೊಳ್ಳಲಾಗುತ್ತದೆ) ನೀವು ಸ್ವೀಕರಿಸುವುದಕ್ಕೆ ಒಳಪಟ್ಟು, ನಾವು ಅರ್ಹತೆ ಪಡೆಯುವ ಚಟುವಟಿಕೆ ಎಂದು ನಿಯೋಜಿಸುವ ಯಾವುದೇ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು.
ಅರ್ಹತೆ ಪಡೆಯುವ ಚಟುವಟಿಕೆಯನ್ನು Snap ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುತ್ತದೆ. “ಸಾರ್ವಜನಿಕ ವಿಷಯವು” Snap ಸೇವೆಯ ನಿಯಮಗಳು ನಲ್ಲಿ ವಿವರಿಸಲಾಗಿರುವ ಅರ್ಥವನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ, ಸೇವೆಗಳಿಗೆ ನೀವು ಪೋಸ್ಟ್ ಮಾಡುವ ವಿಷಯವು ಆಲ್ಗಾರಿದಮಿಕ್ ಶಿಫಾರಸುಗಳಿಗೆ ಅರ್ಹವಾಗುವ ಸಲುವಾಗಿ, ಅದು ನಮ್ಮ ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ಕಂಟೆಂಟ್ ಮಾರ್ಗಸೂಚಿಗಳು ಜೊತೆಗೆ ಅನುಸರಣೆ ಹೊಂದಿರಬೇಕು. ನಮ್ಮ ನಿಯಮಗಳು ಮತ್ತು ನೀತಿಗಳ ಜೊತೆಗೆ ಅನುಸರಣೆಗಾಗಿ ನಾವು ನಿಮ್ಮ ಖಾತೆ ಮತ್ತು ಕಂಟೆಂಟ್ ಅನ್ನು ಪರಿಶೀಲಿಸಬಹುದು. ಸ್ಪಷ್ಟತೆಗಾಗಿ, Snap ಸೇವೆಯ ನಿಯಮಗಳು ಅನುಸಾರವಾಗಿ Snapchat ನಲ್ಲಿ ನೀವು ಪೋಸ್ಟ್ ಮಾಡುವ ವಿಷಯದ ವಿತರಣೆ ಮಾಡುವ ಹಕ್ಕನ್ನು Snap ಹೊಂದಿರುತ್ತದೆ ಆದರೆ ಬಾಧ್ಯತೆಯನ್ನಲ್ಲ. ಯಾವುದೇ ಸಮಯಲ್ಲಿ ನೀವು ನಿಮ್ಮ Snap ಗಳನ್ನು ಅಳಿಸಬಹುದು.
ಸಾರಾಂಶದಲ್ಲಿ: ಕೆಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಕ್ಕಾಗಿ ಪಾವತಿಸುವ ಮೂಲಕ ನಾವು ನಿಮಗೆ ರಿವಾರ್ಡ್ ನೀಡಬಹುದು. ನೀವು ನಮಗೆ ನೀಡುವ ಹಕ್ಕುಗಳು ಮತ್ತು ನೀವು ಪೋಸ್ಟ್ ಮಾಡುವ ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಬಾಧ್ಯತೆಗಳನ್ನು ನಮ್ಮ ಸೇವೆಯ ನಿಯಮಗಳು ಮತ್ತು ಶಿಫಾರಸಿಗೆ ಅರ್ಹತೆ ಪಡೆಯಲು ಅನುಸರಿಸಬೇಕಾದ ಕಂಟೆಂಟ್ ಮಾರ್ಗಸೂಚಿಗಳು ನಲ್ಲಿ ವಿವರಿಸಲಾಗಿದೆ. ನಿಮ್ಮ ಚಟುವಟಿಕೆಗಳು, ಖಾತೆ ಮತ್ತು ನೀವು ಪೋಸ್ಟ್ ಮಾಡುವ ಕಂಟೆಂಟ್ ಯಾವಾಗಲೂ ನಮ್ಮ ನಿಯಮಗಳು, ನೀತಿಗಳು ಮತ್ತು ಮಾರ್ಗಸೂಚಿಗಳೊಂದಿಗೆ ಯಾವಾಗಲೂ ಅನುಸರಣೆ ಹೊಂದಿರಬೇಕು. ನೀವು ಅನುಸರಣೆ ಮಾಡುತ್ತಿದ್ದೀರಾ ಎಂದು ನಿರ್ಧರಿಸಲು ನಿಮ್ಮ ಖಾತೆ ಮತ್ತು ನೀವು ಪೋಸ್ಟ್ ಮಾಡುವ ವಿಷಯವನ್ನು ನಾವು ಪರೀಕ್ಷಿಸಬಹುದು. Snapchat ಗೆ ನೀವು ಪೋಸ್ಟ್ ಮಾಡುವ ವಿಷಯವನ್ನು ವಿತರಣೆ ಮಾಡುವ ಬಾಧ್ಯತೆಯನ್ನು ನಾವು ಹೊಂದಿಲ್ಲ ಮತ್ತು ಅಂತಹ ವಿಷಯವನ್ನು ನೀವು ಯಾವುದೇ ಸಮಯದಲ್ಲಿ ಅಳಿಸಬಹುದು.
ಅರ್ಹತೆ ಪಡೆಯುವ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವುದು. ನಾವು ನಿಮ್ಮ ಅರ್ಹತೆ ಪಡೆಯುವ ಚಟುವಟಿಕೆಯನ್ನು "ಕ್ರಿಸ್ಟಲ್‌ಗಳು" ಬಳಕೆಯ ಮೂಲಕ ಟ್ರ್ಯಾಕ್ ಮಾಡುತ್ತೇವೆ, ಇವು ನಿರ್ದಿಷ್ಟ ಅವಧಿಯಲ್ಲಿ ಕ್ರಿಯೇಟರ್‌ಗಳ ಅರ್ಹತೆ ಪಡೆಯುವ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಬಳಸಲಾಗುವ ಮಾಪನದ ಆಂತರಿಕ ಘಟಕವಾಗಿದೆ. ನಮ್ಮ ಸ್ವಂತ ವಿವೇಚನೆ ಮೇರೆಗೆ ಕಾಲಕಾಲಕ್ಕೆ ನಾವು ಮಾರ್ಪಡಿಸಬಹುದಾದ, ನಮ್ಮ ಆಂತರಿಕ ಮಾನದಂಡ ಮತ್ತು ಸೂತ್ರಗಳನ್ನು ಅವಲಂಬಿಸಿ, ಅರ್ಹತೆ ಪಡೆಯುವ ಚಟುವಟಿಕೆಗಾಗಿ ನಾವು ಟ್ರ್ಯಾಕ್ ಮಾಡುವ ಮತ್ತು ದಾಖಲಿಸುವ ಕ್ರಿಸ್ಟಲ್‌ಗಳ ಸಂಖ್ಯೆಯು ವ್ಯತ್ಯಾಸವಾಗಬಹುದು. Snapchat ಅಪ್ಲಿಕೇಶನ್‌ನಲ್ಲಿ ನಿಮ್ಮ ಬಳಕೆದಾರ ಪ್ರೊಫೈಲ್‌ಗೆ ಹೋಗುವ ಮೂಲಕ ನಿಮ್ಮ ಅರ್ಹತೆ ಪಡೆಯುವ ಚಟುವಟಿಕೆಗಾಗಿ ನಾವು ದಾಖಲಿಸಿರುವ ಕ್ರಿಸ್ಟಲ್‌ಗಳ ಅಂದಾಜಿ ಸಂಖ್ಯೆಯನ್ನು ನೀವು ನೋಡಬಹುದು. ನಿಮ್ಮ ಬಳಕೆದಾರ ಪ್ರೊಫೈಲ್ ಮೂಲಕ ನೋಡಬಹುದಾದ ಅಂತಹ ಯಾವುದೇ ಸಂಖ್ಯೆಗಳು ನಮ್ಮ ಆಂತರಿಕ ಅಕೌಂಟಿಂಗ್ ಉದ್ದೇಶಗಳಿಗಾಗಿ ಲೆಕ್ಕಾಚಾರ ಮಾಡಲಾಗಿರುವ ಪೂರ್ವಭಾವಿ ಅಂದಾಜುಗಳಾಗಿರುತ್ತವೆ ಎನ್ನುವುದನ್ನು ದಯವಿಟ್ಟು ಗಮನಿಸಿ.
ಸ್ಪಷ್ಟತೆಗಾಗಿ, ಕ್ರಿಸ್ಟಲ್‌ಗಳು ಕೇವಲ ನಾವು ಬಳಸುವ ಆಂತರಿಕ ಮಾಪನ ಟೂಲ್ ಮಾತ್ರ ಆಗಿದೆ. ಕ್ರಿಸ್ಟಲ್‌ಗಳು ಯಾವುದೇ ಹಕ್ಕುಗಳನ್ನು ನೀಡುವ ಅಥವಾ ಸೂಚಿಸುವ ಉದ್ದೇಶವನ್ನು ಹೊಂದಿಲ್ಲ ಅಥವಾ ಯಾವುದೇ ಬಾಧ್ಯತೆಗಳನ್ನು ಪ್ರತಿನಿಧಿಸುವುದಿಲ್ಲ, ಸ್ವತ್ತನ್ನು ರಚಿಸುವುದಿಲ್ಲ, ಅವುಗಳನ್ನು ವರ್ಗಾವಣೆ ಅಥವಾ ನಿಯೋಜನೆ ಮಾಡಲಾಗದು ಮತ್ತು ಖರೀದಿ ಮಾಡಲಾಗದು ಅಥವಾ ಮಾರಾಟ, ವಸ್ತುವಿನಿಮಯ ಅಥವಾ ವಿನಿಮಯಕ್ಕೆ ಒಳಪಡಿಸುವಂತಿಲ್ಲ.
ನಮ್ಮ ಸ್ವಾಮ್ಯದ ಪಾವತಿ ಸೂತ್ರದ ಅನುಸಾರ, ಅರ್ಹತೆ ಪಡೆಯುವ ಚಟುವಟಿಕೆಗಾಗಿ ನಾವು ದಾಖಲಿಸಿರುವ ಕ್ರಿಸ್ಟಲ್‌ಗಳ ಅಂತಿಮ ಸಂಖ್ಯೆಯನ್ನು ಆಧರಿಸಿ ಅಂತಹ ಅರ್ಹತೆ ಪಡೆಯುವ ಚಟುವಟಿಕೆಗಾಗಿ ಪಾವತಿ ಮೊತ್ತಗಳನ್ನು ನಾವು ನಿರ್ಧರಿಸುತ್ತೇವೆ. ನಮ್ಮ ಪಾವತಿ ಸೂತ್ರವನ್ನು ನಾವು ಕಾಲಕಾಲಕ್ಕೆ ಹೊಂದಾಣಿಕೆ ಮಾಡಬಹುದು ಮತ್ತು ಇದು ಕೆಲವು ಅಂಶಗಳನ್ನು ಆಧರಿಸಿದ್ದು, ಅದರಲ್ಲಿ ನಿಮ್ಮ ಪೋಸ್ಟ್‌ಗಳ ಆವರ್ತನ ಮತ್ತು ಸಮಯ, ನೀವು ಪೋಸ್ಟ್ ಮಾಡುವ ವಿಷಯದಲ್ಲಿ ವಿತರಣೆ ಮಾಡಲಾಗಿರುವ ಜಾಹೀರಾತುಗಳ ಸಂಖ್ಯೆ ಮತ್ತು ಅಂತಹ ವಿಷಯದೊಂದಿಗೆ ತೊಡಗಿಕೊಳ್ಳುವಿಕೆ ಸೇರಿರಬಹುದು. Snapchat ಅಪ್ಲಿಕೇಶನ್‌ನಲ್ಲಿ ತೋರಿಸಿರುವ ಯಾವುದೇ ಪಾವತಿ ಮೊತ್ತಗಳು ಅಂದಾಜು ಮೌಲ್ಯಗಳಾಗಿವೆ ಮತ್ತು ಬದಲಾವಣೆಗೆ ಒಳಪಟ್ಟಿರಬಹುದು. ಯಾವುದೇ ಪಾವತಿಗಳ ಅಂತಿಮ ಮೊತ್ತವು ನಿಮ್ಮ ಪಾವತಿ ಖಾತೆಯಲ್ಲಿ ಬಿಂಬಿತವಾಗುತ್ತದೆ.
ಪಾವತಿಯನ್ನು ವಿನಂತಿಸುವುದು. ಕನಿಷ್ಠ ಪಾವತಿ ಮೇಲ್ಮಿತಿಯಾದ $100 USD ಅನ್ನು ಪೂರೈಸಲು ನಿಮ್ಮ ಅರ್ಹತೆ ಪಡೆಯುವ ಚಟುವಟಿಕೆಗಾಗಿ ನಾವು ಸಾಕಷ್ಟು ಕ್ರಿಸ್ಟಲ್‌ಗಳನ್ನು ದಾಖಲಿಸಿದ ಬಳಿಕ, ನಿಮ್ಮ ಬಳಕೆದಾರ ಪ್ರೊಫೈಲ್‌ನಲ್ಲಿ ಸಂಬಂಧಿಸಿದ ಆಯ್ಕೆಯನ್ನು ಆರಿಸುವ ಮೂಲಕ ನೀವು ಪಾವತಿಯನ್ನು ವಿನಂತಿಸಬಹುದು. ಕಾನೂನು ಅನುಮತಿಸಿರುವ ಮಟ್ಟಿಗೆ ಮತ್ತು ಈ ಹಣಗಳಿಕೆ ನಿಯಮಗಳೊಂದಿಗೆ ನಿಮ್ಮ ಅನುಸರಣೆಗೆ ಒಳಪಟ್ಟು ನಿಮ್ಮ ಪಾವತಿ ಖಾತೆಗೆ ಪಾವತಿಯನ್ನು ವಿತರಿಸಲಾಗುತ್ತದೆ.
ದಯವಿಟ್ಟು ಗಮನಿಸಿ: ಒಂದು ವೇಳೆ (A) ಒಂದು ವರ್ಷದ ಅವಧಿಗೆ ನಿಮ್ಮಿಂದ ಯಾವುದೇ ಅರ್ಹತೆ ಪಡೆಯುವ ಚಟುವಟಿಕೆಗಾಗಿ ನಾವು ಯಾವುದೇ ಕ್ರಿಸ್ಟಲ್‌ಗಳನ್ನು ರೆಕಾರ್ಡ್ ಮಾಡಿಲ್ಲದಿದ್ದರೆ, ಅಥವಾ (B) ಎರಡು ವರ್ಷಗಳ ಅವಧಿಗೆ ತಕ್ಷಣದ ಮೇಲಿನ ಪ್ಯಾರಾಗ್ರಾಫ್‌ಗೆ ಅನುಗುಣವಾಗಿ ನೀವು ಮಾನ್ಯವಾಗಿ ಒಂದು ಪಾವತಿಯನ್ನು ವಿನಂತಿಸಿಲ್ಲದಿದ್ದರೆ ಆಗ — ಅನ್ವಯಿಸುವ ಅವಧಿಯ ಕೊನೆಗೆ — ಈ ಹಣಗಳಿಗೆ ನಿಯಮಗಳೊಂದಿಗೆ ನಿಮ್ಮ ಅನುಸರಣೆಗೆ ಒಳಪಟ್ಟು ಅಂತಹ ಅವಧಿಯ ಕೊನೆಯಲ್ಲಿ ನಿಮ್ಮ ಅರ್ಹತೆ ಪಡೆಯುವ ಚಟುವಟಿಕೆಗೆ ನಾವು ದಾಖಲಿಸಿರುವ ಮತ್ತು ನಿಯೋಜಿಸಿರುವ ಯಾವುದೇ ಕ್ರಿಸ್ಟಲ್‌ಗಳನ್ನು ಆಧರಿಸಿ ನಿಮ್ಮ ಪಾವತಿ ಖಾತೆಗೆ ನಾವು ಪಾವತಿಯನ್ನು ವಿತರಿಸುತ್ತೇವೆ. ಒಂದು ವೇಳೆ ಅನ್ವಯಿಸುವ ಅವಧಿಯ ಕೊನೆಯಲ್ಲಿ, ಈ ಹಣಗಳಿಕೆ ನಿಯಮಗಳಲ್ಲಿ ಹೇಳಲಾಗಿರುವ ಯಾವುದೇ ಅಗತ್ಯವನ್ನು ನೀವು ಪೂರೈಸದಿದ್ದರೆ, ಅಂತಹ ಅರ್ಹತೆ ಪಡೆಯುವ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ಪಾವತಿಗಳನ್ನು ಸ್ವೀಕರಿಸಲು ನೀವು ಅರ್ಹರಾಗಿರುವುದಿಲ್ಲ.
Snap, ಅದರ ಅಂಗಸಂಸ್ಥೆಗಳು ಅಥವಾ ಉಪಸಂಸ್ಥೆಗಳು ಅಥವಾ ನಮ್ಮ ಪಾವತಿ ಪೂರೈಕೆದಾರರ ಪರವಾಗಿ ನಿಮಗೆ ಪಾವತಿಗಳನ್ನು ಮಾಡಬಹುದಾಗಿದ್ದು, ಈ ಸಂಸ್ಥೆಗಳು ಈ ಹಣಗಳಿಕೆ ನಿಯಮಗಳ ಅಡಿಯಲ್ಲಿ ಪಾವತಿದಾರರಾಗಿ ಕಾರ್ಯನಿರ್ವಹಿಸುತ್ತವೆ. ಈ ಹಣಗಳಿಕೆ ನಿಯಮಗಳೊಂದಿಗೆ ಅನುಸರಣೆ ಮಾಡಲು ನೀವು ವಿಫಲರಾಗುವುದು ಸೇರಿದಂತೆ, Snap ನ ನಿಯಂತ್ರಣದಲ್ಲಿ ಇಲ್ಲದ ಯಾವುದೇ ಕಾರಣದಿಂದಾಗಿ ನಿಮ್ಮ ಪಾವತಿ ಖಾತೆಗೆ ಪಾವತಿಗಳನ್ನು ವರ್ಗಾಯಿಸಲು ವಿಳಂಬ, ವೈಫಲ್ಯ ಅಥವಾ ಅಸಾಧ್ಯವಾದಲ್ಲಿ ಅದಕ್ಕೆ Snap ಜವಾಬ್ದಾರವಾಗಿರುವುದಿಲ್ಲ. ನಿಮ್ಮ Snapchat ಅಕೌಂಟ್ ಬಳಸಿಕೊಂಡು ನಿಮ್ಮ ಹೊರತಾದ ಬೇರೊಬ್ಬರು ಪಾವತಿಗಳನ್ನು ವಿನಂತಿಸಿದರೆ ಅಥವಾ ನಿಮ್ಮ ಪಾವತಿ ಖಾತೆಯ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಪಾವತಿಗಳನ್ನು ವರ್ಗಾಯಿಸಿದರೆ ಅದಕ್ಕೆ Snap ಜವಾಬ್ದಾರವಾಗಿರುವುದಿಲ್ಲ. ಪಾವತಿಯನ್ನು ಯುನೈಟೆಡ್ ಸ್ಟೇಟ್ಸ್ ಡಾಲರ್‌ಗಳಲ್ಲಿ ಮಾಡಲಾಗುತ್ತದೆ, ಆದರೆ ಮುಂದುವರಿದು ಕ್ರಿಸ್ಟಲ್‌ಗಳ ಪೇಔಟ್ಸ್ ಮಾರ್ಗಸೂಚಿಗಳಲ್ಲಿ ವಿವರಿಸಿರುವಂತೆ ಮತ್ತು ನಮ್ಮ ಪಾವತಿ ಪೂರೈಕೆದಾರರ ನಿಯಮಗಳಿಗೆ ಒಳಪಟ್ಟು, ಬಳಕೆ, ವಿನಿಮಯ ಮತ್ತು ವಹಿವಾಟು ಶುಲ್ಕಗಳಿಗೆ ಒಳಪಟ್ಟು ನಿಮ್ಮ ಪಾವತಿ ಖಾತೆಯಿಂದ ಹಣವನ್ನು ವಿದ್‌ಡ್ರಾ ಮಾಡಲು ನೀವು ಆಯ್ಕೆ ಮಾಡಬಹುದು. ನಿಮ್ಮ ಪಾವತಿ ಖಾತೆಯೊಳಗೆ ಕ್ಲೇಮ್ ಮಾಡದೆ ಇರುವ ಯಾವುದೇ ಹಣಕ್ಕಾಗಿ Snap ಜವಾಬ್ದಾರವಾಗಿರುವುದಿಲ್ಲ.
ನಮ್ಮ ಇತರ ಹಕ್ಕುಗಳು ಮತ್ತು ಪರಿಹಾರಗಳ ಜೊತೆಗೆ, ಎಚ್ಚರಿಕೆ ಅಥವಾ ಮುಂಚಿತ ಸೂಚನೆಯನ್ನು ಒದಗಿಸದೆ, ಕಾನೂನು ಅನುಮತಿಸಿರುವ ಮಟ್ಟಿಗೆ, ಶಂಕಿತ ಅಮಾನ್ಯ ಚಟುವಟಿಕೆ (ಕೆಳಗೆ ವಿವರಿಸಿರುವಂತೆ), ಈ ಹಣಗಳಿಕೆ ನಿಯಮಗಳೊಂದಿಗೆ ಅನುಸರಣೆ ಮಾಡಲು ವೈಫಲ್ಯ, ತಪ್ಪಾಗಿ ನಿಮಗೆ ಮಾಡಲಾಗಿರುವ ಯಾವುದೇ ಹೆಚ್ಚುವರಿ ಪಾವತಿ ಅಥವಾ ಯಾವುದೇ ಇತರ ಒಪ್ಪಂದದ ಅಡಿಯಲ್ಲಿ ನೀವು ನಮಗೆ ಪಾವತಿಸಬೇಕಿರುವ ಯಾವುದೇ ಶುಲ್ಕಗಳಿಗೆ ಪ್ರತಿಯಾಗಿ ಅಂತಹ ಮೊತ್ತಗಳನ್ನು ಆಫ್‌ಸೆಟ್ ಮಾಡುವುದಕ್ಕಾಗಿ ನಾವು ಈ ಹಣಗಳಿಕೆ ನಿಯಮಗಳ ಅಡಿಯಲ್ಲಿ ನಿಮಗೆ ಮಾಡಲಾಗಿರುವ ಯಾವುದೇ ಪಾವತಿಗಳನ್ನು ತಡೆಹಿಡಿಯುವಿಕೆ, ಆಫ್‌ಸೆಟ್, ಹೊಂದಾಣಿಕೆ ಅಥವಾ ಹೊರತುಪಡಿಸುವಿಕೆಯನ್ನು ಮಾಡಬಹುದು.
ಸಾರಾಂಶದಲ್ಲಿ: ನಿಮ್ಮ ಅರ್ಹತೆ ಪಡೆಯುವ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಮತ್ತು ಯಾವುದೇ ಪಾವತಿಗಳ ಮೊತ್ತವನ್ನು ಲೆಕ್ಕಾಚಾರ ಮಾಡಲು ನಾವು ಕ್ರಿಸ್ಟಲ್‌ಗಳನ್ನು ಬಳಸುತ್ತೇವೆ. ನಾವು $100 USD ಯ ಕನಿಷ್ಠ ಪಾವತಿಯ ಮೇಲ್ಮಿತಿಯನ್ನು ಹೊಂದಿದ್ದೇವೆ. ಒಮ್ಮೆ ನೀವು ಮೇಲ್ಮಿತಿಯನ್ನು ಪೂರೈಸಿದ ಬಳಿಕ, ನೀವು ನಮ್ಮಿಂದ ಪಾವತಿಯನ್ನು ವಿನಂತಿಸಬಹುದು. ಒಂದಿಷ್ಟು ಸಮಯದ ಬಳಿಕ, ನೀವು ಪಾವತಿಯನ್ನು ವಿನಂತಿಸಲು ವಿಫಲರಾದರೆ, ನೀವು ಈ ಹಣಗಳಿಕೆ ನಿಯಮಗಳಿಗೆ ಅನುಸರಣೆ ಹೊಂದಿದ್ದೀರಿ ಎಂಬುದಕ್ಕೆ ಒಳಪಟ್ಟು ನಿಮಗೆ ಪಾವತಿಯನ್ನು ವಿತರಿಸಲು ನಾವು ಪ್ರಯತ್ನಿಸುತ್ತೇವೆ. ನೀವು ಅನುಸರಣೆಯಲ್ಲಿ ಇಲ್ಲದಿದ್ದರೆ, ಪಾವತಿ ಸ್ವೀಕರಿಸಲು ನೀವು ಅರ್ಹರಾಗಿರುವುದಿಲ್ಲ ಮತ್ತು ಯಾವುದೇ ಅನ್ವಯಿಸುವ ಕ್ರಿಸ್ಟಲ್‌ಗಳನ್ನು ವಜಾಗೊಳಿಸಲಾಗುತ್ತದೆ. ನಮ್ಮ ನಿಯಂತ್ರಣದ ಹೊರಗೆ ಉದ್ಭವಿಸುವ ಯಾವುದೇ ಪಾವತಿ ಸಮಸ್ಯೆಗಳಿಗಾಗಿ ನಾವು ನಿಮಗೆ ಜವಾಬ್ದಾರರಲ್ಲ. ಈ ಹಣಗಳಿಕೆ ನಿಯಮಗಳನ್ನು ಅಥವಾ ನಮ್ಮೊಂದಿಗಿನ ಯಾವುದೇ ಇತರ ಒಪ್ಪಂದಗಳನ್ನು ನೀವು ಉಲ್ಲಂಘಿಸಿದರೆ ನಿಮಗೆ ಪಾವತಿಯನ್ನು ನಾವು ತಡೆಹಿಡಿಯಬಹುದು ಅಥವಾ ಆಫ್‌ಸೆಟ್ ಮಾಡಬಹುದು.
ಈ ಹಣಗಳಿಕೆ ನಿಯಮಗಳಿಗೆ ಅನುಸಾರವಾಗಿ ನೀವು ಸ್ವೀಕರಿಸಬಹುದಾದ ಯಾವುದೇ ಪಾವತಿಗಳಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲ ತೆರಿಗೆಗಳು, ಕರಗಳು ಮತ್ತು ಶುಲ್ಕಗಳಿಗೆ ನೀವೇ ಜವಾಬ್ದಾರಿ ಹೊಂದಿರುತ್ತೀರಿ ಮತ್ತು ಹೊಣೆಗಾರರಾಗಿರುತ್ತೀರಿ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಪಾವತಿಗಳು ಯಾವುದೇ ಅನ್ವಯವಾಗುವ ಮಾರಾಟ, ಬಳಕೆ, ಅಬಕಾರಿ, ಮೌಲ್ಯ ವರ್ಧಿತ, ಸರಕು ಮತ್ತು ಸೇವೆಗಳು ಅಥವಾ ನಿಮಗೆ ಪಾವತಿಸಬೇಕಿರುವ ಅದೇ ರೀತಿಯ ತೆರಿಗೆಗಳನ್ನು ಒಳಗೊಂಡಿರುತ್ತವೆ. ಒಂದು ವೇಳೆ ಅನ್ವಯಿಸುವ ಕಾನೂನಿನಡಿಯಲ್ಲಿ, ನಿಮಗೆ ಮಾಡಬೇಕಿರುವ ಯಾವುದೇ ಪಾವತಿಗಳಿಂದ ತೆರಿಗೆಗಳನ್ನು ಕಡಿತ ಮಾಡಬೇಕಿದ್ದರೆ ಅಥವಾ ತಡೆಹಿಡಿಯಬೇಕಿದ್ದರೆ, Snap, ಅದರ ಅಂಗಸಂಸ್ಥೆಗಳು ಅಥವಾ ಅದರ ಪಾವತಿ ಪೂರೈಕೆದಾರರು ನಿಮಗೆ ಪಾವತಿಸಬೇಕಿರುವ ಮೊತ್ತದಿಂದ ಅಂತಹ ತೆರಿಗೆಗಳನ್ನು ಕಡಿತ ಮಾಡಬಹುದು ಮತ್ತು ಅನ್ವಯಿಸಿದ ಕಾನೂನಿನಿಂದ ಅಗತ್ಯಪಡಿಸಿರುವಂತೆ ಆ ತೆರಿಗೆಗಳನ್ನು ಸೂಕ್ತ ತೆರಿಗೆ ಪ್ರಾಧಿಕಾರಕ್ಕೆ ಪಾವತಿಸಬಹುದು. ಅಂತಹ ಕಡಿತಗಳು ಅಥವಾ ತಡೆಹಿಡಿಯುವಿಕೆಗಳಿಂದ ನಿಮಗೆ ಕಡಿಮೆ ಮಾಡಲ್ಪಟ್ಟ ಪಾವತಿಗಳು ಈ ಹಣಗಳಿಕೆ ನಿಯಮಗಳ ಅಡಿಯಲ್ಲಿ ಪಾವತಿಸಬೇಕಾದ ಮೊತ್ತಗಳ ಪೂರ್ಣ ಪಾವತಿ ಮತ್ತು ಇತ್ಯರ್ಥವನ್ನು ರೂಪಿಸುತ್ತವೆ ಎಂದು ನೀವು ಒಪ್ಪುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಮಾನ್ಯವಾದ ಪಾವತಿ ಖಾತೆಯನ್ನು ಸೆಟ್ ಅಪ್ ಮಾಡುವ ಭಾಗವಾಗಿ, ನೀವು ಈ ಹಣಗಳಿಕೆ ನಿಯಮಗಳ ಅಡಿಯಲ್ಲಿ ಯಾವುದೇ ಮಾಹಿತಿ ವರದಿ ಮಾಡುವಿಕೆ ಅಥವಾ ತೆರಿಗೆ ತಡೆಹಿಡಿಯುವಿಕೆ ಬಾಧ್ಯತೆಗಳನ್ನು ಪೂರೈಸಲು ಅಗತ್ಯವಿರಬಹುದಾದ ಯಾವುದೇ ನಮೂನೆಗಳು ಅಥವಾ ಡಾಕ್ಯುಮೆಂಟ್‌ಗಳನ್ನು ನೀವು Snap, ಅದರ ಉಪಸಂಸ್ಥೆಗಳು, ಅಂಗಸಂಸ್ಥೆಗಳು ಮತ್ತು ಯಾವುದೇ ಪಾವತಿ ಪೂರೈಕೆದಾರರಿಗೆ ಒದಗಿಸುತ್ತೀರಿ.
ಸಾರಾಂಶದಲ್ಲಿ: ನಿಮ್ಮ ಪಾವತಿಗಳಿಗೆ ಸಂಬಂಧಿಸಿದ ಎಲ್ಲ ತೆರಿಗೆಗಳು, ಕರಗಳು ಅಥವಾ ಶುಲ್ಕಗಳಿಗೆ ನೀವೇ ಜವಾಬ್ದಾರರು. ಅನ್ವಯಿಸುವ ಕಾನೂನುಗಳಿಂದ ಅಗತ್ಯಪಡಿಸಿರುವ ಕಡಿತಗಳನ್ನು ನಾವು ಮಾಡಬಹುದು. ಈ ಉದ್ದೇಶಗಳಿಗಾಗಿ ಅಗತ್ಯವಿರುವ ಯಾವುದೇ ನಮೂನೆಗಳು ಅಥವಾ ಡಾಕ್ಯುಮೆಂಟ್‌ಗಳನ್ನು ನೀವು ಒದಗಿಸುತ್ತೀರಿ.
Snap ಸೇವೆಯ ನಿಯಮಗಳಲ್ಲಿ ಹೇಳಿರುವಂತೆ, ಸೇವೆಯು ಜಾಹೀರಾತುಗಳನ್ನು ಒಳಗೊಂಡಿರಬಹುದು. ಪ್ರೊಗ್ರಾಂನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ, ನಮ್ಮ ಸ್ವಂತ ವಿವೇಚನೆ ಮೇರೆಗೆ ನೀವು ಪೋಸ್ಟ್ ಮಾಡುವ ಸಾರ್ವಜನಿಕ ವಿಷಯದೊಂದಿಗೆ ಸಂಬಂಧಿಸಿ ಜಾಹೀರಾತನ್ನು ವಿತರಿಸಲು ನಮ್ಮೊಂದಿಗೆ, ನಮ್ಮ ಅಂಗಸಂಸ್ಥೆಗಳೊಂದಿಗೆ ಮತ್ತು ನಮ್ಮ ತೃತೀಯ-ಪಕ್ಷದ ಪಾಲುದಾರರೊಂದಿಗೆ ನೀವು ತೊಡಗಿಕೊಳ್ಳುತ್ತಿದ್ದೀರಿ ಎಂದು ನೀವು ಒಪ್ಪುತ್ತೀರಿ. ಈ ಹಣಗಳಿಕೆ ನಿಯಮಗಳಿಗೆ ಒಪ್ಪುವ ಮತ್ತು ಬದ್ಧರಾಗಿರುವ ಮೂಲಕ ಹಾಗೂ ಈ ಹಣಗಳಿಕೆ ನಿಯಮಗಳಿಗೆ ಒಳಪಟ್ಟು ಪ್ರೊಗ್ರಾಂ ಭಾಗವಾಗಿ ನೀವು ಸಲ್ಲಿಸುವ ಯಾವುದೇ ಸಾರ್ವಜನಿಕ ವಿಷಯಕ್ಕೆ Snap ಗೆ ಆ್ಯಕ್ಸೆಸ್ ಒದಗಿಸುವುದನ್ನು ಮುಂದುವರಿಸುವ ಮೂಲಕ ಅಂತಹ ಜಾಹೀರಾತುಗಳ ವಿತರಣೆಗೆ ಸೌಲಭ್ಯ ಕಲ್ಪಿಸಲು ನೀವು ಒಪ್ಪುತ್ತೀರಿ. ಪ್ರೊಗ್ರಾಂ ಭಾಗವಾಗಿ ನೀವು ಸಲ್ಲಿಸುವ ಯಾವುದೇ ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿ ವಿತರಿಸಲಾದ ಜಾಹೀರಾತುಗಳ ವಿಧ, ಫಾರ್ಮ್ಯಾಟ್ ಮತ್ತು ಆವರ್ತನ ಸೇರಿದಂತೆ, ಯಾವುದಾದರೂ ಇದ್ದಲ್ಲಿ, ಸೇವೆಗಳಲ್ಲಿ ವಿತರಿಸಿದ ಜಾಹೀರಾತುಗಳ ಎಲ್ಲ ಆಯಾಮಗಳನ್ನು ನಾವು ನಮ್ಮ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುತ್ತೇವೆ. ನೀವು ಪೋಸ್ಟ್ ಮಾಡುವ ಸಾರ್ವಜನಿಕ ವಿಷಯದ ಮೇಲೆ, ಅದರಲ್ಲಿ ಅಥವಾ ಪಕ್ಕದಲ್ಲಿ ಯಾವುದೇ ಕಾರಣಕ್ಕಾಗಿ ನಮ್ಮ ವಿವೇಚನೆ ಮೇರೆಗೆ ಜಾಹೀರಾತುಗಳನ್ನು ತೋರಿಸದೆ ಇರುವುದಕ್ಕೂ ಕೂಡ ನಾವು ಹಕ್ಕನ್ನು ಕಾಯ್ದಿರಿಸಿದ್ದೇವೆ. ನೀವು ಯುನೈಟೆಡ್ ಸ್ಟೇಟ್ಸ್ ಹೊರಗೆ ವಾಸಿಸುತ್ತಿದ್ದರೆ, ಯಾವುದೇ ಸೇವೆಗಳನ್ನು ಮಾಡುವಾಗ ಮತ್ತು ನಿಮ್ಮ ಅರ್ಹತೆ ಪಡೆಯುವ ಚಟುವಟಿಕೆಗೆ ಸಂಬಂಧಿಸಿ ಜಾಹೀರಾತುಗಳ ವಿತರಣೆಗೆ ಸೌಲಭ್ಯ ಕಲ್ಪಿಸುವಾಗ ನೀವು (ಮತ್ತು ಯಾವುದೇ ಸಹಯೋಗಿ, ಕೊಡುಗೆದಾರ ಅಥವಾ ನಿಮ್ಮ ಖಾತೆಯಿಂದ ಪೋಸ್ಟ್ ಮಾಡುವ ನಿರ್ವಾಹಕರು) ಯುನೈಟೆಡ್ ಸ್ಟೇಟ್ಸ್ ಹೊರಗೆ ಮತ್ತು ಅರ್ಹವಾದ ಪ್ರದೇಶದ ಒಳಗೆ ಭೌತಿಕವಾಗಿ ನೆಲೆಸಿರಬೇಕು.
ಸಾರಾಂಶದಲ್ಲಿ: ಪ್ರೊಗ್ರಾಂಗೆ ಸಂಬಂಧಿಸಿ Snapchat ಗೆ ನೀವು ಪೋಸ್ಟ್ ಮಾಡುವ ವಿಷಯದಲ್ಲಿ ಜಾಹೀರಾತನ್ನು ವಿತರಿಸುವಂತೆ ನೀವು ನಮ್ಮನ್ನು ಕೇಳುತ್ತಿದ್ದೀರಿ. ವಿಷಯದಲ್ಲಿ ವಿತರಣೆ ಮಾಡಲಾಗಿರುವ ಅಥವಾ ಮಾಡಲಾಗಿಲ್ಲದ ಜಾಹೀರಾತನ್ನು ನಾವು ನಿರ್ಧರಿಸುತ್ತೇವೆ. ನೀವು ಯುನೈಟೆಡ್ ಸ್ಟೇಟ್ಸ್ ಹೊರಗೆ ವಾಸಿಸುತ್ತಿದ್ದರೆ, ಅರ್ಹತೆ ಪಡೆಯುವ ಚಟುವಟಿಕೆಯನ್ನು ಮಾಡುವಾಗ ನಿಮ್ಮ ಭೌತಿಕ ಸ್ಥಳ ಮುಖ್ಯವಾಗುತ್ತದೆ.
ಸಂದೇಹದ ನಿವಾರಣೆಗಾಗಿ, Snapchat ನಲ್ಲಿ ನೀವು ಪೋಸ್ಟ್ ಮಾಡುವ ವಿಷಯಕ್ಕೆ ಸಂಬಂಧಿಸಿದ (Snap ಸೇವೆಯ ನಿಯಮಗಳಲ್ಲಿ ಹೇಳಲಾಗಿದೆ) ಯಾವುದೇ ಮತ್ತು ಎಲ್ಲ ದೂರುಗಳು, ಆರೋಪಗಳು, ಕ್ಲೇಮ್‌ಗಳು, ಹಾನಿಗಳು, ನಷ್ಟಗಳು, ವೆಚ್ಚಗಳು, ಹೊಣೆಗಾರಿಕೆಗಳು ಮತ್ತು ವೆಚ್ಚಗಳಿಗೆ (ವಕೀಲರ ಶುಲ್ಕ ಸೇರಿದಂತೆ) ("ಕ್ಲೇಮ್‌ಗಳು"), ಕಾನೂನಿನಿಂದ ಅನುಮತಿಸಿರುವ ಮಟ್ಟಿಗೆ, ಸೇವೆಗಳಲ್ಲಿ ನೀವು ಪೋಸ್ಟ್ ಮಾಡುವ ವಿಷಯದ ವಿತರಣೆಗೆ ಸಂಬಂಧಿಸಿದ ಯಾವುದೇ ಒಕ್ಕೂಟಗಳು, ಗಿಲ್ಡ್‌ಗಳು (ರಾಯಲ್ಟಿಗಳು, ಉಳಿಕೆಗಳು ಮತ್ತು ಮರುಬಳಕೆ ಶುಲ್ಕಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ), ಪೂರೈಕೆದಾರರು, ಸಂಗೀತಗಾರರು, ಸಂಗೀತ ನಿರ್ದೇಶಕರು (ಸಿಂಕ್ ಲೈಸೆನ್ಸ್ ಶುಲ್ಕಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ), ಸಾರ್ವಜನಿಕ ಪ್ರದರ್ಶನ ಸಮಾಜಗಳು ಮತ್ತು ಪ್ರದರ್ಶನ ಹಕ್ಕುಗಳ ಸಂಘಟನೆಗಳು (ಉದಾ., ASCAP, BMI, SACEM ಮತ್ತು SESAC), ನಟರು, ಉದ್ಯೋಗಿಗಳು, ಸ್ವತಂತ್ರ ಗುತ್ತಿಗೆದಾರರು, ಸೇವಾ ಪೂರೈಕೆದಾರರು ಮತ್ತು ಯಾವುದೇ ಇತರ ಹಕ್ಕುದಾರರಿಗೆ ಪಾವತಿಸಬೇಕಾದ ಅಥವಾ ಪಾವತಿಸಬೇಕಾಗುವ ಯಾವುದೇ ಮೊತ್ತಗಳನ್ನು ನೀವು ಪಾವತಿಸಿಲ್ಲ ಎನ್ನುವ ಕ್ಲೇಮ್‌ನ ಕಾರಣದಿಂದ, ಅದರಿಂದ ಉದ್ಭವಿಸುವ ಅಥವಾ ಅದಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿರುವ ಯಾವುದೇ ಮತ್ತು ಎಲ್ಲ ಕ್ಲೇಮ್‌ಗಳಿಂದ Snap, ನಮ್ಮ ಉಪಸಂಸ್ಥೆಗಳು, ನಿರ್ದೇಶಕರು, ಅಧಿಕಾರಿಗಳು, ಪಾಲುದಾರರು, ಉದ್ಯೋಗಿಗಳು, ಪರವಾನಗಿದಾರರು ಮತ್ತು ಏಜೆಂಟರನ್ನು ನಷ್ಟದಿಂದ ಕಾಪಾಡಲು, ರಕ್ಷಿಸಲು ಮತ್ತು ಕೆಡುಕು ರಹಿತವಾಗಿ ಇರಿಸಲು ನೀವು ಒಪ್ಪುತ್ತೀರಿ.
ಸಾರಾಂಶದಲ್ಲಿ: ನೀವು ಪೋಸ್ಟ್ ಮಾಡುವ ಕಂಟೆಂಟ್‌ಗೆ ಸಂಬಂಧಿಸಿದಂತೆ ಇತರರಿಗೆ ನೀವು ಪಾವತಿಸಬೇಕಾಗಿರುವ ಯಾವುದೇ ಪಾವತಿಗಳನ್ನು ಮಾಡಲು ನೀವು ಜವಾಬ್ದಾರರಾಗಿರುತ್ತೀರಿ. ಹಾಗೆ ಮಾಡಲು ನೀವು ವಿಫಲರಾದರೆ ಮತ್ತು ಅದು ನಮಗೆ ಹಾನಿಯುಂಟು ಮಾಡಿದರೆ, ನೀವು ನಮಗೆ ಪರಿಹಾರ ನೀಡುತ್ತೀರಿ.
ಚಟುವಟಿಕೆಯು ಅರ್ಹತೆ ಪಡೆಯುವ ಚಟುವಟಿಕೆಯಾಗಿದೆಯೇ ಎಂಬುದನ್ನು ಅಥವಾ ಯಾವುದೇ ಪಾವತಿಯ ಮೊತ್ತವನ್ನು ನಿರ್ಧರಿಸಲು, ನೀವು ಪೋಸ್ಟ್ ಮಾಡುವ ವಿಷಯದ ವೀಕ್ಷಣೆಗಳ ಸಂಖ್ಯೆಯನ್ನು (ಅಥವಾ ಇತರ ವೀಕ್ಷಕರ ಸಂಖ್ಯೆ ಅಥವಾ ತೊಡಗಿಸಿಕೊಳ್ಳುವಿಕೆಯ ಮಾಪನಗಳನ್ನು) ಕೃತಕವಾಗಿ ಹೆಚ್ಚಿಸುವ ಚಟುವಟಿಕೆಯನ್ನು ನಾವು ಹೊರತುಪಡಿಸಬಹುದು ("ಅಮಾನ್ಯ ಚಟುವಟಿಕೆ"). ಅಮಾನ್ಯ ಚಟುವಟಿಕೆಯನ್ನು Snap ತನ್ನ ಸ್ವಂತ ವಿವೇಚನೆ ಮೇರೆಗೆ ನಿರ್ಧರಿಸುತ್ತದೆ ಮತ್ತು ಅದು ಸ್ಪ್ಯಾಮ್, ಕ್ಲಿಕ್‌ಗಳು, ಕ್ವೆರಿಗಳು, ಪ್ರತ್ಯುತ್ತರಗಳು, ಲೈಕ್‌ಗಳು, ಮೆಚ್ಚಿನವುಗಳು, ಫಾಲೋಗಳು, ಸಬ್‌ಸ್ಕ್ರಿಪ್ಶನ್‌ಗಳು, ಇಂಪ್ರೆಷನ್‌ಗಳು ಅಥವಾ ಇತರ ಯಾವುದೇ ತೊಡಗಿಸಿಕೊಳ್ಳುವಿಕೆಯ ಮಾಪನಗಳನ್ನು ಒಳಗೊಂಡಿರುತ್ತದೆ:
ನಿಮ್ಮ ಮೊಬೈಲ್ ಸಾಧನ, ನಿಮ್ಮ ನಿಯಂತ್ರಣದಲ್ಲಿರುವ ಮೊಬೈಲ್ ಸಾಧನಗಳು ಅಥವಾ ಹೊಸ ಅಥವಾ ಸಂದೇಹಾಸ್ಪದ ಖಾತೆಗಳೊಂದಿಗಿನ ಮೊಬೈಲ್ ಸಾಧನಗಳಿಂದ ಸೃಷ್ಟಿಯಾಗುವ ಯಾವುದೇ ಕ್ಲಿಕ್‌ಗಳು, ಇಂಪ್ರೆಷನ್‌ಗಳು ಅಥವಾ ಇತರ ಚಟುವಟಿಕೆ ಸೇರಿದಂತೆ, ಯಾವುದೇ ವ್ಯಕ್ತಿ, ಕ್ಲಿಕ್ ಫಾರ್ಮ್ ಅಥವಾ ಅದೇ ರೀತಿಯ ಸೇವೆ, ಬಾಟ್, ಸ್ವಯಂಚಾಲಿತ ಪ್ರೊಗ್ರಾಂ ಅಥವಾ ಅದೇ ರೀತಿಯ ಸಾಧನದಿಂದ ಸೃಷ್ಟಿಯಾಗಿರುವುದು;
ತೃತೀಯ ಪಕ್ಷಗಳಿಗೆ ಹಣದ ಪಾವತಿ ಅಥವಾ ಇತರ ಪ್ರಲೋಭನೆಗಳ ಮೂಲಕ ಸೃಷ್ಟಿಸಿರುವುದು, ತಪ್ಪಾಗಿ ಪ್ರತಿನಿಧಿಸುವುದು ಅಥವಾ ವೀಕ್ಷಣೆಗಳನ್ನು ಒದಗಿಸಲು ವಹಿವಾಟು ನಡೆಸುವುದು;
ಈ ಹಣಗಳಿಕೆ ನಿಯಮಗಳ ಉಲ್ಲಂಘನೆಯಾಗಿರುವಂತಹ ಚಟುವಟಿಕೆಯ ಮೂಲಕ ಸೃಷ್ಟಿಸಿರುವುದು; ಮತ್ತು
ಮೇಲೆ ಪಟ್ಟಿ ಮಾಡಿರುವ ಯಾವುದೇ ಚಟುವಟಿಕೆಗಳೊಂದಿಗೆ ಜೊತೆಯಾಗಿ ಮಿಶ್ರಣ ಮಾಡಿರುವುದು.
ಸಾರಾಂಶದಲ್ಲಿ: ನೀವು ಪೋಸ್ಟ್ ಮಾಡುವ ವಿಷಯದಲ್ಲಿ ಯಾವುದೇ ರೀತಿಯಲ್ಲಿ ನೀವು ಕೃತಕವಾಗಿ ವೀಕ್ಷಣೆಗಳನ್ನು ಮತ್ತು ಮಾಪನಗಳನ್ನು ಹೆಚ್ಚಿಸಿದರೆ, ಪಾವತಿಗೆ ನೀವು ಅನರ್ಹರಾಗಿರುತ್ತೀರಿ.
ಪ್ರೊಗ್ರಾಂನಲ್ಲಿ ಭಾಗವಹಿಸುವ ಸಲುವಾಗಿ ಈ ಹಣಗಳಿಕೆ ನಿಯಮಗಳೊಂದಿಗೆ ನೀವು ಅನುಸರಣೆಯಲ್ಲಿ ಇರಬೇಕು. ಈ ಹಣಗಳಿಕೆ ನಿಯಮಗಳೊಂದಿಗೆ ನೀವು ಅನುಸರಣೆ ಹೊಂದಿಲ್ಲದಿದ್ದರೆ, ಪ್ರೊಗ್ರಾಂನಲ್ಲಿ ಭಾಗವಹಿಸಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ನಾವು ಸೂಕ್ತ ಎಂದು ಪರಿಗಣಿಸುವ ಯಾವುದೇ ಇತರ ಕ್ರಮವನ್ನು ತೆಗೆದುಕೊಳ್ಳುವುದರ ಜೊತೆಗೆ, ಸೇವೆಗಳಿಗೆ ನಿಮ್ಮ ಆ್ಯಕ್ಸೆಸ್ ಅನ್ನು ಅಮಾನತುಗೊಳಿಸುವ ಅಥವಾ ಶಾಶ್ವತವಾಗಿ ಹಿಂಪಡೆಯುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಮುಂದುವರಿದು, ಕಾನೂನಿನಿಂದ ಅನುಮತಿಸಿರುವ ಮಟ್ಟಿಗೆ, ಅನುಸರಣೆ ಮಾಡದಿರುವುದಕ್ಕಾಗಿ ಈ ಹಣಗಳಿಕೆ ನಿಯಮಗಳ ಅಡಿಯಲ್ಲಿ ಯಾವುದೇ ಪಾವತಿಗಳನ್ನು ತಡೆಹಿಡಿಯುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ (ಮತ್ತು ಸ್ವೀಕರಿಸಲು ನೀವು ಅರ್ಹರಾಗಿರುವುದಿಲ್ಲ ಎಂದು ನೀವು ಒಪ್ಪುತ್ತೀರಿ). ಈ ಹಣಗಳಿಕೆ ನಿಯಮಗಳ ಯಾವುದೇ ಭಾಗಕ್ಕೆ ಯಾವುದೇ ಸಮಯದಲ್ಲಿ ನೀವು ಒಪ್ಪದಿದ್ದರೆ, ಅನ್ವಯಿಸುವ ಸೇವೆಗಳ ಬಳಕೆಯನ್ನು ನೀವು ತಕ್ಷಣವೇ ನಿಲ್ಲಿಸಬೇಕು.
ಅನ್ವಯಿಸುವ ಕಾನೂನುಗಳಿಂದ ಅನುಮತಿಸಿರುವ ಗರಿಷ್ಠ ಮಟ್ಟಿಗೆ, ನಿಮಗೆ ಮುಂಚಿತ ಸೂಚನೆ ನೀಡದೆ ಅಥವಾ ಬಾಧ್ಯತೆಯಿಲ್ಲದೆ, ನಮ್ಮ ಸ್ವಂತ ವಿವೇಚನೆ ಮೇರೆಗೆ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ, ಪ್ರೊಗ್ರಾಂ ಅಥವಾ ಯಾವುದೇ ಸೇವೆಗಳನ್ನು ಸ್ಥಗಿತಗೊಳಿಸುವ, ಮಾರ್ಪಡಿಸುವ, ಒದಗಿಸದೆ ಇರುವ ಅಥವಾ ಆಫರ್ ಮಾಡುವುದನ್ನು ಅಥವಾ ಬೆಂಬಲಿಸುವುದನ್ನು ನಿಲ್ಲಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಮೇಲೆ ಹೇಳಿರುವ ಯಾವುದಾದರೂ ಎಲ್ಲ ಸಮಯಗಳಲ್ಲೂ ಅಥವಾ ಯಾವುದೇ ನಿರ್ದಿಷ್ಟ ಸಮಯದಲ್ಲಿ ಲಭ್ಯವಿರುತ್ತದೆ ಎಂದಾಗಲೀ ಅಥವಾ ಮೇಲೆ ಹೇಳಿರುವ ಯಾವುದನ್ನಾದರೂ ಯಾವುದೇ ನಿರ್ದಿಷ್ಟ ಸಮಯಾವಧಿಯವರೆಗೆ ಒದಗಿಸುವುದನ್ನು ಮುಂದುವರಿಸುತ್ತೇವೆ ಎಂದಾಗಲೀ ನಾವು ಖಾತರಿ ನೀಡುವುದಿಲ್ಲ. ಯಾವುದೇ ಕಾರಣಕ್ಕಾಗಿ ಪ್ರೊಗ್ರಾಂ ಅಥವಾ ಯಾವುದೇ ಸೇವೆಗಳ ಮುಂದುವರಿದ ಲಭ್ಯತೆಯ ಮೇಲೆ ನೀವು ಅವಲಂಬಿತರಾಗಬಾರದು.
ಸಾರಾಂಶದಲ್ಲಿ: ಪ್ರೊಗ್ರಾಂನಲ್ಲಿ ನಿಮ್ಮ ತೊಡಗಿಸಿಕೊಳ್ಳುವಿಕೆಯನ್ನು ನಾವು ನಿರ್ಬಂಧಿಸಬಹುದು ಅಥವಾ ಸಮಾಪ್ತಿಗೊಳಿಸಬಹುದು ಅಥವಾ ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕಾಗಿ ಪ್ರೊಗ್ರಾಂ ಅನ್ನು ಮಾರ್ಪಾಡು, ಅಮಾನತು ಅಥವಾ ಸಮಾಪ್ತಿ ಮಾಡಬಹುದು.
ನೀವು ಮತ್ತು Snap (ಈ ವಿಭಾಗದ ಉದ್ದೇಶಕ್ಕಾಗಿ, "ಪಕ್ಷಗಳು") ಎಲ್ಲ ಅನ್ವಯಿಸುವ ಭ್ರಷ್ಟಾಚಾರ ನಿಗ್ರಹ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಣೆ ಮಾಡಲು ಒಪ್ಪುತ್ತೀರಿ ಮತ್ತು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಯಾರಾದರೂ ಅನುಸರಣೆ ಮಾಡುವುದನ್ನು ಅಗತ್ಯಪಡಿಸುತ್ತೀರಿ. ಆ ಅನುಸರಣೆಯು ಇತರ ವಿಷಯಗಳ ಜೊತೆಗೆ ಈ ಮುಂದಿನವುಗಳನ್ನು ಒಳಗೊಂಡಿರುತ್ತದೆ: ಪಕ್ಷಗಳು ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ಯಾರಾದರೂ, ಅನುಕೂಲಕರ ಕ್ರಮವನ್ನು ಪ್ರಚೋದಿಸಲು ಅಥವಾ ಬಹುಮಾನವಾಗಿ ಪಡೆಯಲು, ಕ್ರಮವನ್ನು ಕೈಗೊಳ್ಳದಿರಲು ಅಥವಾ ಪ್ರಭಾವವನ್ನು ಬೀರಲು ಯಾರಿಗೂ ಕೂಡ ಹಣ ಅಥವಾ ಮೌಲ್ಯಯುತವಾದ ಬೇರೆ ಏನನ್ನೂ ಕೊಡುವುದಿಲ್ಲ, ಕೊಡುವ ಭರವಸೆ ನೀಡುವುದಿಲ್ಲ, ಆಫರ್ ಮಾಡುವುದಿಲ್ಲ, ಕೊಡಲು ಒಪ್ಪುವುದಿಲ್ಲ ಅಥವಾ ನೇರವಾಗಿ ಅಥವಾ ಪರೋಕ್ಷವಾಗಿ ಕೊಡುವುದಕ್ಕೆ ದೃಢೀಕರಿಸುವುದಿಲ್ಲ. ಈ ಹಣಗಳಿಕೆ ನಿಯಮಗಳ ಇತರ ಯಾವುದೇ ನಿಯಮಗಳನ್ನು ಪರಿಗಣಿಸದೆ, ಉಲ್ಲಂಘನೆ ಮಾಡದಿರುವ ಪಕ್ಷವು ಇನ್ನೊಂದು ಪಕ್ಷವು ಈ ನಿಬಂಧನೆಯನ್ನು ಉಲ್ಲಂಘಿಸಿದರೆ, ಸೂಚನೆಯ ಮೇರೆಗೆ ಈ ಹಣಗಳಿಕೆ ನಿಯಮಗಳನ್ನು ಸಮಾಪ್ತಿಗೊಳಿಸಬಹುದು.
ಈ ಹಣಗಳಿಕೆ ನಿಯಮಗಳ ಅಡಿಯಲ್ಲಿ ತಮ್ಮ ಕಾರ್ಯಕ್ಷಮತೆಯು ಎಲ್ಲ ಅನ್ವಯಿಸುವ ಆರ್ಥಿಕ ನಿರ್ಬಂಧಗಳು, ರಫ್ತು ನಿಯಂತ್ರಣ ಕಾನೂನುಗಳು ಮತ್ತು ಬಹಿಷ್ಕಾರ ನಿಗ್ರಹ ಕಾನೂನುಗಳ ಅನುಸರಣೆ ಮಾಡುತ್ತದೆ ಎಂದು ಪಕ್ಷಗಳು ಒಪ್ಪುತ್ತವೆ. ಪಕ್ಷಗಳು ಈ ಮುಂದಿನವುಗಳನ್ನು ಪ್ರತಿನಿಧಿಸುತ್ತವೆ ಮತ್ತು ವಾರಂಟಿ ನೀಡುತ್ತವೆ (1) ಯಾವುದೇ ಪಕ್ಷವೂ (ಈ ಹಣಗಳಿಕೆ ನಿಯಮಗಳನ್ನು ರೂಪಿಸುವಲ್ಲಿ ತೊಡಗಿಸಿಕೊಂಡಿರುವ ಯಾವುದೇ ಪ್ರಧಾನ, ಉಪಸಂಸ್ಥೆ ಅಥವಾ ಅಂಗಸಂಸ್ಥೆಯು) ಉದಾಹರಣೆಯ ರೂಪದಲ್ಲಿ, U.S. ಹಣಕಾಸು ಕಚೇರಿಯ ವಿದೇಶಿ ಸ್ವತ್ತುಗಳ ನಿಯಂತ್ರಣ ಘಟಕವು ನಿರ್ವಹಿಸುವ U.S. ವಿಶೇಷ ನಿಯೋಜಿತ ರಾಷ್ಟ್ರೀಯರ ಪಟ್ಟಿ ಮತ್ತು ವಿದೇಶಿ ನಿರ್ಬಂಧಗಳನ್ನು ಉಲ್ಲಂಘಿಸಿದವರ ಪಟ್ಟಿ, U.S. ಉದ್ಯಮ ಮತ್ತು ಭದ್ರತೆಗಳ ಆಯೋಗವು ನಿರ್ವಹಿಸುವ ನಿರಾಕರಿಸಿದವರ ಪಟ್ಟಿ, ಪರಿಶೀಲಿಸಿಲ್ಲದ ಪಟ್ಟಿ ಮತ್ತು ಘಟಕಗಳ ಪಟ್ಟಿ (“ನಿರ್ಬಂಧಿತ ಪಕ್ಷದ ಪಟ್ಟಿಗಳು”) ಸೇರಿದಂತೆ, ಯಾವುದೇ ಸಂಬಂಧಿಸಿದ ಸರ್ಕಾರಿ ಪ್ರಾಧಿಕಾರ ನಿರ್ವಹಿಸುವ ಯಾವುದೇ ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿ ಸೇರಿಸಲ್ಪಟ್ಟಿಲ್ಲ ಮತ್ತು (2) ಅಂತಹ ಪಕ್ಷವು ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿರುವ ಯಾರದೇ ಮಾಲೀಕತ್ವ ಹೊಂದಿಲ್ಲ ಅಥವಾ ಯಾರಿಂದಲೂ ನಿಯಂತ್ರಿಸಲ್ಪಡುತ್ತಿಲ್ಲ. ಈ ಹಣಗಳಿಕೆ ನಿಯಮಗಳನ್ನು ನಿರ್ವಹಿಸುವಲ್ಲಿ, ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿರುವ ಯಾರಿಗೂ ಅಥವಾ ಅನ್ವಯಿಸುವ ನಿರ್ಬಂಧಗಳಿಂದ ವ್ಯಾಪಾರವನ್ನು ನಿಷೇಧಿಸಲಾಗಿರುವ ಯಾವುದೇ ದೇಶದೊಂದಿಗೂ ನೇರವಾಗಿ ಅಥವಾ ಪರೋಕ್ಷವಾಗಿ, ಅಂತಹ ಪಕ್ಷವು ವ್ಯವಹಾರ ನಡೆಸುವುದಿಲ್ಲ ಅಥವಾ ಸರಕುಗಳು ಅಥವಾ ಸೇವೆಗಳನ್ನು ಒದಗಿಸುವುದಿಲ್ಲ. ಒಂದು ವೇಳೆ ಕ್ರಮ ಕೈಗೊಳ್ಳುವಿಕೆ ಅಥವಾ ಕೈಗೊಳ್ಳದಿರುವಿಕೆಯು ಯಾವುದೇ ಅನ್ವಯಿಸುವ ಅಧಿಕಾರ ವ್ಯಾಪ್ತಿಯ ಕಾನೂನುಗಳನ್ನು ಉಲ್ಲಂಘಿಸುವುದಾದರೆ, ಈ ಹಣಗಳಿಕೆ ನಿಯಮಗಳಿಗೆ ಸಂಬಂಧಿಸಿ Snap ಅಂತಹ ಕ್ರಮವನ್ನು ಕೈಗೊಳ್ಳಬೇಕಾದ ಅಥವಾ ಕೈಗೊಳ್ಳದಿರಬೇಕಾದ ಅಗತ್ಯವಿಲ್ಲ ಎಂದು ನೀವು ಒಪ್ಪುತ್ತೀರಿ.
ನೀವು (ಅಥವಾ ಅನ್ವಯಿಸಿದರೆ, ನಿಮ್ಮ ಪೋಷಕರು/ಕಾನೂನುಬದ್ಧ ಪಾಲಕ(ರು) ಅಥವಾ ವ್ಯವಹಾರ ಘಟಕ) ನಮ್ಮ ಅಥವಾ ನಮ್ಮ ಪಾವತಿ ಪೂರೈಕೆದಾರರ ಅನುಸರಣೆ ವಿಮರ್ಶೆಯಲ್ಲಿ ತೇರ್ಗಡೆಯಾಗದಿದ್ದರೆ ಪಾವತಿಗೆ ನೀವು ಅರ್ಹರಾಗಿರುವುದಿಲ್ಲ. ಅಂತಹ ವಿಮರ್ಶೆಯಲ್ಲಿ, ಯಾವುದೇ ಸಂಬಂಧಿಸಿದ ಸರ್ಕಾರಿ ಪ್ರಾಧಿಕಾರವು ನಿರ್ವಹಿಸುವ ಯಾವುದೇ ನಿರ್ಬಂಧಿತ ಪಕ್ಷದ ಪಟ್ಟಿಯಲ್ಲಿ ನೀವು ಕಾಣಿಸಿಕೊಂಡಿದ್ದೀರಾ ಎಂದು ನಿರ್ಧರಿಸಲು ಪರೀಕ್ಷಿಸುವುದು ಸೇರಿರಬಹುದು ಆದರೆ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ. ಈ ಹಣಗಳಿಕೆ ನಿಯಮಗಳಲ್ಲಿ ವಿವರಿಸಲಾಗಿರುವ ಯಾವುದೇ ಇತರ ಬಳಕೆಗಳ ಜೊತೆಗೆ, ನಿಮ್ಮ ಗುರುತನ್ನು ಪರಿಶೀಲಿಸಲು, ನಮ್ಮ ಅನುಸರಣೆ ವಿಮರ್ಶೆಯನ್ನು ನಡೆಸಲು ಮತ್ತು ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ನಮಗೆ ಒದಗಿಸುವ ಮಾಹಿತಿಯನ್ನು ತೃತೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬಹುದು.
ಸಾರಾಂಶದಲ್ಲಿ: ನೀವು ಮತ್ತು Snap ಇಬ್ಬರೂ, ಮೇಲೆ ಹೇಳಿರುವಂತೆ ಅನ್ವಯಿಸುವ ಭ್ರಷ್ಟಾಚಾರ ನಿಗ್ರಹ ಕಾನೂನುಗಳು, ಆರ್ಥಿಕ ನಿರ್ಬಂಧಗಳು, ರಫ್ತು ನಿಯಂತ್ರಣ ಕಾನೂನುಗಳು ಮತ್ತು ಬಹಿಷ್ಕಾರ ನಿಗ್ರಹ ಕಾನೂನುಗಳನ್ನು ಅನುಸರಣೆ ಮಾಡುತ್ತೀರಿ. ಪಾವತಿಯನ್ನು ಸ್ವೀಕರಿಸಲು ಅರ್ಹರಾಗುವುದಕ್ಕೆ, ನೀವು ಅನುಸರಣೆ ವಿಮರ್ಶೆಯಲ್ಲಿ ತೇರ್ಗಡೆಯಾಗಬೇಕು.
ನಿಮ್ಮ Snapchat ಬಳಕೆದಾರ ಖಾತೆಗೆ ವಿಷಯವನ್ನು ಪೋಸ್ಟ್ ಮಾಡಲು ಸೇವೆಗಳ ಇತರ ಬಳಕೆದಾರರಿಗೆ ನೀವು ಆ್ಯಕ್ಸೆಸ್ ನೀಡಿದರೆ ಅಥವಾ ನಿಮ್ಮ Snapchat ಬಳಕೆದಾರ ಖಾತೆಯಡಿ ಉಪಖಾತೆಗಳನ್ನು ರಚಿಸಿದರೆ ಮತ್ತು ನಿರ್ವಹಿಸಿದರೆ, ನಿಮ್ಮ ಖಾತೆಗೆ ಆ್ಯಕ್ಸೆಸ್ ಮಟ್ಟಗಳನ್ನು ಹೊಂದಿಸುವುದು ಮತ್ತು ಹಿಂಪಡೆಯುವುದು ನಿಮ್ಮ ಸ್ವಂತ ಹೊಣೆಗಾರಿಕೆಯಾಗಿರುತ್ತದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ. ನಿರ್ವಾಹಕರು, ಸಹಯೋಗಿಗಳು ಮತ್ತು ಕೊಡುಗೆದಾರರಿಂದ ಯಾವುದೇ ಚಟುವಟಿಕೆ ಸೇರಿದಂತೆ ನಿಮ್ಮ ಖಾತೆಯಲ್ಲಿ ಸಂಭವಿಸುವ ಎಲ್ಲ ವಿಷಯ ಮತ್ತು ಚಟುವಟಿಕೆಗೆ ನೀವು ಹೊಣೆಗಾರರಾಗಿರುತ್ತೀರಿ. ಕಾಲಕಾಲಕ್ಕೆ ಈ ಹಣಗಳಿಕೆ ನಿಯಮಗಳನ್ನು ನಾವು ಅಪ್‌ಡೇಟ್ ಮಾಡಬೇಕಾಗಬಹುದು. ಒಂದು ವೇಳೆ ಈ ಹಣಗಳಿಕೆ ನಿಯಮಗಳಿಗೆ ಆ ಬದಲಾವಣೆಗಳು ವಾಸ್ತವಿಕವಾಗಿದ್ದರೆ, ನಾವು ಸಾಕಷ್ಟು ಮುಂಚಿತವಾಗಿ ನಿಮಗೆ ಸೂಚನೆ ನೀಡುತ್ತೇವೆ (ಶೀಘ್ರದಲ್ಲಿ ಬದಲಾವಣೆಗಳ ಅಗತ್ಯವಿಲ್ಲದ ಹೊರತು, ಉದಾಹರಣೆಗೆ, ಕಾನೂನು ಅಗತ್ಯಗಳಲ್ಲಿನ ಬದಲಾವಣೆಯ ಪರಿಣಾಮವಾಗಿ ಅಥವಾ ನಾವು ಹೊಸ ಸೇವೆಗಳು ಅಥವಾ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿದ್ದಲ್ಲಿ). ಬದಲಾವಣೆಗಳು ಜಾರಿಗೆ ಬಂದ ಬಳಿಕ ನೀವು ಪ್ರೊಗ್ರಾಂನಲ್ಲಿ ಭಾಗವಹಿಸುವುದನ್ನು ಮುಂದುವರಿಸಿದರೆ, ಅದನ್ನು ನಿಮ್ಮ ಸ್ವೀಕೃತಿ ಎಂದು ನಾವು ಪರಿಗಣಿಸುತ್ತೇವೆ. ಈ ಹಣಗಳಿಕೆ ನಿಯಮಗಳ ಯಾವುದೇ ಬದಲಾವಣೆಗಳಿಗೆ ನೀವು ಯಾವುದೇ ಸಮಯದಲ್ಲಿ ಒಪ್ಪದಿದ್ದರೆ, ಪ್ರೊಗ್ರಾಂನಲ್ಲಿ ಭಾಗವಹಿಸುವುದನ್ನು ನೀವು ನಿಲ್ಲಿಸಬೇಕು. ಈ ಹಣಗಳಿಕೆ ನಿಯಮಗಳು ಯಾವುದೇ ತೃತೀಯ-ಪಕ್ಷದ ಫಲಾನುಭವಿ ಹಕ್ಕುಗಳನ್ನು ರಚಿಸುವುದಿಲ್ಲ ಅಥವಾ ನೀಡುವುದಿಲ್ಲ. ಈ ಹಣಗಳಿಕೆ ನಿಯಮಗಳಲ್ಲಿರುವ ಯಾವುದನ್ನೂ ನೀವು ಮತ್ತು Snap ಅಥವಾ Snap ನ ಅಂಗಸಂಸ್ಥೆಗಳ ನಡುವಿನ ಜಂಟಿ-ಉದ್ಯಮ, ಮುಖ್ಯಸ್ಥ-ಏಜೆಂಟ್ ಅಥವಾ ಉದ್ಯೋಗದ ಸಂಬಂಧ ಎಂದು ಪರಿಗಣಿಸಲಾಗುವುದಿಲ್ಲ. ಈ ಹಣಗಳಿಕೆ ನಿಯಮಗಳಲ್ಲಿ ನಾವು ಒಂದು ನಿಬಂಧನೆಯನ್ನು ಜಾರಿಗೊಳಿಸದಿದ್ದರೆ, ಅದನ್ನು ವಿನಾಯಿತಿ ಎಂದು ಪರಿಗಣಿಸಲಾಗುವುದಿಲ್ಲ. ನಿಮಗೆ ನಾವು ವ್ಯಕ್ತವಾಗಿ ನೀಡದ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿದ್ದೇವೆ. ಈ ಹಣಗಳಿಕೆ ನಿಯಮಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ ಮತ್ತು ಈ ಹಣಗಳಿಕೆ ನಿಯಮಗಳ ಯಾವುದೇ ಅನುವಾದಿತ ಆವೃತ್ತಿಯು ಇಂಗ್ಲಿಷ್ ಆವೃತ್ತಿಯೊಂದಿಗೆ ಸಂಘರ್ಷ ಹೊಂದಿದ್ದಲ್ಲಿ. ಇಂಗ್ಲಿಷ್ ಆವೃತ್ತಿಯೇ ನಿಯಂತ್ರಣ ಹೊಂದಿರುತ್ತದೆ. ಈ ಹಣಗಳಿಕೆ ನಿಯಮಗಳ ಯಾವುದೇ ನಿಬಂಧನೆಯು ಜಾರಿಮಾಡಲಾಗದ್ದು ಎಂದು ಕಂಡುಬಂದರೆ, ಆಗ ಆ ನಿಬಂಧನೆಯನ್ನು ಈ ಹಣಗಳಿಕೆ ನಿಯಮಗಳಿಂದ ತೆಗೆದುಹಾಕಲಾಗುತ್ತದೆ ಮತ್ತು ಯಾವುದೇ ಉಳಿದಿರುವ ನಿಬಂಧನೆಗಳ ಮಾನ್ಯತೆ ಮತ್ತು ಜಾರಿಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಈ ಹಣಗಳಿಕೆ ನಿಯಮಗಳ ವಿಭಾಗ 6, 9 ಮತ್ತು 10 ಮತ್ತು ನಿಬಂಧನೆಗಳ ಸ್ವರೂಪದಿಂದಾಗಿ ಉಳಿಯುವ ಉದ್ದೇಶ ಹೊಂದಿರುವ ಯಾವುದೇ ನಿಬಂಧನೆಗಳು, ಈ ಹಣಗಳಿಗೆ ನಿಯಮಗಳ ಅವಧಿಮೀರುವಿಕೆ ಅಥವಾ ಸಮಾಪ್ತಿಯ ಬಳಿಕವೂ ಉಳಿಯುತ್ತವೆ.
ಸಾರಾಂಶದಲ್ಲಿ: ನಿಮ್ಮ ಖಾತೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಿಗೆ ನೀವೇ ಜವಾಬ್ದಾರರು. ಈ ಹಣಗಳಿಕೆ ನಿಯಮಗಳನ್ನು ನೀವು ಪರಿಶೀಲಿಸಬೇಕು ಏಕೆಂದರೆ ಅವುಗಳನ್ನು ನಾವು ಅಪ್‌ಡೇಟ್ ಮಾಡಬಹುದು. ಈ ಹಣಗಳಿಕೆ ನಿಯಮಗಳು ನಮ್ಮ ನಡುವೆ ಯಾವುದೇ ವಿಧದ ಉದ್ಯೋಗದ ಸಂಬಂಧಗಳನ್ನು ರಚಿಸುವುದಿಲ್ಲ. ಈ ಹಣಗಳಿಕೆ ನಿಯಮಗಳ ಇಂಗ್ಲಿಷ್ ಆವೃತ್ತಿಯು ನಿಯಂತ್ರಿಸುತ್ತದೆ ಮತ್ತು ಅವಧಿಮೀರುವಿಕೆ ಅಥವಾ ಸಮಾಪ್ತಿಯ ಬಳಿಕವೂ ಕೆಲವು ನಿಬಂಧನೆಗಳು ಜಾರಿಯಲ್ಲಿ ಇರುತ್ತವೆ.
ಈ ಹಣಗಳಿಕೆ ನಿಯಮಗಳ ಕುರಿತು ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ, ನಮ್ಮನ್ನು ಸಂಪರ್ಕಿಸಿ.